ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಮಿಚೆಲಿನ್ ಹಾಗೂ ಜಿಎಂ ಕಂಪನಿಗಳು ಪ್ರಪಂಚದ ಮೊದಲ ಗಾಳಿ ರಹಿತ ಟಯರ್‍‍‍ಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಕಳೆದ ಕೆಲವು ವರ್ಷಗಳಿಂದ ಮಿಚೆಲಿನ್ ಸೇರಿದಂತೆ ಹಲವು ಟಯರ್ ತಯಾರಕ ಕಂಪನಿಗಳು ಭವಿಷ್ಯಕ್ಕಾಗಿ ಹೊಸ ಬಗೆಯ ಟಯರ್‍‍ಗಳನ್ನು ವಿನ್ಯಾಸಗೊಳಿಸುತ್ತಿವೆ. ಆದರೆ ಯಾವುದು ಅಂತಿಮವಾಗದೇ ಎಲ್ಲವೂ ಕೇವಲ ಕಾನ್ಸೆಪ್ಟ್ ಗಳಾಗಿ ಉಳಿದಿವೆ.

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಈ ನಿಟ್ಟಿನಲ್ಲಿ ಮುಂದುವರೆದಿರುವ ಜನರಲ್ ಮೋಟಾರ್ಸ್, ಮಿಚೆಲಿನ್ ಕಂಪನಿಯ ಸಹಭಾಗಿತ್ವದಲ್ಲಿ ಈ ಟಯರ್‍‍ಗಳ ಉತ್ಪಾದನೆಯನ್ನು ಆರಂಭಿಸಲು ನಿರ್ಧರಿಸಿದೆ. ಆಟೋಮೊಬೈಲ್ ಉದ್ಯಮವು ಮೊಟ್ಟ ಮೊದಲ ಗ್ಯಾಸೊಲೈನ್ ಪವರ್‍‍ನ ಕಾರು ತಯಾರಾದ ನಂತರ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕಾರುಗಳಲ್ಲಿರುವ ಬಹುತೇಕ ಬಿಡಿಭಾಗಗಳು ಅಭಿವೃದ್ಧಿ ಹೊಂದಿ ಬದಲಾವಣೆ ಹೊಂದಿವೆ. ಟಯರ್‍‍ಗಳಲ್ಲಿ ಕೆಲವೊಂದು ಬದಲಾವಣೆಗಳಾಗಿವೆ.

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ರೇಡಿಯಲ್ ಟಯರ್, ಟ್ಯೂಬ್‍‍ಲೆಸ್ ಟಯರ್, ಸ್ಟೀಲ್-ಬೆಲ್ಟೆಡ್ ಟಯರ್, ರನ್ ಫ್ಲಾಟ್ ಟಯರ್‍‍ಗಳೆಂದು ಹಲವಾರು ಬಗೆಯ ಟಯರ್‍‍ಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಮೂಲ ಸಿದ್ದಾಂತವು ಮಾತ್ರ ಹಾಗೆಯೇ ಮುಂದುವರೆದಿದೆ. ಮೂಲ ಸಿದ್ದಾಂತವೆಂದರೆ ಟಯರ್, ಟ್ಯೂಬ್ ಆಗಿರಲಿ ಅಥವಾ ಟ್ಯೂಬ್‍‍ಲೆಸ್ ಆಗಿರಲಿ, ಅದರಲ್ಲಿ ಗಾಳಿಯನ್ನು ತುಂಬಿಸಲೇ ಬೇಕು.

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಈ ರೀತಿಯ ಟಯರ್‍‍ಗಳಿಂದ ಯಾವುದೇ ದೊಡ್ಡ ಸಮಸ್ಯೆಗಳು ಎದುರಾಗದೇ ಇದ್ದರೂ, ಏರ್ ಲೀಕ್, ಪಂಕ್ಚರ್, ಅತಿ ವೇಗದಲ್ಲಿದ್ದಾಗ ಟಯರ್ ಬ್ಲಾಸ್ಟ್ ಆಗುವುದು, ಹೆಚ್ಚು ಹವಾಮಾನವಿದ್ದಾಗ ಸ್ಥಿರತೆಯಿಲ್ಲದಿರುವುದು ಸೇರಿದಂತೆ ಹಲವು ಅನಾನುಕೂಲಗಳಿವೆ.

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಸಂಶೋಧನೆಗಳ ಪ್ರಕಾರ, ಹೈವೇನಲ್ಲಿಯ ನೂರಾರು ಅಪಘಾತಗಳು ಟಯರ್ ಬ್ಲಾಸ್ಟ್ ಕಾರಣಕ್ಕಾಗಿ ಆಗುತ್ತವೆ. ಏಕೆಂದರೆ ವಾಹನಗಳನ್ನು ಅತಿ ವೇಗದಲ್ಲಿದ್ದಾಗ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಟಯರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಿಚೆಲಿನ್, ಬ್ರಿಡ್ಜ್ ಸ್ಟೋನ್, ಫೈರ್‍‍ಸ್ಟೋನ್, ಗುಡ್ ಇಯರ್ ಮೊದಲಾದವು ಹೊಸ ಕಾನ್ಸೆಪ್ಟ್ ಬಗ್ಗೆ ಮನಗೊಂಡು ಹೊಸ ಟಯರ್‍‍ಗಳ ಅಭಿವೃದ್ಧಿಯಲ್ಲಿ ತೊಡಗಿವೆ.

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಹೊಸ ಗಾಳಿ ರಹಿತ ಟಯರ್ ಕಾನ್ಸೆಪ್ಟ್, ಇದುವರೆಗೂ ಕಾನ್ಸೆಪ್ಟ್ ಆಗಿಯೇ ಉಳಿದಿತ್ತು. ಮಿಚೆಲಿನ್ ಹಾಗೂ ಇತರ ಕಂಪನಿಗಳು, ಈ ರೀತಿಯ ಟಯರ್‍‍ಗಳ ಮೇಲೆ ಹಲವಾರು ಟೆಸ್ಟ್ ಗಳನ್ನು ನಡೆಸಿದ್ದಾರೆ. ಕಾರು ತಯಾರಕ ಕಂಪನಿಗಳ ಅಸಹಕಾರದಿಂದಾಗಿ ಸಾರ್ವಜನಿಕ ರಸ್ತೆಗಳಲ್ಲಿ ಹಾಗೂ ಟ್ರಾಕ್‍‍ಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ.

MOST READ: ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಈಗ ಮಿಚೆಲಿನ್ ಕಂಪನಿಗೆ ಜನರಲ್ ಮೋಟಾರ್ಸ್‍‍ನ ಸಹಭಾಗಿತ್ವ ದೊರೆತಿರುವುದರಿಂದ ಎರಡೂ ಕಂಪನಿಗಳು ಮುಂದೆ ಬಂದು, ಹೊಸ ಬಗೆಯ ಟಯರ್‍‍ಗಳ ಉತ್ಪಾದನೆಯನ್ನು ಶುರು ಮಾಡಲಿವೆ. ಮಿಚೆಲಿನ್ ತನ್ನ ಕಾನ್ಸೆಪ್ಟ್ ಗೆ ಟ್ವೀಲ್ ಎಂದು ಹೆಸರಿಟ್ಟಿತ್ತು. ಜಿ‍ಎಂ ಕಂಪನಿಯ ಜೊತೆಗಿನ ಸಹಭಾಗಿತ್ವದ ನಂತರ ಇದೇ ಯೋಜನೆಯನ್ನು ಅಪ್ಟಿಸ್ ಹೆಸರಿನಲ್ಲಿ ಮುಂದುವರೆಸಲಾಗುವುದು.

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಅಪ್ಟಿಸ್ ಟಯರ್, ಸಾಂಪ್ರಾದಾಯಿಕ ಟಯರ್‍‍ಗಳ ಅಸ್ಥಿಪಂಜರದ ರೀತಿಯಲ್ಲಿ ಕಾಣುತ್ತದೆ. ಈ ಟಯರ್‍‍ಗಳ ಕೆಳಭಾಗದಲ್ಲಿ ಮೆಟಲ್ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿರುವ ಥ್ರೇಡ್ ನಾವು ಪ್ರತಿದಿನ ಬಳಸುವ ಮಾಮೂಲಿ ಟಯರ್‍‍‍ಗಳಲ್ಲಿರುವಂತೆಯೇ ಇದೆ.

MOST READ: ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಟಯರ್‍‍ನ ಸೈಡ್ ವಾಲ್ ಹಾಗೂ ಒಳಗಿರುವ ಕ್ಯಾವಿಟಿಗಳ ಬದಲಿಗೆ ಹೆಚ್ಚು ಬಲಿಷ್ಟವಾಗಿರುವ ಕಾಂಪೋಸಿಟ್ ಸ್ಪೋಕ್ಸ್ ಗಳನ್ನು ಅಳವಡಿಸಲಾಗಿದೆ. ಈ ಕಾಂಪೋಸಿಟ್ ಸ್ಪೋಕ್ಸ್ ಗಳು ಬಲಿಷ್ಟವಾಗಿದ್ದು, ಫ್ಲೆಕ್ಸಿಬಲ್ ಆಗಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಈ ಟಯರ್‍‍ಗಳಿಂದ ಹಂಪ್‍‍ಗಳಲ್ಲಿ, ರಸ್ತೆ ಗುಂಡಿಗಳಲ್ಲಿ ಹಾಗೂ ಕಲ್ಲು ರಸ್ತೆಗಳಲ್ಲೂ ವಾಹನಗಳನ್ನು ಚಲಾಯಿಸಬಹುದು. ಈ ಟಯರ್‍‍ಗಳಿಗೆ ಯಾವುದೇ ರೀತಿಯ ಗಾಳಿಯು ಬೇಕಾಗಿಲ್ಲ. ಗಾಳಿಯಿಲ್ಲದ ಟಯರ್‍‍ಗಳು ಎಂಬ ಕಾರಣದಿಂದ ಎಲ್ಲಾ ರೀತಿಯ ಭಯ ಹಾಗೂ ಅನಾನುಕೂಲತೆಗಳು ದೂರವಾಗುತ್ತವೆ.

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಈ ಅಪ್ಟಿಸ್ ಟಯರ್‍‍ಗಳನ್ನು ಜನರಲ್ ಮೋಟಾರ್ಸ್‍‍ನ ಶೆವ್ರೊಲೆಟ್ ಬೋಲ್ಟ್ ಎಲೆಕ್ಟ್ರಿಕ್ ಕಾರುಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆಗಳು ಯಶಸ್ವಿಯಾದ ನಂತರ ಜಿ‍ಎಂ ಕಂಪನಿಯು ಅವುಗಳನ್ನು ತನ್ನ ಕಾರುಗಳಲ್ಲಿ ಅಳವಡಿಸಲಿದೆ. ನಂತರ ನಾವು ಟಯರ್‍‍ಗಳಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಕಾಣಬಹುದು.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕಳೆದ ಕೆಲವು ವರ್ಷಗಳಿಂದ ವ್ಹೀಲ್‍‍ಗಳಲ್ಲಿ ಹಾಗೂ ಟಯರ್‍‍ಗಳಲ್ಲಿ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಕೆಲವು ತಯಾರಕರು ಸೈಡ್ ವೇ ಹಾಗೂ ಡಯಗ್ನಲ್ ವೇ ಟಯರ್‍‍ಗಳನ್ನು ತಯಾರಿಸ ಬಯಸಿದರೆ, ಉಳಿದವರು ಟ್ವೀಲ್ ಕಾನ್ಸೆಪ್ಟ್ ಅನ್ನು ಬಯಸುತ್ತಾರೆ. ಟ್ವೀಲ್ ಮಾದರಿಯ ಟಯರ್‍‍ಗಳನ್ನು ಉತ್ಪಾದಿಸುತ್ತಿರುವುದು ಖುಷಿಯ ವಿಷಯವಾಗಿದೆ. ಈ ರೀತಿಯ ಟಯರ್‍‍ಗಳಿಂದ ಬಹಳಷ್ಟು ಅನುಕೂಲಗಳಿವೆ.

Most Read Articles

Kannada
English summary
Airless Tyres To Be Mass Produced — Michelin & GM Enter Partnership To Produce Radical Tyres - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X