ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ತನ್ನ ಹೊಸ ಎಕ್ಸ್‌ಯುವಿ 500 ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಇದರಲ್ಲಿ ಬಿಎಸ್-6 ಎಂಜಿನ್ ಎಂಜಿನ್ ಅನ್ನು ಅಳವಡಿಸಿ ಟೆಸ್ಟ್ ನಡೆಸಲಾಗಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500 ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರವನ್ನು ಲೆಮನ್ ಗ್ರೀನ್ ಸ್ಟೋಡಿಯೋಸ್ ಬಹಿರಂಗಪಡೆಸಿದೆ. ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ಇಂಟಿರಿಯರ್ ಮತ್ತು ಹೊರಗಿನಲ್ಲಿ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸ್ಪೈ ಚಿತ್ರದಿಂದ ಬಹಿರಂಗವಾಗಿದೆ. ಮಹೀಂದ್ರಾ ಎಕ್ಸ್‌ಯುವಿ 500 ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರದಲ್ಲಿ ಆರು ವರ್‍‍‍ಟಿ‍ಕಲ್ ಸ್ಲ್ಯಾಟ್‍‍ಗಳನ್ನು ಒಳಗೊಂಡಿರುವ ಹೊಸ ಗ್ರಿಲ್ ಅನ್ನು ಬಹಿರಂಗಪಡಿಸಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಸ್ಪೈ ಚಿತ್ರದಲ್ಲಿ ಅಪೂರ್ಣವಾದ ಹೆಡ್‍‍‍ಲೈ‍ಟ್ ಅಳವಡಿಸಿರುವುದು ಬಹಿರಂಗಪಡಿಸಿದೆ. ಬಿಡುಗಡೆ ಮಾಡಲಿರುವ ಎಸ್‍‍ಯುವಿಯಲ್ಲಿ ವಿಭಿನ್ನ ಶೈಲಿಯಲ್ಲಿ ಹೆಡ್‍ಲೈಟ್ ಹೊಂದಿರಲಿದೆ. ಸ್ಪೈ ಚಿತ್ರದಲ್ಲಿ ಡೋರ್‍‍‍ಗಳ ಹ್ಯಾಂಡಲ್‍‍ಗಳು ಐಷಾರಾಮಿ ಕಾರುಗಳಲ್ಲಿ ಕಂಡುಬರುವ ಮಾದರಿಯಲ್ಲಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಇಂಟಿರಿಯರ್‍‍‍ನಲ್ಲಿ ಹಲವಾರು ಉನ್ನತ ಮಟ್ಟದ ನೂತನ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಅಮೇರಿಕಾದ ಸಾಂಗ್‍‍ಯಾಂಗ್ ಕೊರಂಡೊದಿಂದ ಹಲವಾರು ಫೀಚರ್ಸ್‍‍ಗಳನ್ನು ಎರವಲು ಪಡೆಯಲಾಗಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಮುಂಬರುವ 2020ರ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಬ್ಲೂಟೂತ್ ಆಡಿಯೊ ಕಂಟ್ರೋಲ್‍‍ಗಳನ್ನು ಸಂಯೋಜಿಸಿರುವ ಎಲ್ಲಾ ಹೊಸ ಫ್ಲಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಹೊಸ ಎಸ್‍‍ಯುವಿಯಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಡಿಜಿ‍ಟಲ್ ಎಂಐಡಿ ಮತ್ತು ದೊಡ್ಡ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಹಾಗೆಯೇ 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರೇರ್ ಎಸಿ ವೆಂಟ್ಸ್, ಲೆದರ್ ಸೀಟುಗಳು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೇನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಪ್ರಸ್ತುತ ಎಕ್ಸ್‌ಯುವಿ 500, 2.2 ಲೀಟರ್ ಎಮ್ಹಾಕ್ ಟರ್ಬೊ ಜಾರ್ಜ್ಡ್ ಪೆಟ್ರೋಲ್ ಡೀಸೆಲ್ ಎಂಜಿನ್‍ ಅನ್ನು ಹೊಂದಿದೆ. ಡೀಸೆಲ್ ಎಂಜಿನ್ 155 ಬಿಹೆಚ್‍‍ಪಿ ಪವರ್ ಮತ್ತು 360 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ 140 ಬಿಹೆಚ್‍‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

2020 ಮಹೀಂದ್ರಾ 500 ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಹೊಸ 2.0 ಲೀಟರ್ ಡೀಸೆಲ್ ಎಂಜಿನ್ 180 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಎಕ್ಸ್‌ಯುವಿ 500

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಕ್ಸ್‌ಯುವಿ 500 ಹೋಲಿಸಿದರೆ ಹೊಸ ಬಿಎಸ್-6 ಮಾದರಿಯು ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ 500 ಬಿಡುಗಡೆಯಾದ ಬಳಿಕ ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಮತ್ತು ಕಿಯಾ ಸೆಲ್ಟೋಸ್ ಎಸ್‍‍ಯುವಿಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
Spy Pics: New Mahindra XUV500 Spotted Testing; Features Third Row Seats & BS-VI Compliant Engine - Read in Kannada
Story first published: Tuesday, December 3, 2019, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X