Just In
Don't Miss!
- News
ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪಾರ್ಕಿಂಗ್ ಮಾಡಲಾದ ಕಾರುಗಳ ಮೇಲೆ ಪುಂಡರಿಂದ ಆಸಿಡ್ ದಾಳಿ..!
ಮನೆ ಮುಂದೆ ಪಾರ್ಕಿಂಗ್ ಮಾಡಲಾದ ಕಾರುಗಳಿಂದ ಉಪಕರಣಗಳನ್ನು ಕದಿಯುತ್ತಿರುವ ಪ್ರಕರಣಗಳನ್ನು ನಾವೀಗಾಗಲೇ ಕಂಡಿದ್ದೇವೆ. ಆದ್ರೆ ಈ ಬಾರಿ ಸ್ಥಳೀಯ ಪುಂಡರು ಮಾಡಿದ ಕಾರ್ಯವು ನಿಮ್ಮೆಲ್ಲರಿಗು ಅಚ್ಚರಿಯನ್ನುಂಟು ಮಾಡುತ್ತೆ. ಭಾರತದಲ್ಲಿ ವಿಧ್ವಂಸಕತೆ ಬಹಳ ಸಾಮಾನ್ಯವಾಗಿದ್ದು, ರೋಡ್ ಸೈಗ್ನ್ ಬೋರ್ಡ್ಗಳು, ರಸ್ತೆಗಳಲ್ಲಿನ ಸೌರ ಫಲಕಗಳು ಮತ್ತು ದೀಪಗಳು ವಿವಿಧ ಕಾರಣಗಳಿಂದ ವಿಧ್ವಂಸಕತೆಗೆ ಒಳಗಾಗುತ್ತಿವೆ. ಅದಾಗ್ಯೂ ಇಂತಹ ವಿಷಯಗಳನ್ನು ನಿಲ್ಲಿಸಲು ಯಾವುದೇ ಪ್ರತ್ಯೇಕವಾದ ಕಾಯಿದೆಯಿಲ್ಲ.

ಭಾರತದಲ್ಲಿ ಕಾರು ವಿಧ್ವಂಸಕತೆಯ ಹಲವು ಪ್ರಕರಣಗಳನ್ನು ನೀವಿಗಾಗಲೇ ಕಂಡಿದ್ದೀರಿ ಮತ್ತು ಅನುಭವಿಸಿದ್ದೀರಿ. ಆದ್ರೆ ದೆಹಲಿಯಲ್ಲಿನ ವಸಂತ್ ಕುಂಜ್ ಏರಿಯಾದಲ್ಲಿ ರಸ್ತೆಯ ಮೇಲೆ ಪಾರ್ಕಿಂಗ್ ಮಾಡಲಾದ ಕಾರುಗಳ ಮೇಲೆ ಅಲ್ಲಿನ ಪುಂಡರು ಆಸಿಡ್ನಿಂದ ದಾಳಿ ಮಾಡಿದ್ದಾರೆ. ದಾಳಿಗೊಳಗಾದ ಎರಡು ಕಾರುಗಳು ಐಷಾರಾಮಿ ಕಾರುಗಳೇ ಆಗಿದ್ದು, ಇದಕ್ಕೆ ಸರಿಯಾದ ಕಾರಣ ಏನೆಂದು ಈವರೆಗು ತಿಳಿದು ಬಂದಿಲ್ಲ.

ಇನ್ನು ಹೇಳಬೇಕೆಂದರೆ ದೆಹಲಿಯಲ್ಲಿ ವಾಹನಗಳ ಸಂಖ್ಯೆಯು ಹೆಚ್ಚುತ್ತಿದ್ದು, ಅಲ್ಲಿನ ಜನರು ಮನೆಯಲ್ಲಿ ಪಾರ್ಕ್ ಮಾಡಲು ಜಾಗವಿಲ್ಲದೆಯೆ, ಮನೆ ಮುಂದೆ ಇರುವ ರಸ್ತೆಗಳ ಮೇಲೆ ಪಾರ್ಕಿಂಗ್ ಮಾಡುತ್ತಿದ್ದಾರೆ. ಬಹುಶಃ ಓಡಾಡಲು ಜಾಗವಿಲ್ಲದ ಕಾರಣ ಅಲ್ಲಿನ ಪುಂಡರು ಈ ಕೃತ್ಯವನ್ನು ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಆಸಿಡ್ ದಾಳಿಗೊಳಗಾದ ವಾಹನಗಳನ್ನು ನೀವು ಈ ಚಿತ್ರಗಳಲ್ಲಿ ಗಮನಿಸಬಹುದಾಗಿದ್ದು, ಇದರಲ್ಲಿ ಐಷಾರಾಮಿ ಮಿನಿ ಕೂಪರ್ ಎಸ್ ಕಾರು, ಹ್ಯುಂಡೈ ಕ್ರೆಟಾ ಹಾಗು ಟಾಟಾ ಟಿಯಾಗೊ ಕಾರುಗಳು ಕಂಡು ಬರುತ್ತವೆ. ಟೀಂ ಬಿಹೆಚ್ಪಿ ವರದಿಯ ಪ್ರಕಾರ ಆಸಿಡ್ ದಾಳಿ ನಡೆದ ಆಸುಪಾಸಿನಲ್ಲಿ ಯಾವುದೇ ಸಿಸಿಟಿವಿ ಇಲ್ಲವಾದ ಕಾರಣ, ಕಾರುಗಳ ಮೇಲೆ ಆಸಿಡ್ ಹಾಕಿದವರು ಯಾರೆಂದು ತಿಳಿದು ಬಂದಿಲ್ಲ.

ಆಸಿಡ್ ಅಥವಾ ಪ್ರತ್ಯೇಕವಾದ ರೀತಿಯ ರಾಸಾಯನಿಕದಿಂದ ದಾಳಿ ಮಾಡಲಾದ ಕಾರುಗಳ ಬಣ್ಣವು ದೇಹದಿಂದ ಸುರಿಯುವುದನ್ನು ನೀವು ಗಮನಿಸಬಹಿದಾಗಿದೆ. ದಾಳಿಕೋರರು ಪಾರ್ಕಿಂಗ್ ಮಾಡಲಾದ ಕಾರುಗಳ ಮೇಲೆ ಯಾವುದೇ ಹಾನಿ ಮಾಡಲಿಲ್ಲವಾದರೂ ಆ ಕಾರುಗಳ ರೂಫ್ನ ಮೇಲೆ ಆಸಿಡ್ ಅನ್ನು ಹಾಕಿದ್ದಾರೆ.

ಬುದ್ದಿವಂತರಾದ ದಾಳಿಕೋರರು ಇತ್ತೀಚೆಗೆ ಬರುತ್ತಿರುವ ಬಹುತೇಕ ಕಾರುಗಳಲ್ಲಿ ಸೆನ್ಸಾರ್ಗಳು ಅಳವಡಿಸಿರುವ ಕಾರಣ ಕಾರುಗಳನ್ನು ಮುಟ್ಟದೆಯೆ ಅವುಗಳ ಮೇಲೆ ಆಸಿಡ್ ಅನ್ನು ಹಾಕಿದ್ದು, ಆಸಿಡ್ ದಾಳಿ ಮಾಡುವುದರಿಂದ ಸೆನ್ಸಾರ್ಗಳಿಗೆ ಯಾವುದೇ ಉದಾಹರಣೆ ಸಿಗುವುದಿಲ್ಲವೆಂಬ ಆಲೋಚನೆಯಿಂದ ಹೀಗೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ದಾಳಿಕೋರರು ಬಳಸಿದ ನಿಖರವಾದ ದ್ರವವು ಯಾವುದು ಎಂಬುದು ಇನ್ನು ತಿಳಿದಿಲ್ಲವಾದರೂ, ಆಮ್ಲದಿಂದ ಹೊರತುಪಡಿಸಿ, ಆಕ್ರಮಣಕಾರರು ಕಾರುಗಳ ಬಣ್ಣ ತೆಗೆಯುವ ದ್ರವೌಷಧಗಳನ್ನು ಅಥವಾ ಬ್ರೇಕ್ ಫ್ಲ್ಯುಯೆಡ್ ಅನ್ನು ಬಳಸಬಹುದಿತ್ತು. ಇವುಗಳೆರಡೂ ಸುಲಭವಾಗಿ ಮಾರುಕಟ್ಟೆಯಲ್ಲಿ ಮತ್ತು ಆನ್ಲೈನ್ನಲ್ಲಿ ಸುಲಭವಾಗಿ ದೊರೆಯುತ್ತವೆ.

ಟಾಟಾ ಟಿಯಾಗೊ, ಮಿನಿ ಕೂಪರ್ ಎಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳ ಮೇಲೆ ಆಸಿಡ್ ಬಿದ್ದ ಕಾರಣ ಕಾರುಗಳ ಪೆಯಿಂಟ್ ಮೇಲೆ ಹೆಚ್ಚು ಹಾನಿಯಾಗಿದ್ದು, ಬಣ್ಣವನ್ನು ಸಿಂಪಡಿಸಿರುವಂತೆ ಮಾಡಲಾಗಿದೆ. ಇದೀಗ ಆ ಕಾರುಗಳ ಮಾಲೀಕರಿಗೆ ಉಳಿದ ಏಕೈಕ ಉಪಾಯವೆಂದರೆ ಕಾರುಗಳಿಗೆ ಮತ್ತೆ ಹೊಸದಾಗಿ ಪೆಯಿಂಟ್ ಮಾಡಿಸುವುದು.
MOST READ: ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್- ಕರ್ನಾಟಕದಲ್ಲಿ ಕಾರುಗಳ ನೋಂದಣಿ ಕಷ್ಟ ಕಷ್ಟ..!

ನೀವು ಇಂತಹ ಹಾನಿಗಳಿಂದ ವಾಹನವನ್ನು ಉಳಿಸಬಹುದೇ?
ಹಾನಿಗಳಿಂದ ವಾಹನವನ್ನು ಉಳಿಸುವ ಏಕೈಕ ಮಾರ್ಗವೆಂದರೆ ಅವುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಟ್ಟುಕೊಳ್ಳುವುದು. ಸುರಕ್ಷಿತ ಸಂಕೀರ್ಣದಲ್ಲಿ ವಾಹನವನ್ನು ನಿಭಾಯಿಸುವುದು, ಆದ್ಯತೆಯಿಂದ ಆವೃತವಾದ ಪಾರ್ಕಿಂಗ್ ಒಳಗೆ ವಾಹನದ ಗರಿಷ್ಠ ಸುರಕ್ಷತೆಯನ್ನು ಖಾತರಿಪಡಿಸುತ್ತದೆ.

ಅದಾಗ್ಯೂ ದೆಹಲಿಯಂತಹ ಹೆಚ್ಚು ವಾಹನಗಳಿರುವ ನಗರಗಳಲ್ಲಿ ಒಂದು ಮನೆಗೆ ಹೆಚ್ಚೆಂದರೆ ಸುಮಾರು ಎರಡು ಕಾರುಗಳನ್ನು ಅವರು ಹೊಂದಿರುತ್ತಾರೆ. ಹೀಗಾಗಿ ಅವರಿಗೆ ಪಾರ್ಕಿಂಗ್ ಮಾಡುವ ಜಾಗವು ಇಲ್ಲದಿದ್ದಾಗ ಬೇರೆ ಉಪಾಯಗಳಿಲ್ಲದೆಯೆ ರಸ್ತೆಯಲ್ಲಿ ಹೀಗೆ ಪಾರ್ಕಿಂಗ್ ಮಾಡುತ್ತಾರೆ.

ಇನ್ನು ಇಂತಹ ದಾಳಿಗಳಾದರು ಸಹ ನಿಮ್ಮ ಕಾರಿನ ಬಣ್ಣವನ್ನು ಕಾಪಾಡಲು ಬೇರಾವ ಉಪಾಯಗಳು ಇಲ್ಲವಾದ ಕಾರಣ. ಇಂತಹ ಪ್ರವೃತ್ತಿಗಳಿಗೆ ಉಪಯಾಯವಾಗಿ ಸೆರಾಮಿಕ್ ಕೋಟಿಂಗ್ಗಳಂತಹ ಆಫ್ಟರ್ ಮಾರ್ಕೆಟ್ ಲಿಕ್ವಿಡ್ಗಳಿದ್ದರು ಸಹ ಅವುಗಳಿಂದ ನಿಮ್ಮ ಕಾರುಗಳನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿಕೊಳ್ಳಬಹುದು ಎಂದು ಖಚಿತ ಪಡಿಸಲು ಸಾಧ್ಯವಿಲ್ಲ.

ಅಪರಾಧಿಯನ್ನು ನೀವು ಗುರುತಿಸುವುದು ಹೇಗೆ.?
ಅಂತಹ ದೋಷಿಗಳನ್ನು ಗುರುತಿಸುವ ಏಕೈಕ ಮಾರ್ಗವೆಂದರೆ ಸಿಸಿಟಿವಿ ಕ್ಯಾಮೆರಾಗಳನ್ನು ಪಾರ್ಕಿಂಗ್ ಕೋಣೆಗಳ ಸುತ್ತ ವಿವಿಧ ಕೋನಗಳಲ್ಲಿ ಇಸ್ಟಾಲ್ ಮಾಡುವುದು. ಅಲ್ಲದೆ, ಉನ್ನತ ತಂತ್ರಜ್ಞಾನದ ಡ್ಯಾಶ್ಬೋರ್ಡ್ ಕ್ಯಾಮೆರಾಗಳು ಮಾರುಕಟ್ಟೆಗೆ ಲಭ್ಯವಿದ್ದು, ಅವುಗಳು ಚಲನೆಯ ಅರಿವಿನಿಂದಲೇ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ಮುಂಭಾಗದಲ್ಲಿ ಮತ್ತು ಹಿಂಭಾಗದ ವಿಂಡ್ಸ್ಕ್ರೀನ್ಗಳಲ್ಲಿ ಆರೋಹಿತವಾದ ಇಂತಹ ಡ್ಯಾಶ್ಬೋರ್ಡ್ ಕ್ಯಾಮೆರಾಗಳು ದೋಷಿಗಳನ್ನು ಗುರುತಿಸುವಲ್ಲಿ ಸಹಾಯಕವಾಗಬಹುದು.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಿಮೆ ಹಣ?
ವಿಧ್ವಂಸಕ ಕಾರ್ಯಗಳು ಹೆಚ್ಚಿನ ವಿಮಾ ಪಾಲಿಸಿಗಳ ಅಡಿಯಲ್ಲಿವೆ ಆದರೂ ಸಹ ಅದಕ್ಕೂ ಮುನ್ನ ನೀವು ಸ್ಪಷ್ಟತೆ ಮತ್ತು ವಿವರಗಳಿಗಾಗಿ ವಿಮಾ ನೀತಿಯನ್ನು ಪರಿಶೀಲಿಸಬೇಕು. ಹೇಗಾದರೂ, ವಾಹನದ ಮೇಲೆ ದಾಳಿ ವೇಳೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ನೋಂದಾಯಿಸಬೇಕು. ಇಂತಹ ವಿಪರೀತ ಪ್ರಕರಣಗಳಲ್ಲಿ ವಿಮಾ ಕಂಪನಿಗಳು ಎಫ್ಐಆರ್ ಅನ್ನು ಕೇಳುತ್ತವೆ. ಇಂತಹ ದಾಳಿಗಳು ದೆಹಲಿಯಲ್ಲಿ ನಡೆದಿರುವುದು ಮೊದಲ ಬಾರಿಯಲ್ಲ. ಈ ಹಿಂದೆ ಕೂಡಾ ಜನರು ತಮ್ಮ ನಿಲುಗಡೆ ವಾಹನಗಳಲ್ಲಿ ಇದೇ ದಾಳಿಗಳನ್ನು ವರದಿ ಮಾಡಿದ್ದಾರೆ.