ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ತಮ್ಮ ಇಟಿಯಾಸ್ ಲಿವಾ ಕಾರಿಗೆ ಹೊಸ ಬಣ್ಣವನ್ನು ನೀಡಿದ್ದು, ಈ ಕಾರು ಇದೀಗ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಪೆಯಿಂಟ್ ಸ್ಕೀಮ್ ಅನ್ನು ಪಡೆದಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ತಮ್ಮ ಇಟಿಯಾಸ್ ಲಿವಾ ಕಾರಿಗೆ ಹೊಸ ಬಣ್ಣವನ್ನು ನೀಡಿದ್ದು, ಈ ಕಾರು ಇದೀಗ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಪೆಯಿಂಟ್ ಸ್ಕೀಮ್ ಅನ್ನು ಪಡೆದಿದೆ. ಹೊಸ ಬಣ್ಣ ಪಡೆದ ಇಟಿಯಾಸ್ ಲಿವಾ ಕಾರುಗಳು ಕೆಂಪು-ಕಪ್ಪು ಹಾಗು ಬಿಳಿ-ಕಪ್ಪು ಎಂಬ ಡ್ಯುಯಲ್ ಟೋನ್ ಬಣ್ಣಗಳಲ್ಲಿಯೂ ಕೂಡ ಲಭ್ಯವಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಟೊಯೊಟಾ ಸಂಸ್ಥೆಯು ಈಗಾಗಲೆ ಇನ್ಫರ್ನೊ ಆರೆಂಜ್ ಪೆಯಿಂಟ್ ಸ್ಕೀಮ್ ಅನ್ನು ತಮ್ಮ ಇಟಿಯಾಸ್ ಕ್ರಾಸ್ ಕಾರಿಗೆ ನೀಡಿದ್ದು, ಅದು ಡ್ಯುಯಲ್ ಟೋನ್ ಫಿನಿಶ್ ಅನ್ನು ಪಡೆಯಲಿಲ್ಲ. ಈಗಾಗಲೇ ಲಭ್ಯವಿರುವ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಂತೆಯೇ, ಇಟಿಯಾಸ್ ಲಿವಾದ ವಿ, ವಿಎಕ್ಸ್, ವಿಡಿ ಮತ್ತು ವಿಡಿಎಕ್ಸ್ ಟ್ರಿಮ್ಸ್ ಗಳೊಂದಿಗೆ ಹೊಸ ಆರೆಂಜ್-ಕಪ್ಪು ಬಣ್ಣ ಲಭ್ಯವಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಹೊಸ ಟೊಯೊಟಾ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಇನ್ಫರ್ನೊ ಆರೆಂಜ್ ಬಣ್ಣದ ಕಾರು ಬ್ಲೇಕ್ಡ್ ಔಟ್ ರೂಫ್, ರಿಯರ್ ಸ್ಪಾಯ್ಲರ್, ಫ್ರಂಟ್ ಗ್ರಿಲ್ ಮತ್ತು ಒಆರ್‍‍ವಿಎಮ್‍‍ಗಳನ್ನು ಪಡೆದುಕೊಂದಿರಲಿದ್ದು, ಕಾರಿನ ಇನ್ನಿತರೆ ಬಾಗಗಳನ್ನು ಆರೆಂಜ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ ಕಾರುಗಳು ಡ್ಯುಯಲ್ ಟೋನ್ ಅಲಾಯ್ ಚಕ್ರಗಳು ಮತ್ತು ಕಾರಿನ ಸೆಂಟ್ರಲ್ ಕಂಸೋಲ್ ಅನ್ನು ಪಿಯಾನೊ ಬ್ಲಾಕ್ ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಟೊಯೊಟಾ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಬಣ್ಣದ ಕಾರುಗಳು 2-ದಿನ್ ಮ್ಯೂಸಿಕ್ ಸಿಸ್ಟಮ್, ವಿದ್ಯುತ್‍ನಿಂದ ಮಡಿಚಬಹುದಾದ ಒಆರ್‍‍ವಿಅಮ್, ಡೇ/ನೈಟ್ ಐಆರ್‍‍‍ವಿಎಮ್ ಮತ್ತು ಹೈಟ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಇದಲ್ಲದೆ ಡ್ಯುಯಲ್ ಟೋನ್ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಕಾರಿನ ಟಾಪ್ ವೇರಿಯಂಟ್ ಅಧಿಕವಾಗಿ ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ಸ್, ಫಾಗ್ ಲ್ಯಾಂಪ್ಸ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ವೈಶಿಷ್ತ್ಯತೆಗಳನ್ನು ಪಡೆದುಕೊಂಡಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಎಂಜಿನ್ ಸಾಮರ್ಥ್ಯ

ಟೊಯೊಟಾ ಇಟಿಯಾಸ್ ಲಿವಾ ಕಾರುಗಳು 1.2 ಲೀಟರ್ ಪೆಟ್ರೋಲ್ ಹಾಗು 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಎಂಜಿನ್ 79ಬಿಹೆಚ್‍‍ಪಿ ಮತ್ತು 104ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಇನ್ನು 1.4 ಲೀಟರ್ ಡೀಸೆಲ್ ಎಂಜಿನ್‍ಗಳು 67ಬಿಹೆಚ್‍‍ಪಿ ಮತ್ತು 170ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಟೊಯೊಟಾ ಇಟಿಯಾಸ್ ಲಿವಾ ಕಾರುಗಳು ಈಗಾಗಲೆ ಮಾರುಕಟ್ಟೇಯಲ್ಲಿ ಲಭ್ಯವಿರುವ ಇನ್ನಿತರೆ ಡ್ಯುಯಲ್ ಟೋನ್ ಬಣ್ಣ ಹೊಂದಿರುವ ಕಾರುಗಳ ಬೆಲೆಯನ್ನೆ ಪಡೆಯಲಿದ್ದು, ಟೊಯೊಟಾ ಇಟಿಯಾಸ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.85 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣ ಪಡೆದ ಟೊಯೊಟಾ ಇಟಿಯಾಸ್ ಲಿವಾ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಡ್ಯುಯಲ್ ಟೋನ್ ಬಣ್ಣವನ್ನು ಪಡೆದ ಟೊಯೊಟಾ ಇಟಿಯಾಸ್ ಲಿವಾ ಸ್ಟ್ಯಾಂಡರ್ಡ್ ವೇರಿಯಂಟ್ ಹ್ಯಾಚ್‍‍ಬ್ಯಾಕ್ ಕಾರಿಗಿಂತ ವಿಭಿನ್ನವಾಗಿ ಕಾಣಿಸಲಿದ್ದು ಸ್ಪೋರ್ಟಿ ಲುಕ್ ಅನ್ನು ಪಡೆದಿದೆ. ಇದಲ್ಲದೆ ಈ ಕಾರಿನಲ್ಲಿ ಗ್ರಾಹಕರ ಬೇಡಿಕೆಯಂತೆ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಗ್ರಾಹಕರು ಇದೀಗ ಮೂರು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಈ ಕಾರನ್ನು ಖರೀದಿಸಬಹುದಾಗಿದೆ.

Most Read Articles

Kannada
Read more on toyota etios color
English summary
Toyota Etios Liva Gets A New Dual-Tone Colour Scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X