ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಮೋಟಾರ್ಸ್ ತಮ್ಮ ಹೊಸ ಅಲ್ಫಾರ್ಡ್ ಎಮ್‍‍ಪಿವಿ ವ್ಯಾನ್ ಅನ್ನು ಪರಿಚಯಿಸಲಿದ್ದು, ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು.

By Rahul Ts

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಮೋಟಾರ್ಸ್ ತಮ್ಮ ಹೊಸ ಅಲ್ಫಾರ್ಡ್ ಎಮ್‍‍ಪಿವಿ ವ್ಯಾನ್ ಅನ್ನು ಪರಿಚಯಿಸಲಿದ್ದು, ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಈ ಕಾರನ್ನ ಪ್ರದರ್ಶನ ಮಾಡಲಾಗಿತ್ತು.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ದಿವಂಗತ ಕರುಣಾನಿಧಿಯವರು ಕೂಡಾ ಈ ಕಾರನ್ನು ಬಳಸುತ್ತಿದ್ದರು ಅಂದ್ರೆ ನೀವು ನಂಬಲೇಬೇಕು. ಇದೀಗ ಮಾರುಕಟ್ಟೆಗೆ ಇನ್ನಷ್ಟು ಲಗ್ಷುರಿ ಫೀಚರ್ಸ್‍‍ಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಈ ವಾಹನಕ್ಕೆ ಈಗಾಗಲೇ ಟ್ರಾವೆಲ್ ಹಾಗು ಟೂರ್ ಇಂಡಸ್ಟ್ರಿಯಲ್ಲಿ ಭಾರೀ ಬೇಡಿಕೆ ಬರುತ್ತಿದೆ. ಕೇವಲ ಟೂರಿಂಗ್ ಆಪರೇಟರ್ಸ್‍‍ಗೆ ಮಾತ್ರವಲ್ಲದೆ ಕುಟುಂಬದ ಜೊತೆ ಹೊರ ಸಂಚಾರಕ್ಕೆ ಹೋಗಲು ಕೂಡಾ ಸಾಕಷ್ಟು ಅನುಕೂಲಕಲಕರ ವಾಹನ ಇದಾಗಿದೆ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿ ವ್ಯಾನಗಳು ಪ್ರದರ್ಶಿಸುವುದರ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಕುತೂಹಲವನ್ನುಂಟು ಮಾಡಿದ ಟೊಯೊಟಾ, ಜನಪ್ರಿಯ ಇನೋವಾ ಕ್ರಿಸ್ಟಾ ಕಾರಿಗೆ ಪರ್ಯಾಯ ವಾಹನ ಮಾದರಿಯಾಗಿಸಲಿದೆ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಕಾರಿನ ಹೊರ ವಿನ್ಯಾಸ

ಕಾರಿನ ಮುಂಭಾಗದಲ್ಲಿ ಅಗಲವಾದ ಕ್ರೋಮ್ ಗ್ರಿಲ್ ಅನ್ನು ಪಡೆದುಕೊಂಡಿರಲಿದ್ದು, ಜೊತೆಗೆ, ಲಾರ್ಜ್ ಸೆಂಟ್ರಲ್ ಏರ್ ಇಂಟೇಕ್, ಪ್ರಾಮಿನಂಟ್ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್ ಯೂನಿಟ್ಸ್, ಫಾಗ್ ಲ್ಯಾಂಪ್ಸ್ ಮತ್ತು ಎಲ್ಇಡಿ ಡಿಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಕಾರಿನ ಒಳ ವಿನ್ಯಾಸ

ಆಲ್ಫಾರ್ಡ್ ಐಷಾರಾಮಿ ಎಮ್ ಪಿವಿಗಳ ಒಳಭಾಗವು ಲೆದರ್ ಮತ್ತು ಮರದ ಫಲಕಗಳಿಂದ ಒಳಗೊಂಡಿದ್ದು, ಇಂಟಿಗ್ರೇಟೆಡ್ ಮಸಾಜರ್ಸ್, ರೆಕ್ಲೈನಿಂಗ್ ಸೀಟ್ಸ್, ಟಚ್‍ ಕಂಟ್ರೋಲ್ಸ್, ಅಗಲವಾದ ಇನ್ಫೋಟೈನೆಂಟ್ ಸಿಸ್ಟಮ್ ಮತ್ತು ಕಾರಿನ ಮಧ್ಯದಲ್ಲಿರುವ ಸೀಟುಗಳು ಹಲವಾರು ಐಷಾರಾಮಿ ಸೌಕರ್ಯಗಳನ್ನು ಪಡೆದುಕೊಂಡಿರುವುದಲ್ಲದೇ ಈ ಕಾರಿನ ವಿಶೇಷ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಭಾರತೀಯ ರಸ್ತೆಗಳಲ್ಲಿ ಈಗಾಗಲೇ ಟೊಯೊಟಾ ನಿರ್ಮಾಣದ ಆಲ್ಫಾರ್ಡ್ ಮತ್ತು ವೆಲ್ಫೈರ್ ಕಾರುಗಳನ್ನು ಕಾಣಬಹುದಾಗಿದ್ದು, ಆಸಕ್ತ ಗ್ರಾಹಕರು ಯುರೋಪಿನ್ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ಹಳೆಯ ವಿಚಾರ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಎಂಜಿನ್ ವೈಶಿಷ್ಟ್ಯತೆ

ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿ ವ್ಯಾನ್‌ಗಳು ಪೆಟ್ರೋಲ್ ಮಾದರಿಯಲ್ಲೇ ಎರಡು ವಿಭಾಗಗಳಲ್ಲಿ ಅಭಿವೃದ್ಧಿಯಾಗಿದ್ದು, 2.5- ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 179-ಬಿಹೆಚ್‌ಪಿ ಮತ್ತು 235-ಎನ್ಎಮ್ ಟಾರ್ಕ್ ಉತ್ಪಾದಿಸುವ ಗುಣಹೊಂದಿದೆ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಹಾಗೆಯೇ 3.5-ಲೀಟರ್ ವಿ6 ಎಂಜಿನ್ ಹೊಂದಿರುವ ಮತ್ತೊಂದು ಮಾದರಿಯು 297-ಬಿಎಚ್‌ಪಿ ಮತ್ತು 361-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು ಎಂದು ಟೊಯೊಟಾ ಹೇಳಿಕೊಂಡಿದೆ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಇನ್ನು ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್‍ಪಿವಿ ವ್ಯಾನ್ ಮಾದರಿಯ ಹೈಬ್ರಿಡ್ ಆವೃತ್ತಿಯು 2.5 ಲೀಟರ್ 4 ಸಿಲೆಂಡರ್ ಎಂಜಿನನ್ನು ಪಡೆದುಕೊಂಡಿದ್ದು, ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿಯು 8 ಸ್ಪೀಡ್ ಆಟೊಮ್ಯಾಟಿಕ್ ಅಥವಾ ಸಿವಿಟಿ ಟ್ರ್ಯಾನ್ಸ್‌ಮಿಷನ್ ಪಡೆದುಕೊಳ್ಳಲಿದ್ದು, ಹೈಬ್ರೀಡ್ ಆವೃತ್ತಿಯು ಸಿವಿಟಿ ಪವರ್ ಟ್ರೈನ್ ಅನ್ನು ಹೊಂದಿರಲಿದೆ.

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

ಪ್ರಸ್ತುತ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್‍‍ಪಿವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡರೆ ಸಿಬಿಯು ಮಾರ್ಗದಿಂದ ಬರಲಿದ್ದು, ಸುಮಾರು ರೂ.40 ರಿಂದ 55 ಲಕ್ಷದ ಬೆಲೆಗೆ ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
Read more on toyota mpv luxury car
English summary
Toyota Alphard is bigger and more luxurious than Innova Crysta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X