ಥರ್ಡ್ ಪಾರ್ಟಿ ಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಥರ್ಟ್ ಪಾರ್ಟಿ ಇನ್ಸುರೆನ್ಸ್ ಇಲ್ಲದ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

By Praveen

Recommended Video

Andhra Pradesh State Transport Bus Crashes Into Bike Showroom - DriveSpark

ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಥರ್ಟ್ ಪಾರ್ಟಿ ಇನ್ಸುರೆನ್ಸ್ ಇಲ್ಲದ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಕೇಂದ್ರ ಸಾರಿಗೆ ಇಲಾಖೆಯ ನಿರ್ದೇಶನದಂತೆ ಈ ಹಿಂದೆಯೇ ಪ್ರತಿ ವಾಹನಗಳಿಗೂ ಥರ್ಡ್ ಪಾರ್ಟಿ ವಿಮೆ ಕಡ್ಡಾಯಗೊಳಿಸಲಾಗಿದ್ದರು ಅದೆಷ್ಟೋ ವಾಹನ ಮಾಲೀಕರು ಇದುವರೆಗೂ ಥರ್ಡ್ ಪಾರ್ಟಿ ಇನ್ಸುರೆನ್ಸ್ ಹೊಂದಿಲ್ಲ. ಹೀಗಾಗಿ ಅಂತಹ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಅಪಘಾತದ ಸಂದರ್ಭದಲ್ಲಿ ಜೀವ ಸುರಕ್ಷೆ ಕಾಪಾಡಲು ಮತ್ತು ವಾಹನಗಳ ಡ್ಯಾಮೇಜ್ ಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ರಾಜ್ಯ ರಸ್ತೆ ಸುರಕ್ಷತಾ ಸಮಿತಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಈ ಸಂಬಂಧ ಸುತ್ತೊಲೆ ಹೊರಡಿಸಿರುವ ರಾಜ್ಯ ರಸ್ತೆ ಸುರಕ್ಷತಾ ಸಮಿತಿಯು ಥರ್ಡ್ ಪಾರ್ಟಿ ವಿಮೆ ಇಲ್ಲದ ವಾಹನಗಳನ್ನು ಜಪ್ತಿ ಮಾಡುವಂತೆ ಸಂಚಾರಿ ಪೊಲೀಸ್ ಮತ್ತು ಆರ್.ಟಿ.ಓ ಇಲಾಖೆಗೆ ಖಡಕ್ ಸೂಚನೆ ನೀಡಿದೆ.

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಹೀಗಾಗಿ ಥರ್ಡ್ ಪಾರ್ಟಿ ವಿಮೆ ಇಲ್ಲದ ವಾಹನ ಜಪ್ತಿ ಮಾಡಿ ವಿಮೆ ಮಾಡಿಸಿಕೊಂಡ ಬಳಿಕವೇ ವಾಹನಗಳನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಕಾರು ವಿಮಾ ಖರೀದಿಗಾರರಿಗೆ ಉಪಯುಕ್ತ ಸಲಹೆಗಳು

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಪ್ರತಿಯೊಂದು ವಾಹನಕ್ಕೆ ಥರ್ಡ್ ಪಾರ್ಟಿ ವಿಮೆ ಇರಲೇಬೇಕಿದ್ದು, ವಿಮೆ ಇಲ್ಲದ ವಾಹನಗಳು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕು. ವಾಹನಗಳ ಪರಿಶೀಲನೆ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕೆಂದು ಕೂಡಾ ತಿಳಿಸಲಾಗಿದೆ.

news source :deccanherald

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಹಲವು ವರ್ಷಗಳ ಹಿಂದೆಯೇ ವಾಹನಗಳಿಗೆ ವಿಮೆ ಕಡ್ಡಾಯವಾಗಿದ್ದು, ಅಪಘಾತವಾದಾಗ ಮಾತ್ರ ವಿಮೆ ಕ್ಲೈಮ್ ಆಗ್ತಿತ್ತು. ಇದರಲ್ಲಿ ಎದುರಾಳಿ ವಾಹನಗಳಲ್ಲಿ ಜೀವಹಾನಿ ಮತ್ತು ವಾಹನ ದುರಸ್ತಿ ಖರ್ಚು ಸೇರಿ ಯಾವುದೇ ಪರಿಹಾರ ಸಿಗುತ್ತಿರಲಿಲ್ಲ.

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಆದ್ರೆ ಥರ್ಡ್ ಪಾರ್ಟಿ ವಿಮೆಯಲ್ಲಿ ಎದುರಾಳಿ ವಾಹನ ಅಪಘಾತಕ್ಕೀಡಾದಾಗ ಜೀವಹಾನಿ, ವಾಹನಕ್ಕೆ ಹಾನಿಯಾದ ಸಂದರ್ಭದಲ್ಲಿ ವಿಮೆ ಪರಿಹಾರ ಸಿಗಲಿದೆ. ಈ ನಿಯಮವನ್ನು ಇನ್ನುಮುಂದೆ ಕಡ್ಡಾಯವಾಗಿ ಪಾಲಿಸಬೇಕೆಂದು ರಾಜ್ಯ ರಸ್ತೆ ಸುರಕ್ಷತಾ ಸಮಿತಿ ಸೂಚಿಸಿದೆ.

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಸಹಜವಾಗಿಯೇ ಮೂರನೇ ವ್ಯಕ್ತಿ ಹೊಣೆಗಾರಿಕೆ ವಿಮಾ ಯೋಜನೆ ಕಾನೂನಿನ ಮೂಲಕ ಕಡ್ಡಾಯಾಗಿರುವುದರಿಂದ ಪ್ರತಿಯೊಬ್ಬ ನೂತನ ಕಾರು ಖರೀದಿ ಗ್ರಾಹಕರು ಇದನ್ನು ಖರೀದಿಸುವುದು ಮೊದಲ ಕರ್ತವ್ಯವಾಗಿರುತ್ತದೆ.

ಥರ್ಡ್ ಪಾರ್ಟಿಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

ಅಲ್ಲದೆ ಇದನ್ನು ತಪ್ಪಿಸಿಕೊಳ್ಳುವ ಯಾವುದೇ ಮಾರ್ಗಗಳಿಲ್ಲ. ಹಾಗೊಂದು ವೇಳೆ ನೀವಿದನ್ನು ಪಾಲಿಸದಿದ್ದಲ್ಲಿ ಆಗಬಹುದಾದ ದುರಂತಗಳಿಗೆ ನೀವೇ ಹೊಣೆಯಾಗುತ್ತಿರಿ ಎಂಬುವುದು ಮರೆಯಬೇಡಿ.

Trending On DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ವಿವಿಧ ಬಣ್ಣಗಳನ್ನು ಹೊಂದಿರುವ ನಂಬರ್ ಪ್ಲೇಟ್‌ಗಳು ಏನನ್ನು ಸೂಚಿಸುತ್ತವೆ ಗೊತ್ತಾ?

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Vehicles without third-party insurance to be seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X