ಜಿಎಸ್‍ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ

ಆಟೋಮೊಬೈಲ್ ಉದ್ಯಮವು ಕಳೆದ ಒಂದು ವರ್ಷದಿಂದ ಮಂದಗತಿಯಲ್ಲಿ ಸಾಗುತ್ತಿದೆ. ಹೊಸ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ಮಾರಾಟ ಕಡಿಮೆಯಾಗಿದೆ ಎಂಬುದು ಆಟೋ ಬಿಡಿಭಾಗ ತಯಾರಕರ ವಾದ. ಇದಲ್ಲದೆ ಅವರ ಜಿಎಸ್‍‍ಟಿ ಮರುಪಾವತಿ ವಿಳಂಬವಾಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಜಿಎಸ್‍ಟಿ ದರವನ್ನು ಇಳಿಸಬೇಕೆಂದು ಆಗ್ರಹಿಸಿದ್ದಾರೆ.

ಜಿಎಸ್‍ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ

ಆಟೋ ಬಿಡಿಭಾಗ ತಯಾರಕರ ಸಂಘದ ಅಧ್ಯಕ್ಷ ಗುರ್‍‍ಪರ್ಗತ್ ಸಿಂಗ್ ಕಹ್ಲೋನ್ ಅವರು, ಈ ಸಮಸ್ಯೆ ಪ್ರತಿದಿನವೂ ಹೆಚ್ಚಾಗುತ್ತಿದೆ ಮತ್ತು ವಾಹನ ಉದ್ಯಮವು ಕಳೆದ ಒಂದು ವರ್ಷದಿಂದ ಮಂದಗತಿಯಲ್ಲಿ ಸಾಗುತ್ತಿದೆ. ಆಟೋ ಬಿಡಿಭಾಗ ತಯಾರಕರು ತೀವ್ರ ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಜಿಎಸ್‍ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ

ಹೊಸ ವಾಹನಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ಕಡಿಮೆ ಉತ್ಪಾದನೆ ನಡೆಸಬೇಕಾದ ಅನಿವಾರ್ಯತೆ. ತಮ್ಮ ಉದ್ಯಮಕ್ಕೆ ದೊಡ್ಡ ಸಮಸ್ಯೆ ಎಂದರೇ ಜಿಎಸ್‍‍ಟಿ ದರದ ಪ್ರಮಾಣವು ಅಧಿಕವಾಗಿದೆ. ಜಿಎಸ್‍‍ಟಿ ದರವು ಪ್ರಸ್ತುತ ಶೇ.28 ರಷ್ಟು ಹೊಂದಿದ್ದು ಇದು ಅಧಿಕವಾದ ಕಾರಣ ಶೇ.18ಕ್ಕೆ ಇಳಿಸಲು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜಿಎಸ್‍ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ

ಹೆಚ್ಚಿನ ಜಿಎಸ್‍ಟಿ ದರದಿಂದ ಸರ್ಕಾರದ ಬುಕ್ಕಸ ತುಂಬುತ್ತದೆ ಅಷ್ಟೇ. ಆದರೆ ಆಟೋಮೊಬೈಲ್ ಉದ್ಯಮದಲ್ಲಿ ಭಾರೀ ಕುಸಿತ ಕಂಡಿದ್ದು, ವಾಹನ ಉತ್ಪಾದಕರು ದೊಡ್ಡ ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರವು ಆಟೋಮೊಬೈಲ್ ಉದ್ಯಮದಲ್ಲಿ ದೊಡ್ಡ ಕುಸಿತ ಸಂಭವಿಸಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಅಲ್ಲದೇ ಉದ್ಯಮ ಚೇತರಿಕೆಗೆ ಉತ್ತೇಚೆನ ಹಣ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಜಿಎಸ್‍ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ

ಆಟೋ ಪಾರ್ಟ್ಸ್ ತಯಾರಕರಾದ ಸ್ವಿಂದರ್ ಸಿಂಗ್ ಹುಂಜನ್ ಮಾತನಾಡಿ, ಶೇ.28 ಜಿಎಸ್‍‍ಟಿ ದರವು ನಮ್ಮ ಉದ್ಯಮಕ್ಕೆ ಗಂಭೀರ ಸಮಸ್ಯೆಯಾಗಿದೆ ಮತ್ತು ಇದನ್ನು ಕಡಿಮೆಗೊಳಿಸಿದರೆ ವಾಹನ ಉದ್ಯಮದಲ್ಲಿ ಚೇತರಿಕೆ ಕಾಣುವುದಕ್ಕೆ ಸಹಾಯವಾಗುತ್ತದೆ . ಮುಂದಿನ ಆಟೋಮೊಬೈಲ್ ಉದ್ಯಮದ ಭವಿಷ್ಯದ ದೃಷ್ಟಿಯಿಂದಲೂ ಉತ್ತಮ ನಿರ್ಧಾರವಾಗುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಜಿಎಸ್‍ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ

ಮರುಪಾವತಿಗಳ ಪ್ರಕ್ರಿಯೆಯಲ್ಲಿನ ವಿಳಂಬವು ಪ್ರತಿ ಆಟೋ ಬಿಡಿಭಾಗ ತಯಾರಕರಿಗೆ ದೊಡ್ಡ ಸಮಸ್ಯೆಯಲ್ಲದಿದ್ದರೂ, ಜಿಎಸ್‍ಟಿ ಶೇ.28 ರಷ್ಟು ಹೆಚ್ಚಿನ ದರ ಹೊಂದಿರುವುದರಿಂದ ಎಲ್ಲರಿಗೂ ಸಮಸ್ಯೆಯಾಗಿದೆ ಆಟೋ ಬಿಡಿಭಾಗ ಉತ್ಪಾದನಾ ಉದ್ಯಮವು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಸರ್ಕಾರ ಅರಿತುಕೊಳ್ಳಬೇಕು ಮತ್ತು ಜಿಎಸ್‍ಟಿ ದರವನ್ನು ಶೇ.18 ಕ್ಕೆ ಇಳಿಸಬೇಕು. ಇದರಿಂದ ನಾವು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಜಿಎಸ್‍ಟಿ ಇಳಿಸುವಂತೆ ಬಿಡಿಭಾಗ ತಯಾರಿಕರಿಂದ ಆಗ್ರಹ

ಜಿಎಸ್‍‍ಟಿ ಕಡಿತಗೊಳಿಸುವಂತೆ ಆಟೋ ಬಿಡಿಭಾಗ ತಯಾರಕರ ಮನವಿಯು ಸಮರ್ಥವಾಗಿದೆ ಎಂದು ನಿರೀಕ್ಷಿಸುತ್ತೇವೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಕುಸಿತ ಕಂಡಿರುವುದರಿಂದ ಅದರ ಚೇತರಿಕೆಗಾಗಿ ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಕೆಲವು ಕೈಗಾರಿಕೆಗಳು ನಿರ್ಲಕ್ಷ್ಯ ತೋರುತ್ತಿವೆ. ಆದರೆ ದ್ವಿತೀಯ ಕೈಗಾರಿಕೆಗಳಿಗೂ ಸರ್ಕಾರ ಬೆಂಬಲ ನೀಡಬೇಕಾಗಿದೆ.

Most Read Articles

Kannada
English summary
Auto Parts Manufacturers Ask Government To Reduce GST To 18 Percent Amidst Industry Slowdown - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X