ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಬೆಂಗಳೂರು ನಗರ ಸಂಚಾರಿ ಪೊಲೀಸರು ನಗರದ ರಸ್ತೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಸಂಚಾರಿ ಪೊಲೀಸರು ದಂಡದ ರೂಪದಲ್ಲಿ ಸಂಗ್ರಹಿಸಲಾಗಿರುವ ಹಣವನ್ನು ಮೂಲಸೌಕರ್ಯ ಅಭಿವೃದ್ದಿಗಾಗಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಸರ್ಕಾರವು ಸಹ ಹಣ ಬಿಡುಗಡೆಗೆ ಸಮ್ಮತಿ ಸೂಚಿಸಿದ್ದು, 50%ನಷ್ಟು ಹಣ ನೀಡುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 1ರಿಂದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯನ್ವಯ ಸರ್ಕಾರವು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಬೇಕೆಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬಹುತೇಕ ಸವಾರರು ಈ ಹೊಸ ನಿಯಮವನ್ನು ಗೊತ್ತು ಗುರಿಯಿಲ್ಲದೇ ಮಾಡಲಾಗಿದೆ ಎಂದು ಕರೆದರೆ, ಇನ್ನು ಹಲವರು ದಂಡದ ಮೊತ್ತವು ಅಧಿಕವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಈ ಹೊಸ ನಿಯಮವನ್ನು ಕೆಲ ಜನರು ವಿರೋಧಿಸಿದರೆ, ಇನ್ನೂ ಕೆಲವರು ಸರಿಯಾದ ಮೂಲ ಸೌಕರ್ಯಗಳನ್ನು ಒದಗಿಸಿದ ನಂತರ ಈ ನಿಯಮವನ್ನು ಜಾರಿಗೊಳಿಸಿದ್ದರೆ ಸರಿಯಾಗಿತ್ತು ಎಂದು ವಾದಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರ್ಕಾರವು, ಭಾರೀ ಪ್ರಮಾಣದ ದಂಡವನ್ನು ವಿಧಿಸುವುದನ್ನು ಮುಂದುವರೆಸಿತ್ತು. ಬೆಂಗಳೂರು ನಗರ ಸಂಚಾರಿ ಪೊಲೀಸರು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಂದ ಸಂಗ್ರಹಿಸಲಾದ ದಂಡದ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ದಂಡದ ರೂಪದಲ್ಲಿ ಸಂಗ್ರಹಿಸಲಾದ ಹಣವನ್ನು ಸರ್ಕಾರಿ ಖಜಾನೆಯಲ್ಲಿ ಇಡಲಾಗಿದೆ. ಸರ್ಕಾರವು ತನ್ನ ಅವಶ್ಯಕತೆಗಳಿಗೆ ತಕ್ಕಂತೆ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿರುವ ಸರ್ಕಾರವು ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ. ಇದರಿಂದ ರಸ್ತೆ ಅಭಿವೃದ್ಧಿಯು ಸರ್ಕಾರದ ಆದ್ಯತೆಯ ವಿಷಯವಾಗಿಲ್ಲವೇ ಎಂಬ ಸಂಶಯವುಂಟಾಗುತ್ತದೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಆದ ಕಾರಣ ಸಂಚಾರಿ ಪೊಲೀಸರು, ದಂಡ ವಿಧಿಸಿ ಸಂಗ್ರಹಿಸಲಾದ ಸಂಪೂರ್ಣ ಹಣವನ್ನು ರಸ್ತೆಗಳ ಅಭಿವೃದ್ಧಿಗಾಗಿಯೇ ವಿನಿಯೋಗಿಸಲು ಬಯಸಿದೆ. ಆದರೆ ರಾಜ್ಯ ಸರ್ಕಾರವು ಸಂಗ್ರಹಿಸಲಾದ ಮೊತ್ತದಿಂದ ಕೇವಲ 50% ಹಣವನ್ನು ಮಾತ್ರ ನೀಡುವುದಾಗಿ ತಿಳಿಸಿದೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಈ ಬಗ್ಗೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್‍‍ರವರು, ಭಾರೀ ಪ್ರಮಾಣದ ದಂಡವನ್ನು ವಿಧಿಸಿ ಸರ್ಕಾರದ ಖಜಾನೆಯಲ್ಲಿ ಸಂಗ್ರಹಿಸಲಾಗಿರುವ ಪೂರ್ತಿ ಹಣವನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ ಸರ್ಕಾರವು 50% ಹಣವನ್ನು ಮಾತ್ರ ನೀಡುವುದಾಗಿ ತಿಳಿಸಿದೆ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಹಣವು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಬಿಡುಗಡೆಯಾಗಲಿರುವ ಹಣದಿಂದ ಕುಡಿದು ಚಾಲನೆ ಮಾಡುವವರನ್ನು ಪರೀಕ್ಷಿಸುವ ಬ್ರೀತಲೈಸರ್ ಯಂತ್ರ ಖರೀದಿಸುವುದರ ಜೊತೆಗೆ, ಸಿಗ್ನಲ್‍‍ನಲ್ಲಿ ಅಳವಡಿಸಲು ಬೇಕಾಗುವ ಎಕ್ವಿಪ್‍‍ಮೆಂಟ್ ಖರೀದಿಸಲಾಗುವುದು.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಇದರ ಜೊತೆಗೆ ಬ್ಯಾರಿಕೇಡ್‍ ಖರೀದಿಸಲಾಗುವುದು ಹಾಗೂ ರಸ್ತೆಗಳ ಅಭಿವೃದ್ಧಿಗಾಗಿ ಬಳಸಲಾಗುವುದು ಎಂದು ತಿಳಿಸಿದ ಭಾಸ್ಕರ್ ರಾವ್‍‍ರವರು ಸದ್ಯಕ್ಕೆ 379 ಹೋಂ ಗಾರ್ಡ್‍‍ಗಳಿದ್ದು, ಇವರ ಸಂಖ್ಯೆಯನ್ನು 4,000ಕ್ಕೆ ಏರಿಸಲಾಗುವುದು. ಈ ಹಣದಿಂದ ಹೋಂ ಗಾರ್ಡ್‍‍ಗಳಿಗೆ ಸಂಬಳ ನೀಡಲಾಗುವುದು ಎಂದು ಸಹ ಹೇಳಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

2017ರಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ದಂಡದ ರೂಪದಲ್ಲಿ ರೂ.112 ಕೋಟಿ ಸಂಗ್ರಹಿಸಿದ್ದರೆ, 2018ರಲ್ಲಿ ರೂ.81 ಕೋಟಿ ಸಂಗ್ರಹಿಸಿದ್ದರು. ಹೊಸ ಮೋಟಾರು ವಾಹನ ಕಾಯ್ದೆಯನ್ವಯ 2019ರಲ್ಲಿ ದಂಡದ ಮೊತ್ತವು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಈ ವರ್ಷದ ಆಗಸ್ಟ್ ತಿಂಗಳವರೆಗೆ ರೂ.47 ಕೋಟಿಯನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಹೊಸ ಕಾಯ್ದೆಯನ್ನು ಜಾರಿಗೊಳಿಸಿದ 5 ದಿನಗಳಲ್ಲಿಯೇ ಬೆಂಗಳೂರು ಪೊಲೀಸರು ರೂ.75 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಈ ಪರಿಸ್ಥಿತಿಯೇ ಮುಂದುವರೆದರೆ, ಇನ್ನು ಕೆಲವೇ ತಿಂಗಳುಗಳಲ್ಲಿ ದಾಖಲೆ ಪ್ರಮಾಣದ ದಂಡ ಸಂಗ್ರಹವಾಗಲಿದೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದಂಡದ ರೂಪದಲ್ಲಿ ಸಂಗ್ರಹವಾಗಿರುವ ಹಣವನ್ನು ಮೂಲ ಸೌಕರ್ಯ ಅಭಿವೃದ್ದಿಯಂತಹ ಕಾರ್ಯಗಳಿಗಾಗಿ ಬಳಸುವುದು ಉತ್ತಮ ಯೋಜನೆಯಾಗಿದೆ. ಈ ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸಲಾಗುವುದು ಎಂಬುದನ್ನು ಕಾದು ನೋಡ ಬೇಕಿದೆ.

ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ ಬಳಕೆಯಾಗಲಿದೆಯಂತೆ ದಂಡದ ಹಣ

ಭಾರೀ ಪ್ರಮಾಣದ ದಂಡವನ್ನು ವಿಧಿಸುವ ಸರ್ಕಾರವು ಯಾವ ಸೌಕರ್ಯವನ್ನು ನೀಡುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು. ಈಗ ಬೆಂಗಳೂರು ನಗರ ಸಂಚಾರಿ ಪೊಲೀಸರು ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸಂಗ್ರಹಿಸಲಾಗಿರುವ ದಂಡದ ಹಣವನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುತ್ತಿದ್ದಾರೆ.

Most Read Articles

Kannada
English summary
Bangalore Police To Use Traffic Fines In Improvement Of Infrastructure For Motorists In The City - Read in kannada
Story first published: Tuesday, September 17, 2019, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X