ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಕಳೆದ ಶನಿವಾರದಂದ ಬೆಂಗಳೂರಿನಲ್ಲಿ ಏರ್ ಶೋ ವೇಳೆ ನಡೆದಿದ್ದ ಅಗ್ನಿ ಅವಘಡದಲ್ಲಿ ಸುಮಾರು 273 ಕಾರುಗಳು ಸುಟ್ಟು ಭಸ್ಮವಾಗಿದ್ದು, ಅವಘಡದಲ್ಲಿ ಕಾರು ಕಳೆದುಕೊಂಡ ಮಾಲೀಕರು ನಷ್ಟ ಪರಿಹಾರಕ್ಕಾಗಿ ಪರದಾಟುತ್ತಿದ್ದಾರೆ. ಹೀಗಾಗಿ ಟೊಯೊಟಾ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಕೆಲವು ತುರ್ತು ಕ್ರಮಗಳನ್ನು ಕೈಗೊಂಡಿದೆ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಏರ್ ಶೋ ವೇಳೆ ನಡೆದ ಅಗ್ನಿ ದುರಂತದಲ್ಲಿ ಸಿಲುಕಿದ ಟೊಯೊಟಾ ನಿರ್ಮಾಣದ ವಾಹನ ಮಾಲೀಕರಿಗೆ ತುರ್ತು ಸೇವೆ ಆರಂಭಿಸಿರುವ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟುಹೋಗಿರುವ ಕಾರುಗಳ ಪತ್ತೆಗೆ ಮತ್ತು ವಿಮೆ ಮೊತ್ತವನ್ನು ಪಡೆದುಕೊಳ್ಳಲು ಬೇಕಿರುವ ಅಗತ್ಯ ದಾಖಲೆಗಳನ್ನು ಒದಗಿಸಲು ಪ್ರತ್ಯೇಕ ವಿಭಾಗದ ತೆರೆದು ತನ್ನ ಗ್ರಾಹಕರಿಗೆ ಧೈರ್ಯ ತುಂಬುತ್ತಿದೆ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಅಗ್ನಿ ಅವಘಡದಲ್ಲಿ ಬಹುತೇಕ ಕಾರುಗಳು ಪತ್ತೆ ಹಚ್ಚಲು ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದ್ದು, ಟಯೊಟಾ ಸಂಸ್ಥೆಯು ಚಾರ್ಸಿ ನಂಬರ್ ಮತ್ತು ಕೆಲವು ಉತ್ಪಾದನಾ ಕೋಡ್‌ಗಳ ಆಧಾರದ ಮೇಲೆ ಗ್ರಾಹಕರಿಗೆ ವಾಹನ ಮಾಹಿತಿ ನೀಡುತ್ತಿದೆ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಇನ್ನು ಕೆಲವು ಕಾರು ಮಾಲೀಕರಿಗೆ ವಿಮೆ ಪಡೆಯಲು ಬೇಕಿದ್ದ ಕೆಲವು ಅಗತ್ಯ ದಾಖಲೆಗಳು ಕಾರಿನಲ್ಲಿದ್ದ ಕಾರಣ ವಿಮೆಗೆ ಅರ್ಜಿ ಸಲ್ಲಿಸಲು ಪರದಾಡುವಂತಾಗಿದ್ದು, ಇದೇ ಕಾರಣಕ್ಕೆ ಟೊಯೊಟಾ ಸಂಸ್ಥೆಯು ತನ್ನ ಗ್ರಾಹಕರಿಗೆ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಂಡು ಅಗತ್ಯ ದಾಖಲೆಗಳು ಪೂರೈಸುತ್ತಿದೆ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಜೊತೆಗೆ ಗ್ರಾಹಕರಿಗೆ ಮಾಹಿತಿ ನೀಡಲು 180042500001 ಮತ್ತು 08066293001 ಸಹಾಯವಾಣಿ ತೆರೆದಿದ್ದು, ವಾಹನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿಯನ್ನು ಪಡೆಯಲು ಈ ಸಹಾಯವಾಣಿಯು ಕಾರು ಮಾಲೀಕರ ನೆರವಿಗೆ ಬರಲಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಅಗ್ನಿಅವಘಡ ಸುಟ್ಟುಕರಕಲಾದ 273 ಕಾರುಗಳಲ್ಲಿ ಬರೋಬ್ಬರಿ 90ಕ್ಕೂ ಹೆಚ್ಚು ಕಾರುಗಳು ಟೊಯೊಟಾ ನಿರ್ಮಾಣದ ಕಾರುಗಳಿದ್ದು, ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇನೋವಾ ಕ್ರಿಸ್ಟಾ, ಇಟಿಯಾಸ್ ಸೆಡಾನ್ ಮತ್ತು ಇಟಿಯಾಸ್ ಲಿವಾ ಕಾರುಗಳೇ ಬೆಂಕಿಗಾಹುತಿಯಾಗಿದ್ದವು.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಹೀಗಾಗಿ ಬೆಂಗಳೂರು ಟೊಯೊಟಾ ಪ್ರಮುಖ ಡೀಲರ್ಸ್‌ಗಳಲ್ಲಿ ಅಗ್ನಿಅವಘಡದಲ್ಲಿ ಸಿಲುಕಿದ ಕಾರುಗಳ ಸರ್ವಿಸ್ ಮತ್ತು ಬಾಡಿ ಕಿಟ್ ಮರುಜೋಡಣೆಗಾಗಿ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿದ್ದು, ವಿಮಾ ಮೊತ್ತವನ್ನು ಬೇಕಿರುವ ಕೆಲವು ಪ್ರಮುಖ ದಾಖಲೆಗಳನ್ನು ಒದಗಿಸುತ್ತಿರುವುದು ಗ್ರಾಹಕರಿಗೆ ಮರುಜೀವ ಬಂದಂತಾಗಿದ್ದು ಮಾತ್ರ ಸುಳ್ಳಲ್ಲ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ವಿಮೆ ಸಿಕ್ರು ಕಾರು ಮಾಲೀಕರಿಗೆ ಲಾಸ್..!

ಹೌದು, ಈ ವಿಚಾರ ಕಾರು ಮಾಲೀಕರಿಗೆ ತುಸು ನೋವು ಉಂಟು ಮಾಡಬಹುದು. ಯಾಕೆಂದ್ರೆ ಕಾರಿನ ವಿಮೆ ಆಧಾರದ ಮೇಲೆ ಪರಿಹಾರ ಸಿಕ್ಕರೂ ಸಹ ಕಾರು ಮಾಲೀಕರು ನಷ್ಟ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ವಿಮೆ ಪಾಲಿಸಿ ಪ್ರಕಾರ, ವಾಹನ ವಿಮೆ ಮೊತ್ತಕ್ಕೂ ಮತ್ತು ಕಾರುಗಳ ಪ್ರಸ್ತುತ ಮಾರುಕಟ್ಟೆಯ ಮೌಲ್ಯಕ್ಕಿಂತಲೂ ಕಡಿಮೆ ಇರುವುದರಿಂದ ವಿಮೆ ಮೊತ್ತವು ಮಾಲೀಕರಿಗೆ ನಷ್ಟ ಉಂಟು ಮಾಡುವುದಲ್ಲದೇ ಕಾರಿನ ಒಳಭಾಗದಲ್ಲಿ ಇದ್ದ ಇತರೆ ಯಾವುದೇ ಮೌಲ್ಯಯುತ ವಸ್ತುಗಳಿಗೆ ಅದು ಅನ್ವಯವಾಗುದಿಲ್ಲ.

MOST READ: 2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಉದಾಹರಣೆಗೆ ಕಾರಿನಲ್ಲಿ ನೀವು ಲ್ಯಾಪ್‌ಟಾಪ್, ಫೋನ್, ದುಬಾರಿ ಮೌಲ್ಯದ ಮ್ಯೂಸಿಕ್ ಸಿಸ್ಟಂ ಸೇರಿದಂತೆ ಯಾವುದೇ ಮೌಲ್ಯಯುತ ವಸ್ತುಗಳನ್ನು ಇಟ್ಟಿದ್ದರೂ ಸಹ ವಿಮೆಗೆ ಒಳಪಡುವುದಿಲ್ಲ. ಹೀಗಾಗಿ ಇದರಿಂದ ಬಹುತೇಕ ಕಾರು ಮಾಲೀಕರಿಗೆ ವಿಮೆ ಮೊತ್ತ ಸಿಕ್ಕರೂ ಸಹ ತುಸು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಒಂದು ವೇಳೆ ಕಾರು ಮಾಲೀಕರು ಥರ್ಡ್ ಪಾರ್ಟಿ ವಿಮೆ ಹೊರತು ಸಮಗ್ರ ವಿಮೆ ಹೊಂದಿದ್ದಲ್ಲಿ ಮಾತ್ರ ಕಾರಿನ ಒಳದಲ್ಲಿರುವ ಕೆಲವು ಬಿಡಿಭಾಗಗಳಿಗೂ ಪರಿಹಾರ ಸಿಗುತ್ತೆ. ಆದ್ರೆ ಶೇ.90ರಷ್ಟು ಕಾರು ಮಾಲೀಕರು ಥರ್ಡ್ ಪಾರ್ಟಿ ವಿಮೆ ಹೊರತುಪಡಿಸಿ ದೊಡ್ಡ ಮೊತ್ತದ ಸಮಗ್ರ ವಿಮಾ ಪಾಲಿಸಿ ಹೊಂದಿರುವುದಿಲ್ಲ ಎನ್ನುವುದು ವಾಸ್ತವದ ಸಂಗತಿ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಆದರೂ ಕೂಡಾ ಕಾರು ಮಾಲೀಕರಿಗೆ ಧೈರ್ಯ ತುಂಬುತ್ತಿರುವ ಕಾರು ಉತ್ಪಾದನಾ ಸಂಸ್ಥೆಗಳು ಮತ್ತು ವಿಮಾ ಸಂಸ್ಥೆಗಳು ಪರಿಹಾರ ಒದಗಿಸಲು ಅಗತ್ಯ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದು, ರಾಜ್ಯ ಸರ್ಕಾರವು ಸಹ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಪರಿಹಾರ ಘೋಷಣೆ ಮಾಡುವುದಾಗಿ ಭರವಸೆ ನೀಡಿದೆ.

Most Read Articles

Kannada
Read more on ಟೊಯೊಟಾ toyota
English summary
Bangalore Air Show Fire Accident — Toyota Lends Its Support To The Affected Cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X