ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುವುದು ಇದೀಗ ಟ್ರೆಂಡ್

ಹೆಚ್ಚಿದ ಜಾಗತಿಕ ತಾಪಮಾನದಿಂದಾಗಿ ಜನಸಾಮಾನ್ಯರ ಬದುಕೇ ಹೈರಾಣಾಗಿದ್ದು, ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗ ವಾಹನ ಸವಾರರೂ ಕೂಡಾ ಬಿಸಿಲ ತಾಪಮಾನಕ್ಕೆ ಬಳಲಿ ಹೋಗಿದ್ದು, ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೆಲವು ಹಳೆಯ ಪದ್ದತಿಗಳತ್ತ ಮುಖಮಾಡುತ್ತಿದ್ದಾರೆ. ಹೀಗೆ ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳಲು ಟೊಯೊಟಾ ಕಾರು ಮಾಲೀಕರೊಬ್ಬರು ಕಾರಿನ ಮೇಲ್ಭಾಗದಲ್ಲಿ ಸೆಗಣಿಯಿಂದ ಕೊಟಿಂಗ್ ಮಾಡಿಸಿ ಸುದ್ದಿಯಾಗಿದ್ದರು.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಬಿಸಿಲಿನಿಂದ ಕಾರಿನ ಪೆಂಟ್ ಹಾಳಾಗದಿರಲಿ ಅಂತ ಬಹುತೇಕ ವಾಹನ ಮಾಲೀಕರು ವಾಹನಗಳಿಗೆ ಪಾಸ್ಟಿಕ್ ಹಾಳೆ ಹೊದಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ವಾಹನಗಳಿಗೆ ಸರಿದೂಗುವ ಹಾಗೆ ಸಿದ್ದಪಡಿಸಲಾಗುವ ಛತ್ರಿಗಳನ್ನು ಬಳಕೆ ಮಾಡುವುದನ್ನು ಕೇಳಿದ್ದೇವೆ. ಆದ್ರೆ ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರಿನ ಮೇಲ್ಭಾಗಕ್ಕೆ ಸಗಣಿ ಮೆತ್ತುತಿರುವು ಇದೀಗ ಟ್ರೆಂಡ್ ಆಗುತ್ತಿದೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಕಳೆದ ಒಂದು ವಾರದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾರಿನ ಮೇಲ್ಭಾಗಕ್ಕೆ ಸಗಣಿಯಿಂದ ಕೊಟಿಂಗ್ ಮಾಡಿಸಿರುವ ಬಗೆಗೆ ಹಲವಾರು ವರದಿಗಳು ಬಿತ್ತರವಾಗುತ್ತಿದ್ದು, ಸಕಲ್ ಟೈಮ್ಸ್ ವರದಿ ಪ್ರಕಾರ ಇದೀಗ ಇದೇ ಪದ್ದತಿಯನ್ನು ಮಹಾರಾಷ್ಟ್ರದ ಪುಣೇಯಲ್ಲಿನ ವೈದ್ಯರೊಬ್ಬರೂ ತಮ್ಮ ಮಹೀಂದ್ರಾ ಎಕ್ಸ್‌ಯುವಿ 500 ಕಾರಿಗೆ ಇದೇ ಪದ್ದತಿಯನ್ನು ಅಳವಡಿಸಲಾಗಿದ್ದು, ಇದೂ ಕೂಡಾ ಸಧ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಹೌದು ಕೆಲ ದಿನಗಳ ಹಿಂದಷ್ಟೆ ತಮ್ಮ ಟೊಯೊಟಾ ಕೊರೆಲ್ಲಾ ಸೆಡಾನ್ ಕಾರಿಗೆ ಸಗಣಿಯನ್ನು ಮೆತ್ತಿದ್ದ ಸೆಜಾಲ್ ಶಾರವರ ಆಲೋಚನೆಗೆ ಮೆಚ್ಚಿ ಇದೀಗ ಮುಂಬೈನಲ್ಲಿರುವ ಟಾಟಾ ಕ್ಯಾನ್ಸರ್ ಹಾಸ್ಪಿಟಲ್ ವೈದ್ಯರಾದ ನವ್‍ನಾಥ್ ದುಧಾಲ್‍‍ರವರು ಸಹ ತಮ್ಮ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿ ಕಾರಿನ ಮೇಲ್ಭಾಗವನ್ನು ಸಂಪೂರ್ಣವಾಗಿ ಸೆಗಣಿಯಿಂದಲೇ ಕೊಟಿಂಗ್ ಮಾಡಿಸಿದ್ದಾರೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಮೇಲೆ ಮೂರು ಕೋತ್ ಸಗಣಿಯನ್ನು ಮೆತ್ತಲಾಗಿದ್ದು, ಇದು ಕೇವಲ ಒಂದು ತಿಂಗಳ ಕಾಲ ಉಳಿಯುತ್ತದೆಯಂತೆ. ಸೂರ್ಯನ ವಿಕಿರಣಗಳು ಕಾರಿನ ಮೇಲ್ಛಾವಣಿಯನ್ನು ನೇರವಾಗಿ ಹಾನಿಗೊಳಿಸುವುದಿಲ್ಲ, ಕಾರಿನೊಳಗಿನ ತಾಪಮಾನವು ಹೊರಗಿನ ತಾಪಮಾನಕ್ಕಿಂತ 5-7 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಹಸುವಿನ ಸಗಣಿಯನ್ನು ನೀರಿನಿಂದ ತೆಗೆಯಲಾಗುತ್ತದೆ ಮತ್ತು ಅದನ್ನು ಹತ್ತಿ ಬಟ್ಟೆಯಿಂದ ಉಜ್ಜಲಾಗುತ್ತದೆ. ಹಸು ಸಗಣಿ ಕಲೆಗಳು ಕಾರಿನ ದೇಹಕ್ಕೆ ಅಂಟಿಕೊಳ್ಳುವುದಿಲ್ಲ ಮತ್ತು ಕಾರಿನ ಬಣ್ಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸ್ವಲ್ಪ ಕಾಲ, ಹಸುವಿನ ಸಗಣಿಯ ವಾಸನೆಯು ಕಾರಿನ ಒಳಭಾಗದಲ್ಲಿ ಕಂಡುಬರುತ್ತದೆಯಾದರೂ ಸ್ವಲ್ಪ ಸಮಯದ ನಂತರ ಆ ವಸನೆಯು ಸಹ ಮಾಯಾವಾಗುತ್ತದೆ ಎಂದು. ಡಾ. ನವ್‍ನಾಥ್ ದುಧಾಲ್‍ ಹೇಳಿಕೊಂಡಿದ್ದಾರೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಹೀಗೆ ಮಾಡುವುದು ಸರಿಯೆ.?

ಡಾ. ನವ್‍ನಾಥ್ ದುಧಾಲ್‍‍ರವರು ಮುಂಬೈನಲ್ಲಿರುವ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದಾರೆ. ಇವರು ಕ್ಯಾನ್ಸರ್ ರೋಗಕ್ಕೆ ಗೋ ಮೂತ್ರವು ಮದ್ದು ಎಂದು ನಂಬಲಾಗಿದ್ದು, ಇವುಗಳ ಆಧಾರದ ಮೇಲೆ ಮತ್ತು ಯಾವುದೇ ಪರೀಶೀಲನೆಯು ಇಲ್ಲದೆ ಕಾರಿನ ಮೇಳೆ ಸಗಣಿಯನ್ನು ಮೆತ್ತುವುದು ಎಷ್ಟರ ಮಟ್ಟಿಗೆ ಸರಿ.?

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಹಸುವಿನ ಸಗಣಿಯಿಂದ ಕಾರಿನ ಮೇಲ್ಪಭಾಗಕ್ಕೆ ಮೆತ್ತಿ, ಶಾಖವನ್ನು ಹಿಮ್ಮೆಟ್ಟಿಸುತ್ತದೆಯೆ ಎಂಬ ಬಗ್ಗೆ ಯಾವುದೇ ಸಂಶೋಧನೆ ಇಲ್ಲ. ಈ ಕಾರ್ಯವನ್ನು ಮೊದಲು ಪರಿಶೀಲಿಸಿ ನಂತರ ಮುಂದುವರೆಯಬೇಕು.

MOST READ: ದಿನಂಪ್ರತಿ ಲಿಫ್ಟ್ ಕೇಳುತ್ತಿದ್ದವನಿಗೆ ಅವನ ಸ್ನೇಹಿತರ ಗುಂಪು ಮಾಡಿದ್ದೇನು ಗೊತ್ತಾ?

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುತಿರುವುದು ಇದೀಗ ಟ್ರೆಂಡ್

ಈ ರೀತಿಯ ಪ್ರಯೋಗವನ್ನು ನಾನು ಒಪ್ಪುವುದಿಲ್ಲ ಏಕೆಂದರೆ ಕಾರಿನಲ್ಲಿ ನೀಡಲಾದ ಕಬ್ಬಿಣವು ಸೂರ್ಯನ ಬೆಳಕನ್ನು ಒಡ್ಡಿದ್ದಾಗ, ಅದು ಬಿಸಿಯಾಗುವುದು ಸಹಜ. ಆದರೆ ಈ ರೀತಿಯಾದ ವಿಧಾನವೂ ನಿಜವಾಗಿಯೂ ಕೆಲಸ ಮಾಡಿದ್ದೇ ಆದಲ್ಲಿ, ಆಗ ವಿಜ್ಞಾನಿ ಮತ್ತು ಸಂಶೋಧಕರು ಅದರ ಮೇಲೆ ಕೆಲಸ ಮಾಡಬೇಕು. ಹಾಗೆ ಮಾಡುವ ಮೂಲಕ ನಾವು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಎಂದು ಸಂರಕ್ಷಿತ ಜೀವವೈವಿಧ್ಯತೆಯ ಉದ್ದೇಶದೊಂದಿಗೆ ಕೆಲಸ ಮಾಡುವ ಸಂಸ್ಥೆಯಾದ ಬಯೋಸ್ಪಿಯರ್ಗಳ ಸಂಸ್ಥಾಪಕ ಅಧ್ಯಕ್ಷ ಸಚಿನ್ ಪುನೆಕರ್ ಹೇಳಿದ್ದಾರೆ.

Image Source: Cartoq

Most Read Articles

Kannada
English summary
Applying Cow Dung On Cars Is Trending In India. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X