Just In
Don't Miss!
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಹನ ಚಾಲಕರೇ ಇತ್ತ ಗಮನಿಸಿ - ಶೀಘ್ರದಲ್ಲೆ ಜಾರಿಯಾಗಲಿದೆ ಈ ನಿಯಮ
ಖಾಸಗಿ ಸೇವೆ, ಮೊಬೈಲ್ ಸಿಮ್ ಖರೀದಿಸಲು ಆಧಾರ್ನ ಜೋಡಣೆಯ ಅಗತ್ಯವಿಲ್ಲವೆಂದು ಕೆಲದಿನಗಳ ಹಿಂದಷ್ಟೆ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಲಾಗಿತ್ತು. ಆದರೆ ಇದೀಗ ಹಲವಾರು ದಿನಗಳಿಂದ ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಜೋಡಣೆ ಬಗ್ಗೆ ಇದ್ದ ಸಂಶಯದ ಬಗ್ಗೆ ಮತ್ತೊಂದು ಹೊಸ ವಿಚಾರ ಬೆಳಕಿಗೆ ಬಂದಿದೆ.

ನೂತನ ನಿಯಮದ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಕಾರ್ಡ್ ಖಡ್ಡಾಯವಾಗಿ ಜೋಡಣೆ ಮಾಡಲೇಬೇಕಾಗಿದ್ದು, ಪಂಜಾಬ್ನಲ್ಲಿ ನಡೆದ 106ನೇ ವಿಜ್ಞಾನ ಸಮಾವೇಶದಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ನೂತನ ನಿಯಮದ ಮಾಹಿತಿ ನೀಡಿದರು. ಸದ್ಯ ಸಂಸತ್ತಿನಲ್ಲಿ ಮಸೂದೆ ಅಂಗೀಕಾರಕ್ಕೆ ಬಾಕಿ ಇದೆ. ಶೀಘ್ರದಲ್ಲೇ ಬಿಲ್ ಪಾಸಾಗಲಿದೆ. ಬಳಿಕ ಲೈಸೆನ್ಸ್ ಹೊಂದಿದ ಎಲ್ಲರೂ ಆಧಾರ್ ಲಿಂಕ್ ಮಾಡಿಸುವುದು ಖಡ್ಡಾಯವಾಗಲಿದೆ ಎಂದಿದ್ದಾರೆ.

ಲೈಸೆನ್ಸ್ ಜೊತೆ ಆಧಾರ ಜೋಡಣೆಯಿಂದ ನಿಖರ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ ನಕಲಿ ಲೈಸೆನ್ಸ್ ಮಾಡಿಸಿಕೊಂಡ ಇತರ ಸೇವೆಗಳನ್ನ ಪಡೆಯುತ್ತಿರುವುದು ನಿಲ್ಲಲಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ, ದೂರು ಸೇರಿದಂತೆ ಎಲ್ಲಾ ಮಾಹಿತಿಗಳು ಸುಲಭವಾಗಿ ಪೊಲೀಸರ ಕೈಸೇರಲಿದೆ ಎಂದಿದ್ದಾರೆ.

ದೇಶದಲ್ಲಿ ಪ್ರತಿದಿನ ಸಾವಿರಾರು ಡ್ರೈವಿಂಗ್ ಲೈನೆಸ್ಸ್ಗಳು ವಿತರಣೆ ಆಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ದುರ್ಬಳಕೆ ಕೂಡಾ ಆಗುತ್ತಿವೆ. ಈ ಹಿನ್ನೆಲೆ ಚಾಲನಾ ಪರವಾನಿಗೆಗಳ ವಿತರಣೆ ಮೇಲೆ ನಿಯಂತ್ರಣ ಹೊಂದುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಧಾರ್ ಲಿಂಕ್ ಕಡ್ಡಾಯ ಮಾಡುತ್ತಿದೆ.

ವರದಿಗಳ ಪ್ರಕಾರ ನಗರ ಪ್ರದೇಶಗಳಲ್ಲಿನ ಹಲವು ಬೈಕ್ ಸವಾರರು ಮತ್ತು ವಾಣಿಜ್ಯ ವಾಹನ ಸವಾರರು ಒಂದಕ್ಕಿಂತ ಹೆಚ್ಚು ಡ್ರೈವಿಂಗ್ ಲೈನೆಸ್ಸ್ಗಳನ್ನು ಹೊಂದುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಇದರಿಂದ ಸಂಚಾರಿ ನಿಯಮಗಳ ಉಲ್ಲಂಘನೆ ಕೂಡಾ ಹೆಚ್ಚುತ್ತಿದೆ ಎನ್ನಲಾಗಿದೆ.

ಒಂದು ಅಂದಾಜಿನ ಪ್ರಕಾರ, ಈವರೆಗೆ ದೇಶಾದ್ಯಂತ 18 ಕೋಟಿಗೂ ಅಧಿಕ ಡಿಎಲ್ಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಒಂದೇ ಹೆಸರಿನಲ್ಲಿ ಬಹು ಪರವಾನಗಿಗಳನ್ನು ಪಡೆದು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಮತ್ತು ಪೊಲೀಸ್ ಇಲಾಖೆಗೆ ವಂಚಿಸುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿದೆ.

ಇಷ್ಟೆ ಅಲ್ಲದೇ ಕಳೆದ 2 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ವಾಹನಗಳ ದತ್ತಾಂಶ ಶೇಖರಣೆ ಮತ್ತು ಸುರಕ್ಷೆಯ ಸಂಬಂಧ ಇದೀಗ ಮತ್ತೊಂದು ವಿನೂತನ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ದೇಶಾದ್ಯಂತ ಏಕರೂಪ ಡಿಎಲ್ ಮತ್ತು ಆರ್ಸಿ ವಿತರಣೆ ನಡೆಯಲಿದ್ದು, ಹೊಸ ಯೋಜನೆಯಿಂದ ಹತ್ತಾರು ಲಾಭಗಳಿವೆ ಎನ್ನಲಾಗುತ್ತಿದೆ.

ಹೊಸ ಯೋಜನೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್ಸಿ) ವಿತರಣೆಯು ಒಂದೇ ತೆರನಾಗಿರಲಿದ್ದು, ಬಣ್ಣ, ವಿನ್ಯಾಸ, ಗಾತ್ರ, ಭದ್ರತಾ ವೈಶಿಷ್ಟ್ಯ ಎಲ್ಲವೂ ಒಂದೇ ರೀತಿಯಾಗಿರುತ್ತದೆ.

2019ರಿಂದಲೇ ಹೊಸ ಯೋಜನೆ ಜಾರಿ..!
2019ರ ಜುಲೈನಿಂದ ಹೊಸ ಯೋಜನೆಯು ಜಾರಿಗೆ ಬರಲಿದ್ದು, ಜುಲೈ ನಂತರ ವಿತರಣೆ ಮಾಡಲಾಗುವ ಡಿಎಲ್ ಮತ್ತು ಆರ್ಸಿ ಪ್ರಮಾಣಪತ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ರೀತಿಯಾಗಿರುತ್ತದೆ.
MOST READ: ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಹೊಸ ಯೋಜನೆಯಿಂದ ಏನು ಲಾಭ?
ಏಕರೂಪದ ಡಿಎಲ್ ಮತ್ತು ಆರ್ಸಿ ಸೌಲಭ್ಯದಿಂದ ವಾಹನ ಸವಾರರಿಗೆ ಗರಿಷ್ಠ ಲಾಭಗಳಿದ್ದು, ಸ್ಮಾರ್ಟ್ ಕಾರ್ಡ್ ರೂಪದಲ್ಲಿರುವ ಬರಲಿರುವ ಹೊಸ ಡಿಎಲ್ ಮತ್ತು ಆರ್ಸಿಗಳಲ್ಲಿ ಮೈಕ್ರೋ ಚಿಪ್ಗಳನ್ನು ಅಳವಡಿಸಲಾಗಿರುತ್ತದೆ.

ಕಾರ್ಡ್ನಲ್ಲಿರುವ ಕ್ಯೂ ಆರ್ ಕೋಡ್ಗಳು ವಾಹನ ಮಾಲೀಕರ ಸಂಪೂರ್ಣ ಡೇಟಾ ಹೊಂದಿರಲಿದ್ದು, ಎನ್ಎಫ್ಸಿ (ನಿಯರ್ ಫೀಲ್ಡ್ ಕಮ್ಯುನಿಕೇಶನ್) ವೈಶಿಷ್ಟ್ಯತೆ ಮೂಲಕ ಮೆಟ್ರೋ ಮತ್ತು ಎಟಿಎಂ ಕಾರ್ಡ್ಗಳ ರೀತಿಯಲ್ಲಿ ಬಳಸಬಹುದಾಗಿದೆ.

ಇದರಿಂದ ಟ್ರಾಫಿಕ್ ಪೊಲೀಸರು ವಿಶೇಷ ಸಾಧನಗಳ ಮೂಲಕ (ಹ್ಯಾಂಡ್ಹೆಲ್ಡ್ ಡಿವೈಸಸ್) ಈ ಕಾರ್ಡ್ಗಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದಾಗಿದ್ದು, ನಕಲಿ ಡಿಎಲ್ ಮತ್ತು ಆರ್ಸಿ ಹಾವಳಿಗೂ ಇದರಿಂದ ಬ್ರೇಕ್ ಹಾಕಬಹುದಾಗಿದೆ.

ಇದಲ್ಲದೇ ಹೊಸ ಯೋಜನೆಯಿಂದ ವಾಹನಗಳ ಡೇಟಾ ಸಂಗ್ರಹಣೆಗೂ ಸಹಕಾರಿಯಾಗಲಿದ್ದು, ವಾಹನ ಮಾದರಿ, ಎಂಜಿನ್ ವೈಶಿಷ್ಟ್ಯತೆ, ಮಾಲೀಕರ ವಿವರಣೆ ಮತ್ತು ಕಾರು ಬಳಕೆಯ ವಿಧಾನ(ವ್ಯಯಕ್ತಿಕ ಮತ್ತು ವಾಣಿಜ್ಯ) ಸೇರಿದಂತೆ ಹಲವು ಮಾಹಿತಿಗಳು ಒಂದೇ ಸೂರಿನಡಿ ಲಭ್ಯವಾಗುತ್ತೆ.

ಸವಾರರಿಗೆ ತಪ್ಪಲಿದೆ ಕಿರಿಕಿರಿ..!
ಸದ್ಯ ಟ್ರಾಫಿಕ್ ಪೊಲೀಸರು ನಿಮ್ಮ ವಾಹನಗಳನ್ನು ತಪಾಸಣೆ ಮಾಡುವಾಗ ವಾಹನದ ಪ್ರತಿಯೊಂದು ದಾಖಲೆಗಳನ್ನು ಕೇಳುವುದು ಕಾಮನ್. ಆದ್ರೆ ಏಕರೂಪದ ಡಿಎಲ್ ಮತ್ತು ಆರ್ಸಿ ಬಂದ ಮೇಲೆ ವಾಹನಗಳ ದಾಖಲೆಯನ್ನು ಇಟ್ಟುಕೊಂಡು ತಿರುಗುವುದು ತಪ್ಪಲಿದೆ.

ಹೊಸ ಕಾರ್ಡ್ಗಳ ಬೆಲೆ
ಕೇಂದ್ರ ಸಾರಿಗೆ ಜಾರಿಗೆ ತರಲು ಹೊರಟಿರುವ ಏಕರೂಪದ ಡಿಎಲ್ ಮತ್ತು ಆರ್ಸಿ ಸೌಲಭ್ಯವನ್ನು ಪಡೆಯಲು ರೂ.15ರಿಂದ ರೂ.20 ಇರಬಹುದೆಂದು ಹೇಳಲಾಗಿದ್ದು, ಸಾರಿಗೆ ಇಲಾಖೆಯಲ್ಲಿ ಅಷ್ಟೇ ಅಲ್ಲದೇ ಇತರೆ ಸರ್ಕಾರಿ ಕಚೇರಿಗಳಲ್ಲೂ ಈ ಕಾರ್ಡ್ ದೊರೆಯಲಿದೆಯಂತೆ.

ಜೊತೆಗೆ ನೂತನ ಡಿಎಲ್ನಲ್ಲಿ ಅಂಗಾಂಗ ದಾನ ಕುರಿತಾದ ಚಾಲಕನ ಘೋಷಣೆ ಮತ್ತು ದೈಹಿಕ ವಿಕಲಚೇತನರಿಗಾಗಿ ವಿಶೇಷ ಚಾಲಾನಾ ನಿಯಮಗಳು ಸಹ ಇದರಲ್ಲಿದ್ದು, ದೇಶದ ಪ್ರಮುಖ ಕಡೆಗಳಲ್ಲಿ ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿದೆಯಂತೆ.

ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮಾಹಿತಿಯೆಂತೆ, ದೇಶಾದ್ಯಂತ ಪ್ರತಿದಿನ ಸುಮಾರು 32,000 ಡಿಎಲ್ಗಳ ವಿತರಣೆ/ ನವೀಕರಣ ನಡೆಯುತ್ತಿದ್ದು, 43,000 ವಾಹನಗಳ ನೋಂದಣಿ ನಡೆಯುತ್ತದೆ. ಇನ್ನು ಮುಂದೆ ನವೀಕರಣಗೊಳ್ಳುವ ಎಲ್ಲ ಡಿಎಲ್ ಮತ್ತು ಆರ್ಸಿಗಳನ್ನು ಹೊಸ ನಿಯಮಕ್ಕೆ ಬದಲಾಯಿಸಲಾಗುತ್ತದೆ ಎಂದಿದ್ದಾರೆ.
MOST READ: ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಒಟ್ಟಿನಲ್ಲಿ ಎನ್ಎಫ್ಸಿ ವೈಶಿಷ್ಟ್ಯದ ಮೂಲಕ ಡಿಎಲ್ ಅಥವಾ ಆರ್ಸಿಯನ್ನು ಪೊಲೀಸರ ಬಳಿಯಿರುವ ಸಾಧನಕ್ಕೆ ಸ್ಪರ್ಶಿಸಿದ ಕೂಡಲೇ ವಾಹನದ ಪ್ರತಿಯೊಂದು ವಿವರಣೆ ದೊರೆಯುವಂತೆ ಹೊಸ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮುಂದಿನ ಜುಲೈ ಹೊತ್ತಿಗೆ ಪ್ರತಿ ವಾಹನ ಮಾಲೀಕರ ಬಳಿಯೂ ಹೊಸ ಡಿಎಲ್ ಮತ್ತು ಆರ್ಸಿ ಕಡ್ಡಾಯವಾಗಿರಬೇಕಿದೆ.