ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

ಬ್ರಿಟಿಷ್ ಮೂಲದ ಲಗ್ಷುರಿ ಕಾರು ತಯಾರಕ ಕಂಪನಿ ಆಸ್ಟನ್ ಮಾರ್ಟಿನ್ ತನ್ನ ವಾಂಟೇಜ್ ಎಎಂಆರ್ ಕಾರನ್ನು ಅನಾವರಣಗೊಳಿಸಿದೆ. ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಕೇವಲ 200 ಕಾರುಗಳನ್ನು ಮಾರಾಟ ಮಾಡಲಿದ್ದು, ಈ ಪೈಕಿ 59 ಕಾರುಗಳನ್ನು ವಾಂಟೇಜ್ 59 ಮಾದರಿಯಲ್ಲಿ ಬಿಡುಗಡೆ ಮಾಡಲಾಗುವುದು.

ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಮಾದರಿಯು ಸಾರ್ವಜನಿಕವಾಗಿ, ಈ ವಾರಾಂತ್ಯದಲ್ಲಿ ಬೆಲ್ಜಿಯಂ ನಲ್ಲಿ ಜರುಗಲಿರುವ ಸ್ಪಾ ಫ್ರಾಂಕೊರ್ ಚ್ಯಾಂಪ್ಸ್ ಸರ್ಕಿಟ್ ನ ಮುಂದಿನ ಹಂತದ ವರ್ಲ್ಡ್ ಎಂಡ್ಯೂರೆನ್ಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದೆ. ವಾಂಟೇಜ್ ಎಎಂಆರ್ ನಲ್ಲಿ 7 ಸ್ಪೀಡಿನ ಡಾಗ್ ಲೆಗ್ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಈ ಟ್ರಾನ್ಸ್ ಮಿಷನ್ ನಲ್ಲಿರುವ ಮೊದಲ ಗೇರ್ ಅನ್ನು ಎಡ ಭಾಗದಿಂದ ಮತ್ತು ನ್ಯೂಟ್ರಲ್ ನ ಕೆಳಭಾಗದಿಂದ ಬದಲಾಯಿಸಬಹುದು.

ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

ಆಸ್ಟನ್ ಮಾರ್ಟಿನ್ ಅಭಿವೃದ್ಧಿ ಪಡಿಸಿರುವ ಹೊಸ ಆಮ್ ಶಿಫ್ಟ್ ಟೆಕ್ನಾಲಜಿಯನ್ನು ಈ ಹೊಸ ಗೇರ್ ಬಾಕ್ಸ್ ನಲ್ಲಿ ಅಳವಡಿಸಲಾಗಿದ್ದು, ಗೇರ್ ಗಳ ಡೌನ್ ಶಿಫ್ಟ್ ವೇಳೆಯಲ್ಲಿ ರೆವ್ ಮ್ಯಾಚ್ ಮಾಡಲು ಮತ್ತು ಥ್ರಾಟಲ್ ಪೆಡಲ್ ಗಳನ್ನು ಲಿಫ್ಟ್ ಮಾಡದೇ ಗೇರ್ ಗಳನ್ನು ಬದಲಾಯಿಸಲು ಸಹಕಾರಿಯಾಗಿರಲಿವೆ.

ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

ಈ ಗೇರ್ ಬಾಕ್ಸ್ ಅನ್ನು ರೆಗ್ಯುಲರ್ ವಾಂಟೇಜ್ ನಲ್ಲಿ ಮುಂದಿನ ವರ್ಷದಿಂದ ಅಳವಡಿಸಲಾಗುವುದು. ಈ ಗೇರ್ ಬಾಕ್ಸ್ ಅನ್ನು ಅಳವಡಿಸುವುದರಿಂದ, ರೆಗ್ಯುಲರ್ ಆಟೋಮ್ಯಾಟಿಕ್ ವಾಂಟೇಜ್ ಸ್ಪೋರ್ಟ್ಸ್ ಕಾರುಗಳಿಗೆ ಹೋಲಿಸಿದರೆ, ಹೊಸ ವಾಂಟೇಜ್ ಎಎಂಆರ್ ಕಾರು 95 ಕೆ.ಜಿ ಗಳಷ್ಟು ಕಡಿಮೆ ತೂಕವನ್ನುಹೊಂದಲಿದೆ.

ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

ಈ ಹೊಸ ರೀತಿಯ ಡಾಗ್ ಲೆಗ್ ಗೇರ್ ಬಾಕ್ಸ್ ನಿಂದ ಎಂಜಿನ್ ಅನ್ನು ಸ್ವಲ್ಪ ಮಟ್ಟಿಗೆ ತಿರುಚಲಾಗಿದೆ. ಮರ್ಸಿಡಿಸ್ ಎಎಂಜಿ ಯಲ್ಲಿ 4.0 ಲೀಟರಿನ್ ಟ್ವಿನ್ ಟರ್ಬೋ ವಿ8 ಎಂಜಿನ್ ಇದ್ದು, 503 ಬಿಹೆಚ್‍ಪಿ ಉತ್ಪಾದಿಸುತ್ತದೆ, ಟಾರ್ಕ್ ಅನ್ನು 625 ಎನ್ಎಂ ಗೆ ಸೀಮಿತಗೊಳಿಸಲಾಗಿದೆ. ಇದು ರೆಗ್ಯುಲರ್ ವಾಂಟೇಜ್ ಗಿಂತ 60 ಎನ್ಎಂ ಕಡಿಮೆಯಾಗಿದೆ. ವಾಂಟೇಜ್ ಎಎಂಆರ್ ನಲ್ಲಿ 0 - 100 ಕಿ.ಮೀ ವರೆಗಿನ ಸ್ಪ್ರಿಂಟ್ ಸಮಯವು 4.0 ಸೆಕೆಂಡ್ ಆಗಿರಲಿದ್ದು, ಇದು ರೆಗ್ಯುಲರ್ ವಾಂಟೇಜ್ ಗಿಂತ 3/10ರಷ್ಟು ಕಡಿಮೆಯಾಗಿದೆ. ಆದರೆ ಟಾಪ್ ಸ್ಪೀಡ್ ಪ್ರತಿ ಕಿ.ಮೀ/ಗಂಟೆಗೆ 314 ಆಗಿರಲಿದೆ.

ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಕಾರಿನ ವೇಗವನ್ನು ನಿಯಂತ್ರಿಸಲು ಕಾರ್ಬನ್ ಸೆರಾಮಿಕ್ ಬ್ರೇಕ್ ಗಳನ್ನು ಅಳವಡಿಸಲಾಗಿದ್ದು, ಅವು ಮುಂಭಾಗದಲ್ಲಿ 410 ಎಂಎಂ ಮತ್ತು ಹಿಂಭಾಗದಲ್ಲಿ 360 ಎಂಎಂ ಗಾತ್ರದಲ್ಲಿವೆ. ಸ್ಟಾಂಡರ್ಡ್ ವಾಂಟೇಜ್ ಮಾದರಿಯಲ್ಲಿರುವಂತೆ ಈ ಕಾರಿನಲ್ಲೂ ಅಡಾಪ್ಟಿವ್ ಡ್ಯಾಂಪರ್ ಗಳನ್ನು ಅಳವಡಿಸಲಾಗಿದೆ.

ಸೀಮಿತ ಆವೃತ್ತಿಯ ಆಸ್ಟನ್ ಮಾರ್ಟಿನ್ ವಾಂಟೇಜ್ ಎಎಂಆರ್ ಅನಾವರಣ

ಆಸ್ಟನ್ ಮಾರ್ಟಿನ್ ಹೊಸ ವಾಂಟೇಜ್ ಎಎಂಆರ್ ಕಾರನ್ನು ಐದು ವಿವಿಧ ವಿನ್ಯಾಸದ ಮಾದರಿಗಳಲ್ಲಿ ಮಾರಾಟ ಮಾಡಲಿದೆ. ಇದರಲ್ಲಿ 59 ಕಾರುಗಳನ್ನು ವಾಂಟೇಜ್ 59 ಮಾದರಿಯಲ್ಲಿ ಮಾರಾಟ ಮಾಡಲಾಗುವುದು. ವಾಂಟೇಜ್ 59 ಕಾರನ್ನು, 1959ರಲ್ಲಿ 24 ಗಂಟೆಗಳ ಲೆ-ಮನ್ಸ್ ಗೆದ್ದಿದ್ದ ಆಸ್ಟನ್ ಮಾರ್ಟಿನ್ ನ ಡಿಬಿಆರ್ 1 ರೇಸ್ ಕಾರಿನ ನೆನಪಿಗಾಗಿ ಬಿಡುಗಡೆ ಮಾಡಲಾಗುವುದು. ಈ ಮಾದರಿಯಲ್ಲಿರುವ 59 ಕಾರುಗಳನ್ನು ಸ್ಟರ್ಲಿಂಗ್ ಗ್ರೀನ್ ನಲ್ಲಿ ಬಿಡುಗಡೆ ಮಾಡಲಾಗುವುದು. ಈ ವಾಹನದಲ್ಲಿ ರೇಸಿಂಗ್ ಸ್ಟ್ರೈಪ್, ಮುಂಭಾಗದಲ್ಲಿ ಗ್ರಿಲ್, ಬ್ರೇಕ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ ಡಿಫ್ಯೂಸರ್ ಗಳನ್ನು ಅಳವಡಿಸಲಾಗಿದೆ. ಉಳಿದ 141 ವಾಂಟೇಜ್ ಎಎಂಆರ್ ಗಳನ್ನು ವೈಟ್, ಗ್ರೇ, ಬ್ಲೂ ಮತ್ತು ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

MOST READ: ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

Most Read Articles

Kannada
English summary
Limited Edition Aston Martin Vantage AMR Revealed — The Return Of The Manual - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X