ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ನಾವು ಬಹಳ ಇಷ್ಟ ಪಟ್ಟು ಖರೀದಿಸಿದ ನಮ್ಮ ವಾಹನವು ಹಳೆಯದ್ದಾಗಿದೆ ಎಂಬ ಕಾರಣಕ್ಕೆ ಅದನ್ನು ಮೂಲೆಗೆ ತಳ್ಳಲು ಹೇಗಾದರು ಮನಸ್ಸು ಸಮ್ಮತಿಸುತ್ತೆ ಅಲ್ವಾ.? ಹೀಗಾಗಿ ಅದೇಷ್ಟೊ ಜಾಲಿ ರೈಡಿಂಗ್‍‍ಗಳಲ್ಲಿ ನಮ್ಮೊಂದಿಗಿದ್ದು, ಸಿಹಿ ನೆನಪುಗಳನ್ನು ನೀಡಿದ ವಾಹನವನ್ನ ಹೇಗಾದರು ಮಾಡಿ ಇನ್ನಷ್ಟು ದಿನ ನಮ್ಮಲ್ಲಿಯೆ ಉಳಿಸಿಕೊಳ್ಳಲು ಬಯಸುತ್ತೇವೆ.

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಈ ನಿಟ್ಟಿನಲ್ಲಿ ಹೆಚ್ಚು ಮಂದಿ ತಮ್ಮ ಹಳೆಯ ವಾಹನಗಳನ್ನ ಬಳಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲದೇ ಹೆಚ್ಚು ಕರ್ಚು ಮಾಡಿ ಮತ್ತಷ್ಟು ದಿನ ಬಳಸಲು ಮಾಡಿಫೈ ಮಾಡಿಸಿಕೊಳ್ಳುತ್ತಾರೆ. ಇಂದಿನ ಈ ಲೇಖನದಲ್ಲಿ ಸಹ ಇಂತಹ ಒಂದು ಮಾಡಿಫೈ ವಾಹನದ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ. ಈ ವಾಹನವು ಹಳೇಯದಾದರು ಅದನ್ನು ಮಾಡಿಫೈ ಮಾಡಿ ಬೇರೆ ವಾಹನದ ನೋಟವನ್ನು ನೀಡಲಾಗಿದೆ.

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಹೌದು, ಹಿಂದಿನ ತಲೆಮಾರಿನ ಟೊಯೊಟಾ ಫಾರ್ಚ್ಯುನರ್ ಕಾರನ್ನು ಮೂಲೆಗೆ ತಳ್ಳಲು ಬಯಸದ ಮಾಲೀಕನೊಬ್ಬ, ಫಾರ್ಚ್ಯುನರ್ ಕಾರನ್ನು ಪಾಡಿಫೈ ಮಾಡಿಸಿ ಜೀಪ್ ಕಂಪಾಸ್ ಕಾರಿನ ವಿನ್ಯಾಸವನ್ನು ನೀಡಲಾಗಿದ್ದು, ಈ ಕುರಿತಾದ ಮಾಹಿತನ್ನು ತಿಳಿಯಲು ಮುಂದಕ್ಕೆ ಓದಿರಿ..

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಟೊಯೊಟಾ ಲೈನ್-ಅಪ್‍ನಲ್ಲಿಯೆ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದ ಫಾರ್ಚ್ಯುನಾರ್ ಕಾರನ್ನು ಹೆಚ್ಚು ಜನರು ಪಾಡಿಫೈ ಮಾಡಿಸಿಕೊಳ್ಳುತ್ತುರುವನ್ನು ನಾವು ಕಾಣುತ್ತಿದ್ದೇವೆ. ಇಲ್ಲಿ ಕೂಡಾ ನಡೆದದ್ದು ಅದೆ, ಕಾರಿನ ಮುಂಭಾಗವನ್ನು ಜೀಪ್ ರೆನೆಗೆಡ್ ಕಾರಿನಂತೆ ಮಾಡಿ ಒಳಭಾಗದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ.

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಅಯಾಸ್ ಕಸ್ಟಮ್ಸ್ ಎಂಬ ಮಾಡಿಫಿಕೇಷನ್ ಕಂಪೆನಿಯೊಂದು ಹಲವಾರು ಬೈಕ್‍ಗಳನ್ನು ಮತ್ತು ಕಾರುಗಳನ್ನು ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ ಕಾಣುವ ರೀತಿಯಲ್ಲಿ ಮಾಡಿಫೈ ಮಾಡುತ್ತಾರೆ. ಹೀಗೆ ಸುಮಾರು 14 ಲಕ್ಷದ ವೆಚ್ಚದಲ್ಲಿ ಫಾರ್ಚ್ಯುನಾರ್ ಕಾರನ್ನು ಜೀಪ್ ರೆನೆಗೆಡ್ ಕಾರಿನಂತೆ ಮಾಡಿಫೈ ಮಾಡಿರುವುದನ್ನು ನೀವಿಲ್ಲಿ ಕಾಣಬಹುದು.

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಹಿಂದಿನ ತಲೆಮಾರಿನ ಟೊಯೊಟಾ ಫಾರ್ಚ್ಯುನರ್ ಕಾರಿನ ಮುಂಭಾಗದಲ್ಲಿ ಜೀಪ್ ಕಾರುಗಳಿಗೆ ನೀಡಿರುವ ಹಾಗೆ ವರ್ಟಿಕಲ್ ಸ್ಲಾಟ್ ಗ್ರಿಲ್, ವೃತ್ತಾಕಾರದ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್‍ ಮತ್ತು ಫಾಗ್ ಲ್ಯಾಂಪ್ಸ್ ಅನ್ನು ಅಳವಡಿಸಲಾಗಿದೆ.

MOST READ: ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಹೊಗೆಯೆ ಮುಂಭಾಗದ ಬಂಪರ್‍‍ಗೆ ಸಿಲ್ವರ್ ಬಣ್ಣವನ್ನು ನೀಡಲಾಗಿದ್ದು, ರೂಫ್‍ನ ಮೇಲೆ ಹೈ ಎಂಟೆನ್ಸಿಟಿ ಲ್ಯಾಂಪ್‍‍ಗಳನ್ನ ಒದಗಿಸಲಾಗಿದೆ. ಇನ್ನು ಫಾರ್ಚ್ಯುನರ್ ಎಸ್‍ಯುವಿ ಕಾರಿನ ಹಿಂಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಹಾಗೆಯೆ ಬಿಟ್ಟಿದ್ದಾರೆ.

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಮಾಡಿಪೈ ಆದ ಈ ಕಾರಿನ ಹೊರಭಾಗವು ಎಷ್ಟು ಆಕರ್ಷಕವಾಗಿ ಕಾಣುತ್ತದೆಯೊ ಒಳಭಾಗದಲ್ಲಿಯು ಸಹ ಪ್ರಯಾಣಿಕರಿಗೆ ಐಷಾರಾಮಿ ಸೌಲತ್ತುಗಳನ್ನು ನೀಡುವ ಹಲವಾರು ಉಪಕರಣಗಳನ್ನು ನೀಡಲಾಗಿದೆ.

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಕಾರಿನ ಒಳಭಾಗದಲ್ಲಿ ಉತ್ತಮ ದರ್ಜೆಯ ಸೀಟ್‍‍ಗಳನ್ನು ಡ್ಯುಯಲ್ ಟೋನ್ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಎಲ್ಇಡಿ ಟಿವಿ, ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಲೆಧರ್‍ ಸೀಟ್, ಎಂಬಿಯಂಟ್ ಲೈಟ್‍ಗಳು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಿಫ್ರೆಜರೇಟರ್ ಮತ್ತು ಲ್ಯಾಪ್‍‍ಟಾಪ್ ಇರಿಸಲು ಫೋಲ್ಡಿಂಗ್ ಟೇಬಲ್‍‍ಗಳನ್ನು ಸಹ ಅಳವಡಿಸಲಾಗಿದೆ.

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಇನ್ನು ಜೀಪ್ ರೆನೆಗೆಡ್ ಕಾರಾಗಿ ಮಾರಿದ ಹಿಂದಿನ ತಲೆಮಾರಿನ ಟೊಯೊಟಾ ಫಾರ್ಚ್ಯುನರ್ ಕಾರಿನ ಹೊರಭಾಗ ಮತ್ತು ಒಳಭಾಗದಲ್ಲಿ ಮಾತ್ರ ಬದಲಾವಣೆಗಳನ್ನು ಮಾಡಲಾಗಿದ್ದು, ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೇಗಳನ್ನು ಮಾಡಲಾಗಿಲ್ಲ ಎನ್ನಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

ಮೂಲತಹ ಈ ಫಾರ್ಚ್ಯುನರ್ ಕಾರು 2.5 ಲೀಟರ್ ಡಿ-4ಡಿ ಡೀಸೆಲ್ ಎಂಜಿನ್ ಸಹಾಯದಿಂದ 144ಬಿಹೆಚ್‍ಪಿ ಮತ್ತು 34.98 ಕೆಜಿಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

Source:Priyanka Modification Studios

Most Read Articles

Kannada
English summary
Old Toyota Fortuner SUV Modified. Read in Kannada
Story first published: Thursday, November 29, 2018, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X