ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

ಕಾರು ಚಾಲಕರು ಪೆಟ್ರೋಲ್‍‍ಗಿಂತ ಡೀಸೆಲ್ ಕಾರ್‍‍ಗಳನ್ನು ಏಕೆ ಹೆಚ್ಚು ಖರೀದಿಸುತ್ತಾರೆ ಎಂದು ನಮಗೆಲ್ಲ ತಿಳಿದೆಯಿದೆ. ಏಕೊಂದರೆ ಪೆಟ್ರೋಲ್‍‍ಗಿಂತ ಡೀಸೆಲ್ ಕಾರ್‍‍ಗಳು ಹೆಚ್ಚು ಮೈಲೇಜ್ ನೀಡುತ್ತವೆ. ಆದ್ದರಿಂದಲೆ ವಾಹನ ತಯಾರಕರು ಹೆಚ್ಚಾಗಿ ಡೀಸೆಲ

By Rahul Ts

ಕಾರು ಚಾಲಕರು ಪೆಟ್ರೋಲ್‍‍ಗಿಂತ ಡೀಸೆಲ್ ಕಾರ್‍‍ಗಳನ್ನು ಏಕೆ ಹೆಚ್ಚು ಖರೀದಿಸುತ್ತಾರೆ ಎಂಬುವುದು ನಮಗೆಲ್ಲಾ ತಿಳಿದೆಯಿದೆ. ಯಾಕೇಂದ್ರೆ ಪೆಟ್ರೋಲ್‍‍ಗಿಂತ ಡೀಸೆಲ್ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ. ಆದ್ದರಿಂದಲೇ ವಾಹನ ತಯಾರಕರು ಹೆಚ್ಚಾಗಿ ಡೀಸೆಲ್ ಕಾರುಗಳನ್ನೇ ತಯಾರಿಸುತ್ತವೆ.

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

ಹಾಗಾಗಿ ಮಾರುಕಟ್ಟೆಯಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ ಅತೀ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳ ಪಟ್ಟಿ ಇಲ್ಲಿದೆ ನೋಡಿ. ಇವು ಕಡಿಮೆ ಬೆಲೆಯಲ್ಲಿ ಅತಿ ಮೈಲೇಜ್ ನೀರಿಕ್ಷೆ ಮಾಡುವ ಗ್ರಾಹಕರಿಗೆ ಸಹಕಾರಿಯಾಗಬಲ್ಲವು.

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#1 ಮಾರುತಿ ಸ್ವಿಫ್ಟ್ - 28.4 kmpl

ಇತ್ತೀಚೆಗೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ನಾಲ್ಕನೆ ತಲೆಮಾರಿನ ಹೊಸ ಸ್ವಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅತಿ ಹೆಚ್ಚು ಮೈಲೇಜ್ ಕೊಡುವ ಕಾರುಗಳ ಪಟ್ಟಿಯಲ್ಲಿ ಮೊದಲನೆ ಸ್ಥಾನವನ್ನು ಪಡೆದುಕೊಂಡಿದೆ.

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

ಹೊಸ ಸ್ವಿಫ್ಟ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದು ಪ್ರತೀ ಲೀಟರ್‍‍ಗೆ 28.4 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಲ್ಲಿ ಬಳಸಲಾಗಿರುವ 1.3 ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 74 ಬಿಹೆಚ್‍ಪಿ ಹಾಗು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 6.50 ರಿಂದ ರೂ. 9 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#2 ಮಾರುತಿ ಸುಜುಕಿ ಡಿಜೈರ್ - 28.4 kmpl

ಟ್ಯಾಕ್ಸಿ ಚಾಲಕರ ಆಯ್ಕೆಯಲ್ಲಿ ಜನಪ್ರಿಯತೆ ಪಡೆದಂತಹ ಮಾರುತಿ ಸುಜುಕಿ ಸಂಸ್ಥೆಯ ಸ್ವಿಫ್ಟ್ ಡಿಜೈರ್ ಸೆಡಾನ್ ಕಾರುಗಳು ಹ್ಯಾಚ್‍‍ಬ್ಯಾಕ್ ಕಾರು ಸ್ವಿಫ್ಟ್ ಕಾರಿನಂತೆಯೇ ಎಂಜಿನ್ ಸಾಮರ್ಥ್ಯವನ್ನು ಪಡೆದಿದೆ. ಪ್ರತೀ ಲೀಟರ್‍‍ಗೆ 28.4 ಕಿಲೋಮೀಟರ್ ಮೈಲೇಜ್‍ ಅನ್ನು ನೀಡಲಿದೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 7.25 ರಿಂದ ರೂ. 11 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#3 ಮಾರುತಿ ಸಿಯಾಜ್ - 28.09 kmpl

2014ರಲ್ಲಿ ಬಿಡುಗಡೆಗೊಂಡ ಸಿಯಾಜ್ ಕಾರುಗಳು 1.3 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 90 ಬಿಹೆಚ್‍ಪಿ ಹಾಗು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍ಗೆ 28.09 ಕಿಲೋ ಮೀಟರ್ ಮೈಲೇಜ್ ಅನ್ನು ನೀಡಲಿದೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 8.80 ರಿಂದ ರೂ. 11 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#4 ಮಾರುತಿ ಬಲೆನೊ - 27.39 kmpl

2015ರಲ್ಲಿ ಬಿಡುಗಡೆಗೊಂಡ ಮಾರುತಿ ಸುಜುಕಿ ಸಂಸ್ಥೆಯ ಬಲೆನೊ ಕಾರುಗಳು 1.3 ಲೀಟರ್ ಡಿಡಿಐಎಸ್ ಎಂಜಿನ್ ಸಹಾಯದಿಂದ 75 ಬಿಹೆಚ್‍ಪಿ ಹಾಗು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍ಗೆ 27.39 ಮೈಲೀಜ್ ಅನ್ನು ನೀಡುತ್ತವೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ. 7.40 ರಿಂದ ರೂ. 10 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#5 ಹೋಂಡಾ ಝಾ - 27.30 kmpl

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಸಂಸ್ಥೆಯು 2015ರಲ್ಲಿ ತಮ್ಮ ಝಾ ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಬಳಸಲಾಗಿರುವ 1.5 ಐಡಿಟಿಇಸಿ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 100 ಬಿಹೆಚ್‍ಪಿ ಮತ್ತು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿವೆ. ಹೀಗಾಗಿ ಪ್ರತಿ ಲೀಟರ್‍‍ಗೆ 27.30 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿವೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 6.85 ರಿಂದ 9 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

# 6 ಟಾಟಾ ಟಿಯಾಗೊ - 27.28 kmpl

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಟಿಯಾಗೊ ಕಾರನ್ನು 2016ರಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರು ನಮ್ಮ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದಿದ್ದು, ಇದು 1.05 ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 70 ಬಿಹೆಚ್‍ಪಿ ಹಾಗು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇದಲ್ಲದೆ ಟಿಯಾಗೊ ಕಾರುಗಳು ಪ್ರತೀ ಲೀಟರ್‍‍ಗೆ 27.28 ಕಿಲೀಮೀಟರ್ ಮೈಲೇಜ್ ಅನ್ನು ನೀಡುತ್ತವೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 3.90 ರಿಂದ ರೂ. 6 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#7 ಮಾರುತಿ ಇಗ್ನಿಸ್ - 26.80

2017ರಲ್ಲಿ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು 1.3 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 75 ಬಿಹೆಚ್‍ಪಿ ಹಾಗು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍ಗೆ 26.80 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 7 ರಿಂದ 9.50 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#8 ಫೋರ್ಡ್ ಫಿಗೊ - 25.83 kmpl

2010ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಫೋರ್ಡ್ ಸಂಸ್ಥೆಯ ಫಿಗೊ ಕಾರುಗಳು 1.5 ಲೀಟರ್ ಟಿಡಿಸಿಐ ಟರ್ಬೋ ಡೀಸೆಲ್ ಎಂಜಿನ್ ಸಹಾಯದಿಂದ 10 ಬಿಹೆಚ್‍ಪಿ ಹಾಗು 215ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍ಗೆ 25.83 ಮೈಲೇಜ್ ಅನ್ನು ನೀಡುತ್ತವೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 6.31 ರಿಂದ 8.50 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#9 ಫೋರ್ಡ್ ಆಸ್ಪೈರ್- 25.83 kmpl

ಫೋರ್ಡ್ ಸಂಸ್ಥೆಯ ಆಸ್ಪೈರ್ ಸೆಡಾನ್ ಮಾದರಿಯಾಗಿದ್ದು, ಫೋರ್ಡ್ ಫಿಗೊ ಕಾರು ನೀಡುವ ಮೈಲೇಜ್ ಮತ್ತು ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 7.40 ರಿಂದ 9.10 ಲಕ್ಷ

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

#10 ಹೋಂಡಾ ಅಮೇಜ್ - 25.80 kmpl

ಹೋಂಡಾ ಸಂಸ್ಥೆಯ ಅಮೇಜ್ ಸೆಡಾನ್ ಕಾರು 1.5 ಲೀಟರ್ ಐಡಿಟಿಇಸಿ ಎಂಜಿನ್ ಸಹಾಯದಿಂದ 100ಬಿಹೆಚ್‍ಪಿ ಹಾಗು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತಿ ಲೀಟರ್‍‍ಗೆ 25.80 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ.

ಬೆಲೆ (ದೆಹಲಿ ಎಕ್ಸ್ ಶೋರಂ) - ರೂ 7.50 ರಿಂದ 9.50 ಲಕ್ಷ

Most Read Articles

Kannada
Read more on cars diesel
English summary
Top 10 ‘Mileage KING’ diesel cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X