ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿಎಂಡಬ್ಲ್ಯು 7 ಕಾರು

ಜರ್ಮನಿಯ ಕಾರು ತಯಾರಕ ಬಿಎಂಡಬ್ಲ್ಯು ಕಂಪನಿಗೆ ಕಳೆದ ಆರ್ಥಿಕ ವರ್ಷವು ಅತ್ಯುತ್ತಮವಾದ ಆರ್ಥಿಕ ವರ್ಷಗಳಲ್ಲಿ ಒಂದಾಗಿತ್ತು. ಈ ಲಗ್ಷುರಿ ಕಾರು ತಯಾರಕ ಕಂಪನಿಯು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ಆರ್ಥಿಕ ವರ್ಷದಲ್ಲಿ, 11,000 ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ 13% ರಷ್ಟು ಬೆಳವಣಿಗೆ ದಾಖಲಿಸಿದೆ.

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

ಈ ಹಿನ್ನೆಲೆಯಲ್ಲಿ ಬಿ‍ಎಂ‍‍ಡಬ್ಲು, ಭಾರತೀಯ ಮಾರುಕಟ್ಟೆಯಲ್ಲಿ ಈಗ, ಲಗ್ಷುರಿ ಕಾರು ಬ್ರಾಂಡ್‍‍ಗಳಲ್ಲಿ ಮರ್ಸಿಡಿಸ್ ಬೆಂಜ್ ನಂತರ ಎರಡನೇ ಸ್ಥಾನದಲ್ಲಿದೆ. ಬಿ‍ಎಂ‍‍ಡಬ್ಲು ಇಂಡಿಯಾ ಈ ಆರ್ಥಿಕ ವರ್ಷದಲ್ಲೂ ತನ್ನ ಬೆಳವಣಿಗೆಯ ದರವನ್ನು ಹೆಚ್ಚಿಸಿಕೊಳ್ಳಲು ಬಯಸಿದ್ದು, ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಒಳ್ಳೆಯ ಬೆಳವಣಿಗೆಯನ್ನು ಸಾಧಿಸಿದೆ. ಬಿ‍ಎಂ‍‍ಡಬ್ಲೂ ಈ ವರ್ಷ ಭಾರತದಲ್ಲಿ ಅನೇಕ ಹೊಸ ವಾಹನಗಳನ್ನು ಹಾಗೂ ಅಪ್‍‍ಗ್ರೇಡ್ ಮಾಡಿರುವ ಕಾರುಗಳನ್ನು ಬಿಡುಗಡೆ ಮಾಡಲಿದೆ. ಅದರಲ್ಲಿ ಬಿ‍ಎಂ‍‍ಡಬ್ಲು 7ನ ಸುಧಾರಿತ(ಅಪ್‍‍ಗ್ರೇಡ್) ಆವೃತ್ತಿಯು ಒಂದು.

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

ರಶ್‍‍ಲೇನ್ ವರದಿಗಳ ಪ್ರಕಾರ, 2019ರ ಬಿ‍ಎಂ‍‍ಡಬ್ಲು 7 ಕಾರನ್ನು ಟ್ರಕ್ ನಲ್ಲಿ ಸಾಗಿಸುವಾಗ ಅದರ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಈ ಕಾರನ್ನು ಚೆನ್ನೈನಲ್ಲಿರುವ ಉತ್ಪಾದನಾ ಘಟಕಕ್ಕೆ ಸಾಗಿಸಿರುವ ಸಾಧ್ಯತೆಗಳಿವೆ. ಈ ಕಾರಿನ ಮುಂಭಾಗ ಮತ್ತು ಹಿಂಭಾಗಗಳನ್ನು ಮರೆಮಾಡಿ ಟ್ರಕ್‍‍ನಲ್ಲಿ ಸಾಗಿಸಲಾಗಿದೆ.

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

2019ರ ಬಿ‍ಎಂ‍‍ಡಬ್ಲು 7 ಸರಣಿಯ ಸುಧಾರಿತ ವಾಹನವು, 7ನೇ ಸರಣಿಯಲ್ಲಿಯೇ ಅತಿ ದೊಡ್ಡದಾದ ಗ್ರಿಲ್ ಹೊಂದಿದೆ. ಈ ಗ್ರಿಲ್, ಬಿ‍ಎಂ‍‍ಡಬ್ಲು ಎಕ್ಸ್7 ಎಸ್‍‍ಯುವಿ ವಾಹನದಲ್ಲಿರುವುದಕ್ಕಿಂತ ದೊಡ್ಡದಾಗಿದೆ. ಇದಕ್ಕೆ ಕಾರಣವೇಂದರೆ ದೊಡ್ಡ ಗ್ರಿಲ್‍‍ಗಳ ಮೇಲೆ ಚೀನಾ ಜನರಿಗಿರುವ ಪ್ರೀತಿ. ಬಿ‍ಎಂ‍‍ಡಬ್ಲು 7ನೇ ಸರಣಿಯ ಸುಮಾರು 41 % ವಾಹನಗಳನ್ನು ಚೀನಾದಲ್ಲಿ ಮಾರಾಟ ಮಾಡುತ್ತದೆ.

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

ಗ್ರಿಲ್‍‍ನ ಹೊರತಾಗಿ 2019ರ ಬಿ‍ಎಂ‍‍ಡಬ್ಲು 7 ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ವಲ್ಪ ಮಟ್ಟಿನ ವಿನ್ಯಾಸದ ಬದಲಾವಣೆಗಳಾಗಿವೆ. ಈ ಕಾರಿನಲ್ಲಿ ಮೊದಲಿಗಿಂತ ಹೆಚ್ಚಿನ ಕ್ರೋಮ್ ಬಣ್ಣವಿದೆ. ಈ ಕಾರಿನಲ್ಲಿ ಅಕೌಸ್ಟಿಕ್ ಗ್ಲಾಸ್ ಇದ್ದು, ಇದು ಕ್ಯಾಬಿನ್ ಅನ್ನು ಪ್ರಶಾಂತವಾಗಿರಿಸಿ, ಎನ್‍‍ಹೆಚ್‍‍ವಿ ಲೆವೆಲ್‍‍ಗಳನ್ನು ಕಡಿಮೆ ಮಾಡುತ್ತದೆ. 2019ರ ಬಿ‍ಎಂ‍‍ಡಬ್ಲು 7 ಇಂಟಿರಿಯರ್‍‍ನಲ್ಲಿ ಮೊದಲಿಗಿಂತ ಹೆಚ್ಚು ಮರಗಳನ್ನು ಬಳಸಲಾಗಿದೆ. ಮೆದುವಾದ ಲೆದರ್ ಸೀಟುಗಳಿವೆ.

MOST READ: 2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

ಹೊಸ ಕಾರಿನಲ್ಲಿ ದೊಡ್ಡದಾದ 10.0 ಇಂಚಿನ ಪ್ಯಾಸೆಂಜರ್ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂಗಳಿವೆ. ಉಳಿದ ಬಿಡಿ ಭಾಗಗಳು ಹಳೆಯ ಮಾದರಿಯಲ್ಲಿದ್ದಂತೆಯೆ ಇರಲಿವೆ. 2019ರ ಬಿ‍ಎಂ‍‍ಡಬ್ಲು 7 ರ ಮಾದರಿಯ ವಿನ್ಯಾಸವನ್ನು ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಇದರಲ್ಲಿರುವ ಡ್ರೈವಿಂಗ್ ಡೈನಾಮಿಕ್‍‍ಗಳನ್ನು ಸಹ ಅಪ್‍‍ಡೇಟ್ ಮಾಡಲಾಗುತ್ತಿದೆ. ಈ ಕಾರಿನಲ್ಲಿ ಸುಧಾರಿತ ಚಾಸೀಸ್ ಡ್ಯಾಂಪಿಂಗ್ ಹಾಗೂ ಡಬಲ್ ಇನ್ಸೂಲೇಶನ್ ಇದ್ದು, ಕ್ಯಾಬಿನ್ ಅನ್ನು ಶಾಂತವಾಗಿಡುತ್ತವೆ.

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

ಸಸ್ಪೇಂಶನ್ ಸೆಟ್ಟಿಂಗ್ - ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್- ಎಂಬ ಎರಡು ಬಗೆಯಲ್ಲಿರಲಿದ್ದು, ಉತ್ತಮ ಚಾಲನಾ ಅನುಭವ ನೀಡಲಿದೆ. . ಕಂಫರ್ಟ್ ಮೋಡ್‍‍ನಲ್ಲಿ ಕಾರ್ ಸಸ್ಪೆಂಷನ್ ಮೆದುವಾಗಿರಲಿದ್ದು, ಹೆಚ್ಚಿನ ಆರಾಮದಾಯಕವಾದ ಡ್ರೈವರ್ ಹಾಗೂ ಪ್ಯಾಸೆಂಜರ್ ಅನುಭವವನ್ನು ನೀಡಲಿದೆ.

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

2019ರ ಬಿ‍ಎಂ‍‍ಡಬ್ಲು 7 ವಾಹನದಲ್ಲಿ ಯಾವುದೇ ಮೆಕಾನಿಕಲ್ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಎಂಜಿನ್‍‍ಗಳಲ್ಲೂ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಮೊದಲಿದ್ದ 730 ಎಲ್‍‍ಡಿ 3.0 ಲೀಟರ್ ಡೀಸೆಲ್ ವೆರಿಯಂಟ್ ಮತ್ತು 740 ಎಲ್‍ಐ 3.0 ಲೀಟರ್ ಪೆಟ್ರೋಲ್ ವೆರಿಯಂಟ್ ಗಳು ಮುಂದುವರೆಯಲಿವೆ. 2019ರ ಬಿ‍ಎಂ‍‍ಡಬ್ಲು 7 ವಾಹನವನ್ನು ಈ ವರ್ಷದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈ ಕಾರಿನ ಬೆಲೆಗಳ ಬಗ್ಗೆ ಯಾವುದೇ ಮಾಹಿತಿಯು ಬಹಿರಂಗವಾಗಿಲ್ಲ. ಆದರೆ ಇದರ ಬೆಲೆಯು ಸುಮಾರು ರೂ.1.30 ಕೋಟಿಗಳ ಆಸುಪಾಸಿನಲ್ಲಿರಲಿದೆ. ಬಿಡುಗಡೆಯಾದ ನಂತರ ಬಿ‍ಎಂ‍‍ಡಬ್ಲೂ 7 ವಾಹನವು ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್, ಆಡಿ ಎ8 ಮತ್ತು ಜಾಗ್ವಾರ್ ಎಕ್ಸ್ ಜೆ‍ಎಲ್ ವಾಹನಗಳಿಗೆ ಪೈಪೋಟಿ ನೀಡಲಿದೆ.

ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿ‍ಎಂ‍‍ಡಬ್ಲು 7 ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿ‍ಎಂ‍‍ಡಬ್ಲು ತನ್ನ 3 ಮತ್ತು 7 ನೇ ಸರಣಿಯ ಕಾರುಗಳನ್ನು ಒಂದೇ ಬಾರಿಗೆ ಅಪ್‍‍ಗ್ರೇಡ್ ಮಾಡುತ್ತಿರುವುದು ಸಂತಸದ ಸಂಗತಿ. 7ನೇ ಸರಣಿಯ ಕಾರುಗಳು ಉತ್ತಮವಾದ ಪರ್ಫಾರ್‍‍ಮೆನ್ಸ್ ಗಳಿಗೆ ಹೆಸರುವಾಸಿಯಾಗಿವೆ. ಅಪ್‍‍ಗ್ರೇಡ್ ಆದ ನಂತರವೂ ಈ ಸೆಡಾನ್ ಕಾರು ತನ್ನ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲಿದೆ ಎನ್ನುವ ನಂಬಿಕೆಯಿದೆ.

Most Read Articles

Kannada
English summary
2019 BMW 7 Series Facelift Spotted — The Flagship Is Getting More Oomph - Read in kannada
Story first published: Tuesday, May 14, 2019, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X