ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

By Praveen Sannamani

ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಬೆಳವಣಿಗೆ ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಮಾದರಿಯ ಎಸ್‌ಯುವಿಗಳನ್ನು ಪರಿಚಯಿಸುತ್ತಿವೆ. ಇದರಲ್ಲಿ ಫೋಕ್ಸ್‌ವ್ಯಾಗನ್ ನಿರ್ಮಾಣದ ಪೊಲೊ ಎಸ್‌ಯುವಿ ಕೂಡಾ ಒಂದಾಗಿದ್ದು, ಹೊಸ ಕಾರು ಭಾರತದಲ್ಲೂ ಬಿಡುಗಡೆಯಾಗುತ್ತಾ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಸಲುವಾಗಿ ಬರೋಬ್ಬರಿ 8 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ತನ್ನ ಬಹುನೀರಿಕ್ಷಿತ ಟಿ-ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಪೊಲೊ ಎಸ್‌ಯುವಿ ಅನ್ನು ಕೂಡಾ ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಈ ಬಗ್ಗೆ ಯಾವುದೇ ರೀತಿಯ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಭಾರತದಲ್ಲಿ ಈಗಾಗಲೇ ಪೊಲೊ ಹ್ಯಾಚ್‌ಬ್ಯಾಕ್ ಕಾರುಗಳು ಮಾರಾಟಗೊಳ್ಳುತ್ತಿದ್ದು, ಇದೇ ಜನಪ್ರಿಯತೆಯಲ್ಲೇ ಎಸ್‌ಯುವಿ ಮಾದರಿಗಳನ್ನು ಬಿಡುಗಡೆ ಮಾಡಿದ್ದಲ್ಲಿ ಗ್ರಾಹಕರ ಪ್ರಕ್ರಿಯೆ ಹೇಗಿರುತ್ತೆ ಎನ್ನುವ ಬಗ್ಗೆ ಸಮೀಕ್ಷೆ ನಡೆಸುತ್ತಿದೆ.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಬೃಹತ್ ಬಂಡವಾಳದೊಂದಿಗೆ ವಿವಿಧ ಮಾದರಿಯ 19 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತದಲ್ಲೂ ತನ್ನ ಹೊಸ ಶಕೆ ಆರಂಭಿಸಲು ಸಜ್ಜಾಗುತ್ತಿದ್ದು, ಇದರಲ್ಲಿ ಟಿ-ಕ್ರಾಸ್ ಕಂಪ್ಯಾಕ್ಟ್ ಮಾದರಿಯು ಈಗಾಗಲೇ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದೆ.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಹ್ಯುಂಡೈ ಕ್ರೇಟಾ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳನ್ನೇ ಟಾರ್ಗೆಟ್ ಮಾಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಮಧ್ಯಮ ಗಾತ್ರದಲ್ಲೇ ಉತ್ತಮ ಬೆಲೆಗಳೊಂದಿಗೆ ಕಾರು ಬಿಡುಗಡೆಗೊಳಿಸಲಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಪೊಲೊ ಎಸ್‌ಯುವಿಗಳನ್ನೇ ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಮಾಹಿತಿ ಪ್ರಕಾರ 1.6-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಲಿರುವ ಪೊಲೊ ಕಾರುಗಳು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಅಭಿವೃದ್ದಿಯಾಗಲಿದ್ದು, ಭವಿಷ್ಯ ಯೋಜನೆಗಳಿಗೆ ಪೂರಕವಾಗಿ ಮೈಲ್ಡ್ ಹೈಬ್ರಿಡ್ ಎಂಜಿನ್‌ಗಳು ಕೂಡಾ ಬಿಡುಗಡೆಯಾಗಬಹುದು.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‌ಯುವಿಗಳಿಂತಲೂ ಕಡಿಮೆ ದರ್ಜೆಯಲ್ಲಿ ಬಿಡುಗಡೆಯಾಗಲಿರುವ ಪೊಲೊ ಎಸ್‌ಯುವಿಗಳು 12 ರಿಂದ 16 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ಸಾಧ್ಯತೆಗಳಿದ್ದು, ಇದು ಕ್ರೇಟಾ ಕಾರುಗಳಿಗೆ ತ್ರೀವ ಪೈಪೋಟಿ ನೀಡಬಹುದು.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಜೊತೆಗೆ ಪರ್ಫಾಮೆನ್ಸ್ ಮಾದರಿಯಾದ 19-ಇಂಚಿನ ಅಲಾಯ್ ವೀಲ್ಹ್‌ಗಳು ಮತ್ತು ಲೈಟ್‌ವೇಟ್ ಚಾರ್ಸಿ ಪಡೆದುಕೊಳ್ಳಲಿರುವ ಪೊಲೊ ಎಸ್‌ಯುವಿ ಕಾರುಗಳು ಭಾರತದಲ್ಲಿ ಬಿಡುಗಡೆಗೊಳ್ಳುವುದಾದರೇ ಸ್ಕೋಡಾ ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಳ್ಳಲಿವೆ.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಯಾಕೆಂದ್ರೆ ಭಾರತದಲ್ಲಿ ಹೊಸ ಕಾರುಗಳ ಉತ್ಪಾದನೆಗಾಗಿ ಸ್ಕೋಡಾ ಜೊತೆಗೂ ಬೃಹತ್ ಯೋಜನೆಯೊಂದರ ಒಪ್ಪಂದ ಮಾಡಿಕೊಂಡಿದ್ದು, ಭವಿಷ್ಯದ ಫೋಕ್ಸ್‌ವ್ಯಾಗನ್ ಕಾರುಗಳ ನಿರ್ಮಾಣದ ಹೊಣೆಯನ್ನು ಸ್ಕೋಡಾ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಭಾರತಕ್ಕೆ ಪೊಲೊ ಎಸ್‌ಯುವಿ ಪರಿಚಯಿಸುತ್ತಾ ಫೋಕ್ಸ್‌ವ್ಯಾಗನ್?

ಹೀಗಾಗಿ ಕಾರಿನ ಬೆಲೆ ತಗ್ಗಿಸಲು ಇದು ನೇರವಾಗಲಿದ್ದು,ಸ್ಕೋಡಾ ಸಂಸ್ಥೆಯು ತನ್ನ ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಫೋಕ್ಸ್‌ವ್ಯಾಗನ್ ಹೊಸ ಕಾರುಗಳನ್ನ ನಿರ್ಮಾಣ ಮಾಡಲಿದೆ. ಆದ್ರೆ ಪೊಲೊ ಎಸ್‌ಯುವಿ ಬಿಡುಗಡೆಯ ಬಗೆಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಟಿ-ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಅಂತೂ ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ.

Most Read Articles

Kannada
Read more on volkswagen polo suv
English summary
Volkswagen’s ‘Polo SUV’ For India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X