ಬೆಂಗಳೂರಿನಲ್ಲಿ ನಡೆದ 2019ರ ಆಟೋಮೊಬೈಲ್ ಎಕ್ಸ್‌ಪೋ

ನ್ಯೂಸ್9 ಮತ್ತು ಟಿವಿ9 ನ್ಯೂಸ್ ಚಾನಲ್‍ಗಳ ಸಹಭಾಗಿತ್ವದಲ್ಲಿ ಸುಮಾರು 5 ವರ್ಷಗಳಿಂದ ನಮ್ಮ ಬೆಂಗಳೂರು ನಗರದಲ್ಲಿ ಆಟೋಮೊಬೈಲ್ ಎಕ್ಸ್‌ಪೋ ಮೇಳವನ್ನು ನಡೆಸುತ್ತಿದ್ದು, ಈ ವರ್ಷ ಕೂಡಾ ಮಾರ್ಚ್ 8,9 ಮತ್ತು 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 6ನೇ ಆವೃತ್ತಿಯ 2019ರ ಆಟೋಮೊಬೈಲ್ ಎಕ್ಸ್‌ಪೋ ಮೇಳವನ್ನು ಆದ್ದೂರಿಯಾಗಿ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆದ 2019ರ ಆಟೋಮೊಬೈಲ್ ಎಕ್ಸ್‌ಪೋ

ಈ 2019ರ ಆಟೋಮೊಬೈಲ್ ಎಕ್ಸ್‌ಪೋ ಮೇಳದಲ್ಲಿ ಹಲವಾರು ವಾಹನ ತಯಾರಕ ಸಂಸ್ಥೆಗಳು ತಮ್ಮ ಉತ್ಪಾದನೆಗಳನ್ನು ಪ್ರದರ್ಶಿಸುವುದಲ್ಲದೇ ಮಾರಾಟವನ್ನು ಸಹ ಮಾಡಲಾಗಿತ್ತು. ಮೂರು ದಿನಗಳ ವರೆಗೆ ನಡೆಯಲಿರುವ ಈ ಮೇಳಕ್ಕೆ ಸುಮಾರು ಗ್ರಾಹಕರು ಭಾಗವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಡೆದ 2019ರ ಆಟೋಮೊಬೈಲ್ ಎಕ್ಸ್‌ಪೋ

ಮಹೀಂದ್ರಾ ಮರಾಜೊ, ಟೊಯೊಟ ಇನೋವಾ, ಟಾಟಾ ಹ್ಯಾರಿಯರ್, ಮಾರುತಿ ಸುಜುಕಿ ಡಿಜೈರ್, ಬಿಎಂಡಬ್ಲ್ಯೂ ಜಿ310ಆರ್, ಟಿವಿಎಸ್ ಅಪಾಚೆ ಸೇರಿದಂತೆ ಇನ್ನು ಜನಪ್ರಿಯ ವಾಹನಗಳನ್ನು ಅಲ್ಲಿ ಪ್ರದರ್ಶಿಸಲಾಗಿತ್ತು. ಇವುಗಳೊಡನೇ ಕೇವಲ ಇಂಧನ ಆಧಾರಿತ ವಾಹನಗಳನ್ನು ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನಗಳನ್ನು ಸಹ ಪ್ರದರ್ಶನ ಮಾಡಲಾಗಿತ್ತು.

ಬೆಂಗಳೂರಿನಲ್ಲಿ ನಡೆದ 2019ರ ಆಟೋಮೊಬೈಲ್ ಎಕ್ಸ್‌ಪೋ

ಇಂಧನ ಆಧಾರಿತ ವಾಹನಗಳಿಂದಾಗುತ್ತಿರುವ ಪರಿಸರ ಮಾಲಿನ್ಯದಿಂದ ಮತ್ತು ಇಂಧನ ಬೆಲೆಗಳ ಏರಿಳಿತದಿಂದ ಆಗುತ್ತಿರುವ ತಲೆನೋವನ್ನು ಗ್ರಾಹಕರು ಮರೆಯಬೇಕೆಂದರೆ ಅದಕ್ಕಿರುವ ಒಂದೇ ಒಂದು ಪರಿಹಾರ ಅಂದ್ರೆ ಅದು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು. ಈ ನಿಟ್ಟಿನಲ್ಲಿ ಈ ಅರಮನೆ ಮೈದಾನದಲ್ಲಿ ನಡೆದ 2019ರ ಆಟೋಮೊಬೈಲ್ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗಿಯೇ ಕಾಣಿಸಿಕೊಂಡಿದ್ದು, ಒಕಿನಾವ, ಅವಾನ್ ಸಂಸ್ಥೆಗಳ ಇವಿ ವಾಹನಗಳು ಜನರ ಆಕರ್ಷಣೆಗೆ ಕಾರಣವಾದವು.

ಟೆಸ್ಟ್ ಡ್ರೈವ್ ಮಾಡುವ ಸಲುವಾಗಿ ಮೇಳದ ಸುತ್ತಲೂ ಬರೀ ಎಲೆಕ್ಟ್ರಿಕ್ ವಾಹನಗಳೆ ಓಡಾಡಿದ್ದಂತು ನಿಜ. ಇದರಿಂದ ಇವುಗಳ ಟೆಸ್ಟ್ ಡ್ರೈವ್ ಮಾಡಲು ಜನರು ಕ್ಯೂ ನಿಂತಿದ್ದು ಕಂಡು ಬಂತು.

ಬೆಂಗಳೂರಿನಲ್ಲಿ ನಡೆದ 2019ರ ಆಟೋಮೊಬೈಲ್ ಎಕ್ಸ್‌ಪೋ

ಟೆಸ್ಟ್ ಡ್ರೈವ್ ನೀಡುವುದರ ಜೊತೆಗೆ ವಾಹನ ಸಂಸ್ಥೆಗಳು ತಮ್ಮ ವಾಹನಗಳ ಆಕ್ಸೆಸರಿಗಳು, ವಿಮಾ ಯೋಜನೆಗಳು, ತಮ್ಮ ವಾಹನಗಳಿಗೆ ರಿಯಾಯಿತಿಯನ್ನು ಸಹ ನೀಡಲಾಗಿತ್ತು. ಅವಾನ್ ಮೋಟಾರ್ಸ್ ಕೂಡಾ ತಮ್ಮ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಆದ ಜೈರೊ ಪ್ಲಸ್ ಅನ್ನು ಸಹ ಈ ಮೇಳದಲ್ಲಿ ಅನಾವರಣಗೊಳಿಸಲಾಯ್ತು.

Most Read Articles

Kannada
English summary
Automobile Expo In Bangalore Organised By News9. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X