2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

By Praveen Sannamani

ಭಾರತದಲ್ಲಿ ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, 2018-19 ಹಣಕಾಸು ವರ್ಷದ ಅವಧಿಯಲ್ಲೂ ಉತ್ತಮ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಕಳೆದ ವರ್ಷದ ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಶೇ.16ರಷ್ಟು ವಾಹನ ಮಾರಾಟ ಪ್ರಕ್ರಿಯೆ ಹೆಚ್ಚಳವಾಗಿರುವುದು ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಸದ್ಯ ಭಾರತದಲ್ಲಿ ಹಲವಾರು ವಾಹನ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಪ್ಯಾಸೆಂಜರ್ ವೆಹಿಕಲ್, ಕಮರ್ಷಿಲ್ ವೆಹಿಕಲ್ ಮತ್ತು ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, 2018-19ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 80,64,239 ವಾಹನಗಳು ಮಾರಾಟಗೊಳ್ಳುವ ಮೂಲಕ ಹೊಸ ನೀರಿಕ್ಷೆ ಹುಟ್ಟುಹಾಕಿವೆ. ಅದರಲ್ಲೂ ಜೂನ್ ಅವಧಿಯಲ್ಲಿ ಮಾರಾಟಗೊಂಡ ಕಾರುಗಳ ಮಾರಾಟ ಪ್ರಮಾಣವು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಯಾವ ಸಂಸ್ಥೆಯು ಎಷ್ಟು ವಾಹನಗಳನ್ನು ಮಾರಾಟ ಮಾಡಿವೆ ಎಂಬುವುದನ್ನ ತಿಳಿಯಲು ಮುಂದಿನ ಸ್ಲೈಡರ್‌ಗಳತ್ತ ಸಾಗಿರಿ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಡಿಜೈರ್

ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಡಿಜೈರ್ ಕಾರುಗಳು ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ನಂ.1 ಕಾರು ಮಾದರಿ ಎಂದ್ರೆ ನೀವು ನಂಬಲೇಬೇಕು.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಕಳೆದ ವರ್ಷ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದ ಡಿಜೈರ್ ಕಾರುಗಳು ಗ್ರಾಹಕರ ಆಯ್ಕೆಯಲ್ಲಿ ಅಗ್ರ ಸ್ಥಾನ ಪಡೆದಿದ್ದು, 2018ರ ಜೂನ್ ಅವಧಿಯಲ್ಲಿ ಬರೋಬ್ಬರಿ 24,465 ಕಾರು ಮಾರಾಟಗೊಂಡಿವೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್

ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೇವರಿಟ್ ಎಂದೇ ಜನಪ್ರಿಯವಾಗಿರುವ ಸ್ವಿಫ್ಟ್ ಕಾರುಗಳು ಸಹ ಕಾರು ಮಾರಾಟದಲ್ಲಿ 2ನೇ ಅಗ್ರಸ್ಥಾನವನ್ನು ಹೊಂದಿದ್ದು, ಜೂನ್ ಅವಧಿಯಲ್ಲಿ ಬರೋಬ್ಬರಿ 18,171 ಕಾರುಗಳು ಮಾರಾಟಗೊಂಡಿವೆ. ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ವಿಫ್ಟ್ ಕಾರುಗಳು 2018ರ ಎಕ್ಸ್‌ಪೋದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದವು.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಆಲ್ಟೋ

ಬಿಡುಗಡೆಗೊಂಡ ನಂತರ ಹಲವು ವರ್ಷಗಳ ತನಕವೂ ಒಂದೇ ರೀತಿಯ ಬೇಡಿಕೆಯನ್ನು ಉಳಿಸಿಕೊಂಡ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಆಲ್ಟೋ ಕಾರು ಸರಣಿ ಸಹ ಒಂದು. ಆಲ್ಟೋ 800 ಮತ್ತು ಆಲ್ಟೋ ಕೆ10 ಎಂಬ ಮಾದರಿಯಲ್ಲಿ ಖರೀದಿಗೆ ಲಭ್ಯವಿರುವ ಆಲ್ಟೋ ಕಾರುಗಳು ಜೂನ್ ಅವಧಿಯಲ್ಲಿ 18,070 ಕಾರುಗಳು ಮಾರಾಟಗೊಂಡು ಮೂರನೇ ಸ್ಥಾನದಲ್ಲಿದೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಬಲೆನೊ

2016ರಲ್ಲಿ ಮೊದಲ ಬಾರಿಗೆ ಬಿಡುಗೊಂಡ ಬಲೆನೊ ಕಾರುಗಳು ಸಹ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಭಾರೀ ಸದ್ದು ಮಾಡುತ್ತಿವೆ. ಹೀಗಾಗಿಯೇ ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಲೆನೊ ಕಾರುಗಳು ಜೂನ್ ಅವಧಿಯಲ್ಲಿ ಬರೋಬ್ಬರಿ 17,850 ಕಾರುಗಳು ಮಾರಾಟಗೊಂಡಿವೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ವ್ಯಾಗನ್ ಆರ್

ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ಕಾರುಗಳೇ ಟಾಪ್ 5 ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದು, ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಕಾರುಗಳ ಸಹ ಪ್ರಮುಖ ಮಾದರಿಯಾಗಿದೆ. ಪ್ರಥಮ ಬಾರಿಗೆ ಬಿಡುಗಡೆಯಾದ ನಂತರ ಮೊನ್ನೆಯಷ್ಟೇ 20 ಲಕ್ಷ ಕಾರು ಮಾರಾಟ ಗುರಿತಲುಪಿರುವ ವ್ಯಾಗನ್ ಆರ್ ಕಾರುಗಳು ಜೂನ್ ಅವಧಿಯಲ್ಲಿ 11,311 ಕಾರುಗಳು ಮಾರಾಟವಾಗಿವೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಐ20

ಮಾರುತಿ ಸುಜುಕಿ ನಂತರ 2ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಐ20 ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, ಜೂನ್ ಅವಧಿಯಲ್ಲಿ 11,262 ಕಾರುಗಳನ್ನು ಮಾರಾಟ ಮಾಡಿದೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್

ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ನಿರ್ಮಾಣದ ಬ್ರೆಝಾ ಕಾರುಗಳನ್ನು ಹಿಂದಿಕ್ಕಿರುವ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳು ಟಾಪ್ 10 ಲಿಸ್ಟ್‌ನಲ್ಲಿ ಏಳನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದು, ಕ್ರೇಟಾ ಫೆೇಸ್‌ಲಿಫ್ಟ್ ಮಾದರಿಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜೂನ್ ಅವಧಿಯಲ್ಲಿ 11,111 ಕಾರುಗಳು ಮಾರಾಟವಾಗಿವೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಬ್ರೇಝಾ

ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಬ್ರೇಝಾ ಕಾರುಗಳು ಇದೇ ಮೊದಲ ಬಾರಿಗೆ ಕ್ರೇಟಾ ಕಾರುಗಳಿಂತ ಕಡಿಮೆ ಮಾರಾಟ ದಾಖಸಿದ್ದು, ಕಳೆದ ತಿಂಗಳಿನಲ್ಲಿ ಬಿಡುಗಡೆಯಾದ ಬ್ರೇಝಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳು ಮಾರಾಟಕ್ಕೆ ಪೂರಕವಾಗುವ ವಿಶ್ವಾಸದಲ್ಲಿವೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಇಷ್ಟು ದಿನಗಳ ಕಾಲ ಟಾಪ್ 10ರ ಪಟ್ಟಿಯಲ್ಲಿ 4 ಅಥವಾ 5ನೇ ಸ್ಥಾನದಲ್ಲಿರುತ್ತಿದ್ದ ಬ್ರೇಝಾ ಇದೇ ಮೊದಲ ಬಾರಿಗೆ 8ನೇ ಸ್ಥಾನ ಕುಸಿದ್ದರೂ ಜೂನ್ ಅವಧಿಯಲ್ಲಿ 10,713 ಕಾರುಗಳನ್ನು ಮಾರಾಟ ಮಾಡಿದೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಐ10

ಹೊಸ ತಲೆಮಾರಿನ ಸ್ವಿಫ್ಟ್ ಕಾರುಗಳನ್ನು ಬಿಡುಗಡೆ ನಂತರ ಐ10 ಕಾರುಗಳ ಮಾರಾಟಕ್ಕೆ ಹೊಡೆದ ಬಿದ್ದಿದ್ದು, ಜೂನ್ ಅವಧಿಯಲ್ಲಿ 10,343 ಕಾರುಗಳ ಮಾರಾಟದೊಂದಿಗೆ ಟಾಪ್ 10 ಲಿಸ್ಟ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹೋಂಡಾ ಅಮೇಜ್

ಬಹುದಿನಗಳ ನಂತರ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೋಂಡಾ ಸಂಸ್ಥೆಯು ಅಮೇಜ್ ಕಂಪ್ಯಾಕ್ಟ್ ಮಾರಾಟದಲ್ಲಿ ಭಾರೀ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಮೇ 16ರಂದು ಬಿಡುಗಡೆಯಾಗಿದ್ದ ಹೊಸ ವಿನ್ಯಾಸದ ಅಮೇಜ್ ಕಾರುಗಳು ಜೂನ್ ಅವಧಿಯಲ್ಲಿ 9103 ಕಾರುಗಳನ್ನು ಮಾರಾಟ ಮಾಡಿದೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಇದರ ಹೊರತಾಗಿ ಟಾಟಾ ಟಿಯಾಗೋ, ಮಾರುತಿ ಒಮ್ನಿ, ಮಾರುತಿ ಸೆಲೆರಿಯೊ, ಟೊಯೊಟಾ ಇನೋವಾ ಕ್ರಿಸ್ಟಾ, ಮಹೀಂದ್ರಾ ಬಲೆರೊ, ಮಾರುತಿ ಇಕೊ, ರೆನಾಲ್ಟ್ ಕ್ವಿಡ್, ಮಾರುತಿ ಇಗ್ನಿಸ್, ಮಾರುತಿ ಎರ್ಟಿಗಾ, ಹ್ಯುಂಡೈ ಅಯಾನ್, ಹ್ಯುಂಡೈ ಎಕ್ಸ್‌ಸೆಂಟ್, ಟಾಟಾ ನೆಕ್ಸಾನ್, ಮಾರುತಿ ಎಸ್ ಕ್ರಾಸ್, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆರ್ನಾ ಕಾರುಗಳು ಟಾಪ್ 25ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯೇ ಉಳಿದೆಲ್ಲಾ ಕಾರು ಉತ್ಪಾದನಾ ಸಂಸ್ಥೆಗಳಿಂತಲೂ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ತದನಂತರದ ಹ್ಯುಂಡೈ ಕೂಡಾ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

Most Read Articles

Kannada
English summary
Top-Selling Cars In India June 2018: Maruti Cars Attain The Top Five Positions.
Story first published: Saturday, July 14, 2018, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X