ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

2020ರ ಏಪ್ರಿಲ್‌ನಿಂದ ಬಿಎಸ್-6 ನಿಯಮವು ಕಡ್ಡಾಯವಾಗುತ್ತಿರುವ ಹಿನ್ನಲೆಯಲ್ಲಿ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಾಧ್ಯವಷ್ಟು ಕಡಿತಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಶೀಘ್ರದಲ್ಲೇ ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ವಿಟಾರಾ ಬ್ರೆಝಾ ಆವೃತ್ತಿಯಲ್ಲಿ ಹೊಸ ಡೀಸೆಲ್ ಜೊತೆಗೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಜೋಡಣೆ ಮಾಡಿ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಬಿಎಸ್-6 ನಿಯಮ ಪಾಲನೆ ಸಾಧ್ಯವಿಲ್ಲದ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಕೈಬಿಡುತ್ತಿರುವ ಮಾರುತಿ ಸುಜುಕಿಯು ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಆವೃತ್ತಿಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ತನ್ನ ಜನಪ್ರಿಯ ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಆವೃತ್ತಿಯ ಎಂಜಿನ್ ಆಯ್ಕೆಯಲ್ಲೂ ಕೂಡಾ ಇದೀಗ ಮಹತ್ವದ ಬದಲಾವಣೆಗಾಗಿ ಯೋಜನೆ ರೂಪಿಸಿದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಬಿಎಸ್-6 ನಿಯಮವನ್ನು ಪಾಲನೆ ಮಾಡಲು ಸಾಧ್ಯವಿರದ 1.3-ಲೀಟರ್ ಡೀಸೆಲ್ ಎಂಜಿನ್‌ಗಳಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದು, ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಈ ಹಿನ್ನಲೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಈಗಿನಿಂದಲೇ ಕಡಿತಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಹಂತವಾಗಿ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಭಾರೀ ಬದಲಾವಣೆ ತರುತ್ತಿದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಪೆಟ್ರೋಲ್ ಮಾದರಿಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವ ಮಾರುತಿ ಸುಜುಕಿಯು 2020ರ ಏಪ್ರಿಲ್ 1ರಿಂದಲೇ ಪೂರ್ಣ ಪ್ರಮಾಣದಲ್ಲಿ ಸಣ್ಣ ಗಾತ್ರದ ಡೀಸೆಲ್ ಕಾರುಗಳ ಮಾರಾಟವನ್ನು ಬಂದ್ ಮಾಡಲಿದ್ದು, ಬಿಎಸ್-6 ನಿಯಮವನ್ನು ಪಾಲಿಸಲು ಸಾಧ್ಯವಾಗದ ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಡೀಸೆಲ್ ಎಂಜಿನ್ ಮಾದರಿಯು ಮಾರುಕಟ್ಟೆಯಿಂದ ನಿರ್ಗಮಿಸುವ ಅನಿವಾರ್ಯತೆ ಎದುರಾಗಿದೆ.

ಒಂದು ವೇಳೆ ಬಿಎಸ್-6 ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಉನ್ನತೀಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಹೀಗಾಗಿ ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸಲು ನಿರ್ಧರಿಸಲಾಗಿದ್ದು, ಎಂಟ್ರಿ ಲೆವೆಲ್ ಕಾರುಗಳಲ್ಲಿ 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಗಳಲ್ಲಿ ಮಾತ್ರ 1.5-ಲೀಟರ್, 1.6-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲಿದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಮಾಹಿತಿಗಳ ಪ್ರಕಾರ, ಬ್ರೆಝಾ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ ಮಾತ್ರವೇ 1.5-ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದರೆ ಎಸ್-ಕ್ರಾಸ್ ಕಾರಿನಲ್ಲಿ ಆರಂಭಿಕವಾಗಿಯೇ 1.5-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.

MOST READ: ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15 ಪೆಟ್ರೊಲ್ ಎಂಜಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಪೆಟ್ರೋಲ್ ಎಂಜಿನ್ ಅನ್ನು ಮೊದಲ ಬಾರಿಗೆ ಸಿಯಾಜ್ ಸೆಡಾನ್‍ನಲ್ಲಿ ನಂತರ ಎಕ್ಸ್ಎಲ್6 ಕಾರಿನಲ್ಲಿ ಅಳವಡಿಸಲಾಗಿತ್ತು.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಇದೀಗ ಇದೇ ಎಂಜಿನ್ ಮಾದರಿಯನ್ನೇ ವಿಟಾರಾ ಬ್ರಿಝಾ, ಎಸ್ ಕ್ರಾಸ್ ಸೇರಿದಂತೆ ಇತರೆ ಕೆಲವು ಕಾರು ಮಾದರಿಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಮಾದರಿಯಷ್ಟೇ ಮೈಲೇಜ್ ಮತ್ತು ಪರ್ಫಾಮೆನ್ಸ್ ಒದಗಿಸಲಿದೆ.

MOST READ: ನಮ್ಮ ಬೆಂಗಳೂರಿನಲ್ಲಿ K-1000 ರ‍್ಯಾಲಿ- ಗೌರವ್ ಗಿಲ್ ಔಟ್, ಚೇತನ್ ಶಿವರಾಮ್ ಶೈನ್..!

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಹೊಚ್ಚ ಹೊಸ 1.5 ಲೀಟರ್ ಕೆ15 ಪೆಟ್ರೋಲ್ ಎಂಜಿನ್ ಮಾದರಿಯು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿ ಹೊಂದಿದ್ದು, ಉತ್ತಮ ಮೈಲೇಜ್‌ನೊಂದಿಗೆ 105-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯು ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಮಾದರಿಗಳಲ್ಲಿ ಕೇವಲ 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡಲಾಗುತ್ತಿದ್ದು, 82‍-ಬಿಎಚ್‍‍ಪಿ ಮತ್ತು 200-ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದೆ.

ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ ಬ್ರೆಝಾ ಬಿಎಸ್-6 ಪೆಟ್ರೋಲ್ ವರ್ಷನ್

ಆದರೆ ಬಿಎಸ್-6 ನಿಯಮದ ಪ್ರಕಾರ ಈ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಸಾಕಷ್ಟು ಸುಧಾರಣೆಯಾಗಬೇಕಿದ್ದು, ಒಂದು ವೇಳೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಿಸಿದರೂ ಸಹ ಬೆಲೆ ಹೆಚ್ಚಳವಾಗಲಿದೆ. ಇದರಿಂದ ಹೊಸ ಪೆಟ್ರೋಲ್ ಎಂಜಿನ್ ಆಯ್ಕೆಯತ್ತ ಮುಖ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಕೆಲವೇ ಆಯ್ದ ಟಾಪ್ ಎಂಡ್ ಕಾರುಗಳಲ್ಲಿ ಮಾತ್ರವೇ ಬಿಎಸ್-6 ಪ್ರೇರಣೆಯ 1.5-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ.

Source: Rushlane

Most Read Articles

Kannada
English summary
2020 Maruti Brezza petrol BS6 spied again. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X