ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಬಿಡುಗಡೆಗೆ ಸಿದ್ದವಾಗಿರುವ 2019ರ ಜೀಪ್ ರ‍್ಯಾಂಗ್ಲರ್ ಕಾರು ಆವೃತ್ತಿಯು ಕಳಪೆ ಪ್ರದರ್ಶನ ತೊರಿದ್ದು, ಹೊಸ ಕಾರು ಖರೀದಿಗೆ ಯೋಗ್ಯವಲ್ಲ ಎನ್ನುವುದು ಜಗಜ್ಜಾಹಿರಾಗಿದೆ.

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಆದ್ರೆ ಸುರಕ್ಷಾ ವಿಚಾರದಲ್ಲಿ 2019ರ ಜೀಪ್ ರ‍್ಯಾಂಗ್ಲರ್ ಕಾರು ಮಾದರಿಯು ಸುರಕ್ಷಾ ವಿಭಾಗದ ರೇಟಿಂಗ್‌ನಲ್ಲಿ ಕೇವಲ 1 ಅಂಕ ಪಡೆದಿರುವುದು ಸಾಕಷ್ಟು ಚರ್ಚಗೆ ಕಾರಣವಾಗಿದೆ. ಜನಪ್ರಿಯ ಐಷಾರಾಮಿ ಕಾರು ಸಂಸ್ಥೆಯೊಂದು ಸುರಕ್ಷಾ ವಿಚಾರದಲ್ಲಿ ಇಷ್ಟೊಂದು ಕಡಿಮೆ ಸುರಕ್ಷಾ ಅಂಕ ಪಡೆದಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಅರ್ಧ ಕೋಟಿಗೂ ಹೆಚ್ಚು ಬಂಡವಾಳ ಹಾಕಿ ಇದುವರೆಗೂ ರ‍್ಯಾಂಗ್ಲರ್ ಕಾರು ಖರೀದಿ ಮಾಡಿದವರು ಕಥೆ ಏನು ಎನ್ನುವ ಪ್ರಶ್ನೆಗಳು ಎದುರಾಗಿವೆ.

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಆಸ್ಟ್ರೇಲಿಯಾದ ಎನ್‌ಸಿಎಪಿ ಸಂಸ್ಥೆಯು 2019ರ ಜೀಪ್ ರ‍್ಯಾಂಗ್ಲರ್ ಕಾರಿನ ಅಸಲಿಯತ್ತು ಬಯಲು ಮಾಡಿದ್ದು, ಒಟ್ಟು ಐದು ಅಂಕಗಳಲ್ಲಿ ಒಂದು ಅಂಕವನ್ನು ಮಾತ್ರ ಗಿಟ್ಟಿಸಿಕೊಳ್ಳುವಲ್ಲಿ ಶಕ್ತವಾಗಿದೆ.

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಸದ್ಯ ಮಾರುಕಟ್ಟೆಯಲ್ಲಿ ರೂ.10 ಲಕ್ಷದಿಂದ ರೂ.20 ಲಕ್ಷದೊಳಗಿನ ಬಹುತೇಕ ಕಾರುಗಳು ಸುರಕ್ಷಾ ವಿಚಾರದಲ್ಲಿ ಕನಿಷ್ಠ 4 ಅಂಕಗಳನ್ನು ಪಡೆದುಕೊಂಡು ಮುನ್ನಡೆಯುತ್ತಿದ್ದು, ಬರೋಬ್ಬರಿ ರೂ.55 ಲಕ್ಷಕ್ಕೂ ಹೆಚ್ಚು ಬೆಲೆ ಹೊಂದಿರುವ ರ‍್ಯಾಂಗ್ಲರ್ ಕಾರು ಕೇವಲ ಒಂದು ಅಂಕ ಗಳಿಸಿದೆ.

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಹೊಸ ರ‍್ಯಾಂಗ್ಲರ್ ಕಾರಿನ ಸುರಕ್ಷಾ ರೇಟಿಂಗ್ ಬಗೆಗೆ ಬಹುತೇಕ ಜೀಪ್ ಪ್ರಿಯರು ಅಸಮಾಧಾನ ಹೊರಹಾಕುತ್ತಿದ್ದು, ಸುರಕ್ಷಾ ರೇಟಿಂಗ್ ಫಲಿತಾಂಶವು ಹೊಸ ಕಾರಿನ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನಲಾಗಿದೆ.

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ, ಯುರೋ ಎನ್‌ಸಿಎಪಿ ಮತ್ತು ಆಸ್ಟ್ರೇಲಿಯಾ ಎನ್‌ಸಿಎಪಿ ಸೇರಿದಂತೆ ಹಲವು ಸಂಸ್ಥೆಗಳು ಕಾರುಗಳ ಅಸಲಿತಯತ್ತು ಬಯಲು ಮಾಡುವ ಮೂಲಕ ಖರೀದಿಗೆ ಯಾವುದು ಯೋಗ್ಯ ಮತ್ತು ಯಾವುದು ಯೋಗ್ಯವಲ್ಲ ಎಂಬುವುದನ್ನು ತಿಳಿಸುತ್ತದೆ.

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಹಾಗೆಯೇ ಭಾರತದಲ್ಲೂ ಕೂಡಾ ಕಳೆದ ವರ್ಷ 2018ರ ನವೆಂಬರ್‌ನಿಂದ ಇಂಡಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆ ಶುರುವಾಗಿದ್ದು, ಬಹುತೇಕ ಕಾರು ಸಂಸ್ಥೆಗಳು ಕನಿಷ್ಠ ಮಟ್ಟದ ರೇಟಿಂಗ್ ಅನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿವೆ.

MOST READ: ನರೇಂದ್ರ ಮೋದಿಯವರ ನೆಚ್ಚಿನ ಆಯ್ಕೆ ರೇಂಜ್ ರೋವರ್ ವೊಗ್ ಸ್ಪೆಷನ್ ಏನು?

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಇದರಿಂದಾಗಿ ಮಹತ್ವದ ಹೆಜ್ಜೆಯಿರಿಸುತ್ತಿರುವ ಇಂಡಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಸಂಸ್ಥೆಯು 2019ರ ಅಕ್ಟೋಬರ್ ಹೊತ್ತಿಗೆ ಯಾವ ಕಾರು ಕನಿಷ್ಠ 4 ಸುರಕ್ಷಾ ಅಂಕಗಳನ್ನು ಪಡೆದುಕೊಳ್ಳಲು ವಿಫಲವಾಗುತ್ತವೋ ಅಂತಹ ಕಾರುಗಳ ಮಾರಾಟಕ್ಕೆ ಬ್ರೇಕ್ ಹಾಕಲು ಸಿದ್ದತೆ ನಡೆಸಿದೆ.

ರ‍್ಯಾಂಗ್ಲರ್ ಕ್ರ್ಯಾಶ್ ಟೆಸ್ಟ್ ಫಲಿತಾಂಶ ಪ್ರಕಟ- ಐಷಾರಾಮಿ ಜೀಪ್ ಪ್ರಿಯರಿಗೆ ಶಾಕ್..!

ಇದೀಗ ಬಿಡುಗಡೆ ಸಜ್ಜಾಗಿರುವ ಜೀಪ್ ರ‍್ಯಾಂಗ್ಲರ್ ಕಾರು ಕೇವಲ 1 ಸ್ಟಾರ್ ರೇಟಿಂಗ್ ಪಡೆದಿರುವುದು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಹೊಸ ಕಾರು ಬಿಡುಗಡೆ ಆಗಲಿದೆಯಾ ಅಥವಾ ಇಲ್ಲವೋ ಎನ್ನುವ ಪ್ರಶ್ನೆಗಳು ಎದುರಾಗಿವೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕಾರು ಪ್ರಯಾಣಿಕರಿಗೆ ಯಾವುದೇ ಗರಿಷ್ಠ ಭದ್ರತೆ ಇಲ್ಲದಿರುವುದು ಸಾಬೀತಾಗಿದ್ದು, ಬಲಿಷ್ಠ ಎಂಜಿನ್ ಮತ್ತು ಪರ್ಫಾಮೆನ್ಸ್‌ನಲ್ಲಿ ಗ್ರಾಹಕರ ಆಕರ್ಷಣೆ ಮಾಡಿದರೂ ಸಹ ರ‍್ಯಾಂಗ್ಲರ್ ಕಾರು ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕ ವಿಭಾಗದಲ್ಲಿ ಗರಿಷ್ಠ ಭದ್ರತೆ ನೀಡಲು ವಿಫಲವಾಗಿದೆ.

Most Read Articles

Kannada
English summary
Jeep Wrangler scores 1 star ANCAP rating. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X