ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಭಾರತದ ಟಾಪ್ ಮೋಟಾರ್ ಕಾರ್ ರೇಸರ್‍‍ಗಳಲ್ಲಿ ಒಬ್ಬರಾದ ಅರ್ಜುನ್ ಮೈನಿರವರು ಈ ವಾರಾಂತ್ಯದಲ್ಲಿ ಫ್ರಾನ್ಸ್ ನಲ್ಲಿ ನಡೆಯಲಿರುವ 24 ಅವರ್ಸ್ ಲೆ ಮನ್ಸ್ ಸೀರಿಸ್‍‍‍ನಲ್ಲಿ ಸ್ಪರ್ಧಿಸಲಿದ್ದಾರೆ. 21 ವರ್ಷ ವಯಸ್ಸಿನ ಅರ್ಜುನ್ ರವರು ಈ ಐತಿಹಾಸಿಕ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಕಿರಿಯ ವಯಸ್ಸಿನ ಭಾರತೀಯ ರೇಸರ್ ಆಗಿದ್ದಾರೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ನಾರಾಯಣ್ ಕಾರ್ತಿಕೆಯನ್ ಹಾಗೂ ಕರುಣ್ ಚಂದೋಕ್‍‍ರವರ ನಂತರ ಈ ರೇಸಿನಲ್ಲಿ ಭಾಗವಹಿಸುತ್ತಿರುವ ಮೂರನೇಯ ಭಾರತೀಯರಾಗಿದ್ದಾರೆ. ಅರ್ಜುನ್‍‍ರವರು ಆರ್‍ಎಲ್‍‍ಆರ್ ಎಂ‍‍ಸ್ಪೋರ್ಟ್ ಟೀಂನ ಸದಸ್ಯರಾಗಿದ್ದು, ಎಲ್‍ಎಂ‍‍ಪಿ2 ಕ್ಲಾಸ್‍‍ನ ಈ ಸ್ಪರ್ಧೆಯಲ್ಲಿ, ಒರೆಕಾ 07 ಕಾರನ್ನು ಚಲಾಯಿಸಲಿದ್ದಾರೆ. ಯೂರೋಪಿಯನ್ ಲೇ ಮನ್ಸ್ ಸೀರಿಸ್‍‍ನಲ್ಲಿ ಅರ್ಜುನ್‍‍ರವರು 19 ಚಾಲಕರ ಜೊತೆಗೆ ಸ್ಪರ್ಧಿಸಲಿದ್ದಾರೆ. ಇವರ ಜೊತೆಯಲ್ಲಿ ಫಾರ್ಮುಲಾ 2 ರೇಸಿಂಗ್‍‍ನಲ್ಲಿ ಅನುಭವ ಹೊಂದಿರುವ ಜಾನ್ ಫೆರಾರೊ ಹಾಗೂ ನಾರ್ಮನ್ ನಾಟೊರವರು ಕಾರ್ ಚಲಾಯಿಸಲಿದ್ದಾರೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಹಲವಾರು ವರ್ಷಗಳಿಂದ ಅಯೋಜಿಸಲಾಗುತ್ತಿರುವ 24 ಅವರ್ಸ್ ಲೇ ಮನ್ಸ್ ಸೀರಿಸ್‍ ಸ್ಪರ್ಧೆಯಲ್ಲಿ ರೇಸಿಂಗ್ ಇತಿಹಾಸದ ಖ್ಯಾತನಾಮರು ಭಾಗವಹಿಸುತ್ತಾ ಬಂದಿದ್ದಾರೆ. ಇವರಲ್ಲಿ ಫಾರ್ಮುಲಾ ಒನ್ ಚಾಂಪಿಯನ್ ಫರ್ನಾಂಡೊ ಅಲೊನ್ಸೊ ಸಹ ಭಾಗವಹಿಸಿದ್ದಾರೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಇವರುಗಳಲ್ಲದೇ ನಾಲ್ಕು ಬಾರಿಯ ವರ್ಲ್ಡ್ ಟೂರಿಂಗ್ ವಿಜೇತರಾದ ಆಂಡಿ ಪ್ರಿಲಾಕ್ಸ್, ಲೇ ಮನ್ಸ್ ವಿಜೇತರಾದ ಲಾಟೆರರ್, ನೀಲ್ ಜಾನಿ ಹಾಗೂ ಫಾರ್ಮುಲಾ ಒನ್ ರೇಸ್ ವಿಜೇತರಾದ ಗಿಯಾನ್ ಕಾರಿಯೊ ಫಿಸಿಚೆಲ್ಲಾರವರು ಸೇರಿದ್ದಾರೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ರೇಸಿಂಗ್‍‍ನ ದೊಡ್ಡ ಕ್ರೀಡಾವಳಿಯ ಬಗ್ಗೆ ಮಾತನಾಡಿದ ಅರ್ಜುನ್‍‍ರವರು ಈ ರೀತಿಯ ಮೋಟಾರ್‍‍ಸ್ಪೋರ್ಟ್ ರೇಸ್‍‍ಗಳಲ್ಲಿ ಭಾಗವಹಿಸುವುದು ಒಂದು ದೊಡ್ಡ ಕನಸು. ಈ ರೇಸಿಂಗ್‍‍ನ ಟೆಸ್ಟ್ ನಲ್ಲಿ ಭಾಗವಹಿಸಿದ್ದು ಸಹ ವಿಶೇಷವಾದ ಅನುಭವವಾಗಿತ್ತು. ನಾನು ಈ ರೇಸಿನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು. ಈ ರೇಸಿನಲ್ಲಿರುವ ನಿಜವಾದ ಸವಾಲೆಂದರೆ ಬೇರೆ ಎಲ್ಲಾ ರೇಸುಗಳಲ್ಲಿದ್ದ ಸಮಯಕ್ಕಿಂತ ಹೆಚ್ಚಿನ ಸಮಯ ಕಾರಿನಲ್ಲಿರಬೇಕಾಗುತ್ತದೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ನಾನು ಹೆಚ್ಚಿನ ಸ್ಥಿರತೆಯನ್ನು ಕಾಯ್ದುಕೊಳ್ಳಲಿದ್ದು, ಇದರಿಂದಾಗಿ ಒಳ್ಳೆಯ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಲಿದೆ. ಇಲ್ಲಿರುವ ಗಮನಿಸಬೇಕಾದ ವಿಷಯವೆಂದರೆ, ಈ ಎಂಡ್ಯೂರೆನ್ಸ್ ರೇಸಿಂಗ್‍‍ನಲ್ಲಿ ಟ್ರಾಫಿಕ್‍‍ನಲ್ಲಿಯೂ ಸಹ ಕಾರ್ ಅನ್ನು ಚಲಾಯಿಸ ಬೇಕಾಗುತ್ತದೆ ಎಂದು ಹೇಳಿದರು.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಈ ರೇಸಿನಲ್ಲಿರುವ ಮತ್ತೊಂದು ಸವಾಲೆಂದರೆ ನಾವು ನಿಧಾನವಾಗಿರುವ ಕಾರಿನಿಂದ ನಮ್ಮ ಕಾರು ಎಷ್ಟು ಸಮಯ ಹಿಂದಿದೆ ಎಂಬುದನ್ನು ಹಾಗೂ ಮುಂದಿರುವ ಚಾಲಕನು ನಮ್ಮ ಕಾರ್ ಅನ್ನು ತನ್ನ ಕಾರಿನಲ್ಲಿರುವ ಮಿರರ್‍‍ನಿಂದ ನೋಡುತ್ತಿರುವುದನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಈ ರೀತಿಯ ಬ್ಯಾಲೆನ್ಸ್ ಮಾಡುವುದು ಸಹ ದೊಡ್ಡ ಸವಾಲಾಗಿದೆ. ನಾನು ಈ ರೇಸಿನ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದು, ರೇಸಿನಲ್ಲಿ 24 ಗಂಟೆ ಬಹಳಷ್ಟಾಗಿದ್ದು, ಏನು ಬೇಕಾದರೂ ಆಗಬಹುದು ಎಂದು ತಿಳಿಸಿದರು.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಸಹಜವಾಗಿ ನಾನು ಕೈಲಾದ ಮಟ್ಟಿಗೆ ಉತ್ತಮವಾದುದನ್ನೇ ಮಾಡಲಿದ್ದು, ನನಗೆ ಹಾಗೂ ನನ್ನ ತಂಡಕ್ಕೆ ಒಳ್ಳೆಯ ಫಲಿತಾಂಶವನ್ನು ನೀಡಲಿದ್ದೇನೆ. ನಾನು ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳಲಿದ್ದೇನೆ, ಏಕೆಂದರೆ ಈ ರೀತಿಯ ಐತಿಹಾಸಿಕ ರೇಸಿಂಗ್‍‍ನಲ್ಲಿ ಭಾಗವಹಿಸುವ ಅವಕಾಶಗಳು ಪ್ರತಿದಿನವೂ ಸಿಗುವುದಿಲ್ಲ ಎಂದು ಹೇಳಿದರು.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

24 ಅವರ್ಸ್ ಲೇ ಮನ್ಸ್ ಸೀರಿಸ್ ರೇಸಿಂಗ್ ವರ್ಷದ ಅತಿದೊಡ್ಡ ಹಾಗೂ ಜನಪ್ರಿಯವಾದ ರೇಸಿಂಗ್‍‍ಗಳಲ್ಲಿ ಒಂದಾಗಿದೆ. 1923ರಿಂದ ಈ ರೇಸಿಂಗ್‍‍ನಲ್ಲಿ 150ಕ್ಕೂ ಹೆಚ್ಚು ಕಾರು ಚಾಲಕರು ವಿವಿಧ ಶ್ರೇಣಿಯಲ್ಲಿ, ಹಾಗೂ ವಿಭಾಗಗಳಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ. ಈ ವರ್ಷದ ರೇಸಿಂಗ್ ಅನ್ನು ಜೂನ್ 15 - 16ರಂದು ಆಯೋಜಿಸಲಾಗಿದೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

2.5 ಲಕ್ಷಕ್ಕೂ ಹೆಚ್ಚು ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಬಂದಿದ್ದು, 24 ಗಂಟೆಗಳ ಅವಧಿಯ ರೇಸಿಂಗ್‍‍ನಲ್ಲಿ 5,000 ಕಿ.ಮೀಗೂ ಹೆಚ್ಚು ದೂರವನ್ನು ಕ್ರಮಿಸಲಿದ್ದಾರೆ. ಈ ಸ್ಪರ್ಧೆಯಲ್ಲಿರುವ ಮುಖ್ಯವಾದ ಆಕರ್ಷಣೆಯೆಂದರೆ ಹೆಚ್ಚು ಉದ್ದವಿರುವ ಟ್ರಾಕ್‍‍ಗಳು. ಇವುಗಳಿಂದಾಗಿ ಕಾರುಗಳು 300 ಕಿ.ಮೀ ವೇಗವನ್ನು ಮುಟ್ಟಲಿವೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಅರ್ಜುನ್‍‍ರವರ ಆರ್‍ಎಲ್‍‍ಆರ್ ಎಂ‍‍ಸ್ಪೋರ್ಟ್‍‍ನ ಮುಖ್ಯಸ್ಥರು ಮಾತನಾಡಿ, ಈ ವಾರಾಂತ್ಯವು ಹೆಚ್ಚಿನ ಅನುಭವವನ್ನು ಅರ್ಜುನ್‍‍ರವರಿಗೆ ನೀಡಲಿದೆ. ಸಿಂಗಲ್ ಸೀಟಿನಲ್ಲಿ ಚಲಾಯಿಸುತ್ತಾ ಬಂದಿರುವ ಅವರು ಹೆಚ್ಚಿನ ಚಾಲನಾ ಕೌಶಲ್ಯವನ್ನು ಹೊಂದಿ ರೇಸಿನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ. ಅವರು ಈ ಸ್ಪರ್ಧೆಯಲ್ಲಿ ವೇಗದ ಚಾಲಕರಾಗಿ ಹೊರಹೊಮ್ಮುತಾರೆಂಬ ವಿಶ್ವಾಸವಿದೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ನಾರ್ಮನ್ ನಾಟೊರವರು ನಮ್ಮ ತಂಡದ ಬಹುದೊಡ್ಡ ಆಸ್ತಿಯಾಗಿದ್ದಾರೆ. ನಾರ್ಮನ್, ಅರ್ಜುನ್ ಹಾಗೂ ಜಾನ್ ಫೆರಾರೊರವರ ಸಂಯೋಜನೆಯಿಂದ ನಮ್ಮ ತಂಡವು ಅದ್ಭುತವಾಗಿದ್ದು, ಇದು ರೇಸಿನಲ್ಲಿ ನಮಗೆ ಸಹಾಯವಾಗಲಿದೆ ಎಂದು ತಿಳಿಸಿದರು.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮೋಟಾರ್‍‍ಸ್ಪೋರ್ಟ್ಸ್ ನಿಧಾನವಾಗಿ, ಅಷ್ಟೇ ವೇಗವಾಗಿ ಭಾರತದಲ್ಲಿ ಜನಪ್ರಿಯವಾಗುತ್ತಿದೆ. ಈ ಸ್ಪೋರ್ಟಿನಲ್ಲಿ ಬಹಳಷ್ಟು ಮಂದಿ ಹಾಗೂ ಬಹಳಷ್ಟು ಕಾರು ತಯಾರಕ ಕಂಪನಿಗಳು ತೊಡಗಿಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದ ಭಾರತದಲ್ಲಿರುವ ಬಹಳಷ್ಟು ಪ್ರತಿಭೆಗಳು ಹೊರಬರಲಿದ್ದಾರೆ.

ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಅರ್ಜುನ್ ಮೈನಿರವರಿಗೆ ಅಭಿನಂದನೆಗಳು. ಅವರಿಗೆ ಅಲ್ ದಿ ಬೆಸ್ಟ್ ಹೇಳುತ್ತಾ ಈ ಸ್ಪರ್ಧೆಯಲ್ಲಿ ಗೆಲ್ಲಲಿ ಎಂದು ಹಾರೈಸುತ್ತೇವೆ.

Most Read Articles

Kannada
English summary
Arjun Maini Becomes Youngest Indian To Race At Le Mans — Catch The Action This Weekend - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X