ದಾಖಲೆಗಳಿಲ್ಲದೇ ಶೋಕಿ ಮಾಡಲು ಹೋದ ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ಭಾರೀ ದಂಡ..!

ಅಹಮದಾಬಾದ್ ಟ್ರಾಫಿಕ್ ಪೊಲೀಸರು ಪೋರ್ಷೆ 911 ಸೂಪರ್‌ಕಾರ್‌ಗೆ ರೂ. 9.8 ಲಕ್ಷ ದಂಡ ವಿಧಿಸಿದ್ದಾರೆ. ಪೋರ್ಷೆ 911 ಕಾರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಇಷ್ಟೊಂದು ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಅಹಮದಾಬಾದ್ ಪೊಲೀಸರು ಎಂದಿನಂತೆ ತಪಾಸಣೆ ನಡೆಸುವ ವೇಳೆಯಲ್ಲಿ ನಂಬರ್ ಪ್ಲೇಟ್‌ ಇಲ್ಲದ ಪೋರ್ಷೆ 911 ಕಾರು ಕಣ್ಣಿಗೆ ಬಿದ್ದಿದೆ. ಈ ವೇಳೆ ಈ ಕಾರ್ ಅನ್ನು ತಡೆದು ತಪಾಸಣೆ ನಡೆಸಿದ್ದಾರೆ. ಕಾರಿನ ಮಾಲೀಕರು ಕಾರಿನ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ. ಇದರಿಂದಾಗಿ ಪೊಲೀಸರು ಮಾಲೀಕರಿಗೆ ಒಟ್ಟು ರೂ.9.8 ಲಕ್ಷ ದಂಡ ವಿಧಿಸಿದ್ದಾರೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಅಹಮದಾಬಾದ್‌ ಟ್ರಾಫಿಕ್ ಪೊಲೀಸ್ ಇಲಾಖೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದು ಕೊಂಡಿದೆ. ಅಹಮದಾಬಾದ್ ಪೊಲೀಸರ ಟ್ವಿಟ್ಟರ್ ಪೋಸ್ಟ್ ನಲ್ಲಿ, ಅಹಮದಾಬಾದ್ ಪಶ್ಚಿಮದಲ್ಲಿ ಎಂದಿನಂತೆ ತಪಾಸಣೆ ನಡೆಸುವ ವೇಳೆಯಲ್ಲಿ ಪೋರ್ಷೆ 911 ಅನ್ನು, ಸಬ್‍‍ಇನ್ಸ್ ಪೆಕ್ಟರ್ ಎಂಬಿ ವಿರ್ಜಾರವರು ಹಿಡಿದಿದ್ದಾರೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಈ ಕಾರು ಯಾವುದೇ ನಂಬರ್ ಪ್ಲೇಟ್ ಹಾಗೂ ಸರಿಯಾದ ದಾಖಲೆಗಳನ್ನು ಹೊಂದಿರಲಿಲ್ಲ. ಈ ಕಾರಣಕ್ಕೆ ಕಾರ್ ಅನ್ನು ವಶಕ್ಕೆ ಪಡೆದು ರೂ.9,80,000 ದಂಡ ವಿಧಿಸಲಾಯಿತು ಎಂದು ಹೇಳಿದೆ. ಪೊಲೀಸ್ ಇಲಾಖೆಯು ಈ ಹೈ ಎಂಡ್ ಕಾರಿನ ಚಿತ್ರಗಳನ್ನು ಸಹ ಶೇರ್ ಮಾಡಿದೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ವಶಕ್ಕೆ ಪಡೆದಿರುವ ಕಾರು ಪೋರ್ಷೆ 911 ಕ್ಯಾರೆರಾ ಎಸ್ ಮಾದರಿಯಾಗಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.82 ಕೋಟಿಗಳಾಗಿದೆ. ಅಹಮದಾಬಾದ್ ಟ್ರಾಫಿಕ್ ಪೊಲೀಸರ ಟ್ವಿಟರ್ ಪೋಸ್ಟ್‌ನಲ್ಲಿರುವ ಕಾರು ಹಳೆಯ ತಲೆಮಾರಿನ ಪೋರ್ಷೆ 911 ಕ್ಯಾರೆರಾ ಎಸ್ ಆಗಿದೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಈ ಕಾರು 3.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಫ್ಲಾಟ್-ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 6500 ಆರ್‍‍ಪಿ‍ಎಂನಲ್ಲಿ 444 ಬಿ‍‍ಹೆಚ್‍‍ಪಿ ಪವರ್ ಹಾಗೂ 2300 ಆರ್‍‍ಪಿ‍ಎಂನಲ್ಲಿ 530 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಇದು ಕಾರಿನ ಹಿಂದಿರುವ ವ್ಹೀಲ್‍‍ಗಳಿಗೆ ಪವರ್ ನೀಡುತ್ತದೆ. ಈ ಕಾರು ಆಕರ್ಷಕವಾದ ಪರ್ಫಾಮೆನ್ಸ್ ನೀಡುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 307 ಕಿ.ಮೀಗಳಾಗಿದೆ. ಪೋರ್ಷೆ 911 ಕ್ಯಾರೆರಾ ಎಸ್ ಕಾರು 0 - 100 ಕಿ.ಮೀ ವೇಗವನ್ನು 3.7 ಸೆಕೆಂಡುಗಳಲ್ಲಿ ಕ್ರಮಿಸಿದರೆ, 200 ಕಿ.ಮೀ ವೇಗವನ್ನು 12.4 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಪೋರ್ಷೆ 911 ಜರ್ಮನ್ ಮೂಲದ ಕಂಪನಿಯ ಸರಣಿಯಲ್ಲಿರುವ ಐಕಾನಿಕ್ ಕಾರುಗಳಲ್ಲಿ ಒಂದಾಗಿದೆ. ಗಮನ ಸೆಳೆಯುವ ಪರ್ಫಾಮೆನ್ಸ್ ನೊಂದಿಗೆ ಈ ಕಾರು ಹಲವಾರು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ. ಕಂಪನಿಯು ಇತ್ತೀಚೆಗೆ ಈ ಸೂಪರ್ ಕಾರಿನ ಎರಡನೇ ತಲೆಮಾರಿನ ಕಾರ್ ಅನ್ನು ಬಿಡುಗಡೆಗೊಳಿಸಿತ್ತು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಹೊಸ ತಲೆಮಾರಿನ ಪೋರ್ಷೆ 911 ಕ್ಯಾರೆರಾ ಮಾದರಿಯನ್ನು ಕ್ಯಾರೆರಾ ಎಸ್ ಮತ್ತು ಕ್ಯಾರೆರಾ ಕ್ಯಾಬ್ರಿಯೊಲೆಟ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೋರ್ಷೆ 911 ಕ್ಯಾರೆರಾ ಕ್ಯಾಬ್ರಿಯೊಲೆಟ್ ಕನ್ವರ್ಟಿಬಲ್ ಮಾದರಿಯಾಗಿದ್ದು, ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಕೋಟಿಗಳಾಗಿದೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಮೋಟಾರು ವಾಹನ ಕಾಯ್ದೆಯು ಈ ವರ್ಷದ ಸೆಪ್ಟೆಂಬರ್‍‍ನಿಂದ ಜಾರಿಗೆ ಬಂದಿದ್ದು, ದೇಶಾದ್ಯಂತವಿರುವ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಾಹನ ಮಾಲೀಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಭಾರೀ ಪ್ರಮಾಣದ ದಂಡ ಬೀಳುವುದು ಗ್ಯಾರಂಟಿ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಟ್ಯಾಕ್ಸ್ ಉಳಿಸಲು ಹೋದ ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಯಾವುದೇ ಕಾರುಗಳಾಗಿರಲಿ ಆ ಕಾರುಗಳನ್ನು ಪತ್ತೆ ಹಚ್ಚುವುದು ಆ ಕಾರುಗಳ ನಂಬರ್ ಪ್ಲೇಟ್‍‍ನಿಂದ. ಯಾವುದೇ ಕಾರಿಗೆ ಇನ್ನೊಂದು ಕಾರಿನ ನಂಬರ್ ಅನ್ನು ನೀಡಲಾಗುವುದಿಲ್ಲ. ಬೇರೆ ಬೇರೆ ಕಾರುಗಳು ಬೇರೆ ಬೇರೆ ನಂಬರ್ ಹೊಂದಿರುತ್ತವೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಆದರೆ ಎರಡು ಬೇರೆ ಬೇರೆ ಕಾರುಗಳು ಒಂದೇ ನಂಬರ್ ಪ್ಲೇಟ್ ಹೊಂದಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಎರಡೂ ಕಾರುಗಳು ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರುಗಳು ಎಂಬುದು ವಿಶೇಷ. ಈ ವಂಚನೆಯನ್ನು ಪತ್ತೆ ಹಚ್ಚಿರುವ ಆರ್‍‍ಟಿ‍ಒ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ತನಿಖೆಯನ್ನು ಆರಂಭಿಸಿದ್ದಾರೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಈ ತನಿಖೆಯಲ್ಲಿ ಈ ಕಾರಿನ ನಂಬರ್ ಪ್ಲೇಟ್ ನಿಜವೆಂಬುದು ಕಂಡು ಬಂದಿದೆ. ಇದರ ಜೊತೆಗೆ ಇದೇ ನಂಬರ್ ಪ್ಲೇಟ್ ಹೊಂದಿದ್ದ ಮತ್ತೊಂದು ಕಾರ್ ಅನ್ನು ಸಹ ಪತ್ತೆ ಹಚ್ಚಿದ್ದಾರೆ. ಸಿಸಿಟಿವಿಯಲ್ಲಿ ಈ ಕಾರಿನ ಚಲನವಲನಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ತನಿಖೆಯ ನಂತರ ಈ ಕಾರು ಬೆಂಗಳೂರಿನ ಕೆಂಗೇರಿಯಲ್ಲಿರುವುದು ಕಂಡು ಬಂದಿದೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಕೆಂಗೇರಿ ಬಳಿಯಿರುವ ಮೈಲಸಂದ್ರದ ಮನೆಯೊಂದರಲ್ಲಿ ಈ ಐಷಾರಾಮಿ ಕಾರು ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ನಂತರ ಈ ಕಾರಿನ ಮಾಲೀಕನು ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಕಾರಿನ ನಂಬರ್ ಪ್ಲೇಟ್ ಅನ್ನು ನಕಲು ಮಾಡಿರುವುದು ಕಂಡು ಬಂದಿದೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಈ ಬಗ್ಗೆ ಮಾತನಾಡಿರುವ ಬೆಂಗಳೂರಿನ ಸಾರಿಗೆ ವಿಭಾಗದ ಹೆಚ್ಚುವರಿ ಆಯುಕ್ತರಾದ ಜ್ಞಾನೇಂದ್ರ ಕುಮಾರ್‍‍ರವರು ಕೆಲ ದಿನಗಳ ಹಿಂದೆ ನೆಲಮಂಗಲದ ಆರ್‍‍ಟಿ‍ಒದಲ್ಲಿ ಬಸ್ ಅನ್ನು ಪರೀಕ್ಷಿಸಲಾಗಿತ್ತು. ಈ ಬಸ್ ಹೊಂದಿದ್ದ ನಂಬರ್ ಅನ್ನು ಮತ್ತೊಂದು ಬಸ್ ಸಹ ಹೊಂದಿತ್ತು.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ನಮ್ಮ ಅಧಿಕಾರಿಗಳು ಇದನ್ನು ಪತ್ತೆ ಹಚ್ಚಿ ಬಸ್ ಅನ್ನು ವಶಕ್ಕೆ ಪಡೆದರು. ಹಳದಿ ಬಣ್ಣದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳ ಪತ್ತೆಯು ಕಠಿಣವಾದುದು ಎಂದು ಹೇಳಿದರು.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಮರ್ಸಿಡಿಸ್ ಕಾರುಗಳನ್ನು ಪತ್ತೆ ಹಚ್ಚಿದ ಬಗ್ಗೆ ಮಾತನಾಡಿದ ಅವರು, ನಮ್ಮ ಬಳಿ ಈ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದರಿಂದಾಗಿ ನಾವು ಆ ಕಾರುಗಳನ್ನು ಪತ್ತೆ ಹಚ್ಚಿದೆವು ಎಂದು ಹೇಳಿದರು. ಇನ್ಸ್‌ಪೆಕ್ಟರ್‌‍‍ಗಳಾದ ರಾಜಣ್ಣ ಹಾಗೂ ಸುಧಾಕರ್‍‍ರವರು ಈ ಕಾರುಗಳತ್ತ ಗಮನಹರಿಸಿದ್ದರು.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಒಂದು ದಿನ ಈ ಕಾರುಗಳ ಪೈಕಿ ಒಂದು ಕಾರು ಯಶವಂತಪುರ ಆರ್‍‍ಟಿಒಗೆ ಬಂದಿತ್ತು. ಇನ್ಸ್‌ಪೆಕ್ಟರ್‌‍‍ರವರು ಕಾರು ಹಾಗೂ ಅದರ ನಂಬರ್ ಪ್ಲೇಟ್ ಬಗ್ಗೆ ಗಮನ ಹರಿಸಿದ್ದರು. ಇನ್ನೊಂದು ದಿನ ಅದೇ ಇನ್ಸ್‌ಪೆಕ್ಟರ್‌‍‍ರವರು ಇದೇ ನಂಬರ್ ಪ್ಲೇಟ್ ಹೊಂದಿದ್ದ ಮತ್ತೊಂದು ಕಾರ್ ಅನ್ನು ನೋಡಿದರು.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಇದು ಇನ್ಸ್‌ಪೆಕ್ಟರ್‌ಗೆ ಸ್ವಲ್ಪ ಕುತೂಹಲ ಮೂಡಿಸಿತು. ಈ ಕಾರು ಯಶವಂತಪುರ ಆರ್‍‍ಟಿಒಗೆ ಬಂದಿದ್ದ ಕಾರ್ ಅಲ್ಲವೆಂದು ಕಂಡು ಬಂತು. ಈ ಕಾರಣಕ್ಕೆ ಕಾರಿನ ಫೋಟೊವನ್ನು ಆ ವ್ಯಕ್ತಿಗೆ ಕಳುಹಿಸಿದರು. ಆ ವ್ಯಕ್ತಿ ಈ ಕಾರು ತನ್ನದಲ್ಲವೆಂದು ಹೇಳಿದರು. ಇದರಿಂದಾಗಿ ಇನ್ಸ್‌ಪೆಕ್ಟರ್‌ ಇದರ ತನಿಖೆಯನ್ನು ಚುರುಕುಗೊಳಿಸಿದರು.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಸಾರಿಗೆ ಅಧಿಕಾರಿಗಳು ಸಂಚಾರಿ ಪೊಲೀಸರ ಸಹಕಾರದೊಂದಿಗೆ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಕಾರಿನ ಮಾಲೀಕನನ್ನು ಪತ್ತೆ ಹಚ್ಚಿದರು. ಸಂಚಾರಿ ಪೊಲೀಸರ ಸಹಕಾರದೊಂದಿಗೆ ಮೈಲಸಂದ್ರದಲ್ಲಿರುವ ಮನೆಯಿಂದ ಆ ನಕಲಿ ಕಾರಿನ ಮಾಲೀಕನನ್ನು ಸೆರೆಹಿಡಿಯಲಾಯಿತು.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಆತನನ್ನು ಬಂಧಿಸಿದ ನಂತರ ಆತ ಇದು ನಕಲಿ ನಂಬರ್ ಪ್ಲೇಟ್ ಆಗಿದ್ದು, ಮೂರು ವರ್ಷಗಳಿಂದ ಕಾರ್ ಅನ್ನು ರಿಜಿಸ್ಟರ್ ಮಾಡಿಸದೇ ಚಲಾಯಿಸಲಾಗುತ್ತಿದೆ ಎಂಬುದನ್ನು ಒಪ್ಪಿಕೊಂಡನು. ಆತನಿಗೆ ಟೆಂಪರರಿ ನಂಬರ್ ಪ್ಲೇಟ್ ನೀಡಲಾಗಿತ್ತು.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಆರೋಪಿಯನ್ನು ಯಶವಂತಪುರ ಆರ್‍‍ಟಿ‍ಒಗೆ ಕರೆತಂದ ನಂತರ ಕಾರಿನ ಚಾಸೀಸ್ ನಂಬರ್ ಅನ್ನು ಪರೀಕ್ಷಿಸಲಾಯಿತು. ಚಾಸೀಸ್ ನಂಬರ್ ಅನ್ನು ಪರೀಕ್ಷಿಸಿ, ಆ ನಂಬರ್ ಅನ್ನು ಕೇಸ್ ಶೀಟಿನಲ್ಲಿ ಬರೆದುಕೊಳ್ಳುವಾಗ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಎಲ್ಲಾ ತೆರಿಗೆಯನ್ನು ಲೆಕ್ಕ ಹಾಕಿದಾಗ ಆರೋಪಿಯು ರೂ.22 ಲಕ್ಷ ತೆರಿಗೆ ಪಾವತಿಸಬೇಕಾಗಿರುವುದು ಕಂಡು ಬಂದಿದೆ. ಈ ಕಾರ್ ಅನ್ನು 2013ರಿಂದ ಚಲಾಯಿಸಲಾಗಿದೆ. ಈ ಕಾರಣಕ್ಕಾಗಿ ಕಳೆದ ಏಳು ವರ್ಷಗಳ ದಂಡವನ್ನು ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ದುಬಾರಿ ದಂಡ..!

ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ಸಂಗತಿಯೆಂದರೆ ಈ ಕಾರಿನಲ್ಲಿ ಕಂಡು ಬಂದ ನಂಬರ್ ಅನ್ನು ಇತ್ತೀಚಿಗಷ್ಟೆ ನೀಡಲಾಗಿದೆ. ಈಗ ರಿಜಿಸ್ಟರ್ ಮಾಡಲಾಗುತ್ತಿರುವ ಕಾರುಗಳಿಗೆ ಈ ಸರಣಿಯ ನಂಬರ್‍‍ಗಳನ್ನು ನೀಡಲಾಗುತ್ತಿದೆ.

Most Read Articles

Kannada
English summary
Porsche 911 Owner Fined Rs 9.8 Lakh By Ahmedabad Traffic Police: Here’s Why! - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X