1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

By Praveen Sannamani

ಫೋಕ್ಸ್‌ವ್ಯಾಗನ್ ಸಂಸ್ಥೆಯು ಸದ್ಯ ಕಾರು ಉತ್ಪಾದನೆಯಲ್ಲಿ ಸಾಕಷ್ಟು ಗುಣಮಟ್ಟ ಕಾಯ್ದುಕೊಳ್ಳುವತ್ತ ಗಮನಹರಿಸುತ್ತಿದ್ದು, ಇದರ ಮಧ್ಯೆ ಇಂಧನ ದಕ್ಷತೆಯ ಜೊತೆ ಜೊತೆಗೆ ಪರ್ಫಾಮೆನ್ಸ್ ಎಂಜಿನ್ ಮಾದರಿಯಾದ 1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸುವ ಸುಳಿವು ನೀಡಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಮೂಲಗಳ ಪ್ರಕಾರ ಫೋಕ್ಸ್‌ವ್ಯಾಗನ್ ಸಂಸ್ಥೆಯ ಮುಂಬರುವ ಕಾರು ಮಾದರಿಯಾದ ಟಿ ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಹೊಸ ಎಂಜಿನ್ ಮಾದರಿಯನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಇದರ ಜೊತೆ ಮತ್ತೇರಡು ಜನಪ್ರಿಯ ಮಾದರಿಗಳಾದ ಪೊಲೊ, ಎಮಿಯೊ ಮತ್ತು ವೆಂಟೊ ಕಾರುಗಳಲ್ಲೂ ಸಹ 1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಜೋಡಣೆ ಮಾಡಿ ಮಾರಾಟ ಮಾಡಲಿದೆ ಎನ್ನಲಾಗಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಈಗಾಗಲೇ ಸ್ಕೋಡಾ ಜೊತೆಗೂಡಿ ಸುಮಾರು 450 ಕೋಟಿ ಮೌಲ್ಯದ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಇದರ ಭಾಗವಾಗಿ ಸ್ಕೋಡಾ ಸಂಸ್ಥೆಯೇ ಫೋಕ್ಸ್‌ವ್ಯಾಗನ್ ನಿರ್ಮಾಣದ ಹೊಸ ಕಾರುಗಳ ಎಂಜಿನ್ ಮತ್ತು ಡಿಸೈನ್ ಒದಗಿಸಲಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಸ್ಕೋಡಾ ಸಂಸ್ಥೆಯು ಸಹ ಎಂಕ್ಯೂಬಿ ಪ್ಯಾರ್ಟ್‌ಫಾರ್ಮ್ ಬಳಸಿಕೊಂಡೇ ಹೊಸ ಕಾರುಗಳ ನಿರ್ಮಾಣ ಮಾಡುತ್ತಿದ್ದು, ಎಂಕ್ಯೂಬಿ ಅಡಿ ಸಿದ್ದವಾದ ಕಾರುಗಳು ಕಡಿಮೆ ನಿರ್ಮಾಣ ವೆಚ್ಚಗಳನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯು ಹೊಸ ಕಾರುಗಳ ಎಂಜಿನ್ ವಿಭಾಗದ ಜವಾಬ್ದಾರಿಯನ್ನ ಸ್ಕೋಡಾ ಸಂಸ್ಥೆಗೆ ವಹಿಸಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಇನ್ನು ಫೋರ್ಕ್ಸ್‌ವ್ಯಾಗನ್ ಸಂಸ್ಥೆಯ ಉದ್ದೇಶಿತ 1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಳು 94-ಬಿಎಚ್‌ಪಿ ಮತ್ತು 113-ಬಿಎಚ್‌ಪಿ ಎಂಬ ಎರಡು ಮಾದರಿಯಲ್ಲಿ ಲಭ್ಯವಿರಲಿದ್ದು, 94-ಬಿಎಚ್‌ಪಿ ಪ್ರೇರಣೆಯ ಎಂಜಿನ್‌ಗಳು ವೆಂಟೊ ಹಾಗೂ ಎಮಿಯೊ ಕಾರುಗಳಲ್ಲಿ ಜೋಡಣೆ ಮಾಡಿದ್ದಲ್ಲಿ 113-ಬಿಎಚ್‌ಪಿ ಪ್ರೇರಿತ ಎಂಜಿನ್ ಮಾದರಿಯನ್ನ ಮುಂಬರುವ ಟಿ-ಕ್ರಾಸ್ ಕಾರುಗಳಲ್ಲಿ ಬಳಕೆ ಮಾಡಲು ಉದ್ದೇಶಿಸಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕಾರುಗಳ ತೂಕ ಕಡಿತಗೊಳಿಸಿ ಇಂಧನ ದಕ್ಷತೆ ಹೆಚ್ಚಿಸುವುದಕ್ಕಾಗಿ ಹೊಸ ಎಂಜಿನ್‌ಗಳನ್ನ ಐರಾನ್ ಬದಲಾಗಿ ಅಲ್ಯುಮಿನಿಯಂನಲ್ಲಿ ಸಿದ್ದಗೊಳಿಸುವ ಇರಾದೆಯಲ್ಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ 1-ಲೀಟರ್ ನ್ಯಾಚುರಲ್ ಆಸ್ಪರೆಟೆಡ್ ಯುನಿಟ್‌ಗಿಂತಲೂ ಇದು ಉತ್ತಮ ಎನ್ನಿಸಲಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಸದ್ಯ ಫೋಕ್ಸ್‌ವ್ಯಾಗನ್ ಪೊಲೊ, ಎಮಿಯೊ ಕಾರುಗಳಲ್ಲಿ ಬಳಸಲಾಗುತ್ತಿರುವ 1-ಲೀಟರ್ ನ್ಯಾಚುರಲ್ ಆಸ್ಪರೆಟೆಡ್ ಪೆಟ್ರೋಲ್ ಎಂಜಿನ್‌ಗಳು ಉತ್ತಮ ಮೈಲೇಜ್ ನೀಡಿದರೂ ಕೇವಲ 75-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದಿಸುವಲ್ಲಿ ಮಾತ್ರ ಶಕ್ತವಾಗಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಅದೇ 1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಳು ಉತ್ತಮ ಮೈಲೇಜ್ ಜೊತೆ ಜೊತೆಗೆ ಪರ್ಫಾಮೆನ್ಸ್‌ಗೂ ಸಹಕಾರಿಯಾಗಲಿದ್ದು, ಮುಂಬರುವ ಕಾರುಗಳಲ್ಲಿ ಈ ಹೊಸ ಎಂಜಿನ್ ಆಯ್ಕೆ ಸಿಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಇದಲ್ಲದೇ ಟಿಎಸ್ಐ ಮಾದರಿಯಲ್ಲೇ ಸದ್ಯಕ್ಕೆ 1.2-ಲೀಟರ್, 1.8-ಲೀಟರ್ ಮತ್ತು 2.0-ಲೀಟರ್ ಎಂಜಿನ್ ಆಯ್ಕೆಗಳನ್ನು ಮಾತ್ರ ಲಭ್ಯವಿದ್ದು, ಇದೀಗ ಹೊಸದಾಗಿ 1-ಲೀಟರ್ 1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಕೋಡಾ ಚೇರ್‌ಮನ್ ಬೆಹಾರ್ಡ್ ಮೈರ್ ಅವರು, ಸದ್ಯದ ಮಾರುಕಟ್ಟೆಯಲ್ಲಿ ಡಿಸೇಲ್ ಎಂಜಿನ್ ಪ್ರೇರಿತ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ವ್ಯವಸ್ಥೆಯನ್ನು ಬದಲಿಸುವ ಉದ್ದೇಶದಿಂದಲೇ ಫೋಕ್ಸ್‌ವ್ಯಾಗನ್ ಸಂಸ್ಥೆಯೊಂದಿಗೆ ಜೊತೆಗೂಡಿರುವ ನಾವು ಮುಂದಿನ ಕೆಲವೇ ವರ್ಷಗಳಲ್ಲಿ ಡೀಸೆಲ್‌ಗೆ ಬದಲಾಗಿ ಪೆಟ್ರೋಲ್ ಕಾರುಗಳತ್ತ ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಈ ಹೊಸ ಆಯ್ಕೆ ನೀಡುತ್ತಿದ್ದೇವೆ ಎಂದಿದ್ದಾರೆ.

Most Read Articles

Kannada
English summary
Volkswagen To Make 1-Litre TSi Turbocharged Petrol Engines In India.
Story first published: Saturday, July 14, 2018, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X