ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

ಕಿಯಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ಸೆಲ್ಟೊಸ್ ಎಸ್‍ಯುವಿ ಕಾರನ್ನು ಆಗಸ್ಟ್ 22ರಂದು ಬಿಡುಗಡೆ ಮಾಡಲಿದ್ದು, ಈಗಾಗಲೇ ಸೆಲ್ಟೊಸ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಬುಕ್ಕಿಂಗ್ ಪ್ರಾರಂಭಗೊಂಡ ಕೇವಲ ಒಂದೇ ದಿನದಲ್ಲಿ ಸುಮಾರು 6000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಅನ್ನು ಈ ಕಾರು ಪಡೆದುಕೊಂಡಿದೆ. ನೀವು ಕೂಡಾ ಈ ಕಾರನ್ನು ಖರೀದಿ ಮಾಡುವ ಯೋಜನೆ ಇದ್ದರೆ ನಿಮ್ಮ ಸಮೀಪದಲ್ಲಿರುವ ಡೀಲರ್‍‍ಗಳ ಬಳಿ ರೂ. 25,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

ಕಿಯಾ ಸೆಲ್ಟೊಸ್ ಕಾರು ಬಿಡೆಗಡೆಗಾಗಿ ಇನ್ನು ಕೇವಲ ಒಂದೇ ತಿಂಗಳು ಬಾಕಿ ಇರುವ ಕಾರಣ ಟೀಂ ಬಿಹೆಚ್‍ಪಿ ವರದಿ ಪ್ರಕಾರ ಹೊಸ ಕಾರುಗಳು ಡೀಲರ್‍‍ಗಳ ಯಾರ್ಡ್ ಅನ್ನು ತಲುಪುತ್ತಿದೆ. ಈ ಕಾರು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದಿದ್ದು, ದಿನಕಳೆದಂತೆ ಈ ಕಾರಿನ ಕುರಿತಾದ ಮಾಹಿತಿಗಳು ಒಂದೊಂದಾಗಿ ಹೊರ ಬೀಳುತ್ತಿದೆ. ಅವುಗಳಲ್ಲಿ ಒಂದಾದ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮಂದಿ ಗಮನಿಸುವ ಅಂಶ ಅದೇ ಮೈಲೇಜ್.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

2020ರ ಏಪ್ರಿಲ್ 1ಕ್ಕೆ ಜಾರಿಗೆ ಬಲಿರುವ ಬಿಎಸ್-6 ನಿಯಮಾವಳಿಗಳಿಗೆ ಅನುಗುಣವಾಗಿ ಎಂಜಿನ್ ಸೌಲಭ್ಯವನ್ನು ಹೊಂದಿರುವ ಕಿಯಾ ಸೆಲ್ಟೊಸ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹ್ಯುಂಡೈ ಕ್ರೆಟಾ ಮಾದರಿಯಲ್ಲೇ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 16.4 ಕಿ.ಮಿ ಮತ್ತು ಡೀಸೆಲ್ ಆವೃತ್ತಿಯಲ್ಲಿರುವ ಕಾರು ಮಾದರಿಗಳು ಪ್ರತಿ ಲೀಟರ್‌ಗೆ ಗರಿಷ್ಠ 20.8 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

ಇನ್ನು ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ 5 ವೇರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 3 ವೇರಿಯೆಂಟ್‌ಗಳನ್ನು ಪಡೆದುಕೊಂಡಿರಲಿದ್ದು, ಪೆಟ್ರೋಲ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್ ವೇರಿಯೆಂಟ್‌ ಖರೀದಿಗೆ ಲಭ್ಯವಿದ್ದಲ್ಲಿ ಡೀಸೆಲ್‌ನಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳನ್ನು ಖರೀದಿಸಬಹುದಾಗಿದೆ.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

1.5-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಇದರೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಒದಗಿಸಲಿದೆ.

ಇದರಲ್ಲಿ ಸಾಮಾನ್ಯ ಕಾರುಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದ್ದರೆ ಟರ್ಬೋ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಸ್ಮಾರ್ಟ್ ಸ್ಟ್ರೀಮ್ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೀಗಾಗಿ ಎಂಜಿನ್ ಆಯ್ಕೆಯಲ್ಲಿ ಉತ್ತಮ ಎನ್ನಿಸುವ ಸೆಲ್ಟೊಸ್‌ನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

ಹಾಗೆಯೇ ಸೆಲ್ಟೊಸ್ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಮತ್ತು ಡ್ಯುಯಲ್ ಸನ್‌ರೂಫ್ ಕೂಡಾ ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಸುರಕ್ಷಾ ಸೌಲಭ್ಯಗಳು

ಶೇ.73ರಷ್ಟು ಅತ್ಯುತ್ತಮ ಸ್ಟೀಲ್ ಪಡೆದುಕೊಂಡಿರುವ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

ಕಾರಿನ ಉದ್ದಳತೆ

ಕ್ರೆಟಾ ಕಾರಿಗಿಂತಲೂ 45-ಎಂಎಂ ಹೆಚ್ಚುವರಿ ಉದ್ದ ಪಡೆದಿರುವ ಸೆಲ್ಟೊಸ್ ಕಾರು 4,315-ಎಂಎಂ ಉದ್ದ, 1,800-ಎಂಎಂ ಅಗಲ, 2,610-ಎಂಎಂ ವೀಲ್ಹ್‌ಬೆಸ್, 1,620-ಎಂಎಂ ಎತ್ತರ ಮತ್ತು 190-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಬೂಟ್ ಸ್ಪೆಸ್ ಸಾಮರ್ಥ್ಯವು ಕೂಡಾ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

ಡೀಲರ್ ಯಾರ್ಡ್ ತಲುಪುತ್ತಿರುವ ಕಿಯಾ ಸೆಲ್ಟೊಸ್ - ಬಿಡುಗೆಡೆಗೆ ಇನ್ನು ಒಂದೇ ತಿಂಗಳು ಬಾಕಿ

ಕಾರಿನ ಬೆಲೆಗಳು(ಅಂದಾಜು)

ಆಕರ್ಷಕ ಬೆಲೆಗಳಲ್ಲಿ ಸೆಲ್ಟೊಸ್ ಕಾರು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿರುವ ಕಿಯಾ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಯನ್ನು ರೂ. 15 ಲಕ್ಷಕ್ಕೆ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
All New Kia Seltos Started Arriving Dearlers - Launch Ahead. Read In Kannada
Story first published: Monday, July 22, 2019, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X