ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಖತರ್ನಾಕ್ ಖದೀಮ

ಹೊಸ ಕಾರು ಖರೀದಿ ಮಾಡುವ ಆಲೋಚನೆ ಮತ್ತು ಆಸೇ ಎಲ್ಲರಿಗೂ ಇದ್ದೇ ಇರುತ್ತೆ. ಆದ್ರೆ ಆ ಕಾರನ್ನು ದುಡ್ಡು ಕೊಡದೆಯೆ ಶೊರುಂನವರಿಗೆ ಯಾಮಾರಿಸಿ ಎಸ್ಕೇಪ್ ಆಗುವುದು ಇದೀಗ ಮಾರಕಟ್ಟೆಯಲ್ಲಿ ಹೊಸ ಟ್ರೆಂಡ್ ಆಗಿ ಬದಲಾಗುತ್ತಿದೆ. ಈ ರೀತಿಯ ವಿಚಾರದ ಬಗ್ಗೆ ನಾವೀಗಾಲೇ ನಿಮಗೆ ಮಾಹಿತಿಯನ್ನು ನೀಡಿದ್ದೇವೆ. ಇತ್ತೀಚೆಗೆ ಬೆಂಗಳೂರಿನಲ್ಲಿಯು ಸಹ ಇಂತಹ ಘಟನೆಯು ನಡೆದಿದ್ದು, ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಕೇವಲ ರೂ. 2 ಲಕ್ಷಕ್ಕೆ ಹೊಸ ಎಸ್‍ಯುವಿ ಕಾರು ದೊರೆತರೆ ಎಷ್ಟು ಖುಷಿಯಾಗುತ್ತೆ ಅಲ್ವಾ.? ಇದೇ ರೀತಿಯಲ್ಲಿ ಪ್ಲಾನ್ ಮಾಡಿ ಬೆಂಗಳೂರಿನ ನಿಸ್ಸಾನ್ ಶೋರುಂಗೆ ಭೇಟಿ ನೀಡಿ, ತಾನು ಖರೀದಿಸಲು ಬಯಸಿರುವ ಕಾರಿಗೆ ಧಾರ್ಮಿಕ ಕ್ರಿಯೆಯನ್ನು ನಡೆಸುವ ಉದ್ದೇಶದಿಂದ ಹೊಸ ಕಾರನ್ನು ಕೊಂಡೊಯ್ದು ಸುಮಾರು 4 ತಿಂಗಳದರೂ ಮತ್ತೆ ವಾಪಸ್ ಬರಲೇ ಇಲ್ಲ ಒಬ್ಬ ಕದೀಮ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಗ್ರಾಹಕ ಜೋಸೆಫ್ ಎಂದು ಕರೆಯಲ್ಪಡುವ ಜೋಸ್ ಥಾಮಸ್ ಎಂಬಾತ ನಿಸ್ಸಾನ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಕಿಕ್ಸ್ ಎಸ್‍ಯುವಿ ಕಾರನ್ನು ಖರೀದಿ ಮಾಡಲು ಮುಂದಾಗಿದ್ದು, ಕೇವಲ ರೂ. 2 ಲಕ್ಷದ ಡೌನ್ ಪೇಮೆಂಟ್ ಮಾಡಿ ಅದಕ್ಕೆ ದಾರ್ಮಿಕ ಕ್ರಿಯೆಯನ್ನು ನಡೆಸುವ ಸಲುವಾಗಿ ಕೊಂಡೊಯ್ಯಲು ಮ್ಯಾನೇಜರ್ ಅವರನ್ನು ಕೋರಿಕೊಳ್ಳಲಾಯಿತು. ಅದಾಗ್ಯೂ, ಆತ ಕಾರನ್ನು ಕೊಂಡೊಯ್ದು ಸುಮಾರು 4 ತಿಂಗಳಾದರೂ ಮತ್ತೆ ವಾಪಸ್ ಬರಲೇ ಇಲ್ಲ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಈ ಘಟನೆಯು ಬೆಂಗಳೂರಿನ ದೊಡ್ದಾನೆಕುಂದಿಯಲ್ಲಿರುವ ನಿಸ್ಸಾನ್ ಶೋರುಂನಲ್ಲಿ ಸಂಭವಿಸಿದೆ. ಈ ಘಟನೆಯು ನಡೆದ ಎಂಟು ಗಂಟೆಗಳ ನಂತರ ಅಂದರೆ ಜನವರಿ 23ರಂದು ಹೆಚ್ಎಎಲ್‍ನಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಮೇ 21ರಂದು ಈ ಕುರಿತಾಗಿ ಮಹದೇವಪುರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ದೋಡನಕುಂದಿಯ ಸೂರ್ಯ ನಿಸ್ಸಾನ್ ಶೋರೂಮ್‍ನ ವ್ಯವಸ್ಥಾಪಕರಾದ ಗಣೇಶ್ ಕುಮಾರ್ ಶೆಟ್ಟಿ, ಜನವರಿ 23 ರಂದು 6:30 ಕ್ಕೆ ನಿಸ್ಸಾನ್ ಕಿಕ್ಸ್ ವಾಹನವನ್ನು ಖರೀದಿ ಮಾಡುವ ಯೋಜನೆ ಇದ್ದ ಕಾರಣ ಆ ಕಾರಿನ ಬಗ್ಗೆ ಮಾಹಿತಿಯನ್ನು ಕೇಳಲು ಮುಂದಾದರು ಜೋಸ್ ಥಾಮಸ್ ಅಲಿಯಾಸ್ ಜೋಸೆಫ್ ಎಂಬ ವ್ಯಕ್ತಿ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ವಾಹನದ ಬೆಲೆಯನ್ನು ತಿಳಿದ ನಂತರ ಜೋಸೆಫ್ ರೂ. 2 ಲಕ್ಷದ ಹಣವನ್ನು ಡೌನ್ ಪೇಮೆಂಟ್ ಮಾಡಿ, ಆ ಕಾರಿಗೆ ಧಾರ್ಮಿಕ ಕ್ರಿಯೆಯನ್ನು ನಡೆಸಲು ತೆಗೆದುಕೊಂಡು ಹೋಗಲು ನಿರ್ಣಯಿಸಿದ. ಗಣೇಶ್‍‍ರವರ ದೂರಿನ ಪ್ರಕಾರ "ಜೋಸೆಫ್ ಆ ಕಾರಿಗೆ ಧಾರ್ಮಿಕ ಕ್ರಿಯೆಯನ್ನು ನಡೆಸಲು ಕೊಂಡುಯ್ಯುವುದಾಗಿ ಹೇಳಿಕೊಂಡಿದ್ದು, ಇಲ್ಲಿಯವರೆಗು ವಾಹನವನ್ನು ವಾಪಸ್ ನೀಡದೆಯೆ ಪರಾರಿಯಾಗಿದ್ದಾರೆ ಮತ್ತು ಕಾರು ಖರೀದಿ ಮಾಡುವಾಗ ಧಾಖಲು ಮಾಡಲದ ಫೋನ್ ನಂಬರ್ ಕೂಡಾ ಇದೀಗ ಕಾರ್ಯನಿರತವಾಗಿದೆ" ಎಂದು ಹೇಳಲಾಗಿದೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಈ ಘಟನೆಯ ಕುರಿತಾಗಿ ತನಿಖೆ ನಡೆಯುತ್ತಿದ್ದು, ಗಣೇಶ್‍‍ರವರು ಜೋಸೆಫ್ ಅವರಿಂದ ಮಿಕ್ಕಿದ ರೂ. 16.6 ಲಕ್ಷದ ಮೊತ್ತವನ್ನು ಪಾವತಿಸಬೇಕೆಂದು ಹೇಳಿದ್ದಾರೆ. ಕದ್ದ ನಿಸ್ಸಾನ್ ಕಿಕ್ಸ್ ಕಾರಿಗೆ ತಾತ್ಕಾಲಿಕ ನೋಂದಣಿ ಸಂಖ್ಯೆ ಕೂಡಾ ಇರುವುದಾಗಿ ಮ್ಯಾನೇಜರ್ ಹೇಳಿದ್ದಾರೆ. ಶೋರುಂ ಸಿಬ್ಬಂದಿಯು ಜೋಸೆಫ್‍‍ರವರು ನೀಡಲಾದ ಮೊಬೈಲ್ ಸಂಖ್ಯೆಯನ್ನು ಟ್ರಾಕ್ ಮಾಡಲು ಮುಂದಾದಗ ಅಲ್ಲಿ ವಿಫಲರಾಗಿದ್ದು, ಜೊತೆಗೆ ಜೋಸೆಫ್‍‍‍ರವರ ಆಫಿಸ್ ವಿಳಾಸಕ್ಕೆ ಹೋದರೂ ಸಹ ಅಲ್ಲಿಯು ವಿಫಲರಾಗಿದ್ದಾರೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

"ಈ ವ್ಯಕ್ತಿಯನ್ನು ಪತ್ತೆಹಚ್ಚಲು ನಾವು ತನಿಖೆಗಳನ್ನು ಪ್ರಾರಂಭಿಸಿದ್ದೇವೆ, ದೂರುದಾರರಿಂದ ನಾವು ವಿವರಗಳನ್ನು ಸಂಗ್ರಹಿಸಿದ್ದೇವೆ" ಎಂದು ಅಬ್ದುಲ್ ಅಹಾದ್, ಡಿಸಿಪಿ, ವೈಟ್ಫೀಲ್ಡ್ ಡಿವಿಷನ್ ದೃಢಪಡಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಟಿಎನ್ಎಂಗೆ ತಿಳಿಸಿದ್ದಾರೆ. ಈ ಘಟನೆಯ ಬಳಿಕ ನಾಲ್ಕು ತಿಂಗಳುಗಳ ನಂತರ ದೂರು ನೀಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸಲು ಸಮಯ ಬೇಕೆಂದು ಹೆಳಿಕೊಂಡಿದ್ದಾರೆ.

Source: The News Minute

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಇನ್ನು ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಹೇಳುವುದಾದರೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಿಕ್ಸ್ ಕಾರುಗಳನ್ನು ಪೆಟ್ರೋಲ್ ವರ್ಷನ್‌ನಲ್ಲಿ ಎರಡು ಮತ್ತು ಡಿಸೇಲ್ ಆವೃತ್ತಿಯಲ್ಲಿ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಕಿಕ್ಸ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.55 ಲಕ್ಷ ಬೆಲೆ ಹೊಂದಿರುತ್ತೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಕಿಕ್ಸ್ ಕಾರಿನ ಡಿಸೈನ್

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ವೈಶಿಷ್ಟ್ಯತೆಯು ಮೆರಗು ತಂದಿದ್ದು, ವಿ ಮೊಷನ್ ಗ್ರಿಲ್, ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಕೆಳಭಾಗದಲ್ಲಿ ಅಳವಡಿಸಲಾಗಿರುವ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಪ್ರೋಫೈಲ್ ನೀಡಲಾಗಿದೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್‌ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್‌ಗೆ ಲುಕ್ ನೀಡಿದೆ. ಇನ್ನು ಕಾರಿನಲ್ಲಿ 17-ಇಂಚಿನ 5 ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ, 210 ಎಂಎಂ ನಷ್ಟು ಗ್ರೌಂಡ್ ಕ್ಲಿಯೆರೆನ್ಸ್, ಬೂಮೆರ್ಗ್ ಟೈಲ್ ಲ್ಯಾಂಪ್ಸ್, ಗಮನ ಸೆಳೆಯುವ ರಿಯರ್ ಬಂಪರ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳು ಕಿಕ್ಸ್ ಕಾರಿನಲ್ಲಿವೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಕಾರಿನ ಒಳವಿನ್ಯಾಸ

ಗ್ಲಿಡಿಂಗ್ ವಿಂಗ್ ಡ್ಯಾಶ್‌ಬೋರ್ಡ್ ಹೊಂದಿರುವ ಕಿಕ್ಸ್ ಕಾರಿನಲ್ಲಿ ಒಳಾಂಗಣ ವಿಸ್ತಿರ್ಣವು ಚಿಕ್ಕದು ಎನಿಸಿದರೂ ಆಧುನಿಕ ಕಾರುಗಳಲ್ಲಿ ಇರಬೇಕಾದ ಬಹುತೇಕ ಸೌಲಭ್ಯವು ಇದರಲ್ಲಿವೆ. ಬ್ಲ್ಯಾಕ್ ಪ್ಲಾಸ್ಟಿಕ್ ಪ್ಯಾನೆಲ್, ಬ್ರೌನ್ ಲೆದರ್‌ನಿಂದ ಸಿದ್ದವಾದ ಡ್ಯಾಶ್‌ಬೋರ್ಡ್, ಲೆದರ್ ಹೊದಿಕೆಯುಳ್ಳ ಸ್ಟೀರಿಂಗ್ ವೀಲ್ಹ್ ಹೊಂದಿರುವುದು ಕಾರು ಚಾಲನೆಯಲ್ಲಿ ಐಷಾರಾಮಿ ಅನುಭವ ನೀಡುತ್ತೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಸೆಗ್ಮೆಂಟ್ ಫರ್ಸ್ಟ್ ಪೀಚರ್ಸ್

ಸಧ್ಯ ನಿಸ್ಸಾನ್ ಸಂಸ್ಥೆಯ ಕಾರುಗಳಲ್ಲಿ ಕಿಕ್ಸ್ ಎಸ್‍ಯುವಿ ಕಾರು ಅಧಿಕವಾಗಿ ಮಾರಾಟವಾಗುತ್ತಿದ್ದು, ಈ ಕಾರಿನಲ್ಲಿರುವ ಹಲವಾರು ವೈಶಿಷ್ಟ್ಯತೆಗಳಿಗೆ ಗ್ರಾಹಕರು ಮೊರೊಹೋಗಿ ಈ ಕಾರನ್ನು ಖರೀದಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಕಾರು ಸೆಗ್ಮೆಂಟ್ ಫಸ್ಟ್ ಎಂದು ಕರೆಯಲು 360 ಡಿಗ್ರಿ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಬಿಡಿ ಮತ್ತು ಹಲವಾರು ಏರ್‍‍ಬ್ಯಾಗ್‍ಗಳನ್ನು ಹೊಂದಿದೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಪೆಟ್ರೋಲ್ ಮಾದರಿಯು 104-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 108-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿವೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಸುರಕ್ಷಾ ಸೌಲಭ್ಯಗಳು

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಬೆಂಗಳೂರಿನ ಗ್ರಾಹಕ

ಕಾರಿನ ಮೈಲೇಜ್

ಹೊಸ ಕಿಕ್ಸ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 13 ರಿಂದ 15ಕಿ.ಮಿ ಮತ್ತು ಡಿಸೇಲ್ ಕಾರುಗಳು 17 ರಿಂದ 19 ಕಿ.ಮಿ ಇಂಧನ ದಕ್ಷತೆಯನ್ನು ಹೊಂದಿದ್ದು, ಮಾರುತಿ ಸುಜುಕಿ ಎಸ್ ಕ್ರಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Bangalore Man Steals SUV From Showroom New Nissan Kicks Worth Rs. 18 Lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X