ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಹ್ಯುಂಡೈ ಐ 20 ಆಕ್ಟಿವ್ ಹ್ಯಾಚ್‍‍ಬ್ಯಾಕ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಮುಂದಿನ ವರ್ಷ ನಡೆಯುವ 2020 ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ದೆಹಲಿಯಲ್ಲಿ ಆಂಧ್ರಪ್ರದೇಶದ ನಂಬರ್ ಪ್ಲೇಟ್‍ ಅಳವಡಿಸಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರವನ್ನು ರಶ್ಲೆ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಹೊಸ ಜನರೇಷನ್ ಐ 20 ಹ್ಯಾಚ್‍‍ಬ್ಯಾಕ್ ಕೆಲವು ತಿಂಗಳ ಹಿಂದೆ ಯುರೋಪಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ್ದರು. ಇದೀಗ ಭಾರತದಲ್ಲೂ ಕೂಡ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಹ್ಯುಂಡೈ ಚೆನ್ನೈ ಘಟಕದಲ್ಲಿ ಪ್ರಸ್ತುತ ತಯಾರಾಗುತ್ತಿರುವ ಮಾದರಿಗೆ ಹೋಲಸಿದರೆ ಹೊಸ ಜನರೇಷನ್ ಐ 20 ಅನ್ನು ಆಂಧ್ರಪ್ರದೇಶದ ಕಿಯಾ ಘಟಕದಲ್ಲಿ ನಿರ್ಮಿಸುವ ನಿರೀಕ್ಷಿಯಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಹೊಸ ಜನರೇಷನ್ ಐ 20 ಎಲೈಟ್ ಮತ್ತು ಆಕ್ಟಿವ್ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳೊಂದಿಗೆ ಹೊಸ ಬಿಎಸ್-6 ಎಂಜಿನ್‍ ಅನ್ನು ಹೊಂದಿರುತ್ತದೆ. ಹ್ಯುಂಡೈ ಪಸ್ತುತ ಮಾದರಿಯಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಿಎಸ್-6 ಎಂಜಿನ್ ಆಗಿ ನವೀಕರಿಸುವ ಸಾಧ್ಯತೆಗಳಿವೆ. 1.2 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ 82 ಬಿ‍ಎಚ್‍ಪಿ ಪವರ್ ಮತ್ತು 115 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಸಿವಿ‍ಟ್ ಯು‍ನಿ‍ಟ್ ಅನ್ನು ಅಳವಡಿಸಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಪ್ರಸ್ತುತ ಮಾದರಿಯಲ್ಲಿ ಕಾಣಿಸಿಕೊಂಡಿರುವ 1.4 ಲೀಟರ್ ಡೀಸೆಲ್ ಎಂಜಿನ್ ಹೊಸ ಜನರೇಷನ್ ಹ್ಯುಂಡೈ ಐ 20 ಅಲ್ಲಿ ಮುಂದುವರಿಸಲಾಗುವುದಿಲ್ಲ. ಬದಲಾಗಿ ಕಂಪನಿಯು ಅದನ್ನು 1.5 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‍‍ನೊಂದಿಗೆ ಬದಲಾಯಿಸಲಿದ್ದು, ಆ ಎಂಜಿನ್ ಕಿಯಾ ಸೆಲ್ಟೋಸ್ ಎಸ್‍‍ಯು‍ವಿಯಲ್ಲಿ ಕಾಣಿಸಿಕೊಂಡಿದೆ. ಸೆಲ್ಟೋಸ್‍‍ನಲ್ಲಿ ಬಿಎಸ್-6 ಪ್ರೇರಿತ ಎಂಜಿನ್ 114 ಬಿಎಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಕಂಪನಿಯು ಐ 20 ಹ್ಯಾಚ್‍ಬ್ಯಾಕ್ ಅನ್ನು 1.0 ಲೀಟರ್ ಪೆಟ್ರೋಲ್ ಎಂಜಿ‍ನ್‍ ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯು‍ವಿಯಲ್ಲಿ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 1.0 ಲೀಟರ್ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಎಚ್‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ವೈಶಿಷ್ಟ್ಯಗೊಳಿಸುವ ಮೂಲಕ ಐ 20 ಹೆಚ್ಚಿನ್ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಹೊಸ ಜನರೇಷನ್ ಐ 20 ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿಯು ಕೂಡ ಹಲವಾರು ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ಹೊಸ ಹ್ಯಾಚ್‍‍ಬ್ಯಾಕ್‍‍ನಲ್ಲಿ ಹೊಸ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳು, ಗ್ರಿಲ್, ಹೊಸ ಹೆಡ್‍‍ಲ್ಯಾಂ‍ಪ್, ಫಾಗ್ ಲ್ಯಾಂಪ್, ಮತ್ತು ಎಲ್‍ಇಡಿ ಟೈಲ್‍-ಲ್ಯಾಂಪ್ ಅನ್ನು ಒಳಗೊಂಡಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಹೊಸ ಹ್ಯುಂಡೈ ಐ 20 ಆಕ್ಟಿವ್ ಹ್ಯಾಚ್‍‍ಬ್ಯಾಕ್ ಇಂಟಿರಿಯರ್‍‍ನಲ್ಲಿ ಸುಧಾರಿತ ಸ್ಮಾರ್ಟ್ ಕನೆಕ್ಟಿವಿಟಿ ವೈಶಿಷ್ಟ್ಯಗಳೊಂದಿಗೆ ಹೊಸ ಡ್ಯಾಶ್‍‍ಬೋರ್ಡ್ ಹೊಸ ವಿನ್ಯಾಸವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಇದರಲ್ಲಿ ಸ್ಮಾರ್ಟ್ ಫೋನ್ ಮತ್ತು ವಾಯ್ಸ್ ಕಾಮೆಂಡ್ಸ್ ಗಳನ್ನು ಹೊಂದಿದೆ. ಹೊಸ ಜನರೇಷನ್ ಐ 20 ಸಹ ರೂಫ್ ಮತ್ತು ಹೊಸ ಆಕರ್ಷಕ ಕ್ಯಾಬಿನ್ ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಹೊಸ ವೈಶಿಷ್ಟ್ಯಗಳು ಮತ್ತು ಬಿಎಸ್-6 ಎಂಜಿನ್‍‍ನಿಂದಾಗಿ ಹೊಸ ಜನರೇಷನ್ ಐ 20 ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯ ನಿರೀಕ್ಷಿಯಿದೆ. ಹೊಸ ಜನರೇಷನ್ ಐ 20 ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯ ನಂತರ ಮಾರುತಿ ಸುಜುಕಿ ಬಾಲೆನೊ, ಟೊಯೋಟಾ ಗ್ಲಾಂಝಾ, ಹೋಂಡಾ ಜಾಝ್, ಫೋಕ್ಸ್ ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಐ20 ಆಕ್ಟಿವ್

ಹ್ಯುಂಡೈ ಯಾವಾಗಲೂ ತಮ್ಮ ಮಾದರಿಗಳಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಳಿಸುತ್ತಾರೆ. ಇದರಿಂದಾಗಿ ಮುಂಬರುವ ಹೊಸ ಜನರೇಷನ್ ಹ್ಯಾಚ್‍‍ಬ್ಯಾಕ್‍ನಲ್ಲಿಯು ಅದೇ ರೀತಿ ಹೊಸ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಮುಂದಿನ ವರ್ಷ ನಡೆಯಲಿರುವ 2020 ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2020 Hyundai i20 Active Spied Testing Ahead Of Launch In India: Spy Pics & Details - Read in Kannada
Story first published: Wednesday, October 16, 2019, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X