ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ರಾಂಗ್ ಸೈಡಿನಲ್ಲಿ ಚಾಲನೆ ಮಾಡುವುದು ಭಾರತದಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಈ ಕಾನೂನು ಉಲ್ಲಂಘನೆ ಎಷ್ಟು ಜನಪ್ರಿಯವಾಗಿದೆಯೆಂದರೆ ಹೈವೇಗಳಲ್ಲಿಯೂ ಸಹ ಜನರು ರಾಂಗ್ ಸೈಡಿನಲ್ಲಿ ಡ್ರೈವಿಂಗ್ ಮಾಡುವುದನ್ನು ಕಾಣಬಹುದು. ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುವುದನ್ನು ಕಾನೂನು ನಿಷೇಧಿಸಿದೆ. ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುವವರನ್ನು ಹಿಡಿಯುವ ಪೊಲೀಸರು ಸಣ್ಣ ಮೊತ್ತದ ದಂಡವನ್ನು ವಿಧಿಸಿ ಅಥವಾ ಲಂಚ ಪಡೆದು ಬಿಡುತ್ತಾರೆ.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ಇದೇ ಮೊದಲ ಬಾರಿಗೆ ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸಿದವರನ್ನು ಜೈಲಿಗೆ ಕಳುಹಿಸಿರುವ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿ ಕಾನೂನು ಉಲ್ಲಂಘಿಸುವವರಿಗೆ ಭಯ ಹುಟ್ಟಿಸಿದೆ. ಹೈದರಾಬಾದ್‍‍ನಲ್ಲಿ ರಾಂಗ್ ಸೈಡಿನಲ್ಲಿ ಗಾಡಿ ಚಲಾಯಿಸಿಕೊಂಡು ಬರುತ್ತಿದ್ದ ಆರು ಜನರಿಗೆ, ಹೈದರಾಬಾದಿನ 14ನೇ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್ ಬುಧವಾರ ಎರಡು ದಿನಗಳ ಸೆರೆವಾಸ ವಿಧಿಸಿದೆ. ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸಿದ ಇವರನ್ನು ಬೋಯನ್‍‍ಪಲ್ಲಿ ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ಇದರ ಜೊತೆಗೆ ನ್ಯಾಯಾಲಯವು ತಪ್ಪಿತಸ್ಥರಿಗೆ ತಲಾ ರೂ.50ಗಳ ದಂಡ ವಿಧಿಸಿದೆ. ಈ ಬಗ್ಗೆ ಮಾತನಾಡಿರುವ ಹೈದರಾಬಾದ್ ನಗರ ಪೊಲೀಸ್ ಕಮೀಷನರ್ ಅಂಜನಿ ಕುಮಾರ್‍‍ರವರು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಏಕೆಂದರೆ ಅವುಗಳು ಹಲವಾರು ಸಾವುನೋವುಗಳಿಗೆ ಕಾರಣವಾಗುತ್ತಿವೆ ಎಂದು ತಿಳಿಸಿದರು. ರಾಂಗ್ ಸೈಡಿನಲ್ಲಿ ಡ್ರೈವಿಂಗ್ ಮಾಡಿದವರಿಗೆ ನಗರದಲ್ಲಿ ಜೈಲು ಶಿಕ್ಷೆ ವಿಧಿಸುತ್ತಿರುವುದು ಇದೇ ಮೊದಲು.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ನಗರದಲ್ಲಿ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತಿರುವ ರಾಂಗ್ ಸೈಡ್ ಡ್ರೈವಿಂಗ್‍‍‍ಗೆ ಕಡಿವಾಣ ಹಾಕಲು ಪೊಲೀಸರು, ರಾಂಗ್ ಸೈಡ್ ಡ್ರೈವಿಂಗ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರೂ ಸಹ ಸಂಚಾರ ಪೊಲೀಸರಿಗೆ ಇಂತಹ ಉಲ್ಲಂಘನೆಗಳನ್ನು ತಡೆಯಲು ಸಹಾಯ ಮಾಡುತ್ತಿದ್ದಾರೆ ಎಂದು ಅಂಜನಿ ಕುಮಾರ್‍‍ರವರು ತಿಳಿಸಿದರು. ಈ ಬಗ್ಗೆ ಮಾತನಾಡಿದ ಉತ್ತರ ವಲಯ ಡಿಸಿಪಿರವರು, ದಟ್ಟಣೆಯನ್ನು ತಪ್ಪಿಸಲು ಜನರು ಎಲ್ಲಿ ರಾಂಗ್ ಸೈಡಿನಲ್ಲಿ ಹೋಗುತ್ತಿದ್ದಾರೆ ಎಂಬುದನ್ನು ನಾವು ಗುರುತಿಸಿದ್ದೇವೆ.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ಅಂತಹ ಕೃತ್ಯಗಳು ಅಪಘಾತಗಳಿಗೆ ಕಾರಣವಾಗುವುದರಿಂದ ನಾವು ಅಪರಾಧಿಗಳಿಗೆ ದಂಡ ವಿಧಿಸುತ್ತಿದ್ದೇವೆ ಎಂದು ತಿಳಿಸಿದರು. ರಾಂಗ್ ಸೈಡಿನಲ್ಲಿ ಡ್ರೈವ್ ಮಾಡಿದವರನ್ನು ಹೈದರಾಬಾದ್ ನಗರ ಪೊಲೀಸ್ ಕಾಯ್ದೆಯ ಸೆಕ್ಷನ್ 21/76 ರ ಅಡಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಆರು ಜನರನ್ನು ಜುಲೈ 17 ರಿಂದ 22 ರವರೆಗೆ ವಿವಿಧ ಪ್ರದೇಶಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಯಿತು.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಸಂಚಾರ ಉಲ್ಲಂಘಿನೆಯ ಪ್ರಕರಣಗಳು ಬೋಯನ್‌ಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದವು. ವರದಿಯ ಪ್ರಕಾರ, 2019ರ ಮೊದಲ ಆರು ತಿಂಗಳಲ್ಲಿ ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸಿದ 1,05,346ಕ್ಕೂ ಹೆಚ್ಚು ವ್ಯಕ್ತಿಗಳಿಗೆ ದಂಡ ವಿಧಿಸಲಾಗಿದೆ. ದಂಡ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ 115%ನಷ್ಟು ಹೆಚ್ಚಾಗಿದೆ. ಸಂಚಾರ ಪೊಲೀಸರು ಸಾಮಾನ್ಯವಾಗಿ ಮೋಟಾರು ವಾಹನಗಳ (ಎಂವಿ) ಕಾಯ್ದೆಯ ಸೆಕ್ಷನ್ 119 ಹಾಗೂ 177ರ ಪ್ರಕಾರ ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸಿದವರಿಗೆ ದಂಡ ವಿಧಿಸುತ್ತಾರೆ.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ಈ ಸೆಕ್ಷನ್‍‍ಗಳ ಪ್ರಕಾರ, ಕಾನೂನು ಉಲ್ಲಂಘಿಸುವವರು ರೂ.1,100ಗಳ ದಂಡ ತೆರಬೇಕಾಗುತ್ತದೆ. ಇದರ ಜೊತೆಗೆ ಪೊಲೀಸರು ಹೈದರಾಬಾದ್ ಪೊಲೀಸ್ ಕಾಯ್ದೆಯ ಸೆಕ್ಷನ್ 21/76 ಅನ್ನು ಬಳಸಿದ್ದಾರೆ. ಈ ಸೆಕ್ಷನ್ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಕಾರಣಕ್ಕಾಗಿ ಜನರನ್ನು ಜೈಲಿಗೆ ಹಾಕಲು ಅನುವು ಮಾಡಿಕೊಡುತ್ತದೆ. ಇಲ್ಲಿಯೂ ಸಹ ಇದೇ ಸೆಕ್ಷನ್ ಬಳಸಲಾಗಿದೆ. ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುವುದರಿಂದ, ವಾಹನ ಚಾಲನೆ ಮಾಡುತ್ತಿರುವವರಿಗೆ ಮಾತ್ರವಲ್ಲದೇ ಸಂಚಾರ ನಿಯಮಗಳನ್ನು ಪಾಲಿಸುತ್ತಿರುವವರಿಗೂ ಸಹ ತೊಂದರೆಯಾಗಲಿದೆ.

ರಾಂಗ್ ಸೈಡಿನಲ್ಲಿ ಚಾಲನೆ ಮಾಡಿದ್ದಕ್ಕೆ 6 ಮಂದಿಗೆ ಜೈಲು ಶಿಕ್ಷೆ

ಭಾರತದಲ್ಲಿನ ರಸ್ತೆ ಅಪಘಾತಗಳಿಗೆ ರಾಂಗ್ ಸೈಡಿನಲ್ಲಿ ವಾಹನಗಳನ್ನು ಚಲಾಯಿಸುತ್ತಿರುವುದು ಸಹ ಒಂದು ಪ್ರಮುಖ ಕಾರಣವಾಗಿದೆ. ಇದನ್ನು ತಡೆಗಟ್ಟಲು ಅನೇಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ, ಲೋಕಸಭೆ ಇತ್ತೀಚೆಗೆ ಮೋಟಾರು ವಾಹನಗಳ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದು, ಮೋಟಾರು ವಾಹನ ಕಾಯ್ದೆ 1988ರಲ್ಲಿದ್ದ ವಿವಿಧ ಕಾನೂನುಗಳು ಹಾಗೂ ದಂಡ ಪ್ರಮಾಣಗಳನ್ನು ಮಾರ್ಪಾಡು ಮಾಡಲಾಗಿದೆ.

ಕಠಿಣ ಕ್ರಮ ಹಾಗೂ ದಂಡವನ್ನು ವಿಧಿಸುವುದರ ಹೊರತಾಗಿ, ಕಾನೂನು ಉಲ್ಲಂಘಿಸುವವರಿಗೆ ಸಮುದಾಯ ಸೇವೆಯನ್ನು ಶಿಕ್ಷೆಯಾಗಿ ನಿರ್ವಹಿಸಲು ಅಥವಾ ಪರವಾನಗಿ ಕಳೆದುಕೊಂಡವರಿಗೆ ಚಾಲಕ ರಿಫ್ರೆಶ್ ತರಬೇತಿ ಕೋರ್ಸ್ ತೆಗೆದುಕೊಳ್ಳುವಂತೆ ಮಾಡಬಹುದಾಗಿದೆ. ಹೊಸ ಕಾಯ್ದೆ ಪ್ರಕಾರ ರಾಶ್ ಡ್ರೈವಿಂಗ್, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವ ಪ್ರಕರಣಗಳಿಗೆ ದಂಡವನ್ನು ರೂ.5,000ಗಳಿಗೆ ಏರಿಸಲಾಗಿದ್ದರೆ, ಕುಡಿದು ವಾಹನ ಚಲಾಯಿಸುವುದು ಹಾಗೂ ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ ರೂ.10,000 ದಂಡ ವಿಧಿಸಲಾಗುವುದು.

Source: New Indian Express

Most Read Articles

Kannada
English summary
Cops catch 6 for wrong side driving: Court JAILS them! - Read in kannada
Story first published: Friday, July 26, 2019, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X