ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಬಜಾಜ್ ಸಂಸ್ಥೆಯು ತಮ್ಮ ಹೊಸ ಕ್ಯೂಟ್ ಸಣ್ಣ ಗಾತ್ರದ ವಾಹನವನ್ನು ಈ ಹಿಂದೆಯೇ ಹಂತ ಹಂತವಾಗಿ ದೇಶದೆಲ್ಲೆಡೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಹಲವಾರು ದೇಶಗಳಲ್ಲಿ ಮಾರಾಟವಾಗುತ್ತಿರುವ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವು ಭಾರತದಲ್ಲಿ ಕೆಲ ಮೋಟಾರ್ ಕಾಯ್ದೆ ನಿಯಮಾವಳಿಗಳ ಕೊರತೆಯಿಂದಾಗಿ ನಮ್ಮ ದೇಶದಲ್ಲಿ ಬಿಡಗಡೆಗೊಳ್ಳಲು ತಡವಾಯಿತು. ಆದ್ರೆ ಇದೀಗ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಪೂರೈಸುವ ಹಾಗೆ ಹೊಸ ವಾಹನ ತಯಾರಾಗಿ ಮಾರುಕಟ್ಟೆಯಲ್ಲಿ ಕಾಲಿಟ್ಟಿದ್ದು, ಎಕ್ಸ್ ಶೋರುಂ ಪ್ರಕಾರ ರೂ.2.48 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ದೇಶದಲ್ಲಿರುವ ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಮುಂದಾದ ಬಜಾಜ್ ಕ್ಯೂಟ್ ವಾಹನವು ಈಗಾಗಲೇ ಮುಂಬೈ ರಸ್ತೆಯಲ್ಲಿ ಸಂಚರಿಸಲು ಶುರುವಾಗಿದೆ. ಅಲ್ಲಿನ ಆರ್‍‍ಟಿಒ ನಿಯಮಗಳಿಗೆ ತಕ್ಕ ಹಾಗೆ ಆಟೋ ರಿಕ್ಷಾಕ್ಕೆ ನೀಡಲಾದ ಹಳದಿ ಮತ್ತು ಕೆಂಪು ಬಣ್ಣದಿಂದ ಆಟೋ ರಿಕ್ಷಾಗಳಿಗೆ ಟಕ್ಕರ್ ನೀಡಲು ಮುಂದಾಗಿದೆ. ಈ ಕುರಿತಾದ ವಿಡಿಯೋ ಲಭ್ಯವಾಗಿದ್ದು, ಸಂಜಯ್ ಭೂಪೆಂದ್ರ ಭಟ್ ಎಂಬಾತ ಮಾಹಾರಾಷ್ಟ್ರನಲ್ಲಿನ ಆರ್‍‍ಟಿಒ ನಿಯಮಗಳಿಗೆ ತಕ್ಕ ಹಾಗೆ ಇದನ್ನು ಸಾರ್ವಜನಿಕ ವಾಹನವನ್ನಾಗಿ ಬಳಸಲು ಮಾರ್ಪಾಡು ಮಾಡಿದ್ದಾರೆ. ಹಾಗೆಯೇ ಸಂಜಯ್‍‍ರವರ ಬಜಾಜ್ ಕ್ಯೂಟ್ ದೇಶದ ಮೊದಲ 4 ಚಕ್ರಗಳುಳ್ಳ ಆಟೋ ರಿಕ್ಷಾ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಸ್ವಂತ ಬಳಕೆಗೂ ಸೈ ಮತ್ತು ವಾಣಿಜ್ಯ ಬಳಕೆಗೂ ಸೈ

ಹೌದು, ಬಿಡುಗಡೆಗೊಂಡ ಬಜಾಜ್ ಕ್ಯೂಟ್ ವಾಹನವು ಸ್ವಂತ ಬಳಕೆಯ ಜೊತೆ ವ್ಯಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದು, ಆಟೋ ರಿಕ್ಷಾಗಳ ಬೆಲೆ ಬೆಲೆಯಲ್ಲಿ ಹೊಸ ಕ್ಯೂಟ್ ವಾಹನ ವಾಹನವು ಬಿಡುಗಡೆಯಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಕ್ಯೂಟ್ ವಾಹನವು 216-ಸಿಸಿ 4-ಸ್ಟ್ರೋಕ್ಸ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13-ಬಿಹೆಚ್‍‍ಪಿ ಮತ್ತು 20-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಇದರಲ್ಲಿ ಸಿಎನ್‍ಜಿ ಆಧಾರಿತ ಕ್ಯೂಟ್ ಮಾದರಿಯು 10.8-ಬಿಹೆಚ್‍ಪಿ ಮತ್ತು 16.1-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಸೀಕ್ವೆಂಟಲ್ ಗೇರ್‍‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಇನ್ನು ಬಜಾಜ್ ಸಂಸ್ಥೆಯು ಕ್ಯೂಟ್ ವಾಹನವನ್ನು ವಿವಿಧ ರಾಷ್ಟ್ರಗಳಿಗೆ ಪ್ರತಿ ತಿಂಗಳು 5 ಸಾವಿರ ಯೂನಿಟ್‌ಗಳನ್ನು ರಫ್ತು ಮಾಡುತ್ತಿದ್ದು, ನಾಲ್ಕು ಚಕ್ರಗಳನ್ನು ಪಡೆದುಕೊಂಡಿರುವ ಕ್ಯೂಟ್ ವಾಹನವು ಆಟೋ ರಿಕ್ಷಾಗಳಿಂತಲೂ ಹೆಚ್ಚು ಶಕ್ತಿಶಾಲಿಯಾಗಿವೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಹಾಗೆಯೇ ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರಿರುವ ಕ್ಯೂಟ್ ವಾಹನವು 452 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದ್ದು, ಇದರಲ್ಲಿ ಚಾಲಕ ಸೇರಿ ನಾಲ್ಕು ಮಂದಿ ಯಾವುದೇ ತೊಂದರೆಯಿಲ್ಲದೇ ಅರಾಮವಾಗಿ ಕೂರಬಹುದಾಗಿದಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಕ್ಯೂಟ್ ಉದ್ದಳತೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ನ್ಯಾನೊ ಕಾರಿನಂತೆಯೇ ಇದರಲ್ಲಿಯು ಸಹ ಮುಂಭಾಗದಲ್ಲಿ ಬೂಟ್ ಸ್ಪೇಸ್ ಇರಿಸಲಾಗಿದ್ದು, ಹೆಚ್ಚುವರಿ ಸ್ಥಳವಕಾಶ ಬೇಕಿದ್ದಲ್ಲಿ ಹಿಂಬದಿಯ ಸೀಟ್‍‍ನ್ನು ಮಡಿಚಿಕೊಳ್ಳುವ ಮೂಲಕ ಮತ್ತಷ್ಟು ಲಗೇಜ್ ತುಂಬಿಕೊಳ್ಳಲು ಇದರಲ್ಲಿ ಅವಕಾಶವಿದೆ.

MOST READ: ನರೇಂದ್ರ ಮೋದಿಯವರ ನೆಚ್ಚಿನ ಆಯ್ಕೆ ರೇಂಜ್ ರೋವರ್ ವೊಗ್ ಸ್ಪೆಷಲ್ ಏನು?

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಬಜಾಜ್ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ ಕ್ಯೂಟ್ ವಾಹನವು 2,750-ಎಂಎಂ ಉದ್ದ, 1,312-ಎಂಎಂ ಅಗಲ ಮತ್ತು 1,652-ಎಂಎಂ ಎತ್ತರ ಹೊಂದಿದ್ದು, 12-ಇಂಚಿನ ಸ್ಟಿಲ್ ವೀಲ್ಹ್‌ನೊಂದಿಗೆ ಉತ್ತಮವಾದ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವುದು ಸ್ವಂತ ಬಳಕೆಗೂ ಆಕರ್ಷಕವಾಗಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ತಾಂತ್ರಿಕ ವೈಶಿಷ್ಟ್ಯತೆಗಳು

ಕ್ಯೂಟ್ ವಾಹನದಲ್ಲಿ ಡ್ಯಾಶ್ ಬೋರ್ಡ್ ಮಧ್ಯಭಾಗದಲ್ಲಿ ಸ್ಪೀಡೋಮೀಟರ್ ಅನ್ನು ಕಾಣಬಹುದಾಗಿದ್ದು, ಇದು ಅನಾಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಇವಿಗಳ ಜೊತೆಗೆ ಈ ವಾಹನದಲ್ಲಿ ಎಂಪಿ3 ಪ್ಲೇಯರ್, ಯುಎಸ್‍ಬಿ ಪೋರ್ಟ್ಸ್ ಹಾಗು ಆಕ್ಸ್ ಕೇಬಲ್‍‍ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದಾದ ಸೌಕರ್ಯ ಇದರಲ್ಲಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಮೈಲೇಜ್

ಬಜಾಜ್ ಕ್ಯೂಟ್ 8 ಲೀಟರ್‍ ಫ್ಯುಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 35 ಕಿಲೋಗ್ರಾಂ ಸಾಮರ್ಥ್ಯದ ಸಿಎನ್‍ಜಿ ಟ್ಯಾಂಕ್ ಅನ್ನು ಜೋಡಣೆ ಹೊಂದಿದೆ. ಈ ಮೂಲಕ ಪ್ರತಿ ಲೀಟರ್‍ ಪೆಟ್ರೋಲ್‌ಗೆ ಸುಮಾರು 35 ಕಿಮೀ ಮೈಲೇಜ್ ಹಿಂದಿರುಗಿಸುವ ಕ್ಯೂಟ್ ಮಾದರಿಯು ಸಿಎನ್‍ಜಿ ಆವೃತ್ತಿಯಲ್ಲಿ ಪ್ರತೀ ಕಿ.ಗ್ರಾಂ ಸಿಎನ್‌ಜಿಗೆ ಬರೋಬ್ಬರಿ 43 ಕಿ.ಮಿ ಮೈಲೇಜ್ ನೀಡಬಲ್ಲದು.

Source: midday india

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ವಾಹನ ಚಾಲನೆ ವೇಳೆ ಮಾಡುವ ಸಣ್ಣಪುಟ್ಟ ಚಾಲನಾ ದೋಷಗಳೇ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿವೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

2017ರಲ್ಲಿ ಸುಮಾರು 1.50 ಲಕ್ಷ ಭೀಕರ ರಸ್ತೆ ಅಪಘತಾತಗಳು ಸಂಭವಿಸಿದ್ದು, ಅವುಗಳಲ್ಲಿ 29,351 ಆಟೋ ರಿಕ್ಷಾಗಳು ಅಪಘಾತಾಕ್ಕೆ ಈಡಾಗಿದೆ. ನಡೆದ ಅಷ್ಟು ಅಪಘಾತಗಳ ಪೈಕಿ ಸುಮಾರು 6,762 ಮಂದಿ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಇಲಾಖೆಯು ಶೀಘ್ರದಲ್ಲೆ ದೇಶದಲ್ಲಿನ ಆಟೋ ಚಾಲಕರಿಗೆ ಶಾಕಿಂಗ್ ವಿಚಾರವನ್ನು ನೀಡಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಹೌದು, 2019ರ ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದೇಶದಲ್ಲಿರುವ ಎಲ್ಲಾ ಆಟೋ ರಿಕ್ಷಾಗಳು ಕೆಲವು ಕಡ್ಡಾಯ ಸುರಕ್ಷಾ ಸಾಧನಗಳನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಆಟೋ ರಿಕ್ಷಾ ತಯಾರಕ ಸಂಸ್ಥಗಳು ತಾವು ಉತ್ಪಾದಿಸುವ ಆಟೋ ರಿಕ್ಷಾಗಳಲ್ಲಿ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಉಪಕರಣಗಳನ್ನು ಅಳವಡಿಸಬೇಕಾಗಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ರಸ್ತೆ ಸಾರಿಗೆ ಇಲಾಖೆಯ ಪ್ರಕಾರ 2019ರ ಅಕ್ಟೊಬರ್ ತಿಂಗಳಿನಿಂದ ರಸ್ತೆಯಲ್ಲಿ ಸಂಚರಿಸುವ ಪ್ರತಿ ಆಟೋ ಮಾದರಿಗಳು ಬಾಗಿಲುಗಳು ಅಥವಾ ಪ್ರಯಾಣಿಕರು ನಿಯಂತ್ರಣ ತಪ್ಪಿ ಕೆಳಗೆ ಬೀಳದಿರುವ ಹಾಗೆ ಸಲಕರಣೆಗಳನ್ನು ಪಡೆದುಕೊಂಡಿರಬೇಕಿದ್ದು, ಅಟೋ ರಿಕ್ಷಾ ಚಾಲಕರು ಸೀಟ್‍ಬೆಲ್ಟ್ ಅನ್ನು ಸಹ ಧರಿಸಬೇಕಾಗಿರುತ್ತದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಸೀಟ್ ಬೆಲ್ಡ್ ಕಡ್ದಾಯವಲ್ಲದೇ ಡ್ರೈವರ್ ಸೀಟ್ ಮತ್ತು ಪ್ರಯಾಣಿಕರ ಸೀಟ್ ಉದ್ದಳತೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕೆ ಕಾರಣ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಟ್ಯಾಕ್ಸಿಗಳು ಬಂದರೂ ಬಹುತೇಕರು ಆಟೋ ರಿಕ್ಷಾಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಹೊಸ ಆಟೋ ರಿಕ್ಷಾಗಳು ಚಾಲಕ ಮತ್ತು ಪ್ರಯಾಣಿಕರು ಕೂರವ ಜಾಗದಲ್ಲಿ ವಿಶಾಲವಾದ ಲೆಗ್‍ರೂಂ'ಗೆ ಸರಿಹೊಂದುವ ಜಾಗವನ್ನು ನೀಡಬೇಕಾಗಿದೆ. ಇದರ ಜೊತೆಗೆ ವಿಶೇಷವಾದ ಹೆಡ್‍ಲ್ಯಾಂಪ್‍ಗಳನ್ನು ಸಹ ನೀಡಬೇಕಿದ್ದು, ಪ್ರಸ್ತುತ ಸಿಂಗಲ್ ಯೂನಿಟ್ ಅನ್ನು ಬಳಸುತ್ತಿರುವ ಜಾಗದಲ್ಲಿ ಎರಡು ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಬೇಕಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಭಾರತದ ಪ್ರಮುಖ ನಗರ ಪ್ರದೇಶಗಳಲ್ಲಿ ಕೊನೆಯ ಮೈಲಿ ಸಂಪರ್ಕಕ್ಕೆ ಆಟೋ ರಿಕ್ಷಾಗಳು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದ್ದು, ಆಟೋ ರಿಕ್ಷಾಗಳು ಅನುಕೂಲಕರ ಮತ್ತು ಆರ್ಥಿಕವಾಗಿರುತ್ತವೆಯಾದರೂ ಈಗಾಗಲೇ ಅದರ ಸುರಕ್ಷತೆಯ ಮೇಲೆ ಲೆಕ್ಕವಿಲ್ಲದಷ್ಟು ಚರ್ಚೆಗಳು ನಡೆದಿವೆ. ಆಟೋ ರಿಕ್ಷಾಗಳ ಮಾರಾಟವು ವರ್ಷಕ್ಕೆ 5-6 ಲಕ್ಷಗಳ ನಡುವೆ ನಿಲ್ಲುತ್ತಿದ್ದು, ಬಜಾಜ್ ಆಟೋ ಆಟೋ ರಿಕ್ಷಾ ವಿಭಾಗದಲ್ಲಿ ಪ್ರಮುಖ ಪಾಲು ಹೊಂದಿದೆ.

ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ದೇಶದಲ್ಲಿನ ಹಲವಾರು ಪ್ರಮುಖ ನಗರಗಳಲ್ಲಿ ಅದೆಷ್ಟೋ ಟಾಕ್ಸಿ ಸಂಸ್ಥೆಗಳು ತಲೆ ಎತ್ತಿದರೂ ಆಟೋರಿಕ್ಷಾಗಳಿರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ ಅಂದ್ರೆ ತಪ್ಪಾಗುವುದಿಲ್ಲ. ಆದ್ರೆ ಸದ್ಯ ಮಾರುಕಟ್ಟೆಯಲ್ಲಿ 4 ಸ್ಟ್ರೋಕ್ ಆಟೋಗಳು ಬಂದರೂ ಸಹ ಇನ್ನು ಕೆಲವು ಆಟೋರಿಕ್ಷಾ ಚಾಲಕರು 2 ಸ್ಟ್ರೋಕ್ ವಾಹನವನ್ನೇ ಬಳಕೆ ಮಾಡುತ್ತಿರುವುದು ಮಾತ್ರ ಬೇಸರದ ಸಂಗತಿ.

Most Read Articles

Kannada
English summary
Bajaj Qute Starter It's Service As Four Wheeler Auto Rikshaw In Mumbai. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X