ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಜಪಾನ್ ಮೂಲದ ಕಾರು ತಯಾರಕ ಕಂಪನಿ ಮಜ್ದಾ ಕಾರುಗಳಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಕಂಸೊಲ್‍‍ಗಳನ್ನು ಅಳವಡಿಸುವುದು ಅಪಾಯಕಾರಿ ಎಂದು ತಿಳಿಸಿದೆ. ಆದ ಕಾರಣ ಕಂಪನಿಯು ಮುಂದೆ ತಯಾರಿಸಲಿರುವ ಕಾರುಗಳಲ್ಲಿ ಈ ಫೀಚರ್‍ ಅನ್ನು ಅಳವಡಿಸದಿರಲು ನಿರ್ಧರಿಸಿದೆ.

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಕಂಪನಿಯ ಇತ್ತೀಚಿನ ಕಾರ್ ಆದ ಮಜ್ದಾ 3 ಸೆಡಾನ್‍‍ನಲ್ಲಿ ಈ ಫೀಚರ್ ಅನ್ನು ಅಳವಡಿಸಲಾಗಿಲ್ಲ. ಇದರ ಬದಲಿಗೆ ಚಿಕ್ಕ ಗಾತ್ರದ, ನಾನ್-ಟಚ್ ಸ್ಕ್ರೀನ್ ಅನ್ನು ಅಳವಡಿಸಲಿದ್ದು, ಇವುಗಳನ್ನು ಟಾಕ್ಟೈಲ್ ಬಟನ್‍‍ಗಳು ನಿಯಂತ್ರಿಸಲಿವೆ. ಇದರಿಂದಾಗಿ ಚಾಲಕನು ತನ್ನ ಗಮನವನ್ನು ರಸ್ತೆ ಕಡೆಯಿಂದ ಟಚ್‍‍ಸ್ಕ್ರೀನ್ ಕಡೆ ನೀಡದೇ ವಾಹನವನ್ನು ಸುರಕ್ಷಿತವಾಗಿ ಚಲಾಯಿಸ ಬಹುದಾಗಿದೆ. ಹೊಸ ಮಜ್ದಾ 3 ಕಾರಿನಲ್ಲಿ ಕಂಪನಿಯು ಹೆಡ್ಸ್ ಅಪ್ ಡಿಸ್‍‍ಪ್ಲೇ ಯನ್ನು ಪರಿಚಯಿಸಿದ್ದು, ಮಾಹಿತಿಯನ್ನು ಕಾರಿನಲ್ಲಿರುವ ವಿಂಡ್‍‍ಸ್ಕ್ರೀನ್‍‍ನಲ್ಲಿ ತೋರಿಸಲಿದೆ.

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಇದರಿಂದ ಕಾರನ್ನು ಚಲಾಯಿಸುತ್ತಿರುವ ಚಾಲಕನಿಗೆ ಟಚ್‍‍ಸ್ಕ್ರೀನ್‍‍ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಟ‍‍ಚ್‍‍ಸ್ಕ್ರೀನ್‍ ಅಪರೇಟ್ ಮಾಡುವಾಗ ಚಾಲಕನು ತನ್ನ ಗಮನವನ್ನು ಇದರ ಕಡೆಗೆ ಕೊಡುತ್ತಿದ್ದನು.

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಮಜ್ದಾದ ಈ ನಿರ್ಧಾರದ ಹಿಂದೆ ದೊಡ್ಡ ಕಾರಣವಿದೆ. ಚಾಲಕರು ಟಚ್‍‍ಸ್ಕ್ರೀನ್‍‍ಗಳನ್ನು ಅಪರೇಟ್ ಮಾಡುವಾಗ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ.

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಉತ್ತರ ಅಮೇರಿಕಾದ ಹೆ‍‍ಚ್‍ಎಂ‍ಐ ಕಂಪನಿಯ ಮುಖ್ಯ ಎಂಜಿನಿಯರ್ ಮ್ಯಾಥ್ಯು ವಾಲ್‍‍ಬುಯೆನಾರವರು ಈ ಬಗ್ಗೆ ಮೋಟಾರ್ ಅಥಾರಿಟಿಯ ಜೊತೆಗೆ ಮಾತನಾಡಿ, ನಮ್ಮ ಸಂಶೋಧನೆಗಳ ಪ್ರಕಾರ, ಟಚ್ ಸ್ಕ್ರೀನ್ ಹೊಂದಿರುವ ಕಾರ್ ಅನ್ನು ಚಾಲನೆ ಮಾಡುವ ಚಾಲಕನು ಅದನ್ನು ಅಪರೇಟ್ ಮಾಡುವ ಸಂದರ್ಭದಲ್ಲಿ ಯಾವುದೇ ಉದ್ದೇಶವಿಲ್ಲದೇ ಟಾರ್ಕ್ ಸ್ಟೀಯರಿಂಗ್ ವ್ಹೀಲ್‍‍ಗೆ ಹೋಗುತ್ತದೆ. ಇದರಿಂದಾಗಿ ಕಾರು ತನ್ನ ನಿಯಂತ್ರಣವನ್ನು ಕಳೆದುಕೊಂಡು ಲೇನ್‍‍ನಿಂದ ಹೊರಹೋಗುತ್ತದೆ.

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಟಚ್‍‍ಸ್ಕ್ರೀನ್ ಅಪರೇಟ್ ಮಾಡುವಾಗ, ಹೆಚ್ಚಿನ ಸಂದರ್ಭಗಳಲ್ಲಿ ಚಾಲಕರ ಗಮನವು ರಸ್ತೆಯ ಕಡೆಗೆ ಇರದ ಕಾರಣ ನಾವು ನಮ್ಮ ಮುಂಬರಲಿರುವ ಕಾರುಗಳಿಂದ ಟಚ್‍‍ಸ್ಕ್ರೀನ್ ಅನ್ನು ತೆಗೆದುಹಾಕಲಿದ್ದೇವೆ ಎಂದು ತಿಳಿಸಿದರು.

MOST READ: ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಬಹುತೇಕ ಕಾರು ತಯಾರಕರು ಈ ಕಾರಣಗಳಿಗಾಗಿ ಕಾರುಗಳಲ್ಲಿ ಟಚ್‍‍ಸ್ಕ್ರೀನ್ ಅಳವಡಿಸುತ್ತಾರೆ.

ಟಚ್‍‍ಸ್ಕ್ರೀನ್ ನೋಡಲು ಆಕರ್ಷಕವಾಗಿ ಕಾಣುತ್ತದೆ. ಕಾರು ಖರೀದಿದಾರರು ಇದನ್ನು ಇಷ್ಟ ಪಡುತ್ತಾರೆ.

ಸ್ಮಾರ್ಟ್‍‍ಫೋನ್‍‍ಗಳು ಹೆಚ್ಚಾದಂತೆಲ್ಲಾ ಟಚ್‍‍ಸ್ಕ್ರೀನ್‍‍ಗಳ ಬಳಕೆಯು ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆಗಳೆಂದರೆ ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ.

ಕಾರಿನ ತಯಾರಕ ವೆಚ್ಚವನ್ನು ಕಡಿಮೆಗೊಳಿಸುವ ಕಾರಣಕ್ಕೆ ಟಚ್‍‍ಸ್ಕ್ರೀನ್‍‍ಗಳನ್ನು ಅಳವಡಿಸುತ್ತಾರೆ. ಟಚ್‍‍ಸ್ಕ್ರೀನ್ ಇಲ್ಲದ ಕಾರುಗಳಲ್ಲಿ ಬಟನ್‍‍ಗಳಿಗಾಗಿ, ವಯರ್‍‍ಗಳಿಗಾಗಿ ಪ್ರತ್ಯೇಕವಾಗಿ ವೆಚ್ಚ ಮಾಡಬೇಕಾಗುತ್ತದೆ.

ಟಚ್‍‍ಸ್ಕ್ರೀನ್‍‍ಗಳು ಡ್ಯಾಶ್‍‍ಬೋರ್ಡಿನ ಅಂದವನ್ನು ಹೆಚ್ಚಿಸುತ್ತವೆ.

MOST READ: ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಬಹುತೇಕ ಕಾರು ತಯಾರಕರು ಚಾಲಕರಿಗೆ ಟಚ್‍‍ಸ್ಕ್ರೀನ್‍‍ಗಳನ್ನು ವಾಹನ ಚಾಲನೆಯಲ್ಲಿದ್ದಾಗ ಬಳಸದಂತೆ ಸೂಚನೆ ನೀಡುತ್ತಲೇ ಇರುತ್ತಾರೆ. ಆದರೆ ಚಾಲಕರು ಈ ಸೂಚನೆಗಳನ್ನು ಪಾಲಿಸುವುದೇ ಇಲ್ಲ. ಪ್ರತಿ ಬಾರಿಯೂ ಟಚ್‍‍ಸ್ಕ್ರೀನ್ ಅಪರೇಟ್ ಮಾಡುವಾಗ ಕಾರನ್ನು ನಿಲ್ಲಿಸಿ ಅಪರೇಟ್ ಮಾಡುವುದು ಆಗದ ಕೆಲಸ. ಆದ ಕಾರಣ ಮಜ್ದಾ ಸರಿಯಾದ ಕ್ರಮವನ್ನು ತೆಗೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ಇದೇ ಕ್ರಮವನ್ನು ಅನುಸರಿಸಿದರೆ ಆಶ್ಚರ್ಯವಿಲ್ಲ.

MOST READ: ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳುml

ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಮಜ್ದಾ ಕಂಪನಿಯು ತನ್ನ ಕಾರುಗಳ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಟ‍ಚ್‍‍‍ಸ್ಕ್ರೀನ್‍‍ಗಳನ್ನು ತೆಗೆದು ಹಾಕಿ ಮಜ್ದಾ ಕಂಪನಿಯು ಟೆಕ್ನಾಲಜಿಯಲ್ಲಿ ಹಿಂದೆ ಬಿದ್ದಿದೆ ಎಂದೆನಿಸಿದರೂ ತನ್ನ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಿದೆ.

Most Read Articles

Kannada
English summary
Are touchscreens in vehicles dangerous? Mazda thinks so - Read in kannada
Story first published: Tuesday, June 18, 2019, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X