ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಅಪೋಲೋ ಟೈರ್ಸ್ ಅಫ್-ರೋಡ್ ಪ್ರಿಯರಿಗಾಗಿ ಆಪ್ಟೆರಾ ಎಟಿ2 ಎಂಬ ಹೊಸ ಆಲ್-ಟೆರೈನ್ ಎಸ್‍‍ಯುವಿ ಟೈರ್‍ ಅನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಅಪೋಲೋ ಆಪ್ಟೆರಾ ಎಟಿ2 ಟಯರ್ ಪ್ರಸ್ತುತ ಇರುವ ಅಪ್ಟೆರಾ ಶ್ರೇಣೆಯನ್ನು ಸಾಲಿನಲ್ಲಿ ಸೇರಿಕೊಂಡಿದೆ.

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಹೆಚ್ಚುತ್ತಿರುವ ಎಸ್‍ಯುವಿ ಮಾರಾಟವನ್ನು ಗಮನ ಹರಿಸಿ ಅಪೋಲೋ ಹೊಸ ಆಲ್-ಟೆರೈನ್ ಟಯರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅಪೋಲೋ ಹೊಸ ಟಯರ್‍‍ಗಳನ್ನು 8 ವಿವಿಧ ಗಾತ್ರಗಳಲ್ಲಿ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದೆ. ಹೊಸ ಆಪ್ಟೆರಾ ಟಯರ್‍‍ಗಳನ್ನು ಎರಡನೆ ಹಂತದ ಭಾಗವಾಗಿ 6 ವಿವಿಧ ಗಾತ್ರಗಳಲ್ಲಿ ಬಿಡುಗಡೆ ಮಾಡಲಿದೆ.

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಆಪ್ಟೆರಾ ಎಟಿ 2 ಟಯರ್ ಅನ್ನು ಗುಜರಾತ್‍‍ನ ವಡೋದರಾದಲ್ಲಿ ಕಂಪನಿಯ ಘಟಕದಲ್ಲಿ ಉತ್ಪಾದಿಸಲಾಗಿದೆ. ವಿಶೇಷವಾದ ಹೈವೇ ಲಕ್ಷುರಿ(ಎಚ್ಎಲ್), ಹೈವೇ ಟೆರೈನ್(ಎಚ್‍ಟಿ), ಹೈವೇ ಪರ್ಫಾಮೆನ್ಸ್(ಎಚ್‍‍ಪಿ) ಸೇರಿದಂತೆ ಎಲ್ಲಾ ಎಸ್‍‍ಯು‍ವಿಗಳ ಟಯರ್‍‍ಗಳನ್ನು ಈ ಘಟಕದಲ್ಲಿ ತಯಾರಿಸಲಾಗುತ್ತದೆ.

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಆಪ್ಟೆರಾ ಎಟಿ2 ಟಯರ್‍‍ಗಳನ್ನು ನೆದರ್‍‍‍ಲ್ಯಾಂಡ್ ಮತ್ತು ಚೆನ್ನೈನ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರಗಳಲ್ಲಿ ಜಂಟಿಯಾಗಿ ವಿನ್ಯಾಸಗೊಳಿಸಿ ಅಭಿವೃದ್ದಿಪಡಿಸಿದೆ. ಕಠಿಣವಾದ ಅಫ್ ರೋಡ್‍‍ಗಳಲ್ಲಿ ಹಿಡಿತ ಸಾಧಿಸಲು ಮತ್ತು ಸರಾಗವಾಗಿ ಚಲಿಸಲು ಸಹಕಾರಿಯಾಗಲು ಹಲವು ಪರೀಕ್ಷೆಗಳನ್ನು ಟೈರ್ ಅನ್ನು ತಯಾರಿಸಿದ್ದಾರೆ.

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಆನ್ ರೋಡ್ ಮತ್ತು ಆಫ್ ರೋಡ್ ಪ್ರದ್ರೇಶಗಳಿಗೆ ಅನುಗುಣವಾಗುವಂತೆ ಆಪ್ಟೆರಾ ಎಟಿ2 ಟೈರ್ ಅನ್ನು ತಯಾರಿಸಿದ್ದಾರೆ. ಹೊಸ ಆಲ್-ಟೆರೈನ್ ಟಯರ್ ರಸ್ತೆಗಳಲ್ಲಿ ಉತ್ತಮ ಹಿಡಿತವನ್ನು ಸಾಧಿಸಲು ಎಸ್‍ಎಡಬ್ಲ್ಯು-ಟೂತ್ ತಂತ್ರಜ್ಞಾನದೊಂದಿಗೆ ಪೇಟೆಟ್ ಟ್ರೆಂಡ್ ವಿನ್ಯಾಸವನ್ನು ಹೊಂದಿದೆ. ಅಡೆತಡೆಗಳಲ್ಲಿ ಸುಲಭವಾಗಿ ಸಾಗಲು ಮತ್ತು ಟಯರ್ ದಿರ್ಘ ಕಾಲದ ಬಾಳಿಕೆ ಬರುವಂತೆ ಮಾಡಲು ಉನ್ನತ ಮಟ್ಟದ ಟೆನ್ಸಿಲ್ ಸ್ಟೀಲ್ ಬೆಲ್ಟ್ ಗಳನ್ನುಅಪ್ಟೆರಾ ಎಟಿ2 ಟೈರ್‍‍ಗೆ ಅಳವಡಿಸಿದ್ದಾರೆ.

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಆಪ್ಟೆರಾ ಎಟಿ2 ಟೈರ್ ವಿಶಿಷ್ಟವಾದ ಗ್ರೋವೆ ವಿನ್ಯಾಸವನ್ನು ಹೊಂದಿದ್ದು, ಚಾರುವ ಪ್ರದೇಶಗಳಲ್ಲಿ ಅಥವಾ ಅಫ್-ರೋಡ್‍‍ಗಳಲ್ಲಿ ಚಲಿಸುವ ವೇಳೆಯಲ್ಲಿ ಉತ್ತಮ ನಿಯಂತ್ರಣವನ್ನು ಹೊಂದಿರುತ್ತದೆ. ಆಪ್ಟೆರಾ ಎಟಿ2 ಟೈರ್‍‍ಗಳು ಎನ್‍‍ವಿಎಚ್ ನಿಯಮದ ಪ್ರಕಾರ ಹೊಂದಿದ್ದು, ಹೆಚ್ಚುವರಿ ಶಬ್ದವನ್ನು ಹೊರಹಾಕುವುದಿಲ್ಲ. ಆಲ್-ಟೆರೈನ್ ಒಂದು ತಿಂಗಳಲ್ಲಿ ಸುಮಾರು 15,000 ಸಾವಿರ ಯುನಿಟ್‍‍ಗಳು ಮಾರಾಟವಾಗುವುದರಿಂದ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಮಾರುಕಟ್ಟೆಯಲ್ಲಿರುವ ವಿವಿಧ ಎಸ್‍‍ಯು‍‍ವಿಗಳಿಗೆ ಹೊಸ ಟಯರ್‍‍ಗಳು ಲಭ್ಯವಿರಲಿದೆ. ಈ ಪಟ್ಟಿಯಲ್ಲಿ ರೇಂಜ್ ರೋವರ್ ಸ್ಪೋರ್ಟ್, ಇವೊಕ್, ವೆಲಾರ್, ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್, ಮಿತ್ಸುಬಿಷಿ ಪಜೆರೊ, ಮಹೀಂದ್ರಾ ಸ್ಕಾರ್ಪಿಯೋ , ಎಕ್ಸ್ಯುವಿ 500, ಟಾಟಾ ಹೆಕ್ಸಾ, ಇಸು ಎಂಯು7 ಮತ್ತು ವಿ ಕ್ರಾಸ್ ಸೇರಿಕೊಂಡಿದೆ. ಎರಡನೇ ಹಂತದಲ್ಲಿ 6 ವಿವಿಧ ಗಾತ್ರದ ಟಯರ್ ಬಿಡುಗಡೆಯಾಗಲಿದೆ ಬಳಿಕ ಇದು ಮಾರುಕಟ್ಟೆಯಲ್ಲಿ ಇರುವ ಶೇ.90 ಭಾಗವನ್ನು ಒಳಗೊಂಡಿರುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಬಿಡುಗಡೆಯ ಕುರಿತು ಅಪೋಲೋ ಟೈರ್ಸ್ ಲಿಮಿಟೆಡ್ ಏಷ್ಯಾ ಪೆಸಿಫಿಕ್‍‍ನ ಅಧ್ಯಕ್ಷ ಸತೀಶ್ ಶರ್ಮಾ ಅವರು ಮಾತನಾಡಿ, ಭಾರತದ ಎಸ್‍‍ಯುವಿ ವಿಭಾಗದತ್ತ ಕಂಪನಿ ಗಮನಹರಿಸುತ್ತಿದೆ. ಎಸ್‍‍ಯುವಿ ವಿಭಾಗದ ವಾಹನಗಳು ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರಣದಿಂದ ಎಸ್‍‍ಯುವಿ ವಿಭಾಗಗಳಿಗಾಗಿ ಟೈರ್‍‍ಗಳ ಉತ್ಪಾದನೆಗೆ ಹೆಚ್ಚಿನ ಗಮನಹರಿಸಿದ್ದೇವೆ ಎಂದು ಹೇಳಿದರು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ವ್ಯಾಪಕವಾದ ಜಾಗತಿಕ ಮಟ್ಟದ ಪರೀಕ್ಷೆಗಳನ್ನು ನಡಿಸಿ ಉತ್ತಮ ಫಲಿತಾಂಶವು ಕೂಡ ದೂರಕಿದೆ ಈ ಎಲ್ಲಾ ಹಂತಗಳನ್ನು ದಾಡಿ ಆಲ್-ಟೆರೈನ್ ವಿಭಾಗದ ಟಯರ್ ಅನ್ನು ಬಿಡುಗಡೆಗೊಳಿಸಿದೆ. ಆಪ್ಟೆರಾ ಎಟಿ2 ಟಯರ್ ಆಲ್-ಟೆರೈನ್ ವಿಭಾಗದಲ್ಲಿ ಪಾರುಪತ್ಯ ಮೆರೆಯಲಿದೆ ಎಂದು ಕಂಪನಿ ನಿರೀಕ್ಷಿಸಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಬಿಡುಗಡೆಯಾಯ್ತು ಅಪೋಲೋ ಆಪ್ಟೆರಾ ಎಟಿ2 ಟಯರ್‍

ಎಸ್ಯುವಿ ವಿಭಾಗದ ವಾಹನ ಖರೀದಿದಾರರ ಸಂಖ್ಖೆ ಹೆಚ್ಚಾಗಿದೆ. ಎಸ್ಯುವಿಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಸುಲಭವಾಗಿ ಸಂಚರಿಸಲು ಸಹಕಾರಿಯಾಗಿದೆ ಮತ್ತು ಅಫ್-ರೋಡ್‍ ವಿಭಾಗದಲ್ಲಿಯೂ ಎಸ್ಯುವಿ ವಾಹನಗಳು ಪಾರುಪತ್ಯವಾಗಿದೆ. ಇದೇ ಕಾರಣದಿಂದ ಅಪೋಲೋ ಟೈರ್ಸ್ ಕೂಡ ಇದನ್ನು ಅರಿತು ಆಲ್-ಟೆರೈನ್ ಟಯರ್‍‍ಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ.

Most Read Articles

Kannada
English summary
Apollo Apterra AT2 All-Terrain Tyres Launched In India: Details & Specs - Read in Kannada
Story first published: Saturday, September 14, 2019, 13:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X