ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ದೇಶಿಯ ಮಾರುಕಟ್ಟೆಯಲ್ಲಿರುವ ಬೇರೆ ವಾಹನ ತಯಾರಕ ಕಂಪನಿಗಳಂತೆ ಫೋರ್ಸ್ ಮೋಟಾರ್ಸ್ ಸಹ ತನ್ನ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಡೇಟ್‍‍ಗೊಳಿಸುತ್ತಿದೆ. ಹೊಸ ಫೋರ್ಸ್ ಟ್ರಾಕ್ಸ್ ಫೇಸ್‍‍ಲಿಫ್ಟ್ ಎಂಪಿವಿಯನ್ನು ಪುಣೆಯಲ್ಲಿ ಸ್ಪಾಟ್ ಟೆಸ್ಟ್ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಸ್ಪಾಟ್ ಟೆಸ್ಟ್ ಮಾಡಲಾದ ಮಾದರಿಯನ್ನು ಸ್ವಲ್ಪ ಪ್ರಮಾಣದಲ್ಲಿ ಅಂದರೆ ಮುಂಭಾಗದಲ್ಲಿ ಮಾತ್ರ ಮರೆ ಮಾಡಲಾಗಿತ್ತು. ಮುಂಭಾಗವು ಮಾರುಕಟ್ಟೆಯಲ್ಲಿರುವ ಕಾರಿಗಿಂತ ಸ್ಲಾಂಟ್ ಆಗಿರುವುದು ಕಂಡು ಬಂದಿದೆ. ಕ್ರಾಶ್ ಸುರಕ್ಷತಾ ನಿಯಮಕ್ಕೆ ಅನುಸಾರವಾಗಿ ಈ ರೀತಿ ಮಾಡಿರುವ ಸಾಧ್ಯತೆಗಳಿವೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಹೊಸ ಎಲ್‍ಇ‍‍ಡಿ ಡಿ‍ಆರ್‍ಎಲ್ ಹಾಗೂ ಟೇಲ್ ಲ್ಯಾಂಪ್‍‍ಗಳನ್ನು ಸ್ವಲ್ಪ ಪ್ರಮಾಣದಲ್ಲಿ ನವೀಕರಣಗೊಳಿಸಲಾಗಿದೆ. ಮೊದಲ ಬಾರಿಗೆ ನೋಡಿದಾಗ ಎಕ್ಸ್ ಟಿರಿಯರ್ ಮಾರುಕಟ್ಟೆಯಲ್ಲಿರುವ ಟ್ರ್ಯಾಕ್ಸ್ ಮಾದರಿಯಲ್ಲಿರುವಂತೆ ಕಾಣುತ್ತದೆ. ಕ್ರೂಸರ್ ಡಿಲಕ್ಸ್ ಮತ್ತು ಟೂಫನ್ ಡೀಲಕ್ಸ್ ಎಂಬ ಮಾದರಿಗಳ ಬಿಡುಗಡೆಯೊಂದಿಗೆ ಫೋರ್ಸ್ ಟ್ರ್ಯಾಕ್ಸ್ ಅನ್ನು ಕೆಲವು ವರ್ಷಗಳ ಹಿಂದೆ ನವೀಕರಿಸಲಾಗಿತ್ತು.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಅವುಗಳ ಎಕ್ಸ್ ಟಿರಿಯರ್ ಸ್ಟೈಲಿಂಗ್‌‍‍ನಲ್ಲಿ ಹಲವು ಹೊಸ ಫೀಚರ್‍‍ಗಳನ್ನು ಅಳವಡಿಸಲಾಗಿತ್ತು. ಈ ಹಿಂದೆ ಫೋರ್ಸ್ ಗೂರ್ಖಾ ಟ್ರಾಕ್ಸ್ ಅನ್ನು ಸಹ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಇಂಟಿರಿಯರ್‍‍ನಲ್ಲಿ ಅಪ್‌ಹೋಲ್‍‍ಸ್ಟರಿ ಹಾಗೂ ರೂಫ್ ಮೌಂಟೆಡ್ ಏರ್ ಕಂಡೀಷನರ್‍‍ಗಳನ್ನು ಅಳವಡಿಸಲಾಗಿತ್ತು. ಟ್ರ್ಯಾಕ್ಸ್ ಕ್ರೂಸರ್ 12 ಸೀಟರ್‍‍ಗಳಲ್ಲಿ ಲಭ್ಯವಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಟೂಫಾನ್ ಮಾದರಿಯನ್ನು 10 ಸೀಟುಗಳಲ್ಲಿ ಅಥವಾ 14 ಸೀಟುಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳಲ್ಲಿ ಡ್ರೈವರ್ ಸೀಟ್ ಸಹ ಸೇರಿದೆ. ಹೊಸ ಬಿಎಸ್ 6 ಫೋರ್ಸ್ ಟ್ರ್ಯಾಕ್ಸ್‌ ಸಹ ಇದೇ ರೀತಿಯಲ್ಲಿರುವ ಸಾಧ್ಯತೆಗಳಿವೆ. ಫೋರ್ಸ್ ಟ್ರ್ಯಾಕ್ಸ್ ಆಂಬ್ಯುಲೆನ್ಸ್ ಹಾಗೂ ಸ್ಕೂಲ್ ಬಸ್ ರೀತಿಯ ಜೊತೆಗೆ ಗಾಮಾ ಸ್ವರೂಪದಲ್ಲಿ ಲಭ್ಯವಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಫೋರ್ಸ್ ಟ್ರಾಕ್ಸ್ ತನ್ನ ಉಪಯುಕ್ತತೆ ಹಾಗೂ ಜನರನ್ನು ಸಾಗಿಸುವ ಸಾಮರ್ಥ್ಯದಿಂದಾಗಿ ಹಳ್ಳಿಗಳಲ್ಲಿ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಫೋರ್ಸ್ ಟ್ರಾಕ್ಸ್ 4832x1790x2055 ಎಂಎಂ ಗಾತ್ರವನ್ನು ಹೊಂದಿದೆ. ಫೋರ್ಸ್ ಟ್ರಾಕ್ಸ್ ನೀವು ನಿರೀಕ್ಷೆ ಮಾಡಿರುವಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಲೋಡ್ ಹೊತ್ತೊಯ್ಯಬಲ್ಲದು.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಹೊಸ ಬಿ‍ಎಸ್ 6 ಎಂಜಿನ್ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿರುವ ಎಂಜಿನ್‍‍ಗಿಂತ ಹೆಚ್ಚಿನ ಪವರ್ ಹಾಗೂ ಮೈಲೇಜ್ ನೀಡುತ್ತದೆ. ಮಾರುಕಟ್ಟೆಯಲ್ಲಿರುವ ಫೋರ್ಸ್ ಟ್ರ್ಯಾಕ್ಸ್ ನಲ್ಲಿ 1947 ಸಿಸಿ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 67 ಬಿಹೆಚ್‍‍ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಕ್ರೂಸರ್ ಹಾಗೂ ಟೂಫಾನ್‌ ಡೀಲಕ್ಸ್ ಮಾದರಿಗಳಲ್ಲಿ 2596 ಸಿಸಿ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 85 ಬಿಹೆಚ್‌ಪಿ ಪವರ್ ಹಾಗೂ 230 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍‍ಗಳಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ಹಿಂದಿನ ವ್ಹೀಲ್‍‍ಗಳನ್ನು ಚಲಾಯಿಸುತ್ತವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಫೋರ್ಸ್ ಮೋಟಾರ್ಸ್, ಫೋರ್ಸ್ ಒನ್ ಪ್ರೀಮಿಯಂ ಎಸ್‌ಯುವಿಯನ್ನು ಬಿಡುಗಡೆಗೊಳಿಸಿ ಪ್ಯಾಸೆಂಜರ್ ಸೆಗ್‍‍ಮೆಂಟಿನಲ್ಲಿ ಜನಪ್ರಿಯವಾಗಲು ಬಯಸಿತ್ತು. ಆದರೆ ಹೆಚ್ಚಿನ ಸ್ಪರ್ಧೆಯಿಂದಾಗಿ ಕಂಪನಿಯು ಫೋರ್ಸ್ ಒನ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್

ಫೋರ್ಸ್ ಮೋಟಾರ್ಸ್ ಕಮರ್ಶಿಯಲ್ ವೆಹಿಕಲ್ ಸೆಗ್‍‍ಮೆಂಟಿನಲ್ಲಿ ಹೆಚ್ಚು ಗಮನಹರಿಸಲು ಬಯಸಿದ್ದು, ಈ ಕಾರಣಕ್ಕಾಗಿ ಈ ಸೆಗ್‍‍ಮೆಂಟಿನಲ್ಲಿ ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಟ್ರಾಕ್ಸ್ ಕೂಡ ಒಂದು.

Source: Rushlane

Most Read Articles

Kannada
English summary
2020 Force Trax BS6 Spied before launch - Read in Kannada
Story first published: Friday, December 6, 2019, 18:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X