Just In
- 9 min ago ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- 25 min ago ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- 25 min ago Ather: ಬೆಂಗಳೂರಿನ ಎಥರ್ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ' ಬುಕ್ಕಿಂಗ್ ಆರಂಭ, ರೂ.999 ಪಾವತಿಸಿದರೆ ಸಾಕು!
- 1 hr ago Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
Don't Miss!
- Movies ಬಿಸಿಲು, ಮಳೆ, ಧೂಳು ಬರಲಿ.. ಯಶ್ ಇದ್ರೆ ಸಾಕು.. ಏನಂತೀರಾ?
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಿಎಸ್ಟಿ ಇಳಿಕೆಯ ನಿರೀಕ್ಷೆಯಲ್ಲಿದ್ದ ವಾಹನ ಖರೀದಿದಾರರಿಗೆ ಭಾರೀ ನಿರಾಸೆ
ಆಟೋಮೊಬೈಲ್ ಮೇಲೆ ವಿಧಿಸಲಾಗಿರುವ ಜಿಎಸ್ಟಿ ದರವನ್ನು ಕಡಿಮೆಗೊಳಿಸುವುದಿಲ್ಲವೆಂದು ಜಿಎಸ್ಟಿ ಕೌನ್ಸಿಲ್ ಸ್ಪಷ್ಟಪಡಿಸಿದೆ. ಈ ನಿರ್ಧಾರವನ್ನು ಜಿಎಸ್ಟಿ ಕೌನ್ಸಿಲ್ನ ಸಭೆಯ ನಂತರ ತಿಳಿಸಲಾಗಿದೆ. ಜಿಎಸ್ಟಿ ಕೌನ್ಸಿಲ್, ಆಟೋಮೊಬೈಲ್ ಮೇಲಿನ ಜಿಎಸ್ಟಿ ದರವನ್ನು ಕಡಿಮೆಗೊಳಿಸುವ ಕುರಿತು ಇಂದು ಗೋವಾದಲ್ಲಿ ಸಭೆ ಕರೆದಿತ್ತು.
ಈ ಸಭೆಯಲ್ಲಿ ನೆರೆದಿದ್ದ ಕೌನ್ಸಿಲ್ ಸದಸ್ಯರು 28% ಜಿಎಸ್ಟಿಯನ್ನು ಮುಂದುವರೆಸಲು ತೀರ್ಮಾನಿಸಿದ್ದಾರೆ. ಭಾರತದ ಆಟೋಮೊಬೈಲ್ ಉದ್ಯಮವು ತೀವ್ರ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದು, ಭಾರೀ ಪ್ರಮಾಣದ ಕುಸಿತವನ್ನು ಕಾಣುತ್ತಿದೆ. ವಾಹನ ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಬೆಳವಣಿಗೆ ದರವು ಸಹ ಕುಸಿದಿದೆ.
ಭಾರತದ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಕೆಲವು ದಿನಗಳ ಮಟ್ಟಿಗೆ ತನ್ನ ಕಂಪನಿಯಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆಟೋಮೊಬೈಲ್ ಉದ್ಯಮದಲ್ಲಿನ ಕುಸಿತಕ್ಕೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದೆ.
ಬಿಎಸ್4ನಿಂದ ಬಿಎಸ್6ಗೆ ಎಂಜಿನ್ಗಳನ್ನು ಅಪ್ಗ್ರೇಡ್ಗೊಳಿಸುತ್ತಿರುವ ಕಾರಣ ಗ್ರಾಹಕರು ಯಾವಾಗ ಹೊಸ ವಾಹನಗಳನ್ನು ಖರೀದಿಸಬೇಕೆಂಬ ಗೊಂದಲದಲ್ಲಿದ್ದಾರೆ. ಬಹಳಷ್ಟು ಜನ ಬಿಎಸ್ 4 ಗಡುವು ಮುಗಿಯುವವರೆಗೆ ಕಾದು ನಂತರ ಖರೀದಿಸ ಬಯಸಿದ್ದಾರೆ.
ಬಿಎಸ್ 4 ಗಡುವು ಮುಗಿಯುವ ವೇಳೆಗೆ ಭಾರೀ ಪ್ರಮಾಣದ ರಿಯಾಯಿತಿಗಳನ್ನು ಪಡೆಯಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ. ಆಟೋಮೊಬೈಲ್ ಉದ್ಯಮದ ಕುಸಿತವನ್ನು ತಡೆಗಟ್ಟಲು ಸರ್ಕಾರವು ಸಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಾಲ ಮೇಳವನ್ನು ಏರ್ಪಡಿಸಿ ಗ್ರಾಹಕರಿಗೆ ವಾಹನಗಳನ್ನು ಕೈಗೆಟಕುವಂತೆ ಮಾರಾಟ ಮಾಡಬೇಕೆಂದು ವಾಹನ ತಯಾರಕ ಕಂಪನಿಗಳಿಗೆ ಸೂಚಿಸಿದೆ. ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳು ಸಹ ಇದನ್ನೇ ಮಾಡಲು ಪ್ರಯತ್ನಿಸುತ್ತಿವೆ.
ಉದ್ಯಮದ ಚೇತರಿಕೆಯ ಮತ್ತೊಂದು ಬೇಡಿಕೆಯೆಂದರೆ ಜಿಎಸ್ಟಿ ದರವನ್ನು ಕಡಿಮೆ ಮಾಡುವುದು. ಈ ಬೇಡಿಕೆಯು ಹೆಚ್ಚಾದ ಹಿನ್ನೆಲೆಯಲ್ಲಿ ಜಿಎಸ್ಟಿ ಕೌನ್ಸಿಲ್ನ ಸಭೆಯನ್ನು ಗೋವಾದಲ್ಲಿ ಕರೆಯಲಾಗಿತ್ತು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಆದರೆ ಬಹುಜನರ ಬೇಡಿಕೆಯಾದ ತೆರಿಗೆ ಕಡಿತವನ್ನು ಜಿಎಸ್ಟಿ ಕೌನ್ಸಿಲ್ ಪರಿಗಣಿಸಲಿಲ್ಲ. ಆಟೋಮೊಬೈಲ್ಗಳ ಮೇಲಿರುವ ಜಿಎಸ್ಟಿ ದರವನ್ನು ಹಾಗೆಯೇ ಮುಂದುವರೆಸುವುದಾಗಿ ತಿಳಿಸಿದೆ. ಕೌನ್ಸಿಲ್ನ ವರದಿಗಳ ಪ್ರಕಾರ, ಅಟೋಮೊಬೈಲ್ ಉದ್ಯಮದ ಮೇಲಿರುವ ಜಿಎಸ್ಟಿ ದರವನ್ನು ಕಡಿತಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ರೂ.50,000 ಕೋಟಿಗಳಷ್ಟು ನಷ್ಟವಾಗಲಿದೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?
ಈ ಕಾರಣಕ್ಕಾಗಿ ಜಿಎಸ್ಟಿ ಕೌನ್ಸಿಲ್ ಜಿಎಸ್ಟಿ ದರವನ್ನು ಕಡಿಮೆಗೊಳಿಸಲು ಹಿಂದೇಟು ಹಾಕುತ್ತಿದೆ. ಆಟೋಮೊಬೈಲ್ ಉದ್ಯಮವು ಭಾರತದ ಅರ್ಥ ವ್ಯವಸ್ಥೆಗೆ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯವು ಆಟೋಮೊಬೈಲ್ ಉದ್ಯಮದಿಂದ ಬರುತ್ತಿದೆ. ಆದ ಕಾರಣ ಜಿಎಸ್ಟಿ ಕೌನ್ಸಿಲ್ ಜಿಎಸ್ಟಿ ದರವನ್ನು ಕಡಿತಗೊಳಿಸುತ್ತಿಲ್ಲ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಜಿಎಸ್ಟಿ ಕೌನ್ಸಿಲ್, ಜಿಎಸ್ಟಿ ದರವನ್ನು ಕಡಿಮೆಗೊಳಿಸಿದರೆ, ಸರ್ಕಾರದ ಆದಾಯವು ಕಡಿಮೆಯಾಗಳಿದೆ ಎಂಬುದನ್ನು ಅರಿತಿದೆ. ಆದರೂ ಸಹ ಜಿಎಸ್ಟಿ ಕೌನ್ಸಿಲ್ ಆಟೋಮೊಬೈಲ್ ಉದ್ಯಮದ ಕುಸಿತವನ್ನು ಪರಿಗಣಿಸಿ ಸ್ವಲ್ಪ ಪ್ರಮಾಣದಲ್ಲಿ ತೆರಿಗೆಯನ್ನು ಕಡಿಮೆಗೊಳಿಸಬಹುದಿತ್ತು. ಆಟೋಮೊಬೈಲ್ ಉದ್ಯಮದಲ್ಲಿನ ಕುಸಿತವು ಸರ್ಕಾರದ ಆದಾಯದ ಕುಸಿತಕ್ಕಿಂತ ಹೆಚ್ಚು ಕೆಟ್ಟದಾಗಿದೆ. ಆದ ಕಾರಣ ವಾಹನ ತಯಾರಕ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.