ರಾಜಧಾನಿ ಬೆಂಗಳೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ರಾಜಧಾನಿ ಬೆಂಗಳೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

By Praveen Sannamani

ಫೋರ್ಕ್ಸ್‌ವ್ಯಾಗನ್ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಗಾಲ್ಫ್ ಜಿಟಿಡಿ ಹಾಟ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಸದ್ಯ ಹೊಸ ಕಾರುಗಳ ಕುರಿತಾದ ತಾಂತ್ರಿಕ ಅಂಶಗಳನ್ನು ಪರೀಕ್ಷಾ ಕಾರ್ಯಗಳನ್ನು ಕೈಗೊಂಡಿರುವುದು ಹೊಸ ಕಾರು ಬಿಡುಗಡೆಯಾಗುವುದು ಖಚಿತ ಎನ್ನಲಾಗಿದೆ.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗಾಲ್ಫ್ ಜಿಟಿಡಿ ಕಾರುಗಳ ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಎಂಜಿನ್ ಕಾರ್ಯಕ್ಷಮತೆ ಬಗೆಗೆ ಪರೀಕ್ಷೆ ನಡೆಸುತ್ತಿದ್ದು, ಒಂದು ವೇಳೆ ಪರೀಕ್ಷಾರ್ಥ ಮಾದರಿಯು ಉತ್ತಮ ಪರ್ಫಾಮೆನ್ಸ್ ತೊರಿದಲ್ಲಿ ಹೊಸ ಕಾರು ಮುಂದಿನ ವರ್ಷವೇ ಮಾರುಕಟ್ಟೆಗೆ ಲಗ್ಗೆಯಿಡುವಲ್ಲಿ ಯಾವುದೇ ಅನುಮಾನವಿಲ್ಲ.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿರುವ ಗಾಲ್ಫ್ ಜಿಟಿಡಿ ಕಾರುಗಳು ಭಾರೀ ಜನಪ್ರಿಯತೆ ಹೊಂದಿದ್ದರು ಡೀಸೆಲ್ ಎಂಜಿನ್ ಕುರಿತಾದ ವಿವಾದದಿಂದಾಗಿ ಫೋಕ್ಸ್‌ವ್ಯಾಗನ್ ಸಂಸ್ಥೆಗೆ ಸ್ಪಲ್ಪ ಹಿನ್ನೆಡೆಯಾಗಿತ್ತು. ಹೀಗಾಗಿ ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಅಳವಡಿಕೆ ಮಾಡುವುದೇ ಫೋಕ್ಸ್‌ವ್ಯಾಗನ್ ಸಂಸ್ಥೆಗೆ ಸವಾಲಿನ ಕೆಲಸವಾಗಿದೆ.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಸಲಾದ ಗಾಲ್ಫ್ ಜಿಟಿಡಿ ಕಾರಿನ ಹಿಂಭಾಗದಲ್ಲಿ ಬಾಷ್ ನಿರ್ಮಾಣದ ಮಾಲಿನ್ಯ ನಿಯಂತ್ರಕ ಸಾಧನವನ್ನು ಅಳವಡಿಕೆ ಮಾಡಿಕೊಂಡು ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಪೊಲೊ ಜಿಟಿಐಗಿಂತಲೂ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಮೂಲಗಳ ಪ್ರಕಾರ ಹೊಸ ಕಾರು 2.0-ಲೀಟರ್ ಟರ್ಬೋ ಚಾಜ್ಡ್ ಡೀಸೆಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ಸಾಧ್ಯತೆಗಳಿದ್ದು, ನೆಕ್ಸ್ಟ್ ಜನರೇಷನ್ ಪೊಲೊ ಬಿಡುಗಡೆಯಿಂದ ಹಿಂದೆ ಸರಿದಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಗಾಲ್ಫ್ ಜಿಟಿಡಿ ಪರಿಚಯಿಸಬಹುದು ಎನ್ನಲಾಗಿದೆ.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಇನ್ನು ಹೊಸ ಕಾರಿನ ಬೆಲೆಯು ರೂ.25 ಲಕ್ಷದಿಂದ ರೂ.27 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಇತರೆ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಪರ್ಫಾಮೆನ್ಸ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಜೊತೆಗೆ ಲೈಟ್ ವೇಟ್ ಎಂಜಿನ್ ಮಾದರಿಯನ್ನು ಹೊಂದಿರುವ ಗಾಲ್ಫ್ ಜಿಟಿಡಿ ಕಾರುಗಳು 181-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಇನ್ನು ಪರ್ಫಾಮೆನ್ಸ್ ಪ್ರಿಯರಿಗೆ ಸಹಕಾರಿಯಾಗುವಂತೆ ಹೊಸ ಕಾರುಗಳಲ್ಲಿ 18-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳನ್ನ ಬಳಕೆ ಮಾಡಲಾಗಿದ್ದು, ತ್ರಿ ಡೋರ್ ಮತ್ತು ಫೈವ್ ಡೋರ್ ಮಾದರಿಗಳಲ್ಲೂ ಸಹ ಖರೀದಿ ಮಾಡಬಹುದಾಗಿದೆ. ಆದ್ರೆ ತ್ರಿ ಡೋರ್ ಕಾರುಗಳಿಗೆ ಭಾರತದಲ್ಲಿ ಅಷ್ಟಾಗಿ ಮಾರುಕಟ್ಟೆಯಿಲ್ಲ ಎಂದು ಹೇಳಬಹುದು.

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಒಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯು ಗಾಲ್ಫ್ ಜಿಟಿಡಿ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿರುವುದು ಪರ್ಫಾಮೆನ್ಸ್ ಪ್ರಿಯರಿಗೆ ಖಷಿಯ ವಿಚಾರವಾಗಿದ್ದು, ಹೊಸ ಕಾರಿನ ಕುರಿತಾದ ಇನ್ನಷ್ಟು ಮಾಹಿತಿ ಅಧಿಕೃತವಾಗಿ ಲಭ್ಯವಾಗಬೇಕಿದೆ.

Most Read Articles

Kannada
English summary
Volkswagen Golf GTD Spotted Testing In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X