ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

By Praveen Sannamani

ಮಾಡಿಫೈ ತಂತ್ರಜ್ಞಾನವು ಆಟೋ ಉದ್ಯಮದಲ್ಲಿ ತನ್ನದೇ ಪ್ರಭಾವವನ್ನು ಹೊಂದಿದ್ದು, ವಾಹನ ಪ್ರಿಯರು ತಮ್ಮ ನೆಚ್ಚಿನ ವಿನ್ಯಾಸಗಳನ್ನು ಹೊಂದಿರುವ ವಾಹನಗಳನ್ನು ಪಡೆದುಕೊಳ್ಳಲು ಒಂದು ಉತ್ತಮ ಮಾರ್ಗ ಎನ್ನಬಹುದು. ಹೀಗಾಗಿ ಮಾಡಿಫೈ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಇದ್ದು, ಇದೀಗ ಮಾರುಕಟ್ಟೆಯಲ್ಲಿ ಮಾಡಿಫೈ ಕಾರುಗಳ ಹಾವಳಿ ಕೂಡಾ ಜೋರಾಗಿಯೇ ಇದೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಕಡಿಮೆ ಬೆಲೆಯ ಕಾರುಗಳನ್ನೇ ಬಳಸಿಕೊಂಡು ಲಗ್ಷುರಿ ಕಾರುಗಳ ವಿನ್ಯಾಸಗಳನ್ನು ನೀಡಿ ಮೂಲ ವಾಹನಗಳಿಂತೂ ಹೆಚ್ಚಿನ ಆಕರ್ಷಣೆ ನೀಡುವಂತಹ ಕೌಶಲ್ಯವೇ ಮಾಡಿಫೈ ಮಾದರಿಯಾಗಿದ್ದು, ಇಲ್ಲೊಂದು ಮಾಡಿಫೈ ಸಂಸ್ಥೆಯೊಂದು ಸಹ ಟೊಯೊಟಾ ಜನಪ್ರಿಯ ಇನೋವಾ ಕ್ರಿಸ್ಟಾ ಕಾರನ್ನು ದುಬಾರಿ ಬೆಲೆಯ ಲೆಕ್ಸಸ್ ಮಾದರಿಗೆ ಮಾಡಿಫೈ ಮಾಡಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಥೈಲ್ಯಾಂಡ್‌ನಲ್ಲಿ ಇನೋವಾ ಕ್ರಿಸ್ಟಾ ಕಾರುಗಳನ್ನು ಲೆಕ್ಸಸ್ ಮಾದರಿಗಳಿಗೆ ಮಾಡಿಫೈ ಮಾಡುವುದು ಸಾಕಷ್ಟು ಜನಪ್ರಿಯತೆ ಪಡೆಯುತ್ತಿದ್ದು, ಅದಲ್ಲೂ ಲೆಕ್ಸಸ್ ನಿರ್ಮಾಣದ ಆರ್‌ಎಕ್ಸ್ 450ಹೆಚ್ ಮಾದರಿಗಳಂತೆ ಇನೋವಾ ಕ್ರಿಸ್ಟಾ ಮಾಡಿಫೈ ಮಾಡಿಸಲು ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದಾರೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಎಂಜಿನ್ ವಿಭಾಗವನ್ನು ಹೊರತುಪಡಿಸಿ ಮುಂಭಾಗದ ಬಂಪರ್ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಭಾರೀ ಬದಲಾವಣೆ ತರುವ ಮೂಲ ಕ್ರಿಸ್ಟಾ ಕಾರುಗಳಿಗೆ ಸ್ಪೋರ್ಟಿ ಲುಕ್ ನೀಡಲಾಗಿದ್ದು, ಫಾರ್ಚೂನರ್ ಮಾದರಿಯಲ್ಲೇ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್ ಜೋಡಣೆ ಮಾಡಲಾಗಿದೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಇನ್ನೊಂದು ವಿಶೇಷ ಅಂದ್ರೆ ಟೊಯೊಟಾ ಅಂಗಸಂಸ್ಥೆಯಾದ ಲೆಕ್ಸಸ್ ಸದ್ಯ ಐಷಾರಾಮಿ ಕಾರುಗಳ ನಿರ್ಮಾಣದಲ್ಲಿ ಜನಪ್ರಿಯತೆ ಸಾಧಿಸುತ್ತಿದ್ದು, ಜಾಗತಿಕವಾಗಿ ಆಟೋ ಉದ್ಯಮದಲ್ಲಿ ಮುಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಕಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಹೀಗಿರುವಾಗ ಥಾಯ್ ಮಾಡಿಫೈ ಸಂಸ್ಥೆಯು ಲೆಕ್ಸಸ್ ಕಾರುಗಳ ವಿನ್ಯಾಸವನ್ನೇ ಇಟ್ಟುಕೊಂಡು ಇನೋವಾ ಕ್ರಿಸ್ಟಾ ಕಾರಗಳನ್ನು ಮಾಡಿಫೈ ಮಾಡುತ್ತಿದ್ದು, ಇದಕ್ಕಾಗಿ ಸಾವಿರಾರು ಗ್ರಾಹಕರು ಹೆಚ್ಚುವರಿ ಬೆಲೆ ತೆತ್ತು ಮಾಡಿಫೈ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಇನ್ನು ಭಾರತದಲ್ಲೂ ಸಹ ಇನೋವಾ ಕ್ರಿಸ್ಟಾ ಕಾರುಗಳ ಮಾಡಿಫೈ ಕುರಿತು ಹಲವು ವರದಿಗಳಿದ್ದು, ಇದರಲ್ಲಿ ಲೆಕ್ಸಸ್ ವಿನ್ಯಾಸವು ಮಾಡಿಫೈ ಅತ್ಯುತ್ತಮ ಡಿಸೈನ್ ಎನ್ನಬಹುದು. ಜೊತೆಗೆ ಕಡಿಮೆ ಬೆಲೆಗಳಲ್ಲಿ ಮಾಡಿಫೈ ಮಾಡಬಹುದಾದ ಮಾದರಿ ಇದಾಗಿದೆ ಎನ್ನಬಹುದು.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಸುದ್ದಿ ಮೂಲಗಳ ಪ್ರಕಾರ, ಥಾಯ್ ಮಾಡಿಫೈ ಸಂಸ್ಥೆಯು 2 ರಿಂದ 3 ಲಕ್ಷಕ್ಕೆ ಇನೋವಾ ಕ್ರಿಸ್ಟಾ ಕಾರುಗಳನ್ನು ಲೆಕ್ಸಸ್‌ ಡಿಸೈನ್‌ಗೆ ಮಾಡಿಫೈ ಮಾಡಿಕೊಡುತ್ತಿದ್ದು, ಭಾರತದಲ್ಲಿ ಇದು ಇನ್ನು ಕಡಿಮೆ ಬೆಲೆಗಳಲ್ಲಿ ಮಾಡಿಫೈ ಮಾಡಬಹುದಾದ ಸಾಧ್ಯತೆಗಳಿವೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಎಂಜಿನ್ ಸಾಮರ್ಥ್ಯ

ಮಾಡಿಫೈಗೊಂಡಿರುವ ಇನೋವಾ ಕ್ರಿಸ್ಟಾ ಕಾರುಗಳಲ್ಲಿ ಹೊರಭಾಗದ ಡಿಸೈನ್‌ಗಳನ್ನು ಹೊರತುಪಡಿಸಿ ಒಳವಿನ್ಯಾಸ ಮತ್ತು ಎಂಜಿನ್ ವಿಭಾಗವನ್ನು ಯಥಾವತ್ತಾಗಿ ಮುಂದುವರಿಸಲಾಗಿದ್ದು, ಸದ್ಯ ಇನೋವಾ ಕ್ರಿಸ್ಟಾ ಕಾರುಗಳು ಪ್ರಮುಖ 3 ವಿವಿಧ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.4-ಡೀಸೆಲ್ ಡೀಸೆಲ್ ಎಂಜಿನ್ ಇಲ್ಲವೇ 2.8-ಲೀಟರ್ ಡೀಸೆಲ್ ಎಂಜಿನ್‌ಗಳು ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಒಟ್ಟು 14 ವೆರಿಂಟ್‌ಗಳು ವಿವಿಧ ಬೇಡಿಕೆಗೆ ಅನುಗುಣವಾಗಿ ಖರೀದಿಸಬಹುದಾಗಿದೆ.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಹಾಗಿಯೇ ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.13.66 ಲಕ್ಷದಿಂದ ಟಾಪ್ ವೆರಿಯೆಂಟ್‌ಗಳು ರೂ.22.42 ಲಕ್ಷ ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರುಗಳು ಅತ್ಯುತ್ತಮ ಎಂಜಿನ್ ಸೌಲಭ್ಯದೊಂದಿಗೆ ಬಹುಬಳಕೆ ಕಾರು ಮಾದರಿಯಾಗಿ ಜನಪ್ರಿಯತೆ ಸಾಧಿಸಿದೆ ಎನ್ನಬಹುದು.

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಬಿಎಂಡಬ್ಲ್ಯು ಹೊಚ್ಚ ಹೊಸ 310 ಟ್ವಿನ್ ಬೈಕ್‌ಗಳ ಬಿಡುಗಡೆಗೆ ಡೇಟ್ ಫಿಕ್ಸ್

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

Most Read Articles

Kannada
Read more on car modifications toyota
English summary
Toyota Innova Crysta Modified Into A Lexus.
Story first published: Thursday, June 28, 2018, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X