ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

By Praveen Sannamani

ಭಾರತದಲ್ಲಿ ಇತ್ತೀಚೆಗೆ ಎಸ್‌ಯುವಿ ಕಾರುಗಳ ಸದ್ದು ಜೋರಾಗುತ್ತಿದೆ. ಇದೇ ಕಾರಣಕ್ಕೆ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಮಧ್ಯಮ ಗಾತ್ರದ ಎಸ್‌ಯುವಿ ಹಾಗೂ ಕಂಪ್ಯಾಕ್ಟ್ ಎಸ್‌ಯುವಿ ಪರಿಚಯಿಸಿ ಯಶಸ್ವಿಯಾಗುತ್ತಿದ್ದು, ಜುಲೈ ಅವಧಿಯಲ್ಲಿ ಮಾರಾಟವಾದ ಎಸ್‌ಯುವಿ ಕಾರುಗಳ ಪಟ್ಟಿಯು ಹೀಗಿದೆ ನೋಡಿ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಮಾರುತಿ ಸುಜುಕಿ ವಿಟಾರಾ ಬ್ರೇಝಾ

ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ವಿಟಾರಾ ಬ್ರೇಝಾ ಕಾರುಗಳು ಮೇ ತಿಂಗಳಿನಲ್ಲಿ ಬಿಡುಗಡೆಯಾದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಿಂದಾಗಿ ಮಾರಾಟಕ್ಕೆ ಪೂರಕವಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ಜುಲೈ ಅವಧಿಯಲ್ಲಿ ಬರೋಬ್ಬರಿ 14,181 ವಿಟಾರಾ ಬ್ರೆಝಾ ಕಾರುಗಳನ್ನು ಮಾರಾಟ ಮಾಡಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಎಸ್‌ಯುವಿ ವಿಭಾಗದಲ್ಲಿ ಮಾತ್ರದಲ್ಲಿ ಎಲ್ಲಾ ವರ್ಗದ ಟಾಪ್ 10 ಕಾರುಗಳ ಮಾರಾಟ ಪಟ್ಟಿಯಲ್ಲೂ 6ನೇ ಸ್ಥಾನ ಪಡೆದಿರುವ ವಿಟಾರಾ ಬ್ರೆಝಾ ಕಾರುಗಳು, 2016ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವ ಮೂಲಕ ಕೇವಲ 28 ತಿಂಗಳ ಅವಧಿಯಲ್ಲಿ ಬರೋಬ್ಬರಿ 3 ಲಕ್ಷ ಕಾರುಗಳು ಮಾರಾಟಗೊಂಡಿರುವ ಹೆಗ್ಗಳಿಕೆ ಈ ಕಾರಿಗಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್

ಕಳೆದ ಎರಡು ತಿಂಗಳಿನಿಂದ ಮಾರಾಟದಲ್ಲಿ ಕುಸಿತ ಕಂಡಿದ್ದ ಕ್ರೇಟಾ ಕಾರುಗಳು ಫೇಸ್‌ಲಿಫ್ಟ್ ಕಾರುಗಳು ಬಿಡುಗಡೆ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜುಲೈ ಅವಧಿಯಲ್ಲಿ 10,423 ಕಾರುಗಳನ್ನು ಮಾರಾಟಗೊಂಡಿವೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಕ್ರೇಟಾ ಫೇಸ್‌‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಮಹೀಂದ್ರಾ ಬೆಲೆರೊ

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಮಾದರಿಯ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹೀಂದ್ರಾ ಬೊಲೆರೊ ಕಾರುಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹೀಗಾಗಿಯೇ ಜುಲೈ ಅವಧಿಯಲ್ಲಿ 6,559 ಬೊಲೆರೊ ಕಾರುಗಳು ಮಾರಾಟವಾಗಿದ್ದು, ಬೆಸ್ಟ್ ಎಸ್‌ಯುವಿಗಳಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಮಹೀಂದ್ರಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಡೀಸೆಲ್ ಎಂಜಿನ್‌ಗಳಲ್ಲಿ ಮಾತ್ರವೇ ಲಭ್ಯವಿರುವ ಮಹೀಂದ್ರಾ ಬೊಲೆರೊ ಕಾರುಗಳು ಆರಂಭಿಕವಾಗಿ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, ಟಾಪ್ ವೆರಿಯೆಂಟ್‌ಗಳು 2.5-ಲೀಟರ್ ಡೀಸೆಲ್ ಎಂಜಿನ್ ಪಡೆದಿರುವುದರಿಂದ ಆದ್ಯತೆ ಮೇರೆಗೆ ಆಯ್ಕೆ ಮಾಡಬಹುದಾಗಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಮಾರುತಿ ಸುಜುಕಿ ಎಸ್ ಕ್ರಾಸ್

ಮಾರುತಿ ಸುಜುಕಿ ನಿರ್ಮಾಣದ ಕಾರುಗಳಲ್ಲೇ ಎಸ್ ಕ್ರಾಸ್ ಎಸ್‌ಯುವಿಗಳು ಐಷಾರಾಮಿ ಸೌಲಭ್ಯ ಸೌಲಭ್ಯ ಹೊಂದಿರುವ ಏಕೈಕ ಕಾರು ಮಾದರಿಯಾಗಿದ್ದು, ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿರುವ ಎಸ್ ಕ್ರಾಸ್ ಕಾರುಗಳು ಜುಲೈ ಅವಧಿಯಲ್ಲಿ 5,308 ಕಾರುಗಳು ಮಾರಾಟಗೊಂಡಿವೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಫೋರ್ಡ್ ಇಕೋಸ್ಪೋರ್ಟ್

ಕಂಪ್ಯಾಕ್ಟ್ ಎಸ್‌ಯುವಿ ವಿನ್ಯಾಸಗಳೊಂದಿಗೆ ಗ್ರಾಹಕರ ಆಕರ್ಷಣೆ ಕಾರಣವಾಗಿರುವ ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲೇ ಪ್ರಮುಖ 10 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮೂಲಕ ಗ್ರಾಹಕರು ಬೇಡಿಕೆಗೆ ತಕ್ಕಂತೆ ವಿವಿಧ ಮಾದರಿಗಳಲ್ಲಿರುವ ಇಕೋಸ್ಪೋರ್ಟ್ ಕಾರುಗಳು ಜುಲೈ ಅವಧಿಯಲ್ಲಿ 4,040 ಕಾರುಗಳು ಮಾರಾಟವಾಗಿವೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್‍ಪಿ ಮತ್ತು 205ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬೆಹೆಚ್‍ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡು ಎಂಜಿನ್‍‍ಗಳನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್‍‍ಗಳೊಂದಿಗೆ ಜೋಡಿಸಲಾಗಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಮಹೀಂದ್ರಾ ಸ್ಕಾರ್ಪಿಯೊ

ವಿವಿಧ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಮಹೀಂದ್ರಾ ಸ್ಕಾರ್ಪಿಯೊ ಕಾರುಗಳು ಗ್ರಾಹಕರ ನೆಚ್ಚಿನ ಆಯ್ಕೆಯಾಗಿದ್ದು, ಇದು ಕೇವಲ ಡೀಸೆಲ್ ಎಂಜಿನ್‌ಗಳಲ್ಲಿ ಮಾತ್ರವೇ ಲಭ್ಯವಿದ್ದು, ಜುಲೈ ಅವಧಿಯಲ್ಲಿ 3,878 ಕಾರುಗಳು ಮಾರಾಟವಾಗಿವೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಆರಂಭಿಕವಾಗಿ ರೂ. 8.69 ಲಕ್ಷ ಬೆಲೆ ಹೊಂದಿರುವ ಸ್ಕಾರ್ಪಿಯೊ ಕಾರುಗಳು ಟಾಪ್ ಎಂಡ್‌ ಕಾರುಗಳು ರೂ.16.34 ಲಕ್ಷ ಬೆಲೆ ಪಡೆದುಕೊಂಡಿದ್ದು, 2.6-ಲೀಟರ್ ಎಂಜಿನ್ ಹೊಂದಿರುವ ಟಾಪ್ ಎಂಡ್ ಮಾದರಿಯು ಪ್ರತಿ ಲೀಟರ್‌ಗೆ ಕೇವಲ 9 ಕಿ.ಮಿ ಮೈಲೇಜ್ ಹೊಂದಿರುವ ಕೆಲವು ಗ್ರಾಹಕರ ಅತೃಪ್ತಿಗೂ ಕಾರಣವಾಗಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿದ್ದ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಹಲವಾರು ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ ಕಾರಿನಲ್ಲಿರುವ ಸಾಫ್ಟ್‌ವೇರ್ ಸೌಲಭ್ಯವನ್ನು ಉನ್ನತೀಕರಿಸುವ ಮೂಲಕ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಇದಕ್ಕಾಗಿಯೇ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಕಾರುಗಳು ಜುಲೈ ಅವಧಿಯಲ್ಲಿ 3,840 ಕಾರುಗಳನ್ನ ಮಾರಾಟ ಮಾಡಿದ್ದು, ಇಂಪ್ಯಾಕ್ಟ್ 2.0 ಡಿಸೈನ್‌‌ನೊಂದಿಗೆ ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿರುವುದು ಕಾರಿನ ಮೌಲ್ಯವನ್ನ ಹೆಚ್ಚಿಸಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಹೋಂಡಾ ಡಬ್ಲ್ಯುಆರ್-ವಿ

ಕಂಪ್ಯಾಕ್ಟ್ ಎಸ್‌ಯುವಿ ಮಹತ್ವದ ಬದಲಾವಣೆ ತಂದಿರುವ ಹೋಂಡಾ ಸಂಸ್ಥೆಯು ತನ್ನ ನೆಚ್ಚಿನ ಮಾದರಿಯಾ ಡಬ್ಲ್ಯುಆರ್-ವಿ ಕಾರುಗಳ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿದೆ. ಹೀಗಾಗಿಯೇ ಜುಲೈ ಅವಧಿಯಲ್ಲಿ 3,368 ಕಾರುಗಳು ಮಾರಾಟಗೊಂಡಿವೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ರೂ. 8.02 ಲಕ್ಷದಿಂದ ರೂ.11.32 ಲಕ್ಷ ಬೆಲೆ ಹೊಂದಿರುವ ಹೋಂಡಾ ಡಬ್ಲ್ಯುಆರ್-ವಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ವೆರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಇಕೋ ಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಸದ್ಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಆರಂಭಿಕ ಕಾರು ಮಾದರಿಗಳಿಗೆ ಹಾಗೂ ಮಹೀಂದ್ರಾ ಎಕ್ಸ್‌ಯುವಿ ಫೇಸ್‌ಲಿಫ್ಟ್ ಕಾರುಗಳಿಗೆ ತೀವ್ರ ಪೈಪೋಟಿ ಇದ್ದು, ಜೀಪ್ ಕಂಪಾಸ್ ಆರಂಭಿಕ ಕಾರುಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಇದೀಗ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಖರೀದಿಯತ್ತ ಮುಖಮಾಡಿರುವುದು ಜುಲೈ ಅವಧಿಯಲ್ಲಿ ಕಾರು ಮಾರಾಟದ ಸಂಖ್ಯೆಯನ್ನು ಗಮನಿಸಿದಾಗ ಅದರ ಜನಪ್ರಿಯತೆ ಅರ್ಥವಾಗುತ್ತೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಜುಲೈ ಅವಧಿಯಲ್ಲಿ ಜೀಪ್ ಸಂಸ್ಥೆಯು 1,201 ಕಾರುಗಳನ್ನು ಮಾರಾಟ ಮಾಡಿದ್ದರೇ ಅದೇ ಅವಧಿಯಲ್ಲಿ ಮಹೀಂದ್ರಾ ಸಂಸ್ಥೆಯು 2,766 ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳನ್ನ ಮಾರಾಟ ಮಾಡುವ ಪ್ರಿಮಿಯಂ ಎಸ್‌ಯುವಿ ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ.

ಜುಲೈನಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿ ಕಾರುಗಳು ಯಾವವು?

ಮಹೀಂದ್ರಾ ಟಿಯುವಿ300

ವಾಣಿಜ್ಯ ಬಳಕೆಗಾಗಿ ಹಾಗೂ ಸ್ವಂತ ಬಳಕೆ ಕಾರು ವಿಭಾಗದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಮಹೀಂದ್ರಾ ಸಂಸ್ಥೆಯು ಟಿಯುವಿ300 ಎಸ್‌ಯುವಿ ಕಾರುಗಳ ಮಾರಾಟದಲ್ಲೂ ಹಿಂದೆ ಬಿದ್ದಿಲ್ಲ. ಜುಲೈ ಅವಧಿಯಲ್ಲಿ 2,091 ಕಾರುಗಳು ಮಾರಾಟಗೊಂಡಿದ್ದು, ಟಿಯುವಿ300 ಪ್ಲಸ್ ಕಾರುಗಳು ಸಹ ಖರೀದಿ ಲಭ್ಯವಿವೆ.

Most Read Articles

Kannada
English summary
Top 10 Best Selling SUVs/Crossovers for July 2018.
Story first published: Friday, August 10, 2018, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X