ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

By Rahul Ts

ಭಾರತದಲ್ಲಿ ಏಳು ಆಸನಗಳುಳ್ಳ ಕಾರುಗಳು ಹೆಚ್ಚಾಗೆ ಸದ್ದು ಮಾಡುತ್ತಿವೆ. ಏಕೆಂದರೆ ಕುಟುಂಬದ ಜೊತೆ ಹೊರಸಂಚಾರ ಮಾಡಲು ಅನುಕೂಲವಾಗಿದ್ದು ಭಾರತದಲ್ಲಿನ ಗ್ರಾಹಕರು ಈ ಕಾರುಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಹಾಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತನ್ನ ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಇದೇ ಏಪ್ರಿಲ್ 18ರಂದು ಬಿಡುಗಡೆಗೊಳಿಸಲಿದ್ದು, ತನ್ನ ಹಳೆಯ ಮಾದರಿಗಿಂತ ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ವಿನೂತನವಾಗಿ ಗ್ರಿಲ್, ಹೊಸ ಹೆಡ್‍‍ಲ್ಯಾಂಪ್ಸ್, ಬಂಪರ್‍‍ಗಳು, ಹೊಸ ಟೈಲ್ ಲೈಟ್ಸ್ ಮತ್ತು ಅಲಾಯ್ ವೀಲ್‍‍ಗಳನ್ನು ಪಡೆದಿದೆ. ಟಾಪ್ ಎಂಡ್ ವೇರಿಯಂಟ್‍‍ನ ಒಳವಿನ್ಯಾಸವು ಪ್ರೀಮಿಯಂ ಲೆಧರ್‍‍ನಿಂದ ಸಜ್ಜುಗೊಂಡಿದ್ದು, ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಹೊಸದಾಗಿ ಬಿಡಗಡೆಗೊಳ್ಳಲಿರುವ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಟಾಪ್‍ಎಂಡ್ ವೇರಿಯಂತ್ ಕಾರುಗಳು 2.2 ಲೀಟರ್ ಎಮ್‍ಹಾವ್ಕ್ ಡೀಸೆಲ್ ಸಹಾಯದಿಂದ 155ಬಿಹೆಚ್‍ಪಿ ಹಾಗು 360ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇನ್ನಿತರೆ ವೇರಿಯಂಟ್ ಕಾರುಗಳು 140ಬಿಹೆಚ್‍ಪಿ ಮತ್ತು 330ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಹೋಂಡಾ ಸಿಆರ್-ವಿ

ಜಪಾನ್ ಮೂಲದ ಹೋಂಡಾ ಸಂಸ್ಥೆಯು ತಮ್ಮ ಸಿಆರ್-ವಿ ಏಳು ಆಸನಗಳುಳ್ಳ ಕಾರನ್ನು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದ್ದು, ಟೊಯೊಟಾ ಫಾರ್ಚೂನರ್ ಹಾಗೂ ಫೋರ್ಡ್ ಎಂಡೀವರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಇದೇ ಮೊದಲ ಬಾರಿ ಹೋಂಡಾ ಸಿಆರ್-ವಿ ಕಾರುಗಳು ಡೀಸೆಲ್ ಎಂಜಿನ್ ಅನ್ನು ಪಡೆಯಲಿದ್ದು, 1.6 ಲೀಟರ್ ಡೀಸೆಲ್ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಹಾಗು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಇನ್ನು ಪೆಟ್ರೋಲ್ ಆವೃತ್ತಿಗಳು 2.4-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 181 ಬಿಹೆಚ್ ಪಿ ಮತ್ತು 240 ಎನ್ಎಂ ಟಾರ್ಕ್‌ನ್ನು ಉತ್ಪಾದಿಸುತ್ತದೆ. ಹಾಗೆಯೇ ಆಟೊಮ್ಯಾಟಿಕ್ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಹೊಂದಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಮಹಿಂದ್ರಾ ಟಿಯುವಿ 300 ಪ್ಲಸ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಹಿಂದ್ರಾ ಟಿಯುವಿ300 ಮಾದರಿಗಿಂತ ಪ್ಲಸ್ ಆವೃತ್ತಿಯು ಅತಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ. ಕ್ಯಾಬಿನ್ ಭಾಗ ಮತ್ತು ಕಾರಿನ ಎಡ್ಜ್‌ಗಳಲ್ಲಿ ವಿಶೇಷ ವಿನ್ಯಾಸವನ್ನು ಕೈಗೊಂಡಿರುವುದು ಹೊಸ ಕಾರಿನ ಹೊರ ನೋಟಕ್ಕೆ ಮೆರಗು ತಂದಿದ್ದು, ಇದೇ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಇನ್ನು ಹೆಚ್ಚುವರಿಯಾಗಿ ಟಿಯುವಿ300 ಪ್ಲಸ್ ಮಾದರಿಯಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಹಿಂಭಾಗದ ಕ್ಯಾಬಿನ್‌ನಲ್ಲಿ ಎಸಿ ವ್ಯವಸ್ಥೆ ಸೇರಿದಂತೆ ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಚಾಲಕ ಸೇರಿ 9 ಜನ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಈ ಹಿಂದಿನ ಮಾದರಿಯಂತೆ ಟಿಯುವಿ300 ಪ್ಲಸ್ ಮಾದರಿಯು 1.99-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 119-ಬಿಎಚ್‌ಪಿ ಉತ್ಪಾದಿಸಬಲ್ಲ ಗುಣಹೊಂದಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಮಹಿಂದ್ರಾ ಯು321

ಮಹಿಂದ್ರಾ ಸಂಸ್ಥೆಯ ಹೊಸ ಯು321 ಎಂಪಿವಿ ಕಾರೊಂದು ಇದೇ ತಿಂಗಳು 18ರಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಮಹಿಂದ್ರಾ ಯು321 ಎಂಪಿವಿ ಕಾರು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ LED ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಕಾರಿನ ಒಳವಿನ್ಯಾಸವು ಎತ್ತರವಾದ ಏಳು ಲೆದರ್ ಸೀಟ್‍‍ಗಳು, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಗಿಟಲ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಯು321 ಎಂಪಿವಿ ಕಾರಿನಲ್ಲಿ ಸ್ಯಾಂಗ್ಯಾಂಗ್ ಕಂಪೆನಿಯಿಂದ ನಿರ್ಮಿಸಲಾಗಿರುವ 1.6 ಲೀಟರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಮಹಿಂದ್ರಾ ಸಂಸ್ಥೆಯ ಮುಂಬರುವ ಕಾರುಗಳಲ್ಲಿಯೂ ಕೂಡ ಇದೇ ಎಂಜಿನ್ ಅನ್ನು ಅಳವಡಿಸಲಾಗಿದೆ ಎನ್ನಲಾಗಿದ್ದು, 130 ಬಿಹೆಚ್‍ಪಿ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಮಾರುತಿ ಎರ್ಟಿಗಾ

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಯಾಗಿರುವ ಎರ್ಟಿಗಾ ಕಾರು ಮಾದರಿಗಳು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಳ್ಳುವ ಮೂಲಕ ಎಂಪಿವಿ ಕಾರುಗಳ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದಲ್ಲೇ ಇದೀಗ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ಇದೇ ವರ್ಷದ ಮೂರನೇ ತ್ರೈಮಾಸಿಕ ಅವದಿಯಲ್ಲಿ ಬಿಡುಗಡೆಗೊಳ್ಳಲಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಇನ್ನು ಕಾರಿನ ಮುಂಭಾಗದ ಡಿಸೈನ್‌ಗಳ ಬಗೆಗೆ ಹೇಳುವುದಾದರೇ, ಶಾರ್ಪ್ ಲುಕ್, ಆಕರ್ಷಕ ಗ್ರಿಲ್ ಮತ್ತು ಪರಿಷ್ಕರಿಸಿದ ಬಂಪರ್‌ಗಳನ್ನು ಪಡೆದಿದ್ದು, ತಾಂತ್ರಿಕವಾಗಿಯು ಭಾರೀ ಬದಲಾವಣೆ ಹೊಂದಿರುವ ಮಾಹಿತಿ ಲಭ್ಯವಾಗಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಎರ್ಟಿಗಾ ಮಾದರಿಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, ಎರ್ಟಿಗಾ ನೆಕ್ಸ್ಟ್ ಜನರೇಷನ್ ಮಾದರಿಗಳು ಹೊಸ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ನ್ಯಾಚುರಲ್ ಆಸ್ಪರೆಟೆಡ್ ಪೆಟ್ರೋಲ್ ಎಂಜಿನ್ ಪಡೆಯಲಿವೆ.ಹೊಸ ತಂತ್ರಜ್ಞಾನ ಬಳಕೆ ಹಿನ್ನೆಲೆ ಸಾಮಾನ್ಯ ಎರ್ಟಿಗಾ ಕಾರುಗಳಿಂತ ನೆಕ್ಸ್ಟ್ ಜನರೇಷನ್ ಆವೃತ್ತಿಗಳು ಹೆಚ್ಚುವರಿಯಾಗಿ 1 ರಿಂದ 2 ಲಕ್ಷದವರೆಗೆ ಬೆಲೆ ಹೆಚ್ಚುವ ನೀರಿಕ್ಷೆಗಳಿವೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಮಿಟ್ಸುಬಿಸಿ ಪಜೆರೊ ಸ್ಪೋರ್ಟ್

ಜಪಾನ್ ಮೂಲದ ವಾಹನ ತಯಾರಕ ಮಿಟ್ಸುಬಿಸಿ, ಭಾರತೀಯ ಮಾರುಕಟ್ಟೆಗೆ ತಮ್ಮ ಪಜೆರೊ ಸ್ಪೋರ್ಟ್ಸ್ ಕಾರನ್ನು ಒಂದೇ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದ್ದು, ಕಾರಿನ ಒಟ್ಟಾರೆ ವಿನ್ಯಾಸ ಸ್ನಾಯುವಿನ ರೀತಿ ಇದ್ದು, ಮುಂಭಾಗದಿಂದ ಹೆಚ್ಚು ಒರಟು ರೂಪ ಪಡೆದುಕೊಂಡಿದೆ.

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಭಾರತದ ಮಾದರಿಯ ಪಜೆರೊ ಸ್ಪೋರ್ಟ್ 2.4-ಲೀಟರ್ ಎಂಐವಿಸಿ, ನಾಲ್ಕು ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 430ಎನ್ಎಂ ತಿರುಗುಬಲದಲ್ಲಿ 181 ಅಶ್ವಶಕ್ತಿ ಉತ್ಪಾದಿಸಲಿದ್ದು 8 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
Read more on cars suv mpv
English summary
Upcoming 7-seater cars with their launch timelines.
Story first published: Thursday, April 12, 2018, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X