ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಅಶೋಕ್ ಲೇಲ್ಯಾಂಡ್ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಭಾರೀ ತೂಕದ ಕಮರ್ಶಿಯಲ್ ವಾಹನಗಳನ್ನು ಬಿ‍ಎಸ್6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಿದೆ. ಭಾರತ ಮೂಲದ ಅಶೋಕ್ ಲೇಲ್ಯಾಂಡ್ ಕಂಪನಿಯು ತನ್ನ ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳಿಗಾಗಿ ಈಗಾಗಲೇ ಬಿ‍ಎಸ್6 ಪ್ರಮಾಣಪತ್ರವನ್ನು ಪಡೆದಿರುವುದಾಗಿ ತಿಳಿಸಿದೆ.

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಈ ಮೂಲಕ ಈ ಸಾಧನೆ ಮಾಡಿದ ಮೊದಲ ಕಮರ್ಷಿಯಲ್ ವಾಹನ ತಯಾರಕ ಕಂಪನಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿರುವ ವಾಹನ ಕಂಪನಿಗಳು ಸರ್ಕಾರವು ನಿಗದಪಡಿಸಿರುವ ಬಿ‍ಎಸ್6 ಗಡುವಿನತ್ತ ಸಾಗುತ್ತಿವೆ. ಬಿ‍ಎಸ್6 ಮಾಲಿನ್ಯ ನಿಯಮವು, ಯುರೋ6 ಮಾಲಿನ್ಯ ನಿಯಮಗಳಿಗೆ ಸಮನಾಗಿದೆ. ಬಿಎಸ್4 ನಿಯಮದಿಂದ ಬಿಎಸ್6 ನಿಯಮಗಳಿಗೆ ಬದಲಾಗಲು ಬಹುತೇಕ ಎಲ್ಲಾ ವಾಹನ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿವೆ.

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಇದಕ್ಕಾಗಿ ತಮ್ಮ ವಾಹನಗಳಲ್ಲಿರುವ ಬಿಡಿಭಾಗಗಳನ್ನು ಮರುವಿನ್ಯಾಸಗೊಳಿಸುತ್ತಿವೆ. ಇನ್ನೂ ಕೆಲ ಕಂಪನಿಗಳು ಹಳೆಯ ಎಂಜಿನ್‌ಗಳನ್ನು ಸ್ಥಗಿತಗೊಳಿಸಿ, ಹೊಸ ಎಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿವೆ. ಅಶೋಕ್ ಲೇಲ್ಯಾಂಡ್, ಕಂಪನಿಯು ಹೊಸ ಮಾಲಿನ್ಯ ನಿಯಮಗಳ ಅನುಷ್ಠಾನದಲ್ಲಿ ಉಳಿದ ಕಂಪನಿಗಳಿಗಿಂತ ಬಹಳಷ್ಟು ಮುಂದಿದೆ.

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಬಿಎಸ್6 ಮಾಲಿನ್ಯ ನಿಯಮಗಳು 2019ರ ಏಪ್ರಿಲ್ 01ರಿಂದ ಜಾರಿಗೆ ಬರಲಿವೆ. ಅಶೋಕ್ ಲೇಲ್ಯಾಂಡ್ ಏಳು ತಿಂಗಳ ಮುಂಚೆಯೇ ಈ ನಿಯಮಗಳನ್ನು ಅಳವಡಿಸಿಕೊಂಡಿದೆ. ಅಶೋಕ್ ಲೇಲ್ಯಾಂಡ್ ವಿಶ್ವದ ಜನಪ್ರಿಯ ಕಮರ್ಷಿಯಲ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ.

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಚೆನ್ನೈ ಮೂಲದ ಈ ಕಂಪನಿಯು ಟ್ರಕ್‌ಗಳ ತಯಾರಿಕೆಯಲ್ಲಿ ವಿಶ್ವದಲ್ಲಿ ಹತ್ತನೇ ಅತಿದೊಡ್ಡ ಕಂಪನಿಯಾಗಿದ್ದರೆ, ಬಸ್ಸುಗಳ ತಯಾರಿಕೆಯಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ತಯಾರಕ ಕಂಪನಿಯಾಗಿದೆ. ಭಾರತದಲ್ಲಿ, ಎರಡನೇ ಅತಿ ದೊಡ್ಡ ಕಮರ್ಷಿಯಲ್ ವಾಹನ ತಯಾರಕ ಕಂಪನಿಯಾಗಿದೆ.

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಅಶೋಕ್ ಲೇಲ್ಯಾಂಡ್ ಈಗಾಗಲೇ ಬಿಎಸ್6 ಎಂಜಿನ್ ತಂತ್ರಜ್ಞಾನಗಳನ್ನು ಹೊಂದಿದೆ. ಅಶೋಕ್ ಲೇಲ್ಯಾಂಡ್ ಬಿಎಸ್6 ಎಂಜಿನ್ ಹೊಂದಿದ್ದ ತನ್ನ ಟ್ರಕ್ ಅನ್ನು 2016ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತ್ತು.

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಈಗ, ಎಲ್ಲಾ ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳಲ್ಲೂ ಬಿಎಸ್6 ಎಂಜಿನ್ ಅಳವಡಿಸಲಾಗಿದೆ ಎಂದು ತಿಳಿಸಿದೆ. ಇವುಗಳಲ್ಲಿ 16.2 ಟನ್ ಹಾಗೂ ಅದಕ್ಕಿಂತ ಹೆಚ್ಚಿನ ಜಿವಿಡಬ್ಲ್ಯೂ (ಒಟ್ಟು ವಾಹನ ತೂಕ) ಹೊಂದಿರುವ ಎಲ್ಲಾ ಟ್ರಕ್‌ಗಳು ಸೇರಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಅಶೋಕ್ ಲೇಲ್ಯಾಂಡ್‌ನ ಅಧ್ಯಕ್ಷರಾದ ಧೀರಜ್ ಹಿಂದೂಜಾರವರು ಮಾತನಾಡಿ, ಬಿಎಸ್4 ನಿಂದ ಬಿಎಸ್6 ಗೆ ಬದಲಿಸಲು ನೀಡಿದ ಅಲ್ಪ ಅವಧಿಯಲ್ಲಿಯೇ ನಾವು ವ್ಯಾಪಕವಾದ ಪರೀಕ್ಷೆಯನ್ನು ಮಾಡಿದ್ದೇವೆ. ಹೊಸ ನಿಯಮಗಳ ಜಾರಿಗೆ ಇನ್ನೂ 7 ತಿಂಗಳುಗಳು ಬಾಕಿ ಇದ್ದು, ನಮ್ಮ ಕಂಪನಿಯು ಗ್ರಾಹಕರಿಗೆ ಉತ್ತಮವಾದ ಹಾಗೂ ಸ್ಪರ್ಧಾತ್ಮಕವಾದ ಪರಿಹಾರವನ್ನು ನೀಡುವ ನಂಬಿಕೆಯಿದೆ.

MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಕಸ್ಟಮೈಸ್ ಮಾಡಿದ ವಿಧಾನದೊಂದಿಗೆ ಮಾರುಕಟ್ಟೆಯ ಅಗತ್ಯಗಳಿಗಾಗಿ ಸ್ಥಳೀಯ ಸಂಶೋಧನೆ ಹಾಗೂ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಅಶೋಕ್ ಲೇಲ್ಯಾಂಡ್ ತನ್ನ ಸರಣಿಯಲ್ಲಿರುವ ಎಲ್ಲಾ ಎಲ್‌ಸಿವಿ (ಲಘು ಕಮರ್ಷಿಯಲ್ ವಾಹನಗಳು) ಹಾಗೂ ಐಸಿವಿಗಳನ್ನು (ಇಂಟರ್‍‍ಮೀಡಿಯೆಟ್ ಕಮರ್ಷಿಯಲ್ ವಾಹನಗಳು) ಶೀಘ್ರದಲ್ಲೇ ಬಿಎಸ್6 ನಿಯಮಗಳಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದೆ.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದ ಆಟೋಮೊಬೈಲ್ ಉದ್ಯಮವು ಸದ್ಯಕ್ಕೆ ನಿಧಾನಗತಿಯನ್ನು ಎದುರಿಸುತ್ತಿದೆ. ಇದರಿಂದ ಭಾರೀ ಗಾತ್ರದ ಕಮರ್ಷಿಯಲ್ ವಾಹನ ಉದ್ಯಮವು ಸಹ ಹೊರತಾಗಿಲ್ಲ. ಅಶೋಕ್ ಲೇಲ್ಯಾಂಡ್ ಕಂಪನಿ ಕೂಡ ಇದರ ಪರಿಣಾಮವನ್ನು ಎದುರಿಸಿದೆ. ಇದರಿಂದಾಗಿ ಕಂಪನಿಯು 2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ, 2019 ರ ಆಗಸ್ಟ್ ತಿಂಗಳಿನಲ್ಲಿ ಲಘು ಕಮರ್ಷಿಯಲ್ ವಾಹನಗಳ ಮೇಲೆ 50% ಹಾಗೂ ಮಧ್ಯಮ ಮತ್ತು ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳ ಮೇಲೆ 63%ವರೆಗೂ ಕುಸಿತ ಕಂಡಿದೆ.

ಬಿ‍ಎಸ್6 ಎಂಜಿನ್ ಹೊಂದಲಿವೆ ಅಶೋಕ್ ಲೇಲ್ಯಾಂಡ್ ಟ್ರಕ್‍‍ಗಳು

ಇದರ ಜೊತೆಗೆ ಕಂಪನಿಯು, ವಾಹನ ಮಾರುಕಟ್ಟೆಯು ಚೇತರಿಸಿಕೊಂಡು ಮಾರಾಟ ಪ್ರಮಾಣವು ಹೆಚ್ಚಾಗಬಹುದೆಂಬ ವಿಶ್ವಾಸವನ್ನು ಹೊಂದಿದೆ. ಆದ ಕಾರಣ ಅಶೋಕ್ ಲೇಲ್ಯಾಂಡ್ ಬಿಎಸ್6 ವಾಹನಗಳನ್ನು ಅಭಿವೃದ್ಧಿ ಪಡಿಸಿದೆ.

Most Read Articles

Kannada
English summary
Ashok Leyland Becomes First CV Manufacturer With BS-VI Certification For Its Heavy Trucks Range - Read in kannada
Story first published: Wednesday, September 4, 2019, 11:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X