ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

2002ರಲ್ಲಿ ಬಿಡುಗಡೆಯಾದಾಗಿನಿಂದ ಮಹೀಂದ್ರಾ ಸ್ಕಾರ್ಪಿಯೋ ವಾಹನದ ಒಳ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದರೂ, ಹೊರ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ 2020ರಲ್ಲಿ ಬಿಡುಗಡೆಯಾಗಲಿರುವ ನಾಲ್ಕನೇ ತಲೆಮಾರಿನ ವಾಹನದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುವ ಸಾಧ್ಯತೆಗಳಿವೆ.

ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

ಮರೆಮಾಡಿರುವ 2020ರ ಹೊಸ ಮಹೀಂದ್ರಾ ಸ್ಕಾರ್ಪಿಯೋ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ತಲೆಮಾರಿನ ಸ್ಕಾರ್ಪಿಯೋದಲ್ಲಿ ಹಲವಾರು ಬದಲಾವಣೆಗಳಾಗಲಿದ್ದು, ಈಗಿರುವ ವಾಹನಕ್ಕಿಂತ ಹೆಚ್ಚಿನ ವಿನ್ಯಾಸಗಳನ್ನು ಹೊಂದಿರಲಿದೆ. ಹೊಸ ಎಸ್‍‍ಯು‍‍ವಿ ಉದ್ದವಾಗಿರಲಿದೆ, ಕಡಿಮೆ ಬಾಕ್ಸಿಯಾಗಿದೆ, ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಹೊಸ ಫಾಸ್ಕಿಯಾಸ್‍‍ಗಳನ್ನು ಹೊಂದಿದೆ.

ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

ಈ ಮರೆಮಾಡಿರುವ 2020ರ ಸ್ಕಾರ್ಪಿಯೋ ವಾಹನವು ಉತ್ಪಾದನಾ ಹಂತದಲ್ಲಿರುವ ಬಾಡಿ ಪ್ಯಾನೆಲ್‍‍ಗಳನ್ನು ಹೊಂದಿದೆ. ಮುಂಭಾಗದಲ್ಲಿರುವ ಹೆಡ್‍‍‍ಲ್ಯಾಂಪ್ ಹಾಗೂ ಗ್ರಿಲ್‍‍ಗಳು ಈಗಿರುವ ವಾಹನಕ್ಕಿಂತ ದೊಡ್ಡದಾಗಿವೆ. ಹಿಂಭಾಗದಲ್ಲಿ ಹೊಸ ವಿನ್ಯಾಸದ ಟೇಲ್‍‍ಲೈಟ್‍‍ಗಳನ್ನು, ತಿರುಚಿದ ಟೇಲ್‍‍ಗೇಟ್‍‍ಗಳನ್ನು ಅಳವಡಿಸಲಾಗಿದೆ.

ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

ಈ ವಾಹನವನ್ನು ಮರೆಮಾಡಿರುವ ಕಾರಣದಿಂದ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಗ್ರೀನ್‍‍ಹೌಸ್ ದೊಡ್ಡದಾಗಿರುವುದರಿಂದ ಇಂಟಿರಿಯರ್‍‍ನಲ್ಲಿ ಸರಾಗವಾಗಿ ಗಾಳಿಯಾಡಲಿದೆ. ಹೊಸ ವಾಹನವು ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

ಈ ಎಸ್‍‍ಯು‍‍ವಿಯಲ್ಲಿ ಹೊಸ ವಿನ್ಯಾಸದ ಡ್ಯಾಶ್‍‍ಬೋರ್ಡ್‍‍ನ ಜೊತೆಗೆ ಕನೆಕ್ಟಿವಿಟಿ ಫೀಚರ್ಸ್ ಹೊಂದಿರುವ ಹೊಸ ಬಗೆಯ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಇರಲಿದೆ. ಮುಂಬರುವ ಕ್ರಾಶ್ ಟೆಸ್ಟ್ ನಿಯಮಕ್ಕೆ ತಕ್ಕಂತೆ ಹೊಸ ಸ್ಕಾರ್ಪಿಯೋ ವಾಹನದಲ್ಲಿ ಹೆವಿಯಾಗಿರುವ ಲ್ಯಾಡರ್ ಫ್ರೇಮ್ ಚಾಸೀಸ್ ಅಳವಡಿಸಲಾಗುವುದು. ಹೊಸ ಸ್ಕಾರ್ಪಿಯೋ ವಾಹನವೂ ಸಹ ತನ್ನ ಆಫ್ ರೋಡ್ ಸಾಮರ್ಥ್ಯವನ್ನು ಮುಂದುವರೆಸಲಿದೆ.

ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

ಈಗಿರುವ ವಾಹನದಲ್ಲಿ 2.2 ಲೀಟರಿನ ಎಂಹಾಕ್ ಟರ್ಬೊಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಹೊಸ ವಾಹನದಲ್ಲಿ ಈ ಎಂಜಿನ್ ಬದಲಿಗೆ ಎಕ್ಸ್ ಯುವಿ 500 ವಾಹನದಲ್ಲಿರುವ 2.0 ಲೀಟರ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಈ ಎಂಜಿನ್ ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಇರಲಿದೆ. 2.0 ಲೀಟರಿನ ಎಂಜಿನ್, 2.2 ಲೀಟರ್ ಎಂಜಿನ್‍‍ಗಿಂತ ಹೆಚ್ಚು ಪವರ್ ಹಾಗೂ ಟಾರ್ಕ್ ಉತ್ಪಾದಿಸುವ ನಿರೀಕ್ಷೆಯಿದೆ. ಇದರಲ್ಲಿ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್‍‍ನ ಎರಡೂ ಟ್ರಾನ್ಸ್ ಮಿಷನ್‍‍ಗಳನ್ನು ಅಳವಡಿಸುವ ನಿರೀಕ್ಷೆಯಿದೆ.

MOST READ: ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

ಎಸ್‍‍ಯು‍‍ವಿ ವಾಹನಗಳನ್ನು ಹೆಚ್ಚಾಗಿ ಇಷ್ಟಪಡುವ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಹೀಂದ್ರ ಸ್ಕಾರ್ಪಿಯೋ ವಾಹನವು ಮಹತ್ವದ ಪಾತ್ರವಹಿಸುವ ಸಂಭವವಿದೆ. ನಾಲ್ಕನೇ ತಲೆಮಾರಿನ ಈ ಎಸ್‍‍ಯು‍‍ವಿ ವಾಹನವನ್ನು, ಮಹೀಂದ್ರಾ ಕಂಪನಿಯು ಉತ್ತರ ಅಮೇರಿಕಾದಲ್ಲಿನ ಟೆಕ್ನಿಕಲ್ ಸೆಂಟರ್‍‍ನಿಂದ ಪಡೆದಿರುವ ಇನ್‍‍ಪುಟ್‍‍ಗಳಿಂದ ಅಭಿವೃದ್ಧಿಪಡಿಸಿದೆ. ಈ ವಾಹನವು ವಿಶ್ವ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. 2020 ರ ಏಪ್ರಿಲ್ 1 ಕ್ಕೆ ಮೊದಲು ಶೋರೂಂಗಳಿಗೆ ಬರುವ ನಿರೀಕ್ಷೆಯಿದೆ.

Source: TeamBHP

Most Read Articles

Kannada
English summary
2020 Mahindra Scorpio SUV spied again - Read in kannada
Story first published: Tuesday, May 28, 2019, 11:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X