ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೋವಾ ಕ್ರಿಸ್ಟಾ..

2016ರಲ್ಲಿ ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಎಮ್‍ಪಿವಿ ಕಾರುಗಳು ದೇಶದಲ್ಲಿನ ಎತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಎಮ್‍‍ಪಿವಿ ಕಾರಾಗಿ ನಿಂತಿದೆ.

By Rahul Ts

2016ರಲ್ಲಿ ಬಿಡುಗಡೆಗೊಂಡ ಟೊಯೊಟಾ ಇನೋವಾ ಕ್ರಿಸ್ಟಾ ಎಮ್‍ಪಿವಿ ಕಾರುಗಳು ದೇಶದಲ್ಲಿನ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಎಂಪಿವಿ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಯಾಕೆಂದ್ರೆ ಬೆಲೆಯಲ್ಲಿ ಅಧಿಕವಾದರೂ ಗ್ರಾಹಕರು ಕಡಿಮೆ ಬೆಲೆಯ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಲೆಕ್ಕಿಸದೇ ಐಷಾರಾಮಿ ಸೌಲತ್ತುಗಳನ್ನು ಒದಗಿಸುತ್ತಿರುವ ಇನೋವಾ ಕ್ರಿಸ್ಟಾ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೊವಾ ಕ್ರಿಸ್ಟಾ..

ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಕಾರುಗಳು ಕ್ಯಾಬ್ ಆಪರೇಟರ್‍‍ಗಳಿಗೆ ಮತ್ತು ಸ್ವಂತ ಬಳಕೆಗೆ ತಯಾರಿಸ್ಪಟ್ಟ ಕಾರಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಈ ಕಾರು ರೂ.14.33 ಲಕ್ಷದಿಂದ ರೂ.22 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೊವಾ ಕ್ರಿಸ್ಟಾ..

ಮೇಲೆ ಹೇಳಿರುವ ಹಾಗೆ ಜುಲೈ ತಿಂಗಳಿನ ಮಾರಾಟದಲ್ಲಿ ಇನೊವಾ ಕ್ರಿಸ್ಟಾ ಕಾರುಗಳು ಮಾರುತಿ ಸುಜುಕಿ ಎರ್ಟಿಗಾ ಕಾರುಗಳನ್ನು ಹಿಂದಿಕ್ಕಿದೆ. ಜುಲೈ ತಿಂಗಳಿನಲ್ಲಿ ಇನೊವಾ ಸಂಸ್ಥೆಯು 6,638 ಯೂನಿಟ್ ಕಾರುಗಳನ್ನು ಸರಬರಾಜು ಮಾಡಿದರೆ ಇನ್ನು ಮಾರುತಿ ಸುಜುಕಿ ಸಂಸ್ಥೆಯು 4,764 ಯೂನಿಟ್ ಎರ್ಟಿಗಾ ಕಾರುಗಳನ್ನು ಸರಬರಾಜು ಮಾಡಿದೆ.

ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೊವಾ ಕ್ರಿಸ್ಟಾ..

ಹೊಸ ಎರ್ಟಿಗಾ ಭಾರತದತ್ತ ಸಾಗುತ್ತಿದೆಯಾದರೂ, ದೇಶದಲ್ಲಿ ಎಮ್‍‍‍ಪಿವಿ ಮಾರಾಟವು ನಿಧಾನವಾಗುತ್ತಿರುವುದರಿಂದಾಗಿ ಎರಡು ವರ್ಷಗಳ ನಂತರವೂ ಇನೋವಾ ಕ್ರಿಸ್ಟಾ ಕಾರುಗಳಿಗೆ ಪ್ರತಿ ತಿಂಗಳು ಕೂಡಾ ಬೇಡಿಕೆಯು ಹೆಚ್ಚುತ್ತಿದೆ.

ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೊವಾ ಕ್ರಿಸ್ಟಾ..

ಹಳೆಯ ಇನೋವಾಗಿಂತಲೂ 150 ಎಂಎಂ ಉದ್ದ, 70 ಎಂಎಂ ಅಗಲ ಮತ್ತು 35 ಎಂಎಂ ಹೆಚ್ಚು ಎತ್ತರವನ್ನು ಎರಡನೇ ತಲೆಮಾರಿನ ಇನೋವಾ ಪಡೆದಿದೆ. ಇದು ಒಟ್ಟಾರೆ 4735 ಎಂಎಂ ಉದ್ದ, 1830 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2750 ಎಂಎಂ ವೀಲ್ ಬೇಸ್ ಪಡೆದಿದೆ.

ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೊವಾ ಕ್ರಿಸ್ಟಾ..

ಟಾಪ್ ಎಂಡ್ ಇನ್ನೋವಾ ಕಾರಿನಲ್ಲಿ ಸ್ಟ್ಯಾರ್ಟ್ ಸ್ಟಾಪ್ ಬಟನ್, ಸ್ಮಾರ್ಟ್ ಎಂಟ್ರಿ ಸಿಸ್ಟಂ, ಏಳು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಏಳು ಇಂಚುಗಳ ಆಡಿಯೋ ಸಿಸ್ಟಂ ಜೊತೆ ನೇವಿಗೇಷನ್, ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು 17 ಇಂಚುಗಳ ಅಲಾಯ್ ವೀಲ್ ಗಳಿರಲಿದೆ.

ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೊವಾ ಕ್ರಿಸ್ಟಾ..

ಪ್ರಸ್ತುತ ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳು 2.4 ಲೀಟರ್ ಮತ್ತು 2.8 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಯ್ಕೆಯಲ್ಲಿ ಹಾಗು 2.7 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಟೊಯೊಟಾ ಇನೊವಾ ಕ್ರಿಸ್ಟಾ..

ಇನ್ನು 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿದರೆ, 2.7 ಲೀಟರ್ ಡೀಸೆಲ್ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಟೊಯೊಟಾ ಇನೊವಾ ಎಲ್ಲಾ ವೇರಿಯಂಟ್ ಕಾರುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮೋಡ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Toyota Innova Crysta OUTSELLS the much cheaper Maruti Ertiga MPV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X