ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಬಿ‍ಎಂ‍‍ಡಬ್ಲ್ಯು ಕಂಪನಿಯು ತನ್ನ ಹೊಸ 1 ಸೀರಿಸ್ ಹ್ಯಾಚ್‍‍ಬ್ಯಾಕ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು 2019ರ ಸೆಪ್ಟೆಂಬರ್ 28ರಂದು ಬಿಡುಗಡೆಗೊಳಿಸಲಾಗುವುದು.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಈ ಕಾರು 1 ಸೀರಿಸ್‍‍ನ ಮೂರನೇ ತಲೆಮಾರಿನ ಕಾರಾಗಿದೆ. ಈ ಕಾರು ಹೊಸ ವಿನ್ಯಾಸ ಹಾಗೂ ಹೊಸ ಬಗೆಯ ಇಂಟಿರಿಯರ್ಸ್‍‍ಗಳನ್ನು ಹೊಂದಿದೆ. ಜೊತೆಗೆ ಈ ಕಾರಿನಲ್ಲಿ ಹೊಸ ಪವರ್‍‍ಟ್ರೇನ್ ಆಯ್ಕೆಗಳಿರಲಿವೆ. ಹೊರಭಾಗದಲ್ಲಿ ಹೊಸ ಕಾರು ಬ್ರಾಂಡ್ ನ್ಯೂ ಸ್ಟೈಲ್ ಹೊಂದಿದೆ. ಮೊದಲಿದ್ದ ಕಾರಿಗಿಂತ 34 ಎಂಎಂ ಹೆಚ್ಚು ಅಗಲವಾಗಿರುವ ಕಾರಣ, ಈ ಕಾರು ಅಗಲವಾಗಿದ್ದು, ಬಲಿಷ್ಟವಾಗಿ ಕಾಣುತ್ತದೆ.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಮುಂಭಾಗದಲ್ಲಿ ಬಿ‍ಎಂ‍‍ಡಬ್ಲ್ಯು ಗ್ರಿಲ್ ಅಳವಡಿಸಲಾಗಿದೆ. ಹೊಸ ಕಾರಿನಲ್ಲಿ ಮಸ್ಕ್ಯುಲರ್‍‍ನ ಜೊತೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಫಾಗ್ ಲ್ಯಾಂಪ್‍ ಹೊಂದಿರುವ ಡ್ಯೂಯಲ್ ಟೋನ್ ಬಂಪರ್‍‍ಗಳನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಈ ಕಾರಿನಲ್ಲಿ ಹೊಸ ಬಗೆಯ ಸ್ವೇಪ್ಟ್ ಬ್ಯಾಕ್ ಹೆಡ್‍‍ಲ್ಯಾಂಪ್ ಡಿಸೈನ್‍‍ಗಳಿದ್ದು, ಪ್ರತಿ ಹೆಡ್‍‍ಲ್ಯಾಂಪ್ ಯೂನಿಟ್‍‍ನಲ್ಲಿ ಎರಡು ಎಲ್‍ಇ‍‍ಡಿ ಕ್ಲಸ್ಟರ್‍‍ಗಳಿದ್ದು, ಮುಂದಿರುವ ರಸ್ತೆಯನ್ನು ಎದ್ದು ಕಾಣುವಂತೆ ಮಾಡಲಿವೆ. ಹೆಡ್‍‍ಲ್ಯಾಂಪ್ ಯೂನಿಟ್‍‍ನೊಳಗೆ ಸಿ ಶೇಪಿನಲ್ಲಿರುವ ಎಲ್‍‍ಇ‍‍ಡಿ ಡಿ‍ಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಬಾನೆಟ್‍‍ನ ಮೇಲೆ ಮಸ್ಕುಲರ್ ಸ್ಟಾಂನ್ಸ್ ಗಳನ್ನು ಕಾಣಬಹುದು. ಕಾರಿನ ಪಕ್ಕದ ವಿನ್ಯಾಸವು ರೈಡಿಂಗ್ ವಿಂಡೋ ಲೈನ್ ಹಾಗೂ ಕ್ಲಾಸಿ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಡ್ಯೂಯಲ್ ಟೋನ್ ಬಂಪರ್ ಹಾಗೂ ಸ್ವೇಪ್ಟ್ ಬ್ಯಾಕ್ ಟೇಲ್ ಲ್ಯಾಂಪ್‍‍ಗಳಿವೆ. ಇದರಲ್ಲಿ ಎಂ ಮಾದರಿಯ ಕಾರಿದ್ದು, ಅದಕ್ಕೆ ಎಂ135ಐ ಎಂಬ ಹೆಸರಿಡಲಾಗಿದೆ. ಈ ಮಾದರಿಯ ಕಾರಿನಲ್ಲಿ ವಿಭಿನ್ನವಾದ ಗ್ರಿಲ್ ಹಾಗೂ ಬಂಪರ್ ಡಿಸೈನ್‍‍ಗಳಿವೆ. ಮುಂಭಾಗದ ಬಂಪರ್‍ ವರ್ಟಿಕಲ್ ಏರ್‍‍ವೆಂಟ್‍‍ಗೆ ಹಾಗೂ ಹಿಂಭಾಗದ ಬಂಪರ್‍‍ಗಳು ಡ್ಯೂಯಲ್ ಎಕ್ಸಾಸ್ಟ್ ಗಳಿಗೆ ದಾರಿ ಮಾಡಿಕೊಡುತ್ತವೆ.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಬಿ‍ಎಂ‍‍ಡಬ್ಲ್ಯು 1 ಸೀರಿಸ್‍‍ನ ಇಂಟಿರಿಯರ್ಸ್‍‍ನಲ್ಲಿ ಅನೇಕ ಫೀಚರ್ಸ್‍‍ಗಳಿವೆ. ಈ ಕಾರಿನಲ್ಲಿ 8.8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಗ್ರಾಹಕರು ಇಚ್ಚಿಸಿದರೆ 10.35 ಇಂಚಿನ ಸಿಸ್ಟಂ ಅನ್ನು ಪಡೆಯಬಹುದು.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಬಿ‍ಎಂ‍‍ಡಬ್ಲ್ಯು ಪ್ರಕಾರ, ಇಂಟಿರಿಯರ್ ಸ್ಪೇಸ್ ಅನ್ನು ಲಾರ್ಜ್ ಮಾರ್ಜಿನ್‍‍ಗೆ ಏರಿಸಲಾಗಿದೆ. ಹೆಡ್‍‍ರೂಂ ಅನ್ನು 19 ಎಂಎಂಗೆ, ನೀ ರೂಂ ಅನ್ನು 33 ಎಂಎಂಗೆ ಏರಿಸಲಾಗಿದ್ದರೆ, ಹಿಂಬದಿಯ ಪ್ಯಾಸೆಂಜರ್‍‍ಗಳಿಗಾಗಿ ಇರುವ ಎಲ್ಬೊರೂಂ ಅನ್ನು 13 ಎಂಎಂನಷ್ಟು ಹೆಚ್ಚು ಮಾಡಲಾಗಿದೆ.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಜರ್ಮನಿಯ ಕಾರು ತಯಾರಕ ಕಂಪನಿಯ ಪ್ರಕಾರ ಬೂಟ್ ಸ್ಪೇಸ್ ಈಗ 280 ಲೀಟರ್‍‍ನಷ್ಟಿದ್ದು, ಮೊದಲಿದ್ದ ಕಾರಿಗಿಂತ 20 ಲೀಟರ್‍‍ನಷ್ಟು ಹೆಚ್ಚಿಸಲಾಗಿದೆ. ಹೊಸ ಬಿ‍ಎಂ‍‍ಡಬ್ಲ್ಯು 1 ಸೀರಿಸ್‍ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿರಲಿದೆ. ಈ ಎಂಜಿನ್‍ಗಳನ್ನು ವಿಶ್ವ ಮಾರುಕಟ್ಟೆಗಾಗಿ ತಯಾರಿಸಲಾಗಿದ್ದು, ಈ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಒಂದು ಡೀಸೆಲ್ ಹಾಗೂ ಒಂದು ಪೆಟ್ರೋಲ್ ಮಾದರಿಯ ಕಾರನ್ನು ಮಾತ್ರ ಮಾರಾಟ ಮಾಡಲಾಗುವುದು. ಇದು ಟಾಪ್ ಮಾದರಿಯ ಎಂ135ಐ ಕಾರಿನ ಜೊತೆಗೆ ಮಾರಾಟ ಮಾಡಲಾಗುವುದು. ಈ ಮಾದರಿಯ ಕಾರಿನಲ್ಲಿ 2.0 ಲೀಟರಿನ 4 ಸಿಲಿಂಡರಿನ ಟರ್ಬೊ‍‍ಚಾರ್ಜ್‍‍ನ ಪೆಟ್ರೋಲ್ ಎಂಜಿನ್ ಇರಲಿದೆ. ಈ ಎಂಜಿನ್ 302 ಬಿ‍‍ಹೆಚ್‍‍ಪಿಯನ್ನು ಉತ್ಪಾದಿಸುವುದರಿಂದ ಈ ಕಾರು 0-100 ಕಿ.ಮೀ ವೇಗವನ್ನು 4.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಈ ಹ್ಯಾಚ್‍‍ಬ್ಯಾಕ್ ಕಾರಿನಲ್ಲಿ ಟಾಪ್ ಸ್ಪೀಡ್ ಅನ್ನು ಎಲೆಕ್ಟ್ರಾನಿಕ್ ಆಗಿ 250 ಕಿ.ಮೀ. ಗೆ ಸೀಮಿತಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು ಫ್ರಂಟ್ ವ್ಹೀಲ್ ಡ್ರೈವ್ ಹೊಂದಲಿದೆ. ಸಣ್ಣ ರೇರ್ ವ್ಹೀಲ್ ಡ್ರೈವ್ ಲೇ‍ಔಟ್ ಹಾಗೂ ಅಜೈಲ್ ಚಾಸೀಸ್‍‍ನಿಂದಾಗಿ ಈಗಿರುವ ಹಳೆಯ ತಲೆಮಾರಿನ ಕಾರನ್ನು ಚಾಲಕರ ಕಾರು ಎಂದು ಪರಿಗಣಿಸಲಾಗಿತ್ತು. ಈ ವಿಧಾನವು 2019ರ ಸೆಪ್ಟೆಂಬರ್‍‍ನಿಂದ ಬದಲಾಗಲಿದೆ.

MOST READ: ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಎಂ135ಐ ಹಾಗೂ 120ಡಿ ಮಾದರಿಯನ್ನು ಹೊರತುಪಡಿಸಿ, ಉಳಿದ ಎಲ್ಲಾ ಮಾದರಿಯ ಕಾರುಗಳು ಫ್ರಂಟ್ ವ್ಹೀಲ್ ಡ್ರೈವ್ ಆಗಿರಲಿವೆ. ಈ ಎರಡು ಮಾದರಿಯ ಕಾರುಗಳಲ್ಲಿ ಬಿ‍ಎಂ‍‍ಡಬ್ಲ್ಯುವಿನ ಎಕ್ಸ್ ಡ್ರೈವ್ ಎ‍‍ಡಬ್ಲ್ಯು‍‍ಡಿ ಸಿಸ್ಟಂಗಳಿರಲಿವೆ. ಹೊಸ ಬಿ‍ಎಂ‍‍ಡಬ್ಲ್ಯು 1 ಸೀರಿಸ್‍ನ ಕಾರು 4,319 ಎಂಎಂ ಉದ್ದ, 1,799 ಎಂಎಂ ಅಗಲ ಹಾಗೂ 1,434 ಎಂಎಂ ಎತ್ತರವನ್ನು ಹೊಂದಿದೆ.

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಹೊಸ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರಿನಲ್ಲಿ ಎಲೆಕ್ಟ್ರಿಕ್ ಟೇಲ್‍‍ಗೇಟ್ ಹಾಗೂ ಪನೋರಾಮಿಕ್ ಸನ್‍‍‍ರೂಫ್‍‍ಗಳಿವೆ. ಇದರ ಜೊತೆಗೆ ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟಂಟ್, ಬಿ‍ಎಂ‍‍ಡಬ್ಲ್ಯು ಡಿಜಿಟಲ್ ಕೀ, ಪೆಡೆಸ್ಟ್ರಿಯನ್ ವಾರ್ನಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‍‍ಗಳಿರಲಿವೆ.

MOST READ: ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಬಿ‍ಎಂ‍‍ಡಬ್ಲ್ಯು 1 ಸೀರಿಸ್‍‍ನ ಕಾರಿನಲ್ಲಿರುವ ಫೀಚರ್‍‍ಗಳನ್ನು ನೋಡಿದರೆ ಈ ಕಾರು ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿ ನೀಡಲಿದೆ. ಹಳೆಯ ತಲೆಮಾರಿನ ಕಾರನ್ನು ಚಾಲಕರ ಕಾರೆಂದು ಕರೆಯಲಾಗುತ್ತಿತ್ತು. ಆದರೆ ಅನೇಕ ಕಾರಣಗಳಿಗಾಗಿ ಆ ಕಾರು ಅಷ್ಟೊಂದು ಯಶಸ್ವಿಯಾಗಲಿಲ್ಲ. ಹಳೆಯ ಕಾರಿನಲ್ಲಿದ್ದ ಇಂಟಿರಿಯರ್‍‍ಗಳೂ ಅದಕ್ಕೆ ಕಾರಣವಾಗಿದ್ದವು. ಈಗ ಈ ಹೊಸ ಕಾರು ಯಶಸ್ವಿಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
BMW Reveals The All-New 1-Series — Watch Out For The M135i! - Read in kannada
Story first published: Friday, May 31, 2019, 13:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X