ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಟೋಯೊಟಾ ಕಿರ್ಲೀಸ್ಕರ್ ಮೋಟಾರ್ ಭಾರತದಲ್ಲಿ ಮಾರಾಟಮಾಡುತ್ತಿರುವ ಇನೊವಾ ಕ್ರಿಸ್ಟಾ ಮತ್ತು ಫಾರ್ಚುನರ್ ಕಾರುಗಳನ್ನು ರೀಕಾಲ್ ಮಾಡುತ್ತಿದೆ.

By Rahul Ts

ಟೋಯೊಟಾ ಕಿರ್ಲೀಸ್ಕರ್ ಮೋಟಾರ್ ಭಾರತದಲ್ಲಿ ಮಾರಾಟಮಾಡುತ್ತಿರುವ ಇನೊವಾ ಕ್ರಿಸ್ಟಾ ಮತ್ತು ಫಾರ್ಚುನರ್ ಕಾರುಗಳನ್ನು ರೀಕಾಲ್ ಮಾಡುತ್ತಿದೆ. ಎರಡೂ ಮಾಡಲ್‍‍ಗಳಲ್ಲಿ ಫ್ಯುಯಲ್ ಹೊಸ್ ಹತ್ತಿರ ಕಂಡುಬಂದ ತಾಂತ್ರಿಕ ಲೋಪದೋಷದ ಕಾರಣದಿಂದಾಗಿ ಸಂಸ್ಥೆಯು ರೀಕಾಲ್ ಮಾಡುತ್ತಿವೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಜುಲೈ 16, 2016 ರಿಂದ ಮಾರ್ಚ್ 22,2018 ಮಧ್ಯಕಾಲದಲ್ಲಿ ತಯಾರಾದ ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳನ್ನು ಮತ್ತು ಅಕ್ಟೋಬರ್ 6, 2016 ರಿಂದ ಮಾರ್ಚ್ 22,2018ರ ಮಧ್ಯಕಾಲದಲ್ಲಿ ತಯಾರಾದ ಟೊಯೊಟಾ ಫಾರ್ಚುನರ್ ಕಾರುಗಳನ್ನು ರೀಕಾಲ್ ಮಾಡುತ್ತಿದೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ರೀಕಾಲ್ ಬಗ್ಗೆ ಟೊಯೊಟಾ ಬಿಡುಗಡೆಗೊಳಿಸಿದ ಪ್ರಕಟಣೆಯ ಪ್ರಕಾರ 2,628 ಯೂನಿಟ್ ಇನೊವಾ ಕ್ರಿಸ್ಟಾ ಕಾರುಗಳು ಮತ್ತು ಫಾರ್ಚುನರ್ ವಾಹನಗಳನ್ನು ರೀಕಾಲ್ ಮಾಡಿವೆ ಎನ್ನಲಾಗಿದೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಸಿಯಾಮ್ (SIAM) ಪ್ರಕಠಣೆಯಲ್ಲಿ "ಫ್ಯುಯಲ್ ರಿಟರ್ನ್ ಹೊಸ್ ಕ್ಯಾನಿಸ್ಟರ್ ಹೊಸ್‍‍ಗೆ ತಪ್ಪಾಗಿ ಅನುಸಂಧಾನವನ್ನು ಮಡಿರುವುದಾಗಿ ಗುರುತಿಸಿದ್ದಾರೆ. ಈ ಕಾರಣದಿಂದಾಗಿ ಫ್ಯುಯಲ್ ಟ್ಯಾಂಕ್ ಪೂರ್ತಿಯಾಗಿ ಭರ್ತಿ ಮಾಡಿದಲ್ಲಿ ಕ್ಯಾನಿಸ್ಟರ್‍‍ನಲ್ಲಿ ಲೀಕೇಜ್ ಆಗುತ್ತಿದೆ" ಎಂದು ವಿವರಿಸಲಾಗಿದೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇಂಡಿಯಾ ಕೂಡಾ ಇದೇ ವಿವರಣೆಯನ್ನು ಪ್ರಕಟಿಸಿದ್ದು, ಇನೊವಾ ಕ್ರಿಸ್ಟಾ ಮತ್ತು ಫಾರ್ಚುನರ್ ಕಾರುಗಳ ಪೆಟ್ರೋಲ್ ವೇರಿಯಂಟ್ ಅನ್ನು ಮಾತ್ರ ರೀಕಾಲ್ ಮಾಡಿವೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಟೊಯೊಟಾ ಇನೊವಾ ಮತ್ತು ಫಾರ್ಚುನರ್ ಮಾಡಲ್ ಕಾರುಗಳಲ್ಲಿನ 2,964ಸಿಸಿ 4 ಸಿಲೆಂಡರ್, ಇನ್-ಲೈನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 163ಬಿಹೆಚ್‍‍ಪಿ ಮತ್ತು 245ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾತಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಇದಲ್ಲದೆ ಟೊಯೊಟಾ ಇನೊವಾ ಮತ್ತು ಫಾರ್ಚುನರ್ ಕಾರುಗಳು 170ಬಿಹೆಚ್‍‍ಪಿ ಪವರ್ ಉತ್ಪಾದಿಸಬಲ್ಲ ಡೀಸೆಲ್ ಎಂಜಿನ್ ಅನ್ನು ಸಹ ಪಡಿದಿದ್ದು, ಹಾಗೆಯೆ 150ಬಿಹೆಚ್‍‍ಪಿ ಪವರ್ ಉತ್ಪಾದಿಸಬಲ್ಲ ಸಣ್ಣ ಡೀಸೆಲ್ ಆವೃತ್ತಿಯಲ್ಲಿ ಕೂಡಾ ಇನಿವಾ ಕ್ರಿಸ್ಟಾ ಖರೀದಿಗೆ ಲಭ್ಯವಿದೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಇನೊವಾ ಕ್ರಿಸ್ಟಾ ಮತ್ತು ಫಾರ್ಚುನರ್ ಕಾರುಗಳು ಟೊಯೊಟಾ ಸಂಸ್ಥೆಗೆ ಅಧಿಕ ಸಂಖ್ಯೆಯಲ್ಲಿ ಮಾರಾತವನ್ನು ನೀಡುತ್ತಿದ್ದು, ಗ್ರಾಹಕರ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಾಂತ್ರಿಕ ದೋಷ ಹೊಂದಿರುವ ಕಾರುಗಳನ್ನು ರೀಕಾಲ್ ಮಾಡಿವೆ.

ತಾಂತ್ರಿಕ ದೋಷ - ಇನೊವಾ ಕ್ರಿಸ್ಟಾ ಮತ್ತು ಫಾರ್ಚ್ಯುನರ್ ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ..

ಆದರೆ ಅಧಿಕವಾಗಿ ಈ ಎರಡೂ ಕಾರುಗಳು ಡೀಸೆಲ್ ಮಾದರಿಯಲ್ಲಿಯೆ ಮಾರಾಟಗೊಂಡಿವೆ. ದೆಹಲಿಯ ಎಕ್ಸ್ ಶೋರಂ ಪ್ರಕಾರ ಟೊಯೊಟಾ ಇನೊವಾ ಕ್ರಿಸ್ಟಾ ಕಾರು ರೂ. 14.34 ಲಕ್ಷ ಮತ್ತು ಫಾರ್ಚುನರ್ ಕಾರು ರೂ. 26.99 ಲಕ್ಷಕ್ಕೆ ಮಾರಾಟವಾಗುತ್ತಿದೆ.

Most Read Articles

Kannada
Read more on toyota innova fortuner recall
English summary
Toyota Innova Crysta And Fortuner Recalled Over Faulty Fuel Hose Connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X