ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಭಾರತದಲ್ಲಿ ಕಾರು ಮಾರಾಟ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು, ಆಟೋ ಉತ್ಪಾದನಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಹಲವಾರು ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಲ್ಲೂ ಮಧ್ಯಮ ವರ್ಗದ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿರುವ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಸದ್ಯ ಮಾರುಕಟ್ಟೆಯಲ್ಲಿ ಇತರೆ ಕಾರು ಮಾದರಿಗಳಿಂತ ಕಾರು ಪ್ರಯಾಣಕ್ಕೆ ಹೆಚ್ಚು ಅನುಕೂಲಕರವಾಗುತ್ತಿರುವ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ಗ್ರಾಹಕರು ಹೆಚ್ಚಿನ ಒಲವು ತೊರುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಪ್ರಯೋಗದೊಂದಿಗೆ ವಿನೂತನ ಕಾರು ಮಾದರಿಗಳನ್ನು ಪರಿಚಯಿಸುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಗರಿಷ್ಠ ಮಟ್ಟದ ಬೇಡಿಕೆ ಗಿಟ್ಟಿಸಿಕೊಳ್ಳಲು ಹವಣಿಸುತ್ತಿವೆ. ಹಾಗಾದ್ರೆ ಸದ್ಯ ಮಾರುಕಟ್ಟೆಗೆ ಪ್ರವೇಶ ಪಡೆಯುವ ನೀರಿಕ್ಷೆಯಲ್ಲಿರುವ ಕಾರುಗಳ ಯಾವವು? ಬಿಡುಗಡೆಯಾಗುವ ಕಾರಿನ ತಾಂತ್ರಿಕ ಸೌಲಭ್ಯ ಮತ್ತು ಬೆಲೆ ಎಷ್ಟು? ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಹ್ಯುಂಡೈ ವೆನ್ಯೂ

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟ ವಿಭಾಗದಲ್ಲಿ ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಸೇರಿದಂತೆ ಹಲವು ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹ್ಯುಂಡೈ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಮುಂದಿನ ತಿಂಗಳು ಮೇ 17ಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್‍‍ಯುವಿ ಕಾರು ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಪೆಟ್ರೋಲ್‌ನಲ್ಲಿ 1.0-ಲೀಟರ್ ಮತ್ತು 1.4-ಲೀಟರ್ ಎಂಜಿನ್ ಹಾಗೂ ಡೀಸೆಲ್‌ನಲ್ಲಿ 1.4-ಲೀಟರ್ ಎಂಜಿನ್‌ನೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಅಂದಾಜು ಬೆಲೆಗಳು(ಎಕ್ಸ್‌ಶೋರೂಂ)- ಆರಂಭಿಕವಾಗಿ ರೂ.7ಲಕ್ಷದಿಂದ ಟಾಪ್ ಎಂಡ್‌ಗೆ ರೂ.10 ಲಕ್ಷ

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಕಿಯಾ ಎಸ್‌ಪಿ ಕಾನ್ಸೆಪ್ಟ್

ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳಿಗೆ ಚಾಲನೆ ನೀಡುತ್ತಿದ್ದು, 2019ರ ಅಗಸ್ಟ್ ಹೊತ್ತಿಗೆ ತನ್ನ ಮೊದಲ ಕಾರು ಮಾದರಿಯಾದ ಎಸ್‌ಪಿ ಕಾನ್ಸೆಪ್ಟ್ ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸ್ಪೋರ್ಟಿ ವರ್ಷನ್‌ಗಳನ್ನು ಹೊಂದಿರಲಿದೆ.

ಅಂದಾಜು ಬೆಲೆಗಳು(ಎಕ್ಸ್‌ಶೋರೂಂ)- ಆರಂಭಿಕವಾಗಿ ರೂ.8 ಲಕ್ಷದಿಂದ ಟಾಪ್ ಎಂಡ್‌ಗೆ ರೂ.12 ಲಕ್ಷ

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಟಾಟಾ ಕ್ಯಾಸಿನಿ

ಟಾಟಾ ಮೋಟಾರ್ಸ್ ಸಂಸ್ಥೆಯು ಈ ಹಿಂದೆ ಜನವರಿ ಆರಂಭದಲ್ಲಿ ಬಿಡುಗಡೆ ಮಾಡಿದ್ದ 5 ಸೀಟರ್ ಹ್ಯಾರಿಯರ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಹೋಲಿಕೆಯಲ್ಲೇ ಕ್ಯಾಸಿನಿ ಎನ್ನುವ 7 ಸೀಟರ್ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, 2019ರ ಕೊನೆಯಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

MOST READ: ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಹೊಸ ಕ್ಯಾಸಿನಿ ಕಾರು 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

ಅಂದಾಜು ಬೆಲೆಗಳು(ಎಕ್ಸ್‌ಶೋರೂಂ)- ಆರಂಭಿಕವಾಗಿ ರೂ.15 ಲಕ್ಷದಿಂದ ಟಾಪ್ ಎಂಡ್‌ಗೆ ರೂ.18 ಲಕ್ಷ

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಎಂಜಿ ಹೆಕ್ಟರ್

ಮೊದಲ ಬಾರಿಗೆ ಭಾರತದಲ್ಲಿ ತನ್ನ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಸಿದ್ದಗೊಳಿಸಿ ಮಾರಾಟಕ್ಕೆ ಅಣಿಯಾಗುತ್ತಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ ಬಹುನೀರಿಕ್ಷಿತ ಹೆಕ್ಟರ್ ಎಸ್‌ಯುವಿ ಮಾದರಿಯನ್ನು ಈಗಾಗಲೇ ಅಧಿಕೃತವಾಗಿ ಅನಾವರಣಗೊಳಿಸಿದೆ.

MOST READ: ಶಿವಮೊಗ್ಗದಲ್ಲಿ ನಡೆದ ಅಪಘಾತದ ವೇಳೆ ತನ್ನ ಸಾಮರ್ಥ್ಯವನ್ನ ನಿರೂಪಿಸಿದ ಟಾಟಾ ಹೆಕ್ಸಾ

ಭಾರತದಲ್ಲಿ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ನಾಲ್ಕು ಹೊಸ ಕಾರುಗಳು..!

ಬಿಎಸ್-6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯು 160-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ, 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಅಂದಾಜು ಬೆಲೆಗಳು(ಎಕ್ಸ್‌ಶೋರೂಂ)- ಆರಂಭಿಕವಾಗಿ ರೂ.14 ಲಕ್ಷದಿಂದ ಟಾಪ್ ಎಂಡ್‌ಗೆ ರೂ.18 ಲಕ್ಷ

Most Read Articles

Kannada
English summary
2019 Upcoming SUV Launches in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X