ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿ ಆಡಿ ಇಂದು ಭಾರತದಲ್ಲಿ ಉನ್ನತ ಮಟ್ಟದ ಮ್ಯಾನೇಜ್‍‍ಮೆಂಟ್‍‍ನಲ್ಲಿ ಬದಲಾವಣೆಗಳನ್ನು ಮಾಡಿದೆ. ಆಡಿ ಎಜಿ ರಾಹಿಲ್ ಅನ್ಸಾರಿಯವರನ್ನು ಕಂಪನಿಯ ಪ್ರಧಾನ ಕಚೇರಿಯಿರುವ ಇಂಗೊಲ್‌ಸ್ಟಾಡ್‍‍ನಲ್ಲಿ ಹಣಕಾಸು ವಿಭಾಗದ ಪ್ರಮುಖ ಸ್ಥಾನಕ್ಕಾಗಿ ಆಯ್ಕೆ ಮಾಡಿದೆ. ತಮ್ಮ ಹೊಸ ಕಾರ್ಯದಲ್ಲಿ ಅನ್ಸಾರಿರವರು ಜಾಗತಿಕ ಕೇಂದ್ರ ಮಾರಾಟ ನಿಯಂತ್ರಣದ ಹಿರಿಯ ನಿರ್ದೇಶಕರ ಪಾತ್ರವನ್ನು ನಿಭಾಯಿಸಲಿದ್ದಾರೆ.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಈವರೆಗೂ ಡೀಲರ್ ಡೆವಲಪ್‍‍ಮೆಂಟ್ ವಿಭಾಗವನ್ನು ಮುನ್ನಡೆಸುತ್ತಿದ್ದ ಬಲ್ಬೀರ್ ಸಿಂಗ್ ಧಿಲ್ಲೊನ್‍‍ರವರನ್ನು 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಆಡಿ ಇಂಡಿಯಾದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಆಟೋಮೋಟಿವ್ ಉದ್ಯಮದಲ್ಲಿ ಅನುಭವವನ್ನು ಹೊಂದಿರುವ ಧಿಲ್ಲೊನ್‍‍ರವರು ಜುಲೈ 2018 ರಲ್ಲಿ ತಮ್ಮ ಎರಡನೇ ಅವಧಿಗೆ ಆಡಿ ಇಂಡಿಯಾಕ್ಕೆ ಸೇರಿಕೊಂಡರು. ಅವರು 23 ವರ್ಷಗಳ ಆಟೋಮೋಟಿವ್ ಅನುಭವವನ್ನು ಹೊಂದಿದ್ದಾರೆ.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಆಡಿ ಇಂಡಿಯಾದ ರಿಜಿಯನ್ ಓವರ್‍‍ಸೀಸ್ ಉಪಾಧ್ಯಕ್ಷರಾದ ಮೈಕೆಲ್ ಫ್ರಿಷ್ ರವರು ಮಾತನಾಡಿ, ಆಡಿ ಇಂಡಿಯಾಗೆ ರಾಹಿಲ್ ಅವರ ಕೊಡುಗೆ ಅಪಾರವಾಗಿದೆ. ಅವರು ಆಡಿ ಎಜಿಯಲ್ಲಿ ಆಡಿ ಇಂಡಿಯಾದ ನಿಜವಾದ ಪ್ರತಿನಿಧಿಯಾಗಿದ್ದರು. ಅವರು ಭವಿಷ್ಯದ ಯಶಸ್ಸಿಗೆ ಅಡಿಪಾಯವನ್ನು ರಚಿಸಿದ್ದಾರೆ. ಅವರು ಮಾಡಿದ ಕಾರ್ಯವು ಹೊಸ ಡಿಜಿಟಲ್ ಗ್ರಾಹಕ ಕೇಂದ್ರಿತ ಚಟುವಟಿಕೆಗಳೊಂದಿಗೆ ಭಾರತದಲ್ಲಿ ಸುಸ್ಥಿರ ವ್ಯಾಪಾರ ಹಾಗೂ ಲಾಭದಾಯಕ ನೆಟ್‌ವರ್ಕ್‌ಗೆ ಆಧಾರವನ್ನು ಒದಗಿಸಿದೆ.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ರಾಹಿಲ್‍‍ರವರ ಬಲವಾದ ವ್ಯವಹಾರ ಚತುರತೆಯನ್ನು ಪ್ರಧಾನ ಕಚೇರಿಯಲ್ಲಿ ಹೆಚ್ಚು ಅಂಗೀಕರಿಸಲಾಗಿದೆ. ಅದಕ್ಕಾಗಿಯೇ ಅವರಿಗೆ ಅಂತಹ ಹಿರಿಯ ಸ್ಥಾನವನ್ನು ನೀಡಲಾಗಿದೆ ಎಂದು ಹೇಳಿದರು. 2017 ಫೆಬ್ರವರಿ 1ರಂದು 3ನೇ ಬಾರಿಗೆ ಆಡಿ ಇಂಡಿಯಾಕ್ಕೆ ಸೇರಿದ್ದ ಅನ್ಸಾರಿರವರು ಸಂಕಷ್ಟದಲ್ಲಿದ್ದ ಆಡಿ ಇಂಡಿಯಾವನ್ನು ಅಪಾಯದಿಂದ ಪಾರು ಮಾಡಿದ್ದರು. ಡಬ್ಲ್ಯುಎಲ್‌ಟಿಪಿ ಸೈಕಲ್ ಹಾಗೂ ಭಾರತದಲ್ಲಿನ ಸವಾಲಿನ ಐಷಾರಾಮಿ ಮಾರುಕಟ್ಟೆಯ ವಾತಾವರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಗ್ರಾಹಕ ಕೇಂದ್ರಿತ ಹಾಗೂ ವ್ಯಾಪಾರಿ ಲಾಭದಾಯಕತೆಯತ್ತ ಗಮನ ಹರಿಸಲು ಅವರು ಹಲವಾರು ಕ್ರಮಗಳನ್ನು ಸಿದ್ಧಪಡಿಸಿದ್ದಾರೆ. ಹಲವು ಹೊಸ ಡಿಜಿಟಲ್ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇವು ದೇಶಿಯ ವಾಹನ ಉದ್ಯಮದಲ್ಲಿಯೇ ವಿಶಿಷ್ಟವಾದ ಕ್ರಮಗಳಾಗಿವೆ. ನಾನು ಭಾರತದಲ್ಲಿ ನನ್ನ ವಿವಿಧ ಕಾರ್ಯಗಳಲ್ಲಿ ಗಳಿಸಿದ ಅನುಭವವು ನನ್ನ ಜಾಗತಿಕ ಕಾರ್ಯಯೋಜನೆಗಳಲ್ಲಿ ನನಗೆ ಸಹಾಯ ಮಾಡಲಿದೆ ಎಂದು ದೃಢವಾಗಿ ನಂಬುತ್ತೇನೆ.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಭಾರತೀಯ ಗ್ರಾಹಕರನ್ನು ಸಂತೋಷಪಡಿಸಲು ಮತ್ತು ಭಾರತೀಯ ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಸಾಧ್ಯವಾದರೆ, ನೀವು ಅಮೂಲ್ಯವಾದ ಅನುಭವಗಳನ್ನು ಪಡೆಯುತ್ತೀರಿ. ನಾನು ನನ್ನ ಈ ಹೊಸ ಕಾರ್ಯದಲ್ಲಿ ನನ್ನ ಜೊತೆ ಕಾರ್ಯ ನಿರ್ವಹಿಸಿದ್ದ ತಂಡ ಹಾಗೂ ಆಡಿ ಇಂಡಿಯಾ ಕುಟುಂಬವನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳಲಿದ್ದೇನೆ.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಬಲ್ಬೀರ್ ಅವರನ್ನು ನಾನು ಬಹಳ ವರ್ಷಗಳಿಂದ ನೋಡಿದ್ದೇನೆ. ಆಡಿಯ ಉದ್ದೇಶಗಳನ್ನು ಅರಿತುಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅನ್ಸಾರಿಯವರು ಅಭಿಪ್ರಾಯಪಟ್ಟರು. ಧಿಲ್ಲೋನ್ ಅವರ ನೇಮಕಾತಿ ಕುರಿತು ಪ್ರತಿಕ್ರಿಯಿಸಿದ ಫ್ರಿಶ್‍‍ರವರು ಬಲ್ಬೀರ್ ಭಾರತ ಹಾಗೂ ಮಧ್ಯಪ್ರಾಚ್ಯದಲ್ಲಿ ಆಡಿ ತಂಡದ ಭಾಗವಾಗಿದ್ದಾರೆ. ಮಾರುಕಟ್ಟೆಯ ಬಾಹ್ಯ ಅಂಶಗಳನ್ನು ಹೆಚ್ಚಿಸಲು ಹಾಗೂ ಬೆಳೆಯಲು ಪ್ರಯತ್ನಿಸುವಾಗಲೂ ಅವರು ಭಾರತದಲ್ಲಿ ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವಿದೆ.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಅವರು ತಮ್ಮ ಜೊತೆಗೆ ಕಂಪನಿಯ ಪೂರ್ಣ ಜ್ಞಾನ, ಲಗ್ಶುರಿ ಸೆಗ್‍‍ಮೆಂಟ್ ಹಾಗೂ ಆಟೋಮೊಬೈಲ್ ಉದ್ಯಮದಲ್ಲಿ ಹೊಂದಿರುವ 23 ವರ್ಷಗಳ ಸ್ಥಳೀಯ ಹಾಗೂ ಜಾಗತಿಕ ಅನುಭವವನ್ನು ತಮ್ಮೊಂದಿಗೆ ತರುತ್ತಾರೆ. ಇದರಿಂದ ನಮಗೂ ಅನುಕೂಲವಾಗಲಿದೆ ಎಂದು ತಿಳಿಸಿದರು. 2007 ರಿಂದ 2012ರ ನಡುವೆ ಸೇಲ್ಸ್ ಫೀಲ್ಡ್ ಫೋರ್ಸ್ ಮುಖ್ಯಸ್ಥರಾಗಿದ್ದ ಧಿಲ್ಲೋನ್‍‍ರವರು 2018ರಲ್ಲಿ ಮತ್ತೆ ಆಡಿ ಕಂಪನಿಗೆ ಸೇರಿದರು.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಅವರು ಮಾರಾಟ, ನೆಟ್‌ವರ್ಕ್ ಲಾಭದಾಯಕತೆ, ವ್ಯವಹಾರ ಕಾರ್ಯತಂತ್ರ ಹಾಗೂ ಕ್ಷೇತ್ರ ಮಾರಾಟದ ಅನುಭವವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಡೀಲರ್ ಡೆವಲಪ್‍‍ಮೆಂಟ್ ಮುಖ್ಯಸ್ಥರಾಗಿ ನೆಟ್‌ವರ್ಕ್ ಲಾಭದಾಯಕತೆ ಹಾಗೂ ಬಿಸಿನೆಸ್ ಪ್ಲಾನಿಂಗ್‍‍ಗಳಿಗೆ ಜವಾಬ್ದಾರರಾಗಿದ್ದಾರೆ. ಬಲ್ಬೀರ್‍‍ರವರು ಈ ಹಿಂದೆ ಆಡಿ ಕಂಪನಿಯ ಮಿಡ್ಲ್ ಈಸ್ಟ್, ಪೋರ್ಷೆ ಇಂಡಿಯಾ ಹಾಗೂ ಹೋಂಡಾ ಇಂಡಿಯಾದಲ್ಲಿ ಕೆಲಸ ಮಾಡಿದ್ದಾರೆ.

ಜರ್ಮನ್ ಬ್ರಾಂಡ್ ಆಡಿ ಸಾರಥ್ಯವಹಿಸಿದ ಭಾರತೀಯ

ಈ ಬಗ್ಗೆ ಮಾತನಾಡಿದ ಧಿಲ್ಲೋನ್‍‍ರವರು ನನ್ನ ಏಕೈಕ ಗಮನವು ನಮ್ಮ ಕಂಪನಿಯ ಪಾಲುದಾರರು ಹಾಗೂ ಗ್ರಾಹಕರು ನಮ್ಮ ಸೇವೆಗಳಿಂದ ತೃಪ್ತಿ ಹೊಂದುವಂತೆ ಮಾಡುವುದು ಹಾಗೂ ಆಡಿ ಕಂಪನಿಯನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿ ಮುನ್ನಡೆಸುವುದಾಗಿರುತ್ತದೆ. ರಾಹಿಲ್ ಈಗಾಗಲೇ ಕಂಪನಿಯ ಬೆಳವಣಿಗೆಗೆ ಅಡಿಪಾಯವನ್ನು ಹಾಕಿದ್ದಾರೆ. ನಾವು ಆ ಅಡಿಪಾಯದ ಮೇಲೆ ಹೆಚ್ಚಿನದನ್ನು ನಿರ್ಮಿಸಬೇಕಿದೆ. ಭಾರತದಲ್ಲಿ ಈಗ ಎಲೆಕ್ಟ್ರಿಕರಣ ಹಾಗೂ ಡಿಜಿಟಲೀಕರಣದ ಯುಗವು ಆರಂಭವಾಗುತ್ತಿದ್ದು ನಾವು ಆ ಕಡೆಗೆ ಗಮನಹರಿಸಬೇಕಿದೆ ಎಂದು ಹೇಳಿದರು.

Most Read Articles

Kannada
Read more on ಆಡಿ audi
English summary
Audi announces management changes in India - Read in kannada
Story first published: Friday, July 12, 2019, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X