ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

2020ರ ಮಹೀಂದ್ರಾ ಥಾರ್‍‍ನ ಮೂಲ ಮಾದರಿಯ ವಾಹನವನ್ನು ಮುಂದಿನ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ವಾಹನವನ್ನು ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈಗಲೂ ಸಹ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ.

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಹಳೆಯ ಎಂಎಂ 540 ಎಸ್‍‍ಯುವಿಯ ಆಧಾರದ ಮೇಲೆ ನಿರ್ಮಾಣವಾಗಿರುವ ಥಾರ್‍‍ನಲ್ಲಿ ಇದುವರೆಗೂ ಯಾವುದೇ ಮಹತ್ತರವಾದ ಹಾರ್ಡ್ ವೇರ್ ಅಪ್‍‍ಡೇಟ್‍‍ಗಳನ್ನು ಮಾಡಲಾಗಿರಲಿಲ್ಲ. ಈಗ ಕೇಂದ್ರ ಸರ್ಕಾರವು ನಿಯಮಗಳನ್ನು ಬದಲಿಸಿರುವ ಹಿನ್ನೆಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಥಾರ್ ಹಲವು ಬದಲಾವಣೆಗಳನ್ನು ಹೊಂದಿರಲಿದೆ. ಹಳೆಯ ವಿನ್ಯಾಸವನ್ನು ಹಾಗೆಯೇ ಮುಂದುವರೆಸಲಾಗುವುದು.

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಇತ್ತೀಚಿಗೆ ಸುರೇಶ್‍‍ಕುಮಾರ್ ಎಂಬುವವರು ಸೆರೆ ಹಿಡಿದಿರುವ ಚಿತ್ರಗಳಲ್ಲಿ ಸೆಂಟರ್ ಕಂಸೊಲ್‍‍ನಲ್ಲಿರುವ ಗೇರ್ ಲಿವರ್ ಅನ್ನು ಕಾಣಬಹುದು. ಈ ಮೊದಲೇ ವರದಿಯಾದಂತೆ ಟಾಪ್ ಎಂಡ್ ಮಾದರಿಯು 4x4 ಸಿಸ್ಟಂ ಹೊಂದಿರಲಿದೆ. ಪವರ್ ವಿಂಡೊ ಸ್ವಿಚ್‍‍ಗಳು ಗೇರ್ ಲಿವರ್‍‍ಗಳ ಹಿಂದೆ ಇರಲಿವೆ.

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಇದುವರೆಗೂ ಮಹೀಂದ್ರಾ ಕಂಪನಿಯು ತನ್ನ ಹೊಸ ಥಾರ್ ಡ್ಯಾಶ್‍‍ಬೋರ್ಡ್‍ ಅನ್ನು ಮರೆಮಾಡಿ ಸ್ಪಾಟ್ ಟೆಸ್ಟ್ ಮಾಡುತ್ತಿತ್ತು. ಈ ಚಿತ್ರಗಳಲ್ಲಿ ಕಾಣುವಂತೆ ಡ್ಯಾಶ್‍‍ಬೋರ್ಡ್ ಹೊಸ ವಿನ್ಯಾಸವನ್ನು ಹೊಂದಿದೆ.

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಹೊಸ ಥಾರ್‍‍ನಲ್ಲಿರುವ ಹಲವಾರು ಬಿಡಿಭಾಗಗಳನ್ನು ಟಿಯುವಿ 300ನಿಂದ ಪಡೆಯಲಾಗಿದೆ. ಟಾಪ್ ಎಂಡ್ ಮಾದರಿಯ ಥಾರ್‍‍ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕಂಸೋಲ್‍ ಮೇಲೆ ಡಿಜಿಟಲ್ ಎಂಐ‍‍‍ಡಿಗಳಿರಲಿವೆ.

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಈ ಮೊದಲು ಬಹಿರಂಗಗೊಂಡಿದ್ದ ಚಿತ್ರಗಳಲ್ಲಿ 2020ರ ಮಹೀಂದ್ರಾ ಥಾರ್‍‍ನ ಮುಂಭಾಗದ ಸೀಟ್‍‍ನ ಸೈಡಿನಲ್ಲಿ ಬೊಲ್‍‍ಸ್ಟರಿಂಗ್ ಕಾಣಬಹುದಿತ್ತು. ಇದರ ಜೊತೆಗೆ ಮುಂದಕ್ಕೆ ಮುಖ ಮಾಡಿರುವ ಹಿಂಬದಿಯ ಸೀಟುಗಳನ್ನು ಸಹ ಕಾಣಬಹುದಿತ್ತು.

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಹೊಸ ಮಹೀಂದ್ರಾ ಥಾರ್‍‍ನ ಎಕ್ಸ್ ಟಿರಿಯರ್‍‍ನಲ್ಲಿ ಹೊಸ ವಿನ್ಯಾಸದ ಬಾನೆಟ್, ಫೆಂಡರ್, ಗ್ರಿಲ್ ಹಾಗೂ ಹೆಚ್ಚು ಅಗಲವಿರುವ ಬಂಪರ್‍‍ಗಳನ್ನು ಕಾಣಬಹುದು. ಮೇಲ್ಭಾಗದಲ್ಲಿರುವ ಟಾರ್ಪ್‍‍ಪಾಲಿನ್ ರೂಫ್‍‍ನಿಂದಾಗಿ ಹೆಚ್ಚು ಬೆಳಕನ್ನು ಪಡೆಯಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಹೊಸ ಥಾರ್ ಎಲ್‍ಇ‍‍ಡಿ ಟೇಲ್‍‍ಲೈಟ್ ಹಾಗೂ ಫಾಗ್‍‍ಲೈಟ್‍‍ಗಳನ್ನು ಹೊಂದುವ ಸಾಧ್ಯತೆಗಳಿವೆ. ಈ ತಿಂಗಳಿನಿಂದ ಬಿ‍ಎನ್‍‍ವಿ‍ಎಸ್‍ಎ‍‍ಪಿ ಕ್ರಾಶ್ ಟೆಸ್ಟ್ ನಿಯಮಗಳು ಜಾರಿಗೆ ಬಂದಿದ್ದು, ಹೊಸ ತಲೆಮಾರಿನ ಥಾರ್ ಕ್ರಾಶ್ ಟೆಸ್ಟ್ ಗಳಿಗೆ ಅನುಗುಣವಾಗಿ ತಯಾರಾಗಿರುವ ಸಾಧ್ಯತೆಗಳಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಇದರ ಜೊತೆಗೆ ಈ ಆಫ್ ರೋಡರ್‍‍ನಲ್ಲಿ ಏರ್‍‍ಬ್ಯಾಗ್, ಎಬಿ‍ಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗೂ ಚಾಲಕನ ಪಕ್ಕದಲ್ಲಿ ಕುಳಿತು ಪ್ರಯಾಣಿಸುವವರಿಗಾಗಿ ಸೀಟ್ ಬೆಲ್ಟ್ ರಿಮ್ಯಾಂಡರ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಮಹೀಂದ್ರಾ ಕಂಪನಿಯು ಹಳೆಯ 2.2 ಲೀಟರಿನ ಡೀಸೆಲ್ ಎಂಜಿನ್ ಬದಲಿಗೆ ಹೊಸ 2.0 ಲೀಟರಿನ ಬಿ‍ಎಸ್ 6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್ ಅನ್ನು ಹೊಸ ಥಾರ್‍‍ನಲ್ಲಿ ಅಳವಡಿಸಲಿದೆ. ಈ ಎಂಜಿನ್ ಅನ್ನು ಹೊಸ ತಲೆಮಾರಿನ ಎಕ್ಸ್ ಯುವಿ 500 ಸೇರಿದಂತೆ ಹಲವು ಮಹೀಂದ್ರಾ ಕಂಪನಿಯ ಕಾರುಗಳಲ್ಲಿ ಅಳವಡಿಸಲಾಗಿದೆ.

ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಮಹೀಂದ್ರಾ ಥಾರ್‍‍ನ ಗೇರ್ ಲಿವರ್

ಈ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಹೊಸ ಥಾರ್ ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಫೋಸ್ ಗೂರ್ಖಾ ವಾಹನಕ್ಕೆ ಪೈಪೋಟಿ ನೀಡಲಿದೆ.

Most Read Articles

Kannada
English summary
2020 Mahindra Thar gear lever spied - Read in Kannada
Story first published: Monday, October 14, 2019, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X