ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಬಹುಕಾಲದಿಂದ ದೇಶಿಯ ಮಾರುಕಟ್ಟೆಯಲ್ಲಿರುವ, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ವಾಹನವಾದ ಬೊಲೆರೊ ನಂಬಲರ್ಹವಾದ ವಾಹನವೆಂದು ಪರಿಗಣಿತವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಸ್ಕಾರ್ಪಿಯೊ ವಾಹನದೊಂದಿಗೆ, ಈ ವಾಹನವು ಸಹ ತನ್ನ ಲುಕ್ ಹಾಗೂ ಗಟ್ಟಿತನದಿಂದಾಗಿ ತನ್ನದೇ ಆದ ಬ್ರಾಂಡ್ ಅನ್ನು ಹೊಂದಿದೆ. ಕಳೆದ ವರ್ಷದಿಂದ, ಮಹೀಂದ್ರಾ ಕಂಪನಿಯು ತನ್ನ ಸರಣಿಯ ವಾಹನಗಳನ್ನು ನವೀಕರಿಸಿ ಮಾರಾಟ ಮಾಡುವಲ್ಲಿ ನಿರತವಾಗಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

2020ರ ಏಪ್ರಿಲ್‍‍ನಿಂದ ಜಾರಿಗೆ ಬರಲಿರುವ ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ, ಮಹೀಂದ್ರಾ ಕಂಪನಿಯು ತನ್ನ ಸರಣಿಯ ಎಲ್ಲಾ ವಾಹನಗಳ ಎಂಜಿನ್ ಅನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸುತ್ತಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಬೊಲೆರೊ ಹಾಗೂ ಟಿಯುವಿ300 ಮಾದರಿಯ ವಾಹನಗಳನ್ನು ಪೂರ್ತಿಯಾಗಿ ನವೀಕರಿಸುತ್ತಿದೆ. ಹೊಸ ತಲೆಮಾರಿನ ಸ್ಕಾರ್ಪಿಯೋ, ಥಾರ್ ಮತ್ತು ಎಕ್ಸ್‌ಯುವಿ 500 ವಾಹನಗಳನ್ನು ನವೀಕರಿಸಲಾಗುತ್ತಿದೆ. 2020ರ ಮಹೀಂದ್ರಾ ಬೊಲೆರೊದ ಉತ್ಪಾದನಾ ಮಾದರಿಯನ್ನು ಇದೇ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಸುರಿಯುತ್ತಿರುವ ಮಳೆಯ ನಡುವೆ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ಬೊಲೆರೊವನ್ನು ರಹಸ್ಯವಾಗಿ ಸೆರೆಹಿಡಿಯಲಾಗಿದೆ. ರಹಸ್ಯವಾಗಿ ಸೆರೆ ಹಿಡಿಯಲಾಗಿರುವ ಈ ಚಿತ್ರಗಳಲ್ಲಿ ಮರೆಮಾಚಿರುವ, ಟೆಸ್ಟ್ ನಂಬರ್ ಪ್ಲೇಟ್ ಹೊಂದಿರುವ ಪ್ರೊಟೊ ಟೈಪ್ ವಾಹನವನ್ನು ಕಾಣಬಹುದು.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಕಾರಿನ ಮುಂಭಾಗವನ್ನು ಮಾತ್ರ ಮರೆಮಾಡಲಾಗಿತ್ತು. ಈ ಚಿತ್ರಗಳಿಂದ ಕಾರಿನಲ್ಲಿ ಯಾವ ಫೀಚರ್‍‍ಗಳಿವೆ ಎಂಬುದು ಕಂಡು ಬರುವುದಿಲ್ಲವಾದರೂ, ಕೆಲವು ವಿನ್ಯಾಸಗಳನ್ನು ನವೀಕರಿಸಿರುವುದನ್ನು ಗಮನಿಸಬಹುದು.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಹೊಸ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್‌ ಕಾರಿನಂತೆ, 2020ರ ಮಹೀಂದ್ರಾ ಬೊಲೆರೊ ಸ್ವಲ್ಪ ಸ್ಲಾಂಟೆಡ್ ವರ್ಟಿಕಲ್ ಗ್ರಿಲ್ ಸ್ಲ್ಯಾಟ್‌ಗಳನ್ನು ಪಡೆಯುತ್ತದೆ. ಇದರ ಜೊತೆಗೆ ಸರ್ಕ್ಯುಲರ್ ಹೆಡ್‌ಲ್ಯಾಂಪ್ ಯುನಿಟ್‍‍ಗಳನ್ನು ಸಹ ನವೀಕರಿಸಲಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಬೊಲೆರೊದ ಬಾಕ್ಸೀ ಸಿಲೂಯೆಟ್, ನೇರವಾಗಿರುವ ವಿಂಡ್ ಷೀಲ್ಡ್ ಹಾಗೂ ರೆಕ್ಟಂಗ್ಯುಲರ್ ವಿಂಗ್ ಮಿರರ್‍‍ಗಳ ಜೊತೆಗೆ ಫ್ಲಾಟ್ ರೂಫ್ ವಿನ್ಯಾಸ, ಬಾನೆಟ್ ಹಾಗೂ ಎತ್ತರದ ಪಿಲ್ಲರ್‍‍ಗಳನ್ನು ಹೊಂದಿದೆ.

ಮುಂಭಾಗದಲ್ಲಿರುವ ಬಂಪರ್, ಸೆಂಟ್ರಲ್ ಏರ್ ಇನ್ಲೆಟ್ ಹಾಗೂ ಹೊಸ ಮಹೀಂದ್ರಾ ಬೊಲೆರೊದ ಫಾಗ್ ಲ್ಯಾಂಪ್‍‍ಗಳ ವಿನ್ಯಾಸವು ಮಾರುಕಟ್ಟೆಯಲ್ಲಿರುವ ಬೊಲೆರೊದಲ್ಲಿರುವಂತೆ ಇವೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಬೊಲೆರೊ ಪವರ್ ಪ್ಲಸ್‍‍ನಲ್ಲಿ ಎಐಎಸ್ 145 ನಿಯಮಗಳಿಗೆ ತಕ್ಕಂತೆ ಕಡ್ಡಾಯಗೊಳಿಸಲಾಗಿರುವ ಸುರಕ್ಷಾ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಬೊಲೆರೊದ ಹಳೆಯ ಆವೃತ್ತಿಯನ್ನು ಅಪ್‍‍ಡೇಟ್‍‍ಗೊಳಿಸಲಾಗಿಲ್ಲ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

ಹೊಸ ತಲೆಮಾರಿನ ಕಾರು ಬಿಡುಗಡೆಯಾಗುವ ಮೊದಲು ಮಾರುಕಟ್ಟೆಯಲ್ಲಿರುವ ಬೊಲೆರೊದ ಇಂಟಿರಿಯರ್‍‍ನಲ್ಲಿ, ಈ ಎಂಯುವಿಯ ಜೀವಿತಾವಧಿಯನ್ನು ವಿಸ್ತರಿಸಲು ಹೊಸ ಫೀಚರ್‍‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ತಲೆಮಾರಿನ ಬೊಲೆರೊ

1.5 ಲೀಟರಿನ ಡೀಸೆಲ್ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಪ್‍‍ಡೇಟ್‍‍ಗೊಳಿಸುವ ನಿರೀಕ್ಷೆಗಳಿವೆ. ಈ ಎಂಜಿನ್ 70 ಬಿ‍‍ಹೆಚ್‍‍ಪಿ ಪವರ್ ಹಾಗೂ 195 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗುವುದು.

Source: Gaadiwaadi

Most Read Articles

Kannada
English summary
2020 Mahindra Bolero Spied On Test For The First Time - Read in kannada
Story first published: Thursday, August 22, 2019, 13:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X