ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ವಿಶ್ವ ವಿಖ್ಯಾತ ಓಟಗಾರ ಉಸೈನ್ ಬೋಲ್ಟ್ ರವರ ಸಹಕಾರ ಹೊಂದಿರುವ ಬೋಲ್ಟ್ ಕಂಪನಿಯು ತನ್ನ ಎರಡು ಸೀಟಿನ ಎಲೆಕ್ಟ್ರಿಕ್ ವಾಹನವಾದ, ಬೋಲ್ಟ್ ಬಿ ನ್ಯಾನೋವನ್ನು ಅನಾವರಣಗೊಳಿಸಿದೆ. ಈ ವಾಹನದಿಂದ ಕಡಿಮೆ ದೂರದ ಹಾಗೂ ಕಡಿಮೆ ಅಂತರವಿರುವ ನಗರಗಳ ನಡುವಿನ ಪ್ರಯಾಣಕ್ಕೆ ಅನುಕೂಲವಾಗಲಿದೆ.

ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ಬೋಲ್ಟ್ ಕಂಪನಿಯು ಮೊದಲಿಗೆ ಎರಡು ಮೈಲಿವರೆಗಿನ ಪ್ರಯಾಣಕ್ಕಾಗಿ ಮೈಕ್ರೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿತ್ತು. ಈಗ ಅದೇ ರೀತಿಯ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಈ ಕಾರು 3 ರಿಂದ 24 ಕಿ.ಮೀವರೆಗಿನ ಪ್ರಯಾಣಕ್ಕಾಗಿ ಅನುಕೂಲವಾಗಲಿದೆ. ರೆನಾಲ್ಟ್ ಟ್ವಿಜಿಯಂತೆಯೇ ಕಾಣುವ ಈ ಒನ್ ಪ್ಲಸ್ ಒನ್ ವಾಹನವನ್ನು ಡೋರ್‍‍ಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಬ್ಯಾಗ್‍‍ಗಳನ್ನು ಇಡುವುದಕ್ಕೆ ಸ್ಥಳವನ್ನು ನೀಡಲಾಗಿದೆ. ಈ ಕಾರಿನ ಟೆಕ್ನಿಕಲ್ ಅಂಶಗಳಾದ ಬ್ಯಾಟರಿ ರೇಂಜ್ ಮತ್ತು ವೇಗದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.

ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ಬಿ-ನ್ಯಾನೋವನ್ನು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ವಿವಾ ಟೆಕ್ನಾಲಜಿ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಯಿತು. ಬೋಲ್ಟ್ ಕಂಪನಿಯ ಪ್ರಕಾರ ಈ ಕಾರು ಹೊರತೆಗೆದು ಬದಲಿಸಬಲ್ಲ ಬ್ಯಾಟರಿಗಳನ್ನು ಬಳಸುವ ಪ್ರಪಂಚದ ಏಕೈಕ ಎಲೆಕ್ಟ್ರಿಕ್ ಮೈಕ್ರೊ ವಾಹನವಾಗಿದೆ.

ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ಕಳೆದ ಮಾರ್ಚ್ ನಲ್ಲಿ ಮಿನಿಮೋ ಕ್ವಾಡ್ರಿ ಸೈಕಲ್ ಹೊಂದಿರುವ ಸೀಟುಗಳನ್ನು ಅನಾವರಣಗೊಳಿಸಲಾಗಿತ್ತು. ಇವುಗಳೂ ಸಹ ಬದಲಿಸಬಲ್ಲ ಬ್ಯಾಟರಿಗಳನ್ನು ಬಳಸುತ್ತವೆ. ಆದರೆ ಈ ವಾಹನಗಳನ್ನು 2021ರ ನಂತರಲ್ಲಿ ಉತ್ಪಾದಿಸಲಾಗುತ್ತದೆ. ಈಗ ಈ ಕಾರುಗಳಿಗಾಗಿ ಮುಂಗಡ ಬೇಡಿಕೆಯನ್ನು ಪಡೆಯಲಾಗುತ್ತಿದೆ.

ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ಬಿ-ನ್ಯಾನೋ ಕಾರುಗಳನ್ನು ರೈಡ್ ಶೇರಿಂಗ್ ಗಾಗಿ ತಯಾರಿಸಲಾಗಿದೆ. ಈ ಕಾರುಗಳನ್ನು ಎಲ್ಲಿ ಬೇಕಾದರೂ ಉಪಯೋಗಿಸಿ, ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದಾಗಿದೆ. ಇ ಸ್ಕೂಟರ್ ನಲ್ಲಿರುವ ಬ್ಯಾಟರಿಗಳನ್ನು ಹೊರತೆಗೆದು ಜಾರ್ಜ್ ಮಾಡಲಾಗುತ್ತದೆ. ಇದೇ ರೀತಿಯಲ್ಲಿ ಬೋಲ್ಟ್ ಕಾರಿನ ಬ್ಯಾಟರಿಗಳನ್ನು ಸಹ ಅವುಗಳನ್ನು ನಿಲ್ಲಿಸಿರುವ ಜಾಗಗಳಿಂದ ಹೊರ ತೆಗೆದು ಚಾರ್ಜ್ ಮಾಡಬಹುದಾಗಿದೆ. ಇವುಗಳನ್ನು ಚಾರ್ಜ್ ಮಾಡುವ ಉದ್ದೇಶದಿಂದ ಅನೇಕ ಕಡೆ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸಹ ತೆರೆಯಲಾಗುವುದು.

ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ಪ್ಯಾರೀಸ್ ನಲ್ಲಿ ನಡೆದ ವಿವಾ ಟೆಕ್ ಸಮ್ಮೇಳನದಲ್ಲಿ ಬೋಲ್ಟ್ ಕಂಪನಿ ಮಾಡಿದ ಮುಖ್ಯ ಘೋಷಣೆಯೆಂದರೆ ಸ್ಕೂಟರ್ ಸೇವೆ‍ಗಳನ್ನು ಪ್ಯಾರಿಸ್‍‍ಗೆ ವಿಸ್ತರಿಸುವುದು. ಮಾಲಿನ್ಯ ನಿಯಮಗಳನ್ನು ಅಳವಡಿಸಿಕೊಳ್ಳದ ಕಾರಣ ಬ್ರಿಟನ್ನನ್ನು ಹೊರತುಪಡಿಸಿ , ಉಳಿದ ಯೂರೋಪಿಯನ್ ನಗರಗಳಿಗೂ ಸಹ ಈ ಯೋಜನೆಯನ್ನು ಜಾರಿಗೊಳಿಸುವ ಗುರಿಯನ್ನಿಟ್ಟು ಕೊಳ್ಳಲಾಗಿದೆ.

MOST READ: ಈ ಪುಸ್ತಕದ ಬೆಲೆ ಒಂದು ಐಷಾರಾಮಿ ಬಂಗಲೆಗಿಂತಲೂ ದುಬಾರಿ..!

ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ಬೋಲ್ಟ್ ಕಂಪನಿಯನ್ನು ಅಮೇರಿಕಾದ ಫ್ಲೋರಿಡಾದಲ್ಲಿ 2018ರಲ್ಲಿ ಪ್ರಾರಂಭಿಸಲಾಯಿತು. ಕಂಪನಿಯ ಸ್ಥಾಪನೆ ಬಗ್ಗೆ ಅದರ ವೆಬ್‍‍ಸೈಟಿನಲ್ಲಿ ' ಫಿಲ್ ದಿ ಗ್ಯಾಪ್ಸ್ ಇನ್ ಮೈಕ್ರೊ ಮೊಬಿಲಿಟಿ' ಎಂದು ಬರೆಯಲಾಗಿದೆ. ಬೋಲ್ಟ್ ನಗರ ಪ್ರದೇಶಗಳಲ್ಲಿ ವ್ಯಾಪಕ ಸಂಶೋಧನೆ ನಡೆಸಿ, ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮುಂದಾಗಿದೆ. ನಾವು ಇ-ಸ್ಕೂಟರ್ ಅನ್ನು ನೀಡಲು ಸಿದ್ದರಿದ್ದೇವೆ, ಅದರಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆಯಲ್ಲದೇ ಪಾದಚಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

Most Read Articles

Kannada
English summary
All-electric Bolt B-Nano revealed as two-seat urban transport - Read in kannada
Story first published: Monday, May 20, 2019, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X