ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಕಳೆದ ವಾರವಷ್ಟೇ ಹೊಸ ನಮೂನೆಯ ಎಕ್ಸ್‌ಸಿ40 ಐಷಾರಾಮಿ ಎಸ್‌ಯುವಿ ಕಾರುಗಳು ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 12 ಹೊಸ ಕಾರುಗಳು ಮಾರಾಟಗೊಂಡಿವೆ.

ಕಳೆದ ವಾರವಷ್ಟೇ ಹೊಸ ನಮೂನೆಯ ಎಕ್ಸ್‌ಸಿ40 ಐಷಾರಾಮಿ ಎಸ್‌ಯುವಿ ಕಾರುಗಳು ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 12 ಹೊಸ ಕಾರುಗಳು ಮಾರಾಟಗೊಂಡಿವೆ. ಬೆಂಗಳೂರಿನ ಕೊರಮಂಗಲದಲ್ಲಿರುವ ಮಾರ್ಷಿಯಲ್ ಡೀಲರ್ಸ್ ಯಾರ್ಡ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ತನ್ನ ನೆಚ್ಚಿನ ಗ್ರಾಹಕರಿಗೆ ಎಕ್ಸ್‌ಸಿ40 ಕಾರಿನ ಕೀ ಗಳನ್ನು ಹಸ್ತಾಂತರ ಮಾಡಲಾಯ್ತು.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಸ್ವಿಡನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ವೊಲ್ವೊ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಜನಪ್ರಿಯ ಎಕ್ಸ್‌ಸಿ60 ಮತ್ತು ಎಕ್ಸ್‌ಸಿ90 ಎಸ್‍‍ಯುವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯ ಎಕ್ಸ್‌ಸಿ40 ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿದೆ.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಬಿಡುಗಡೆಗೊಂಡ ಹೊಸ ವೊಲ್ವೊ ಎಕ್ಸ್‌ಸಿ40 ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 39.9 ಲಕ್ಷಕ್ಕೆ ಬೆಲೆ ನಿಗದಿಪಡಿಸಲಾಗಿದ್ದು, ಈ ಕಾರು ಕೇವಲ ಎರಡು ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿದೆ. ಜೊತೆಗೆ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ವೊಲ್ವೊ ನಿರ್ಮಾಣ ಮಾಡುತ್ತಿರುವ ಕಾರುಗಳಲ್ಲೇ ಎಕ್ಸ್‌ಸಿ40 ಎಸ್‌ಯುವಿಗಳು ಸಣ್ಣ ಎಸ್‍‍ಯುವಿ ಮಾದರಿಯಾಗಿದ್ದು, ಕಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ ಪ್ಲಾಟ್‍‍ಫಾರ್ಮ್ ಡಿಸೈನ್ ಆಧರಿಸಿ ನಿರ್ಮಾಣಗೊಂಡಿದೆ. ಈ ಮೂಲಕ ಹೊಸ ಎಕ್ಸ್‌ಸಿ40 ಕಾರುಗಳು ಮಾರುಕಟ್ಟೆಯಲ್ಲಿ ಯುವ ಸಮುದಾಯವನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಹೊಸ ಕಾರಿನ ಉದ್ದಳತೆ

ಹೊಸ ವೊಲ್ವೊ ಎಕ್ಸ್‌ಸಿ40 ಕಾರುಗಳು 4,425ಎಂಎಂ ಉದ್ದ, 1,652ಎಂಎಂ ಎತ್ತರ ಮತ್ತು 1,863ಎಂಎಂ ಅಗಲ ಹೊಂದಿದ್ದು, 211ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿರುವುದು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಎಕ್ಸ್‌ಸಿ40 ಎಸ್‍ಯುವಿ ಕಾರುಗಳು ಎಕ್ಸ್‌ಸಿ60 ಕಾರಿನಂತೆಯೇ ಅಪ್‍‍ರೈಟ್ ಫ್ರಂಟ್ ಗ್ರಿಲ್ ಅನ್ನು ಹೊಂದಿದ್ದು, ಜೊತೆಗೆ 'ಥಾರ್ ಹಾಮರ್' ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದಿದೆ. ಈ ವಿನ್ಯಾಸವು ಭಾರತದಲ್ಲಿ ಮಾರಾಟವಾದ ಇತರೆ ವೊಲ್ವೊ ಮಾದರಿಗಳಿಗೆ ಹೋಲಕೆ ಇದೆ ಎನ್ನಬಹುದು.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಇನ್ನು ಕಾರಿನ ಹಿಂಭಾಗದಲ್ಲಿ ರೇಕ್ಡ್ ವಿಂಡ್‍‍ಶೀಲ್ಡ್ ಮತ್ತು ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್, ಟ್ವಿನ್ ಕ್ರೋಮ್ ಎಕ್ಸಾಸ್ಟ್, ಬ್ಲೆಕ್ಡ್ ಔಟ್ ರೂಫ್, ಎಲ್ ಆಕಾರದಲ್ಲಿರುವ ಎಲ್ಇಡಿ ಟೈಲ್‍‍ಲ್ಯಾಂಪ್ಸ್ ಬಳಸಿರುವುದು 5 ಆಸನವುಳ್ಳ ಈ ಕಾರಿಗೆ ಹೊಸ ಆಕರ್ಷಕ ರೂಪವನ್ನು ನೀಡುತ್ತದೆ.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಕಾರಿನ ಒಳವಿನ್ಯಾಸ

ವೊಲ್ವೊ ಎಕ್ಸ್‌ಸಿ40 ಕಾರಿನ ಒಳಭಾಗವು ಪೂರ್ಣ ಕಪ್ಪು ಅಥಾವ ಬ್ಲಾಕ್ ಆಂಡ್ ಆರೆಂಜ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಸಜ್ಜುಗೊಂಡಿದ್ದು, 3 ಸ್ಪೋಕ್ ವಿವಿಧ ಆಯ್ಕೆಯುಳ್ಳ ಸ್ಟೀರಿಂಗ್ ವ್ಹೀಲ್ಸ್, ಟ್ವಿನ್ ಡೈಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಲಂಬಾಕಾರದ ಎಸಿ ವೆಂಟ್ಸ್ ಅನ್ನು ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಇದಲ್ಲದೆ ಈ ಕಾರಿನ ಸೀಟ್‍‍ಗಳನ್ನು ಲೆದರ್‍‍ನಿಂದ ಸಜ್ಜುಗೊಳಿಸಲಾಗಿದ್ದು, ಚಾಲಕ ಸೇರಿ 5 ಮಂದಿ ಅರಾಮವಾಗಿ ಪ್ರಯಾಣಿಸಬಹುದು. ಜೊತೆಗೆ ಹಿಂದಿನ ಸೀಟ್‍ಗಳನ್ನು ಫೋರ್ಡ್ ಮಾಡಬಹುದಾಗಿದ್ದು, ಫೋರ್ಡ್ ಮಾಡಿದಲ್ಲಿ 460 ಲೀಟರ್‍‍ನ ಬೂಟ್ ಸ್ಪೆಸ್ ವಿಸ್ತರಣೆ ಮಾಡಿಕೊಳ್ಳಬಹುದು.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಎಂಜಿನ್ ಸಾಮರ್ಥ್ಯ

ವೊಲ್ವೊ ಎಕ್ಸ್‌ಸಿ40 ಕಾರುಗಳು 190 ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲ 2.0 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಕಾರಿನ ಪೆಟ್ರೋಲ್ ಮಾದರಿಗಳು ಭವಿಷ್ಯದಲ್ಲಿ ಬಿಡುಗಡೆಗೊಳ್ಳಲಿದೆ.

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಒಟ್ಟಿನಲ್ಲಿ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ವೋಲ್ವೊ ಎಕ್ಸ್‌ಸಿ40 ಕಾರುಗಳು ಬಿಎಮ್‍‍ಡಬ್ಲ್ಯು ಎಕ್ಸ್1, ಆಡಿ ಕ್ಯೂ3, ಮರ್ಸಿಡಿಸ್-ಬೆಂಝ್ ಜಿಎಲ್ಎ ಪ್ರಿಮಿಯಂ ಎಸ್‍‍ಯುವಿ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಒಂದೇ ದಿನಗಳಲ್ಲಿ 12 ಕಾರುಗಳು ಮಾರಾಟವಾಗಿರುವುದು ಭಾರೀ ಬೇಡಿಕೆಯ ನಿರೀಕ್ಷೆಯಲ್ಲಿದೆ.

Most Read Articles

Kannada
English summary
Volvo Delivers Twelve Units Of The XC40 In Bangalore On A Single Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X