ಬಿಡುಗಡೆಗೊಂಡ ಬಜಾಜ್ ಕ್ಯೂಟ್ - ಆಟೋ ರಿಕ್ಷಾಗಳನ್ನು ಹಿಂದಿಕ್ಕುತ್ತಾ.?

ಬಜಾಜ್ ಆಟೋ ಸಂಸ್ಥೆಯು ತಮ್ಮ ಹೊಸ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.63 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂದಿದೆ. ಈ ವಾಹನವು ಪೆಟ್ರೋಲ್ ಮತ್ತು ಸಿಎನ್‍ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಸಿಎನ್‍ಜಿ ಆಧಾರಿತ ಕ್ಯೂಟ್ ವಾಹನವು ರೂ. 2.83 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಬಜಾಜ್ ಕ್ಯೂಟ್ ವಾಹನವು ಮೊದಲನೆಯ ಬಾರಿಗೆ 2015ರಲ್ಲಿ ಸಂಸ್ಥೆಯು ಬಿಡುಗಡೆಗೊಳಿಸಲು ಯೋಜನೆಯಲ್ಲಿತ್ತು ಆದರೆ ಕಾರಣಾಂತರಗಳಿಂದ ಸಂಸ್ಥೆಯು ಇದನ್ನು ಬಿಡುಗಡೆಗೊಳಿಸಲಿಲ್ಲ ಮತ್ತು ಬೇಕಾದ ಸುರಕ್ಷಾ ಸಾಧನಗಳು ಇಲ್ಲವೆಂಬ ಕಾರಣದಿಂದಾಗಿ ಚರ್ಚೆಗೆ ಇದು ಕಾರಣವಾಗಿತ್ತು. ನಂತರ ಇದನ್ನು ಕಾರೆಂದು ಪರಿಗಣಿಸಬೇಕೆ ಅಥವಾ ಬೈಕ್ ಎಂದು ಪರಿಗಣಿಸಬೇಕೆ ಎಂಬ ಗೊಂದಲದಲ್ಲಿದ್ದರು. ಕೊನೆಗು ಹಲವಾರು ಚರ್ಚೆಗಳ ನಂತರ ಇದೀಗ ಬಜಾಜ್ ಕ್ಯೂಟ್ ವಾಹನವು ಬಿಡುಗಡೆಗೊಂಡಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಸ್ವಂತ ಬಳಕೆಗು ಸೈ ಮತ್ತು ವ್ಯಾಪರಕ್ಕು ಸೈ

ಹೌದು, ಬಿಡುಗಡೆಗೊಂಡ ಬಜಾಜ್ ಕ್ಯೂಟ್ ವಾಹನವು ಸ್ವಂತ ಬಳಕೆಗಾಗಿ ಮತ್ತು ವ್ಯಾಪಾರಕ್ಕಾಗಿ ಇದನ್ನು ಬಳಾಸಬಹುದಾಗಿದೆ ಎಂದು ಹೇಳಿಕೊಂಡಿದೆ. ಈ ನಿಟ್ಟಿನಲ್ಲಿ ಆಟೋ ರಿಕ್ಷಾಗಳು ದೊರೆಯುತ್ತಿರುವ ಬೆಲೆಯಲ್ಲಿ ಬಜಾಜ್ ಕ್ಯೂಟ್ ವಾಹನವು ದೊರೆಯುತ್ತಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಬಜಾಜ್ ಸಂಸ್ಥೆಯು ಈ ವಾಹನವನ್ನು ಈಗಾಗಲೇ ವಿವಿಧ ರಾಷ್ಟ್ರಗಳಿಗೆ ರಫ್ತು ಕೂಡಾ ಮಾಡುತ್ತಿದ್ದು, ಪ್ರತಿ ತಿಂಗಳಿಗೆ 5000 ಯೂನಿಟ್ ಕ್ಯೂಟ್ ಕ್ವಾಡ್ರಿಗಳನ್ನು ಉತ್ಪಾದಿಸುತ್ತಿದೆ. ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು ನಾಲ್ಕು ಚಕ್ರಗಳನ್ನು ಪಡೆದುಕೊಂಡಿರಲಿದ್ದು, ಆಟೋಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಬಜಾಜ್ ಕ್ಯೂಟ್ ವಾಹನವು ವಿಶೇಷವಾದ ಉಪಕರಣಗಳಿಂದ ತಯಾರಿಸಲಾಗಿದ್ದು, ಸುಮಾರು 400 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದೆ. ಇದ್ರಲ್ಲಿ ನಾಲ್ಕು ಮಂದಿ ಕೂರುವ ಸ್ಥಳಾವಕಾಶವಿದ್ದು, ಟಾಟಾ ನ್ಯಾನೊ ಕಾರಿನಂತೆಯೆ ಇದರಲ್ಲಿಯು ಸಹ ಮುಂಭಾಗದಲ್ಲಿನ ಬೂಟ್ ಸ್ಪೇಸ್ ಕೆಳಗೆ ಇರಿಸಲಾಗಿದೆ. ಮತ್ತು ಹೆಚ್ಚಿನ ಸ್ಥಳವಕಾಶಕ್ಕಾಗಿ ಹಿಂಬದಿಯ ಸೀಟ್‍‍ಗಳನ್ನು ಮಡಿಚಿಕೊಳ್ಳಬಹುದಾಗಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ವೈಶಿಷ್ಟ್ಯತೆಗಳು

ಕ್ಯೂಟ್ ಕ್ವಾಡ್ರಿಲಾಟರಲ್ ವಾಹನದಲ್ಲಿನ ಡ್ಯಾಶ್ ಬೋರ್ಡ್ ಮಧ್ಯಭಾಗದಲ್ಲಿ ಸ್ಪೀಡೋಮೀಟರ್ ಅನ್ನು ಕಾಣಬಹುದಾಗಿದ್ದು, ಇದು ಅನಾಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಇವಿಗಳ ಜೊತೆಗೆ ಈ ವಾಹನದಲ್ಲಿ ಎಂಪಿ3 ಪ್ಲೇಯರ್, ಯುಎಸ್‍ಬಿ ಪೋರ್ಟ್ಸ್ ಹಾಗು ಆಕ್ಸ್ ಕೇಬಲ್‍‍ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದಾದ ಸೌಕರ್ಯಗಳಿವೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಭಾರತದಿಂದ ಇನ್ನಿತರೆ ದೇಶಗಳಿಗೆ ರಫ್ತು

ಪುಣೆಯಲ್ಲಿನ ಬಜಾಜ್ ಆಟೋ ಆಧಾರಿತ ಕಾರ್ಖಾನೆಯಲ್ಲಿ ವಾರ್ಷಿಕವಾಗಿ ಸುಮಾರು 60,000 ಯೂನಿಟ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ಉತ್ಪಾದಿಸುತ್ತಿದ್ದು, ಬಜಾಜ್ ಆಟೋ ಸಂಸ್ಥೆಯು ಈಗಾಗಲೆ ಲ್ಯಾಟಿನ್ ಅಮೇರಿಕಾ,ಯೂರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ 2015ರಿಂದಲೂ ಮಾರಾಟ ಮಾಡುತ್ತಿದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು 217ಸಿಸಿ 4 ಸ್ಟ್ರೋಕ್ಸ್ ಮತ್ತು ಸಿಂಗಲ್ ಸಿಲಿಂಡರ್ , ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13 ಬಿಹೆಚ್‍‍ಪಿ ಮತ್ತು 20 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ. ಇನ್ನು ಸಿಎನ್‍ಜಿ ಆಧಾರಿತ ವಾಹನಗಳು 10.9 ಬಿಹೆಚ್‍ಪಿ ಮತ್ತು 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಎಂಜಿನ್ ಅನ್ನು 5 ಸ್ಪೀಡ್ ಸೀಕ್ವೆಂಟಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಕ್ಯೂಟ್ ಕ್ವಾಡ್ರಿ ಸೈಕಲ್‌ಳು ಗರಿಷ್ಠವಾಗಿ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 2752-ಎಮ್ಎಮ್ ಉದ್ದ, 1312 ಎಮ್ಎಮ್ ಅಗಲ ಮತ್ತು 1650-ಎಮ್ಎಮ್ ಎತ್ತರವನ್ನು ಪಡೆದಿದ್ದು ಜೊತೆಗೆ ಸಿಎನ್‍‍ಜಿ ವರ್ಷನ್‍‍ನಲ್ಲಿ ಕೂಡಾ ಲಭ್ಯವಿರಲಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಮೈಲೇಜ್

ಬಜಾಜ್ ಕ್ಯೂಟ್ ವಾಹನಗಳಲ್ಲಿ 8 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ ಹಾಗು 35 ಕಿಲೋಗ್ರಾಂ ಸಾಮರ್ಥ್ಯದ ಸಿಎನ್‍ಜಿ ಟ್ಯಾಂಕ್ ಅನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಇಂಧನ ಆಧಾರಿತ ವಾಹನಗಳು ಪ್ರತೀ ಲೀಟರ್‍‍ಗೆ ಸುಮಾರು 35 ಕಿಲೋಮೀಟರ್ ಮತ್ತು ಸಿಎನ್‍ಜಿ ಆವೃತ್ತಿಯ ವಾಹನಗಳು ಪ್ರತೀ ಕಿಲೋಗ್ರಾಂಗೆ ಸುಮಾರು 43 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಕ್ಯೂಟ್ ಕ್ವಾಡ್ರಿ ಸೈಕಲ್ ಅನ್ನು ಮೂಲತಃ ವಾಣಿಜ್ಯ ಪ್ರಯಾಣಿಕ ವಾಹನಗಳು ಮಾತ್ರ ಉಪಯೋಗಿಸಲು ಯೋಜಿಸಲಾಗಿತ್ತು. ಪ್ರಸ್ತುತ ವಿದೇಶಿ ವಿನಿಮಯ ಕೇಂದ್ರದಲ್ಲಿರುವ ಆಟೋ ರಿಕ್ಷಾ ಚಾಲಕರುಗಳಿಗೆ ಇದು ಬಹುಮುಖ್ಯವಾಗಿದ್ದು ಅವರೆಲ್ಲರೂ ಈ ಕ್ವಾರಿಯನ್ನು ಬಳಸಬಹುದಾಗಿದೆ. ಇಲ್ಲವಾದಲ್ಲಿ ರಿಕ್ಷಾಗಳು ಕಾಣೆಯಾದಂತೆ ಮುಂದಿನ ದಿನಗಳಲ್ಲಿ ಆಟೋಗಳು ಕೂಡಾ ಕಾಣೆಯಾಗಬಹುದು.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಬಿಡುಗಡೆಗೊಂಡ ಬಜಾಜ್ ಕ್ಯೂಟ್

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಕ್ಯೂಟ್ ಅನ್ನು ಸಂಸ್ಥೆಯು ಮಾರುಕಟ್ಟೆಯಲ್ಲಿರುವ ಎಂಟ್ರಿ ಲೆವೆಲೆ ಕಾರುಗಳನ್ನು ಟಾರ್ಗೆಟ್ ಮಾಡಲಿಲ್ಲವದರೂ ಸಹ ಮಾರುತಿ ಸುಜುಕಿ ಆಲ್ಟೋ 800, ರೆನಾಲ್ಟ್ ಕ್ವಿಡ್ ಕಾರುಗಳಂತಹ ಬೇಸ್ ವೇರಿಯಂಟ್‍‍ಗಳಿಗೆ ಮತ್ತು ಆಟೋ ರಿಕ್ಷಾಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Bajaj Qute Launched In India At Rs 2.63 Lakh — A Quadricycle Threat To Small Cars?. Read In Kannada
Story first published: Wednesday, March 20, 2019, 14:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X