ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ದೇಶದಲ್ಲಿ ಪ್ರತಿ ಗಂಟೆಗೊಂದು ಭೀಕರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ವಾಹನಗಳಲ್ಲಿರುವ ಕಡಿಮೆ ಸುರಕ್ಷಾ ಸಾಧನಗಳಿಂದಾಗಿಯೇ ಪ್ರಾಣಹಾನಿ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದ್ದು, ವಾಹನಗಳಲ್ಲಿರುವ ಸುರಕ್ಷಾ ಸೌಲಭ್ಯಗಳು ಅಪಘಾತದ ಸಂದರ್ಭದಲ್ಲಿ ಹೇಗೆ ಸಹಾಯಕ್ಕೆ ಬರುತ್ತವೇ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಭೀಕರ ಅಪಘಾತ ಪ್ರಕರಣವೊಂದರಲ್ಲಿ ಟಾಟಾ ನೆಕ್ಸಾನ್ ಎಸ್‌ಯುವಿ ಕಾರೊಂದು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಮೂವರು ಪ್ರಾಣಪಾಯದಿಂದ ಪಾರಾಗಿರುವ ಘಟನೆಯು ಅಚ್ಚರಿಗೆ ಕಾರಣವಾಗಿದೆ. ಪುಣೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಭೀಕರ ಅಪಘಾತ ನಡೆದಿದ್ದು, ವೇಗದ ಚಾಲನೆಯಲ್ಲಿದ್ದಾಗ ನಿಯಂತ್ರಣ ತಪ್ಪಿದ ನೆಕ್ಸಾನ್ ಕಾರು ಬರೋಬ್ಬರಿ ನಾಲ್ಕು ಬಾರಿ ಪಲ್ಟಿ ಹೊಡೆದು ರಸ್ತೆ ಬಳಿಯಿದ್ದ ಕಲ್ಲಿನ ತಡೆಗೊಡೆಗೂ ಡಿಕ್ಕಿ ಹೊಡೆದಿದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಅದೃಷ್ಟವಶಾತ್ ಇಷ್ಟೆಲ್ಲಾ ಭೀಕರ ಅಪಘಾತ ನಡೆದರು ಕೂಡಾ ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದು, ಇದಕ್ಕೆ ಕಾರಣ ಕಾರಿನಲ್ಲಿರುವ ಅತ್ಯುತ್ತಮ ಸುರಕ್ಷಾ ಸೌಲಭ್ಯಗಳು ಅಂದ್ರೆ ನೀವು ನಂಬಲೇಬೇಕು.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ವರದಿಗಳ ಪ್ರಕಾರ, ಹೆದ್ದಾರಿ ಬಳಿ ಹೋಗುತ್ತಿದ್ದ ಹಸುವೊಂದು ಏಕಾಏಕಿ ರಸ್ತೆಯ ಮಧ್ಯಕ್ಕೆ ಬಂದಿದ್ದು, ಇದೇ ವೇಳೆ ವೇಗದಲ್ಲಿ ಬರುತ್ತಿದ್ದ ನೆಕ್ಸಾನ್ ಕಾರು ನಿಯಂತ್ರಣಕ್ಕೆ ಸಿಕ್ಕಿಲ್ಲ. ಸುಮಾರು 100 ಕಿ.ಮಿ ವೇಗದಲ್ಲಿದ್ದ ನೆಕ್ಸಾನ್ ಕಾರನ್ನು ನಿಯಂತ್ರಣಕ್ಕೆ ಯತ್ನಿಸಿದಾಗ ಕಾರು ನಾಲ್ಕು ಬಾರಿ ಪಲ್ಟಿ ಹೊಡಿದಿದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಭೀಕರ ಅಪಘಾತದಲ್ಲೂ ಸಣ್ಣಪುಟ್ಟ ಗಾಯಗಳನ್ನು ಹೊರತು ಪಡಿಸಿ ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಚ್ಚರಿ ವ್ಯಕ್ತವಾಗಿದ್ದು, ನೆಕ್ಸಾನ್ ಕಾರುಗಳಲ್ಲಿ ಅತ್ಯುತ್ತಮ ಬಾಡಿ ಕಿಟ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಒದಗಿಸಿರುವ ಟಾಟಾ ಸಂಸ್ಥೆ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಇನ್ನು ಅಪಘಾತದ ಸಂದರ್ಭದಲ್ಲಿ ಕಾರಿನ ಎಲ್ಲ ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಣೆಯಾಗಿದ್ದು, ಕಾರಿನ ಚಕ್ರಗಳು ಸಂಪೂರ್ಣ ಜಖಂಗೊಂಡಿದ್ದರು ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎನ್ನುವುದೇ ಗಮನಿಸಬೇಕಾದ ಅಂಶವಾಗಿದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಬಲಿಷ್ಠ ಬಾಡಿ ಸಾಮರ್ಥ್ಯ

ಹೌದು.. ಟಾಟಾ ಕಾರುಗಳು ಅಂದ್ರೆನೆ ಹಾಗೆ. ಅಪಘಾತ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷೆ ಒದಗಿಸುವುದಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದು, ಇದು ಹಲವು ಸಂದರ್ಭಗಳಲ್ಲಿ ಇದು ಸಾಬೀತಾಗಿದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ಜನಪ್ರಿಯ ನೆಕ್ಸಾನ್ ಎಸ್‌ಯುವಿ ಕಾರುಗಳು ಸದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿದ್ದು, ಇದರೊಂದಿಗೆ ಸುರಕ್ಷತೆಯಲ್ಲೂ ಹೊಸ ಭರವಸೆ ಮೂಡಿಸುವ ಮೂಲಕ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಹೊಸ ಕಾರುಗಳ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್ (ಎನ್‌ಸಿಎಪಿ) ಏಜೆನ್ಸಿಯು ನಡೆಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಖರೀದಿಗೆ ಯೋಗ್ಯ ಎನಿಸಿರುವ ಟಾಟಾ ನೆಕ್ಸಾನ್ ಎಸ್‌ಯುವಿ ಕಾರುಗಳು 4 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಸದ್ಯ ಹೊಸ ಮೈಲಿಗಲ್ಲಿಯತ್ತ ಮುನ್ನುಗ್ಗುತ್ತಿದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಮತ್ತೊಂದು ಆತಂಕಕಾರಿ ವಿಚಾರ ಅಂದ್ರೆ, ಭಾರತದಲ್ಲಿ ಮಾರಾಟವಾಗುತ್ತಿರುವ 20ಕ್ಕೂ ಹೆಚ್ಚು ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದೆ. ಇದರಿಂದ ಅಪಘಾತದ ವೇಳೆ ಸುರಕ್ಷಾ ಸಾಧನಗಳು ಇಲ್ಲದಿರುವುದರಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವುದು ಕಟು ಸತ್ಯ.

MOST READ: ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಇದೇ ಕಾರಣಕ್ಕೆ 2019ರಿಂದ ನಿರ್ದಿಷ್ಟ ಮಟ್ಟದ ಸುರಕ್ಷಾ ಸಾಧನಗಳನ್ನು ಹೊಂದಿರುವ ವಾಹನಗಳ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ಪರೀಕ್ಷೆಯ ಮೂಲಕ ಕಾರುಗಳ ನಿರ್ಮಾಣದ ಶೈಲಿಯಲ್ಲಿ ಬಹುದೊಡ್ಡ ಬದಲಾವಣೆ ತರುವ ಯೋಜನೆ ಹೊಂದಿದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

#SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರು ಮಾದರಿಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಸಂಸ್ಥೆಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿಯು, ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತದೆ. ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಆದ್ರೆ ಅದೇನೆ ಇರಲಿ ಗುಣಮಟ್ಟದ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ನಿರ್ಮಾಣದ ಕಾರುಗಳು ಹೆಚ್ಚು ಸುರಕ್ಷೆ ನೀಡುವುದರಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಜೊತೆಗೆ ಗ್ರಾಹಕರು ಪಾವತಿಸುವ ಹಣಕ್ಕೂ ಯಾವುದೇ ಮೋಸ ಇಲ್ಲ ಎನ್ನಬಹುದು.

Most Read Articles

ಅತಿಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಹೊಸ ಎರ್ಟಿಗಾ ಕಾರಿನ ಫೋಟೋ ಗ್ಯಾಲರಿ..!

Kannada
English summary
The brand new Tata Nexon Kraz edition was involved in a horrendous crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X