ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ದೇಶದ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾದ ಟಾಟಾ ಮೋಟಾರ್ಸ್ ಮುಂಬರುವ ಉತ್ಸವ ದಿನಗಳಲ್ಲಿ ಹೊಚ್ಚ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

By Praveen Sannamani

ದೇಶದ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾದ ಟಾಟಾ ಮೋಟಾರ್ಸ್ ಮುಂಬರುವ ಉತ್ಸವ ದಿನಗಳಲ್ಲಿ ಹೊಚ್ಚ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್‌ಪೋದಲ್ಲಿ ಅತಿ ನೂತನ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಅನಾವರಣಗೊಳಿಸಿದ್ದ ಟಾಟಾ ಸಂಸ್ಥೆಯು ಇದೀಗ ಬಿಡುಗಡೆಯಾಗಿ ತಯಾರಿ ನಡೆಸುತ್ತಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಟಿಗೋರ್ ಕಾಂಪಾಕ್ಟ್ ಸೆಡಾನ್ ಕಾರುಗಳಿಂತಲೂ ಹೆಚ್ಚು ಶಕ್ತಿಶಾಲಿ ಆವೃತ್ತಿಯಾಗಿರಲಿವೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ವರದಿಗಳ ಪ್ರಕಾರ, ಮುಂದಿನ ದಸರಾ ಅಥವಾ ದೀಪಾವಳಿ ಅವಧಿಯಲ್ಲಿ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ತಮಿಳುನಾಡಿನ ಹಲವು ಕಡೆ ಸ್ಪಾಟ್ ಟೆಸ್ಟಿಂಗ್ ಸಂದರ್ಭದಲ್ಲಿ ಹೊಸ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಒದಗಿಸಿರುವುದು ಬಹಿರಂಗವಾಗಿದೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜೆಟಿಪಿ ಎಂಬುದರ ಪೂರ್ಣರೂಪ ಜೇಯಮ್ ಟಾಟಾ ಫರ್ಫಾಮನ್ಸ್ (Jayem Tata Performance) ಎಂಬುದಾಗಿದೆ. ಟಾಟಾ ಮೋಟಾರ್ಸ್ ಹಾಗೂ ಜೇಯಮ್ ಆಟೋಮೋಟಿವ್ಸ್ ಜಂಟಿಯಾಗಿ ತಾಜಾ ಟಾಟಾ ಕಾರುಗಳ ಶಕ್ತಿಶಾಲಿ ಮಾಡೆಲ್‌ಗಳನ್ನು ನಿರ್ಮಿಸುತ್ತಿದೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದಾಗ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಕ್ರೀಡಾತ್ಮಕ ಬಂಪರ್ ಜತೆಗೆ ಹೊಸತಾದ ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಅಗಲವಾದ ಲೋವರ್ ಗ್ರಿಲ್ ಇರಲಿದೆ. ಕಪ್ಪು ವರ್ಣ ಸುತ್ತುವರಿದ ಹೆಡ್‌ಲ್ಯಾಂಪ್ ಜತೆಗೆ ಜೆಟಿಪಿ ಲೊಗೊ ಸಹ ಪ್ರಮುಖ ಆಕರ್ಷಣೆಯಾಗಲಿದ್ದು, ಹಿಂಭಾಗದಲ್ಲೂ ರೂಫ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ಲುಕ್ ನೀಡಲಿದೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

15 ಇಂಚುಗಳ ದೊಡ್ಡದಾದ ಡೈಮಂಡ್ ಕಟ್ ಅಲಾಯ್ ಚಕ್ರಗಳು ಹಾಗೂ ಏರೋ ಡೈನಾಮಿಕ್ ವಿನ್ಯಾಸ ಇರಲಿದೆ. ಕಾರಿನೊಳಗೂ ಆಲ್ ಬ್ಲ್ಯಾಕ್ ಲೆದರ್ ಹೋದಿಕೆಯ ಜತೆ ಲೆದರ್ ಹೋದಿಕೆಯ ಸ್ಟೀರಿಂಗ್ ವೀಲ್ಹ್ ಸಹ ಇರಲಿದೆ. ಜೊತೆಗೆ ಎಂಟು ಸ್ಪೀಕರ್‌ಗಳ ಹರ್ಮನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೋಡಣೆ ಹೊಂದಿದೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ಅಂದ ಹಾಗೆ ಟಾಟಾ ಟಿಯಾಗೊ ಜೆಟಿಪಿ ಹಾಗೂ ಟಿಗೋರ್ ಜೆಟಿಪಿ ಮಾದರಿಗಳು ನೆಕ್ಸನ್ ಎಸ್‌ಯುವಿಗೆ ಸಮಾನವಾದ 1.2 ಲೀಟರ್ ಟರ್ಬೊಚಾರ್ಜ್ಡ್ ರವೊಟಾರ್ನ್ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯಲಿದೆ. ಇದು 150 ಎನ್‌ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ಬೆಲೆಗಳು(ಅಂದಾಜು)

ಸ್ಪೋಟಿ ಲುಕ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿರುವ ಟಿಯಾಗೊ ಜೆಟಿಪಿ ಕಾರುಗಳು ಸಾಮಾನ್ಯ ಕಾರುಗಳಿಂತ ತುಸು ದುಬಾರಿಯಾಗಲಿದ್ದು, ಎಕ್ಸ್‌ಶೋರಂ ಪ್ರಕಾರ ರೂ.7 ಲಕ್ಷ ಆರಂಭಿಕ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಟಿಯಾಗೊ ಜೆಟಿಪಿ

ಒಟ್ಟಿನಲ್ಲಿ ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ ಅಥಾವ ಸ್ಪೋರ್ಟ್ ಡ್ರೈವ್ ಅನುಭವಕ್ಕಾಗಿ ಜಿಟಿಪಿ ಆವೃತ್ತಿಯ ಟಿಯಾಗೊ ಕಾರನ್ನು ಬಳಸಬಹುದಾಗಿದೆ.

Spy Image Source: IAB

Most Read Articles

Kannada
English summary
Tata Tiago JTP Spied Testing In Coimbatore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X